ಸ್ವಾವಲಂಬಿ ಲಿಂಗತ್ವ ಅಲ್ಪಸಂಖ್ಯಾತರೊಬ್ಬರ ಬದುಕು ಮರುನಿರ್ಮಾಣಕ್ಕೆ ಬೇಕಿದೆ ನಿಮ್ಮ ನೆರವು

Date:

Advertisements

ಕಷ್ಟಗಳನ್ನೆ ಮೆಟ್ಟಿಲಾಗಿ ಮಾಡಿಕೊಂಡವರು ತಮ್ಮ ಕಾಲ ಮೇಲೆ ತಾವು ನಿಲ್ಲುತ್ತಾರೆ ಎಂಬುದಕ್ಕೆ ಲಿಂಗತ್ವ ಅಲ್ಪಸಂಖ್ಯಾತ  ಸಮಾಜದ ಅರುಂಧತಿ ಜ್ವಲಂತ ಉದಾಹರಣೆ. ಲಿಂಗತ್ವ ಅಲ್ಪಸಂಖ್ಯಾತರನ್ನು ಅನುಮಾನದಿಂದ ನೋಡುವ ನಮ್ಮ ಸಮಾಜಕ್ಕೆ ಅರುಂಧತಿಯ ಬದುಕು ನಿಜಕ್ಕೂ ಮಾದರಿ. ಮಾನವೀಯತೆ ಹಾಗೂ ಸ್ವಂತ ಸಾಮರ್ಥ್ಯದ ಮೇಲೆ ಬದುಕು ಕಟ್ಟಿಕೊಂಡು ಇತರ   ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದವರಿಗೂ ಇವರು ಮುಖ್ಯವಾಹಿನಿಗೆ ಬರಲು ನೆರವಾಗುತ್ತಿದ್ದರು.

ಸಾಮಾಜಿಕ ಕಾರ್ಯಕರ್ತರಾಗಿರುವ ಅರುಂಧತಿ ಮೂಲತಃ ಮಂಡ್ಯ ಜಿಲ್ಲೆಯವರು. ಅವರು ಜೀವನೋಪಾಯಕ್ಕಾಗಿ ಭಿಕ್ಷಾಟನೆ ಅಥವಾ ಲೈಂಗಿಕ ಕೆಲಸಗಳನ್ನು ಅವಲಂಬಿಸಿರುವ ಅವರ ಲಿಂಗತ್ವ ಅಲ್ಪಸಂಖ್ಯಾತರ ಸಹೋದರಿಯರಿಗಿಂತ ಭಿನ್ನವಾಗಿ ಸವಾಲಿನ ಜೀವನೋಪಾಯದ ಆಯ್ಕೆ ಮಾಡಿಕೊಳ್ಳುವ ಸಲುವಾಗಿ ಹೊಸ ದಾರಿ ಕಂಡುಕೊಳ್ಳಲು ನಿರ್ಧರಿಸಿದರು.

ತಮ್ಮ ಹೊಸ ಬದುಕನ್ನು ನನಸಾಗಿಸಲು ಮಂಡ್ಯದಿಂದ 250 ಕಿ.ಮೀ ದೂರದ ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ಸಮೀಪದ ಕೊಳಹಾಲ್ ಗ್ರಾಮಕ್ಕೆ ಆಗಮಿಸಿ ಒಂದು ತುಂಡು ಭೂಮಿಯನ್ನು ಗುತ್ತಿಗೆ ಪಡೆದು ಮನೆಯ ಜೊತೆಗೆ ಶೆಡ್‌ಅನ್ನು ನಿರ್ಮಿಸಿಕೊಂಡು ಮೇಕೆ ಸಾಕಾಣಿಕೆ ಆರಂಭಿಸಿದರು.

Advertisements

ಬದ್ಧತೆ ಹಾಗೂ ಸಾಕಷ್ಟು ಕಠಿಣ ಶ್ರಮದಿಂದ ಅರುಂಧತಿ ಅವರು ತಮ್ಮ ಶೆಡ್‌ನಲ್ಲಿ ಕೆಲವೇ ಮೇಕೆಗಳಿಂದ 43 ಮೇಕೆಗಳು ಮತ್ತು 5 ಕುರಿಗಳಿಗೆ ಹೆಚ್ಚಿಸಿದರು. ಕುರಿ ಸಾಕಣಿಕೆ ಉದ್ಯಮದಿಂದ ಬಂದ ಆದಾಯದಲ್ಲಿ ತಮ್ಮ ಜೀವನ ನಿರ್ವಹಣೆಯ ಜೊತೆ ತಮ್ಮದೇ ಸಮುದಾಯದ ಇತರ ಲಿಂಗತ್ವ ಅಲ್ಪಸಂಖ್ಯಾತರ ಬದುಕಿಗೂ ಸಹಾಯ ಹಸ್ತ ಚಾಚುತ್ತಿದ್ದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬೆಂಗಳೂರು ಮಳೆ: ಜನರಿಗೆ ನರಕದಿಂದ ಮುಕ್ತಿ ಸಿಗುವುದೆಂದು?

ಆದರೆ ನಮ್ಮ ನಾಗರಿಕ ಸಮಾಜ ಇಂಥವರು ಸಮಾಜದಲ್ಲಿ ಗೌರವಯುತ ಬದುಕು ಕಟ್ಟಿಕೊಳ್ಳಲು ಬಿಡುತ್ತಿಲ್ಲ. ಕಳೆದ ತಿಂಗಳ ಅಕ್ಟೋಬರ್ 25 ರಂದು ಅರುಂಧತಿ ಅವರು ಕಾರ್ಯಕ್ರಮವೊಂದಕ್ಕೆ ಚಿಕ್ಕಮಗಳೂರಿಗೆ ಹೋಗಿದ್ದ ಸಂದರ್ಭದಲ್ಲಿ ಅಂದು ರಾತ್ರಿ ಆಕೆಯ ಎಲ್ಲ 43 ಮೇಕೆಗಳು ಮತ್ತು 5 ಕುರಿಗಳನ್ನು ಕಳ್ಳರ ಗುಂಪು ಕದ್ದೊಯ್ದಿದೆ.

ಅರುಂಧತಿಯ ಜೀವನಕ್ಕೆ ಆಧಾರವಾಗಿದ್ದ ಮೇಕೆ ಮತ್ತು ಕುರಿಗಳ ಬೆಲೆ 8 ಲಕ್ಷ ರೂ.ಗಳಿಗೂ ಹೆಚ್ಚು. ಆದರೆ ಕಳ್ಳರ ಕ್ರೂರ ಕೃತ್ಯವು ಮೇಕೆಗಳಿಗಿಂತ ಆಕೆಯ ಬದುಕುವ ಭರವಸೆಯನ್ನು ಕಿತ್ತುಕೊಂಡಿದೆ. ಸ್ವತಂತ್ರ ಜೀವನ ನಡೆಸುವ ಆಕೆಯ ಕನಸಿನ ಬುನಾದಿಯನ್ನು ಅದು ಅಲ್ಲಾಡಿಸಿದೆ.

ತಮ್ಮ ಕುರಿ ಮತ್ತು ಮೇಕೆ ಕಳ್ಳತನವಾದ ನಂತರ ಅರುಂಧತಿ ತಕ್ಷಣವೇ ಸ್ಥಳೀಯ ಪೊಲೀಸರಿಗೆ ಕಳುವಿನ ಬಗ್ಗೆ ದೂರು ನೀಡಿದ್ದಾರೆ. ಜೊತೆಗೆ ತಮ್ಮ ಕುರಿಗಳನ್ನು ಹುಡುಕಲು ಸಾಕಷ್ಟು ಪ್ರಯತ್ನ ಕೂಡ ಮಾಡಿದ್ದಾರೆ. ಆದರೆ ದುರದೃಷ್ಟವಶಾತ್ ತಮ್ಮ ಕುರಿ,ಮೇಕೆ ಕಳುವಾದ 15 ದಿನಗಳ ನಂತರವೂ ಕಳ್ಳರು ಸಿಕ್ಕಿಬಿದ್ದಿಲ್ಲ.

ಈ ಘಟನೆಯಿಂದ ಕಳೆದ 15 ದಿನಗಳಿಂದ ಅರುಧಂತಿ ಅವರು ತುಂಬ ನಿರಾಸೆಗೊಂಡಿದ್ದಾರೆ. ತಮ್ಮ ಜೀವನೋಪಾಯಕ್ಕಾಗಿ ಸ್ವಾವಲಂಬಿ ಉದ್ಯಮವನ್ನು ಮರುನಿರ್ಮಾಣ ಮಾಡಲು ಆರ್ಥಿಕ ಬೆಂಬಲದ ಅಗತ್ಯವಿದೆ.

ಈ ಹಿನ್ನೆಲೆಯಲ್ಲಿ ಸಂಗಮ ಎಂಬ ಸರ್ಕಾರೇತರ ಸಂಸ್ಥೆಯು ಅರುಂಧತಿಯ ಉದ್ಯಮವನ್ನು ಮರುನಿರ್ಮಾಣ ಮಾಡಲು ನಿಧಿಸಂಗ್ರಹ ಅಭಿಯಾನವನ್ನು ಪ್ರಾರಂಭಿಸುತ್ತಿದೆ. ಈ ಅಭಿಯಾನದಿಂದ ಸಂಗ್ರಹಿಸಿದ ಎಲ್ಲ ಹಣವನ್ನು https://milaap.org(ಮಿಲಾಪ್‌) ಎಂಬ ಸಂಸ್ಥೆ ನೇರವಾಗಿ ಅರುಂಧತಿಯ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.

ಅಲ್ಲದೆ ಈ ಅಭಿಯಾನವು ಆರ್ಥಿಕ ಬೆಂಬಲದ ಬಗ್ಗೆ ಮಾತ್ರವಲ್ಲ, ಸಂಕಷ್ಟದ ಸಮಯದಲ್ಲಿ ನೊಂದವರಿಗೆ ಸಹಾಯ ಮಾಡುವ ಪ್ರಮುಖ ಉದ್ದೇಶವಾಗಿದೆ. ದೊಡ್ಡ ಮೊತ್ತವಾಗಿರುವ ಕಾರಣ ಸರ್ಕಾರೇತರ ಸಂಸ್ಥೆಯ ಜೊತೆ ಸಾರ್ವಜನಿಕರ ನೆರವಿನ ಅಗತ್ಯ ಕೂಡ ಇದೆ. ಸಾರ್ವಜನಿಕರ ನೆರವು ಅರುಂಧತಿಯಂಥ ಹಲವು ಲಿಂಗತ್ವ ಅಲ್ಪಸಂಖ್ಯಾತರನ್ನು ಉದ್ಯಮಿಗಳನ್ನಾಗಿಸಲು ಪ್ರೇರೇಪಿಸಬಹುದು. ಅರುಂಧತಿಗೆ ಆರ್ಥಿಕ ಸಹಾಯ ಮಾಡುವವರು ಮಿಲಾಪ್‌ ವೆಬ್‌ಸೈಟ್‌ನ ಕೆಳಗಿನ ಲಿಂಕ್‌ಅನ್ನು ಪ್ರವೇಶಿಸಿ ಮಾಹಿತಿ ಪಡೆಯಬಹುದು.

https://milaap.org/fundraisers/support-arundhati-4?utm_source=whatsapp&utm_medium=fundraisers-title&mlp_referrer_id=178865

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಜೆಪಿ-ಆರ್‌ಎಸ್‌ಎಸ್‌ ಜತೆ ಕೈ ಜೋಡಿಸುವ ಪ್ರಶ್ನೆಯೇ ಇಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

ನಾನು ಅಪ್ಪಟ ಕಾಂಗ್ರೆಸ್ಸಿಗ. ಹುಟ್ಟಿನಿಂದ ಕಾಂಗ್ರೆಸ್ಸಿಗ. ಜೀವ ಇರುವ ತನಕವೂ ಕಾಂಗ್ರೆಸ್ಸಿಗನಾಗಿಯೇ...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

Download Eedina App Android / iOS

X