ಮಾಲೂರು ಸೀಮೆಯ ಕನ್ನಡ | ಪ್ರೊಫೆಸರ್ ಮೈಲಾರಪ್ಪನ ಅಗ್ರ ಪೂಜಾ ಅಭಿಲಾಷೆ

Date:


(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಮ್ಯೂಸಿಕ್)
ಮಾರ್ಕಂಡೇಯಪುರದ ನಿವಾಸಿಗಳು ಆತನ ಮೊಕ ನೋಡಲು, ಮೈಲಾರಿ ಪಾಯಿಂಟಿಗೆ ಬಂತು: “ಮುನೆಸ್ಪುರುನ ಹೊಸ ಕೊಯಿಲ್ನಾಗ ನನ್ನ ತಾವಿಂದಲೆ ಪ್ರತಮ ಪೂಜೆ ಆಗ್ಬೇಕು. ನಮ್ ಅಪ್ಪನು ಮುನೆಸ್ಪುರುನುಕ ದೂರದೂರ ನಿಂತಕಂಡೆ ಮಕ್ಕಿ-ಮಕ್ಕಿ ಸತ್ತೋಯ್ತು. ನಾನೂ ಹಂಗೆ ಮಕ್ಕಿಕೊಂಡು ಬೆಳೆದ್ನಿ. ಈಗ ಒಳಕ್ ಬಂದು ಪೂಜೆ ನೋಡ್ಬೇಕು ಅಂತ ಆಶೆ. ಇದಕ್ಕೆ ನಿಮ್ಮಗಳ ಬದಲು ಏನು?”
ಮೈಲಾರಪ್ನು ಸತ್ತೋದ್ನು ಅನ್ನೋ ವಾರ್ತೆ ಮಾರ್ಕಂಡೇಯಪುರದ ತುಂಬಾ ಹರಡಕೊಂತು. ಜನಗಳು ತಲ್ಕಾಯಿಗೊಂದೊಂದು ಮಾತು ಮಾತಾಡತೊಡಗಿದರು.

‘ಮೈಲಾರಪ್ಪನುಕ ಮೈಯೆಲ್ಲಾ ಕೊಬ್ಬು’ ಅಂತ ಸಾನೆ ಜನಗಳು ಸೋಲ್ಸೋಲಾ ಮಾತಾಡ್ಕಂಡರು. ಅಷ್ಟರಾಗ ಒಂದು ಬೇರೇನೆ ಕಬರು ಊರಕ ಬಂದು ತಟ್ಟಿತು.

ಅದು ಇದು:
ಮೈಲಾರಪ್ನು ಸಾಯಕಿಂತ ಮುಂಚೆ ವಿಲ್ಲು ಬರೆದು, ತನ್ನ ಸಮಸ್ತ ಸಂಪತ್ತು ಮಾರ್ಕಂಡೇಯಪುರದ ಮುನೆಸ್ಪುರನ ಕೋಯಿಲ್ಕ ಅಂಕಿತ ಅಂತ ದಾಕಲು ಮಾಡಿತ್ತಂತೆ.

“ಮೈಲಾರಿ ಅಂಟೆ ಮನ ಮೈಲಾರೇ,” ಅಂತ ಈಗ ಪುರದ ಜನಗಳು ಆತನ ಆತುಮಕ್ಕೆ ಊರ ಮುನೆಸ್ಪುರನು ಚಿರಶಾಂತಿ ಕೊಡಲಿ ಎಂದು ಮೀಸಲುಗಳನು ಮಾಡಿಕೊಂಡರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಮೈಲಾರಪ್ಪನುಕ ಮೈಯೆಲ್ಲಾ ಕೊಬ್ಬು,” ಅನ್ನೋ ವಾರ್ತೆ ನನ ಕಿವಿನಾಗ ಗುಯ್ಗುಡಲು ನಾಕೂರು ಸುತ್ತಿದ, ನಾಕೂರು ಕೆರೆಕುಂಟೆ ನೀರು ಕುಡಿದಿರುವ ಜವರಾಯಿನಾ ಈ ಗುರಿಂಚಿ, “ಏಮನ್ನಾ ಈ ಮೈಲಾರಿ ಕಥಾ?” ಅಂತ ಇಂಗಡಿಸಿ ಕೇಳಲು, ಆತನು, “ಹೀಗಿಗೆ… ಹೀಗಿಗೆ…” ಎಂದು ಹಿಂದಲ ಕತೆಯ ಹೇಳಿದನು.

* * *

ಮೈಲಾರಪ್ನು ಆಗ ಇನ್ನು ಮೈಲಾರಿ ಆಗಿದ್ನು. ಮುನೆಸ್ಪುರುನ ಮೊಕ ನೋಡಿ, ಕಯ್ಯಾಕ ಮಕ್ಕಿಕೊಂಡು, ನೆತ್ತಿಕ ದಪ್ಪ ಕುಂಕುಮ ಮಡಗಿ, ಕೋಯಿಲ್ ಮುಂದಕಿರುವ ತೊಳಸಿ ಎಲೆಯ ನಿಕ್ಕರ್ ಜೇಬಿಗೆ ಮಡಗಿಕೊಂಡೇ ಆತನು ಆಗೆಲ್ಲಾ ಸ್ಕೂಲ್ಕಾ ಹೋಗುತ್ತಿದ್ದುದು.

ಮೈಲಾರಿಕ ಅಮ್ಮುನು ಇಲ್ಲ. ಅಪ್ಪನು ಗೌಣ್ಣುನ ಮನೆನಾಗ ಆಳು. ಇವನೂ ಗೌಣ್ಣು ಮನೆನಾಗ ದನಗಳು ಹಸುಗಳು ನಿಗಾ ನೋಡೋಣು. ಹಿಂಗೆ ವೋದಿ ವೋದಿ ಮೈಲಾರಿ ಮ್ಯಾಲೆಕ್ಕ ಬಂತು. ಪಿರಿ ಸ್ಕೂಲ್, ಪಿರಿ ಕಾಲೇಜ್ ವೊದಿಕಂಡು ಬೆಂಗ್ಳೂರ್ ಗಡ್ಡೆಕ ಬಿದ್ದುಬಿಡ್ತು. ಹೆಂಗೆಂಗೋ ಎದವಿ ಗೌರ್ಮೆಂಟ್ ಚಾಕರಿ ಹಿಡಿದುಬಿಡ್ತು.

ಇಂತೊಟ್ಟು ಅಪ್ಪನು ಗೊಟಕ್ ಅಂದಮ್ಯಾಕ ಮೈಲಾರಿ ಊರತೊಟ್ಟು ಬರೋದು ಬಿಟ್ಟುಬಿಡ್ತು. ಎಲ್ಡು ವರ್ಸಕ್ಕೊ ಮೂರು ವರ್ಸಕ್ಕೊ ಒಂದ್ಕಿತ ಒಂದೆ, ಕಾರ್ನಾಗ ಬರೋದು. ಮುನೆಸ್ಪುರುನುಕ ಮಕ್ಕಿಕೊಂಡಿ ಹಂಗೆ ಕಾರ್ನಾಗ ಜರ್ಗಿ ಬಿಡೋದು.

ಈತನ ಏಳ್ಗೆ ಊರನ ಗೌಣ್ಣುಗಳುಕ ಕೂಡ ವೊಟ್ಟೆ ಉರಿಸ್ತಿತ್ತು. ಹಿಂಗಿರಲು ಮುನೆಸ್ಪುರುನ ಕೊಯಿಲು ಪಳಸಾಗಿ ಇಂದಕಿತ ಸರ್ಯಾಗಿ ಮಳೆ ಕೂಲಿದರೆ ಕೊಯಿಲ್ ಕೂಡ ಕೂಲುತ್ತೆ ಅಂತ ಎಲ್ಲರೂಕ ಅರ್ಥವಾಯ್ತು. ಇದ ಸರಿಪಡಿಸಲು ಊರ ಗೌಣ್ಣುಗಳು, ಕುಲಸ್ಥರು, ಜನಗಳು ಸೇರ್ಕಂಡು ಒಂದು ತೀರ್ಮಾನಕ ಬಂದರು.

ಅದರಂತೆ ಅದೇ ಸಂಜಿಕ ಊರತೋಟಿ ನಾರಾಯಣನು ಗೌರ್ಮೆಂಟ್ ಸಾರಾಯಿ ಕುಡಿದು, “ಇಂಟಿಂಟಿಕಿ ವೆಯ್ಯಿ, ಪೆದ್ದಿಂಟೋಳು ವೆಯ್ಯಿಕಿ ಎಕ್ಕುವ ಇವ್ವಾಲಂಟೋ… ಮುನೆಸ್ಪುರುಡುಕಿ ಗುಡಿ ಲೆಪ್ತಾರಂಟೋ…” ಎಂದು ಸಾಟು ಸಾರಿದನು.

ಅಷ್ಟರಾಗ ಊರ ಕೆಲ ಜನಗುಳುಕ ಮೈಲಾರಿ ಗ್ಯಪ್ತಿಗೆ ಬಂದ. ‘ಮನೂರಿ ಬಿಡ್ಡ’ ಅನ್ನೋ ಪಿರೂತಿ ಕೂಡ ಒಂತೊಟ್ಟು ಕೆಲಸ ಮಾಡಿರಬೇಕು.

ಸರಿ, ಬೆಂಗ್ಳೂರ್ ಕಂಡ ಊರ ಕೆಲ ಜನಗಳು ಮೈಲಾರಿನ ಪತಾ ಮಾಡಿ ಹೊಂಟರು. ಮೈಲಾರಿ ಈಗ ಪ್ರೊಫೆಸರ್ ಮೈಲಾರಪ್ಪ ಆಗಿದ್ನು.

ಊರ ಜನಗಳುಕ ಕಾಪಿ ಕುಡಿಸಿ ಅವನು ಹಿಂಗೆ ನುಡಿದನು:
“ಮುನೆಸ್ಪುರುನ ದಯಾದಿಂದಲೇ ನಾನಿವತ್ತು ಈ ಲೆವೆಲ್ನಾಗ ಇರೋದು. ಇದರಾಗ ನೋ ಡೌಟ್! ದೇವ್ರುಕ ಒಂದ್ ಅಚ್ಕಟ್ಟಾದ ಗುಡಿ ಇಲ್ಲ ಅಂದರೆ ಅದು ಊರಕ ಕೇಡು. ನೀವೆಲ್ಲಾ ದುಡ್ ಹಾಕಿ. ಅಷ್ಟರ ಮ್ಯಾಲೆ ಒಂದು ರೂಪಾಯಿ ಜಾಸ್ತಿನೇ ನಾನು ಮಡಗಿ ಕೊಡ್ತೀನಿ. ಆದರೆ, ಇದರಾಗ ಒಂದು ಕಂಡಿಶನು…” – ಮೈಲಾರಿ ಮಾತು ನಿಲ್ಲಿಸ್ತು.

ಮಾರ್ಕಂಡೇಯಪುರದ ನಿವಾಸಿಗಳು ಆತನ ಮೊಕ ನೋಡಲು, ಮೈಲಾರಿ ಪಾಯಿಂಟಿಗೆ ಬಂತು:
“ಮುನೆಸ್ಪುರುನ ಹೊಸ ಕೊಯಿಲ್ನಾಗ ನನ್ನ ತಾವಿಂದಲೆ ಪ್ರತಮ ಪೂಜೆ ಆಗ್ಬೇಕು. ನಮ್ ಅಪ್ಪನು ಮುನೆಸ್ಪುರುನುಕ ದೂರದೂರ ನಿಂತಕಂಡೆ ಮಕ್ಕಿ-ಮಕ್ಕಿ ಸತ್ತೋಯ್ತು. ನಾನೂ ಹಂಗೆ ಮಕ್ಕಿಕೊಂಡು ಬೆಳೆದ್ನಿ. ಈಗ ಒಳಕ್ ಬಂದು ಪೂಜೆ ನೋಡ್ಬೇಕು ಅಂತ ಆಶೆ. ಇದಕ್ಕೆ ನಿಮ್ಮಗಳ ಬದಲು ಏನು?”

ಊರ ಜನಗಳು ಮಕ-ಮಕ ನೋಡ್ಕಂಡ್ರು. “ಇದು ಇಲ್ಲಿ ವಪ್ಪಿಸೋ ತೀರ್ಮಾನ ಅಲ್ಲ ಮೈಲಾರಪ್ಪ… ಗೌಣ್ಣುಗಳು, ಕುಲಸ್ಥರು ಸೇರ್ಕಂಡು ಮಾತಾಡಬೇಕು. ನಾವಿನ್ನು ಬತ್ತಿವಿ,” ಅಂತ ಟುವಾಲು ಕೊಡವಿ ಅಲ್ಲರೂ ಎದ್ದುಬಿಟ್ಟರು.

ಮುಂದಕ ಯಾರೂ ಮೈಲಾರಪ್ನು ತಾವ ಕಾಸಿಗೆ ಕೈ ಚಾಚಲಿಲ್ಲ. ಜನಗಳೇ ದುಡ್ ಹಾಕಿ ಪಳಸಾದ ಮುನಸ್ಪುರನ ಕೊಯಿಲ್ನ ದಬ್ಬಾಕಿ ಹೊಸ ತರ ಕಟ್ಟಿದ್ರು.

* * *

ಈಗ ಮೈಲಾರಪ್ನು ತನ್ ಆಸ್ತಿಪಾಸ್ತಿನ ಊರ ಮುನೆಸ್ಪುರುನ ಕೊಯಿಲ್ಕ ಅಂತ ಬರೆದವ್ನಲ್ಲ ಹೆಂಗೆ? ನಾನು ತಡಿನಾರ್ದೆ ಕೇಳಿದ್ದಕ್ಕೆ, ಜವರಾಯಿ, “ಗೌಣ್ಣುಗಳು, ಕುಲಸ್ಥರು ಅದ ಏನೋ ಮಾಡ್ಕತ್ತಾರೆ ಬಿಡು,” ಅಂತಂದು ಟುವಾಲು ಕೊಡವಿದನು.

* * *

ಮುಂದಕ ನನಗೆ ತಿಳಿಯಿತು:
ಮೈಲಾರಪ್ನು ಸಂಪತ್ತು ಬಳಸಿ ಮುನೆಸ್ಪುರುನ ಕೊಯಿಲ್ ಆಚೆ ಒಂದು ದೊಡ್ಡ ವರಾಂಡ ಕಟ್ಟಲಾಯಿತು. ಅದರಾಗ ಮುನೆಸ್ಪುರುನುಕ ನಡಸಿಕೊಂಡು ಹೋಗಲು ಬರುವ ‘ಆ’ ಜನಗಳು ಪೊಂಗಲು ಮಾಡಿ ತಿನಲು ಬಳಸಿಕೊಳ್ಳುವ ಯವಸ್ಥೆ ಮಾಡಿದರು.

ಮೈಲಾರಪ್ನು ಸತ್ಮ್ಯಾಕು ಮುನೆಸ್ಪುರುನ ತಾವುಕ್ಕೆ ಒಗಾಗೆ ಆಗಲಿಲ್ಲ. ಆತುನ ಅಗ್ರ ಪೂಜಾ ಅಭಿಲಾಷೆ ಕೊನೇಕಾ ಹಂಗೆ ಉಳಕತ್ತು.

ಮುಖ್ಯಚಿತ್ರ – ಸಾಂದರ್ಭಿಕ

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಪೋಸ್ಟ್ ಹಂಚಿಕೊಳ್ಳಿ:

ಆನಂದ್ ಗೋಪಾಲ್
ಆನಂದ್ ಗೋಪಾಲ್
ಕತೆ, ಕವಿತೆ ಅಂತ ಆಗಾಗ ಕಳೆದುಹೋಗುವ ಆನಂದ್, ಕನ್ನಡ ಮೇಷ್ಟ್ರು. ಏಸೂರು ತಿರುಗಿದರೂ ತನ್ನೂರ ಭಾಷೆಯನ್ನು ಗಟ್ಟಿ ತಬ್ಬಿ ಹಿಡಿದ ಮನುಷ್ಯ. ಕೋಲಾರ ಜಿಲ್ಲೆಯ ಮಾಲೂರು ಪ್ರಾಂತ್ಯದ ದೇಸಿ ನುಡಿಗಟ್ಟಿನ ಸೊಗಡು ತಿಳಿಯಬೇಕು ಅಂದರೆ, ಆನಂದ್‌ ಮಾತಿಗೆ ಕಿವಿಯಾಗಬೇಕು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ ಸೀಮೆಯ ಕನ್ನಡ | ನಂಗಂತೂ ಅತ್ತಿ ಹೇಳದೂ ಖರೆ ಅನಸ್ತದ, ಸೊಸಿ ಹೇಳದೂ ಖರೆನೇ ಅನಸ್ತದ!

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಬೀದರ್ ಸೀಮೆಯ ಕನ್ನಡ | ವಯಸ್ಸೀಗಿ ಬಂದ್ ಮ್ಯಾಲ ಎಲ್ಲರಿಗಿ ಲವ್ ಆಯ್ತದ್; ಆಗಿಲ್ಲಾಂದ್ರ…?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಕಲಬುರಗಿ ಸೀಮೆಯ ಕನ್ನಡ | ಈ ಪದ್ದತಿಗಳು ಹೆಂಗಸರಿಗಿ ಜೀವಾ ತಿಂತಾವ ನೋಡ್ರೀ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ಸ್ ಅಥವಾ...