ಕೆಐಎನಲ್ಲಿ ಪ್ರಯಾಣಿಕರೊಬ್ಬರ ಎರಡು ಐಫೋನ್‌ ಕದ್ದ ಸಿಬ್ಬಂದಿ

Date:

  • ಚೆಕ್-ಇನ್ ಬ್ಯಾಗ್‌ನಲ್ಲಿ ಪವರ್ ಬ್ಯಾಂಕ್ ಮತ್ತು ಐದು ಐಫೋನ್‌ ಪತ್ತೆ
  • ಮಿಶ್ರಾ ವಿರುದ್ಧ ಕಳ್ಳತನ ಪ್ರಕರಣ ದಾಖಲಿಸಿದ ಪೊಲೀಸರು

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಖಾಸಗಿ ಗ್ರೌಂಡ್-ಹ್ಯಾಂಡ್ಲಿಂಗ್ ಕಂಪನಿಯ ಉದ್ಯೋಗಿಯೊಬ್ಬರು ಏಪ್ರಿಲ್‌ನಲ್ಲಿ ಪ್ರಯಾಣಿಕರೊಬ್ಬರ ಎರಡು ಐಫೋನ್‌ಗಳನ್ನು ಕದ್ದಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ಏರ್‌ಲೈನ್ಸ್ ಮೇ 31 ರಂದು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದೆ.

ಆರೋಪಿ ಫೋನ್ ಕದಿಯುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಟಾಟಾ ಸಿಯಾ ಏರ್‌ಲೈನ್ಸ್ ಲಿಮಿಟೆಡ್ (ವಿಸ್ತಾರಾ)ದ ಉದ್ಯೋಗಿ ಆರ್ ಗಣೇಶ್ ಕುಮಾರ್ ಅವರು ನೀಡಿದ ದೂರಿನ ಪ್ರಕಾರ, ಪ್ರಯಾಣಿಕ ಹೇಮಂತ್ ಕುಮಾರ್ ಅವರು ಏಪ್ರಿಲ್ 28 ರಂದು ಬೆಂಗಳೂರಿನಿಂದ ಚಂಡೀಗಢಕ್ಕೆ ವಿಮಾನ ಮೂಲಕ ತೆರಳಲು ಪ್ರಯಾಣಕ್ಕಾಗಿ ಟಿಕೆಟ್ ಬುಕ್ ಮಾಡಿದ್ದರು.

ಲಗೇಜ್ ತಪಾಸಣೆಯ ವೇಳೆ, ಭದ್ರತಾ ಸಿಬ್ಬಂದಿಗೆ ಹೇಮಂತ್ ಕುಮಾರ್ ಅವರ ಚೆಕ್-ಇನ್ ಬ್ಯಾಗ್‌ನಲ್ಲಿ ಪವರ್ ಬ್ಯಾಂಕ್ ಮತ್ತು ಐದು ಐಫೋನ್‌ಗಳು ಪತ್ತೆಯಾಗಿವೆ. ಚೆಕ್-ಇನ್ ಬ್ಯಾಗೇಜ್‌ನಲ್ಲಿ ಪವರ್ ಬ್ಯಾಂಕ್‌ಗಳನ್ನು ನಿಷೇಧಿಸಿರುವುದರಿಂದ, ಅವರು ಅದನ್ನು ಅವರ ಬ್ಯಾಗ್‌ನಿಂದ ತೆಗೆದಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮರುದಿನ ಬೆಳಗ್ಗೆ 8.40ಕ್ಕೆ ವಿಮಾನಯಾನ ಸಂಸ್ಥೆಯು ಚಂಡೀಗಢಕ್ಕೆ ಬ್ಯಾಗ್ ಕಳುಹಿಸಿದೆ. ಹೇಮಂತ್ ಕುಮಾರ್ ಅವರು ತಮ್ಮ ಬ್ಯಾಗ್ ಅನ್ನು ಸ್ವೀಕರಿಸಿದಾಗ ಅದರಲ್ಲಿದ್ದ ಎರಡು ಐಫೋನ್ ಕಾಣೆಯಾಗಿದೆ.

ಈ ಬಗ್ಗೆ ಹೇಮಂತ್ ಕುಮಾರ್ ಅವರು ಏರ್‌ಲೈನ್‌ಗೆ ದೂರು ಸಲ್ಲಿಸಿದ್ದಾರೆ. 27 ವರ್ಷದ ಶುಭಂ ಮಿಶ್ರಾ, ಗ್ರೌಂಡ್-ಹ್ಯಾಂಡ್ಲಿಂಗ್ ಸೇವಾ ಪಾಲುದಾರ AISATS ಲಿಮಿಟೆಡ್‌ನೊಂದಿಗೆ ಕೆಲಸ ಮಾಡುತ್ತಿದ್ದು, ಏಪ್ರಿಲ್ 29 ರಂದು ಬೆಳಗಿನ ಜಾವ 2.30 ರ ಸುಮಾರಿಗೆ ಫೋನ್‌ಗಳನ್ನು ಕದ್ದಿದ್ದಾರೆ ಎಂಬುದು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ತಿಳಿದುಬಂದಿದೆ.

ಈ ಸುದ್ದಿ ಓದಿದ್ದೀರಾ? ಹೆಚ್ಚುವರಿ ಲಗೇಜ್‍ಗೆ ಹಣ ಪಾವತಿಸುವಂತೆ ಹೇಳಿದಕ್ಕೆ ಬ್ಯಾಗ್‍ನಲ್ಲಿ ಬಾಂಬ್ ಇದೆ ಎಂದ ಮಹಿಳೆ

ತನಿಖೆಯ ವೇಳೆ ಮಿಶ್ರಾ ಫೋನ್‌ಗಳನ್ನು ಕದ್ದು ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ವಿಮಾನಯಾನ ಸಂಸ್ಥೆಯು ಪ್ರಯಾಣಿಕರಿಗೆ ಹಣವನ್ನು ಹಿಂದಿರುಗಿಸಿದೆ. ವಿಮಾನಯಾನ ಸಂಸ್ಥೆ ಮಿಶ್ರಾ ಅವರನ್ನು ಸೇವೆಯಿಂದ ವಜಾ ಮಾಡಿದ್ದಾರೆ. ಮಿಶ್ರಾ ವಿರುದ್ಧ ಪೊಲೀಸರು ಕಳ್ಳತನ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಧರ್ಮದ ಆಧಾರದ ಮೇಲೆ ಮತಯಾಚನೆ ಮಾಡಿದ ತೇಜಸ್ವಿ ಸೂರ್ಯ: ಪ್ರಕರಣ ದಾಖಲು

ಧರ್ಮದ ಆಧಾರದ ಮೇಲೆ ಮತಯಾಚನೆ ಮಾಡಿದ ಆರೋಪದ ಮೇಲೆ ಬೆಂಗಳೂರು ದಕ್ಷಿಣ...

ಬೆಂಗಳೂರು | ಕೆಎಂಎಫ್ ಹೊಸ ದಾಖಲೆ​; ಒಂದೇ ದಿನ 51 ಲಕ್ಷ ಲೀಟರ್ ನಂದಿನಿ ಹಾಲು ಮಾರಾಟ

ವು(ಕೆಎಂಎಫ್‌) ನಂದಿನಿ ಬ್ರ್ಯಾಂಡ್​ ಉತ್ಪನ್ನಗಳ ಮಾರಾಟದಲ್ಲಿ ತನ್ನದೇ ದಾಖಲೆಯನ್ನು ಮುರಿದಿದೆ. ದಿನವೊಂದರಲ್ಲಿ...

ಬೆಂಗಳೂರು | ಮತಗಟ್ಟೆ ಬಳಿ ಮಹಿಳೆಗೆ ಹೃದಯಾಘಾತ; ಮತದಾನ ಮಾಡಲು ಬಂದ ವೈದ್ಯನಿಂದ ಜೀವ ರಕ್ಷಣೆ

ಬೆಂಗಳೂರಿನ ಜೆ ಪಿ ನಗರದಲ್ಲಿರುವ ಜಂಬೂ ಸವಾರಿ ದಿನ್ನೆ ಮತಗಟ್ಟೆಯಲ್ಲಿ ಮತದಾನ...

ಮಧ್ಯಾಹ್ನ 1 ಗಂಟೆವರೆಗೂ ರಾಜ್ಯದಲ್ಲಿ ಶೇ.38.23ರಷ್ಟು ಮತದಾನ

ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ದೇಶದಲ್ಲಿ ಶುಕ್ರವಾರ ಆರಂಭಗೊಂಡಿದ್ದು, ರಾಜ್ಯದ...