ಕೆ ಆರ್ ಪೇಟೆ ಸೀಮೆಯ ಕನ್ನಡ | ಕೊನ್ಗೂ ಬುದ್ದಿ ಕಲ್ತು ನಾರಾಯಣ್‌ ಗೌಡುನ್ನ ಸೋಲ್ಸುದ್ರು ನಮ್ ಕ್ಯಾರ್‌ಪೇಟೆ ಜನ

Date:

Advertisements
ನಾರಾಯಣ್‌ ಗೌಡ ಮಂತ್ರಿ ಆಗಿ ನಮ್ ಕ್ಸೇತ್ರವ ಸಿಂಗಾಪುರ ಮಾಡ್ತನೆ ಅಂತ ಕ್ಯಾರ್‌ಪೇಟೆ ಜನ ನಂಬ್ಕಂಡಿದ್ರು. ಆದ್ರೆ, ಅವ ಕ್ಯಾರ್‌ಪೇಟೆಯ ಐಟೆಕ್ ಸಿಂಗಾಪುರ ಮಾಡ್ಲಿಲ್ಲ; ಬದ್ಲಿಗೆ, ನಮ್ಮೂರ್‌ತವ ಮಾರ್ಮಳ್ಳಿ ಪಕ್ದಲ್ಲಿರೋ ಸಿಂಗಾಪುರ ಮಾಡ್ದ!

ಓದ್ ತಿಂಗ್ಳಷ್ಟೆ ನಮ್ ರಾಜ್ಯುದಲ್ಲಿ ಎಲೆಕ್ಸನ್ ನಡೆದದೆ. ಕಾಂಗ್ರೆಸ್‌ನೋರ್ಗೆ ರಾಜ್ಯುದ್ ಜನ ಸಿಕ್ಕಾಪಟ್ಟೆ ಓಟ್ ಆಗಿ ಗೆಲ್ಲುಸ್ಬುಟೌರೆ. ಆದ್ರುವೆ ನಮ್ ಕ್ಯಾರ್‌ಪೇಟೆ ಕಾಂಗ್ರೆಸ್ಸು ಕ್ಯಾಂಡೇಟ್ ಚೆಂಜ್ ಮಾಡುದ್ರುವೆ, ಅವರಿಗೆ ಜನಗೊಳ್ ಓಟ್ ಆಕ್ನಿಲ್ಲ. ಅಳೇ ಶಿವುನ್ ಪಾದ್ವೇ ಗತಿ ಅನ್ನಂತೆ ಅದೇ ಜೆಡಿಎಸ್‌ಗೆ ಓಟಾಗಿ ಗೆಲ್ಸೌರೆ. ಪಾಪ ಒಂದು, ಎಲ್ಡು ಅಂತ ಎಣ್ಸೊಅಷ್ಟ್ ಸೀಟ್ ಗೆದ್ದಿಗೆ ತೆನೆವೊತ್ತೋರ್ಗೆ ನಮ್ಮೊರುವೆ, ಒಂದ್ ಸೀಟ್ ಕೊಟೌರೆ. ಅದೇನಾರ ಆಗ್ಲಿ, ಆಪ್ರೇಸನ್ ಮಾಡುಸ್ಕಂಡು ಬಿಜೆಪಿ ಬಾಲಂಗೋಚಿ ಆಗಿದ್ ನಾರಾಯಣ್‌ಗೌಡುನ್ನ ಸೋಲ್ಸುದ್ರು. ಅದೇ ನಮ್ ಪುಣ್ಯ. ಓದ್ ಬೈ ಎಲೆಕ್ಸನ್ ಅಲ್ಲಿ ಅದೇನ್ ಕಂಡ್ ಆವಯ್ಯನ್ನ ಗೆಲ್ಸಿದ್ರೊ ಗೊತ್ತಿಲ್ಲ. ಈ ಸಲ ಸೋಲ್ಸುದ್ರು.

ಬಾಂಬೆಲಿದ್ದ ನಾರಾಯಣ್‌ ಗೌಡ ಬಾಂಬೆ ಬುಟ್ ಬಂದು ಇಪ್ಪತ್ ವರ್ಸ ಆಯ್ತು. 2006ರಲ್ಲಿ ಬಾಂಬೆಯಿಂದ ಮಕ್ಯಾರ್ಕೆ ಅವ ಬಂದಿದ್ದು ಕ್ಯಾರ್‌ಪೇಟೆಗೆ. ಬಂದ್‌ಬಂದಂಗೆ ರಾಜಕಾರಣ ಸುರುಮಾಡಿದ. ಎಲ್ಡ್ ವರ್ಸ ಕ್ಯಾರ್‌ಪೇಟೆ ತಾಲೂಕಲ್ಲಿರೋ ಎಲ್ಲ ಅಳ್ಳಿನೂ ಸುತ್ತಾಡ್ತಾ, ಗೌರ್ಮೆಂಟ್ ಸ್ಕೂಲ್‌ಗೋಗಿ ಮಕ್ಳುಗೆ ತಂದು-ತಮ್ ಅಪ್ಪ-ಅಮ್ಮುಂದು ಪೋಟ ಇರೋ ಪುಸ್ತಕ, ಅಳ್ಳಲಿದ್ದ ಎಂಗುಸ್ರುಗೆ ಪುಸ್ಕಟ್ಟೆ ಸೀರೆ ಕೊಟ್ಟ. ಇವಯ್ಯ ಮಾಡ್ತಿದ್ದುದ್ ನೋಡುದ್ ಜನ ದ್ಯಾವ್ರೇ ಬೂಮಿಗಿಳುದ್ ಬಂದೌನೆ ಅಂತ ಪೀಲಾಯ್ತಿದ್ರು.

ಈ ನುಡಿಗಟ್ಟು ಕೇಳಿದ್ದೀರಾ?: ಮಾಲೂರು ಸೀಮೆಯ ಕನ್ನಡ | ಪೋತುರಾಜುಲು ಮತ್ತು ಧರಮ ದೊರೆಗಳ ಬೆಂಕಿ ಆಟ

ಓ ಜನ ನನ್ ಕಡಿಕ್ ಅವ್ರೆ ಅನ್ಕಂಡು ನಾರಾಯಣ್‌ ಗೌಡ, 2008ರಲ್ ನಡುದ್ ಎಲೆಕ್ಸನ್ಸಲ್ಲಿ ಮಾಯಾವತಿ ಅವ್ರ್ ಬಿಎಸ್‌ಪಿ ಇಂದು ನಿಂತ್ಕಂಡು ಸೋತ. ಆಮೇಲೆ, ಅದೇ ಎಲೆಕ್ಸನ್‌ಅಲ್ಲಿ ಜೆಡಿಎಸ್‌ಯಿಂದ ನಿಂತಿದ್ದ ಮಾಜಿ ಸ್ಪೀಕರ್ ಕ್ಯಾರ್‌ಪೇಟೆ ಕ್ರಿಸ್ಣ ಅವ್ರೂ ಸೋತಿದ್ರು. ರಾಜ್ಕೀಯುದಿಂದ್ಲು ದೂರ ಓದ್ರು. ಜೆಡಿಎಸ್ನೋರ್ಗೆ ಕ್ಯಾರ್‌ಪೇಟೆಗೆ ದುಡ್ಡಿಟ್ಟಿರೋನು ಯಾವಾನಾರ ಬೇಕಿತ್ತು. ಆಗ ಅವ್ರ್ ಕಣ್ಗೆ ಈ ನಾರಾಯ್ಣು ಬಿದ್ದ. 2013 ಎಲೆಕ್ಸನ್ನಲ್ಲಿ ಇವ್ನೆಗೆ ಟಿಕಿಟ್ ಕೊಟ್ಟು ಗೆಲ್ಸುದ್ರು.

Advertisements

ಐದ್‌ ವರ್ಸ ಜೆಡಿಎಸ್ಸಲ್ಲೇ ಶಾಸಕ್ನಾಗಿ ಇದ್ದ. 2018ರಲ್ಲೂ ಜೆಡಿಎಸ್ನೋರು ಇವ್ನ್ಗೇ ಟಿಕಿಟ್ ಕೊಟ್ರು. ಇನ್ನೊಂದ್ ಸಲನೂ ಗೆದ್ದ. ಅಸ್ಟೊತ್ಗೆ, ಬಾಂಬೆಲಿ ದುಡ್ ನೋಡಿದ್ ನಾರಾಯ್ಣುಗೆ, ಮಂತ್ರಿ ಆಗ್ಬುಟ್ಟು ಒಂದಷ್ಟು ದುಡ್ ಮಾಡ್ಬೇಕು ಅನ್ನೊ ಚಿಂತೆ ಸುರು ಆಗಿತ್ತು ಎಂತ ಜನ ಏಳ್ತಾವ್ರೆ. ಇಂತೋರ್ಗಾಗೇ ಕಾಯ್ತಿದ್ ಬಿಜೆಪಿಯೋರು, ನಾರಾಯ್ಣು ಸೇರಿ ಅದ್ನ್ಯೋಳ್ ಜನ ಸಾಸಕ್ರುಗೆ ಆಪ್ರೇಸನ್ ಕಮ್ಲ ಮಾಡಿ, ಬಾಂಬೆಗೆ ಎತ್ತಾಕಂಡ್ ಓದ್ರು.

ಈ ನುಡಿಗಟ್ಟು ಕೇಳಿದ್ದೀರಾ?: ಕುಮಟಾ ಸೀಮೆಯ ಕನ್ನಡ | ಈ ಬಿಂಬ್ಲಿಕಾಯಿ ರುಚಿ ತಿಂದವ್ರಿಗೇ ಗೊತ್ತು

ಅಲ್ಲಿ ಅದ್ಯೋವ್ದು ಓಟ್ಲಲ್ಲಿ ಮಜಾ ಮಾಡ್ಕಂಡು, ರಾಜ್ಯುದಲ್ಲಿದ್ ಕಾಂಗ್ರೆಸು-ಜೆಡಿಎಸು ಹೊಂದಾಣ್ಕೆ ಸರ್ಕಾರವ ಉಂಡುಸುದ್ರು. ಬಿಜೆಪಿಗ್ ಸೇರ್ಕಂಡು ಬೈ-ಎಲಕ್ಸನ್ ಮಾಡುದ್ರು. ಇವ ಮಾಡಿಟ್ಟಿದ್ ದುಡ್ಡು, ಬಿಜೆಪಿಯವ್ರ್ ಕೊಟ್ಟಿದ್ ದುಡ್ಡಲ್ಲಿ ಒಂದಸ್ಟ್ ದುಡ್ಡ ಕ್ಸೇತ್ರುದ್ ಜನುಕ್ಕೆ ಅಂಚ್ದ. ಕ್ಯಾರ್‌ಪೇಟೆ ಜನುಕ್ಕೆ ಅದೇನ್ ಮಂಕ್ ಬಡ್ತಿತ್ತೊ, ಅಧಿಕಾರ್ದಲ್ಲಿದ್ದಾಗ್ಲೆ ಪಕ್ಸ ಬುಟ್ ಪಕ್ಸುಕೋದ ನಾರಾಯ್ಣುನ ತಿರ್ಗೆ ಗೆಲ್ಸುದ್ರು.

ಗೆದ್ದೌನು ಮಂತ್ರಿನೂ ಆದ. ಮಂತ್ರಿ ಆಗಿ ನಮ್ ಕ್ಸೇತ್ರವ ಸಿಂಗಾಪುರ ಮಾಡ್ತನೆ ಅಂತ ಕ್ಯಾರ್‌ಪೇಟೆ ಜನ ನಂಬ್ಕಂಡಿದ್ರು. ಆದ್ರೆ, ಅವ ಕ್ಯಾರ್‌ಪೇಟೆಯ ಐಟೆಕ್ ಸಿಂಗಾಪುರ ಮಾಡ್ಲಿಲ್ಲ. ನಮ್ಮೂರ್‌ತವ ಮಾರ್ಮಳ್ಳಿ ಪಕ್ದಲ್ಲಿರೋ ಸಿಂಗಾಪುರ ಮಾಡ್ದ. ಕ್ಯಾರ್‌ಪೇಟೆ ಜನುಕ್ಕೆ ಏನೂ ಉಪ್ಯೋಗ ಆಗ್ಲಿಲ್ಲ. ಅದ್ರಲುವೆ ಕ್ಯಾರ್‌ಪೇಟೆ ಬಾಡ್ರಲ್ಲಿರೋ ರೋಡ್‌ಗಳೋ ಜಟ್ಕಗಾಡಿ ಓಡ್ದೋ ಗಾಡಿ ಜಾಡ್ ಇದ್ದಂಗವೆ. ಇನ್ನು ಹಳ್ಳಿಗಳ್ ರೋಡಂತು ಕೇಳಂಗೆ ಇಲ್ಲ.

ಈ ನುಡಿಗಟ್ಟು ಕೇಳಿದ್ದೀರಾ?: ದೇಸಿ ನುಡಿಗಟ್ಟು – ಹೊನ್ನಾಳಿ ಸೀಮೆ | ಸವಂತ್ಗಿ ಅಂದ್ರ ಸರ್ವೂತ್ನಾಗು ಬದ್ಕು

ಕ್ಯಾರ್‌ಪೇಟೆ ತಾಲೂಕಲ್ಲೇ ಇರೋ ಮಂದ್‌ಗೆರೆ ತವು ಏತ ನೀರಾವರಿ ಯೋಜ್ನೆ ಸುರು ಮಾಡೌರೆ. ಅದೆಸ್ಟೊ ವರ್ಸ ಕಳ್ದವೆ, ಆದ್ರುವೆ, ಅದು ಏಮಾವತಿ ನದಿನಿಂದ ಒಂದ್ ಕಿಲೋಮೀಟ್ರು ಮುಂದುಕ್ ಬಂದಿಲ್ಲ, ಅಲ್ಲೇ ಕುಂತದೆ! ಕ್ಯಾರ್‌ಪೇಟೆ ಬಸ್ಟಾಂಡು ಮಳೆ ಊದ್ರೆ ಸಾಕು ಕಟ್ಟೆ ಆದಂಗ್ ಆಯ್ತಿತ್ತು. ಇನ್ನ ಸುಮಾರ್‌ ಊರಲ್ಲಿ ಬೇಸ್ಗೇಗಾಲ ಬತ್ತು ಅಂದ್ರೆ ಕುಡ್ಯಕೂ ನೀರಿರಕಿಲ. ಅಂತ ಪರಿಸ್ತಿತಿಲಿ ಜನ ಬದುಕ್ತೌರೆ.

ಆದ್ರುವೆ, ಮಂತ್ರಿ ಆದ್ ನಾರಾಯ್ಣು ಮಾತ್ರ ಏನು ಕೆಲ್ಸ ಮಾಡ್ನಿಲ್ಲ. ಇದ್ರಿಂದ ಬೇಜಾರಾಗಿ ಬುದ್ದಿ ಕಲ್ತ ಜನ, ನಾರಾಯ್ಣುಗು ಬುದ್ದಿ ಕಲುಸ್ಬೇಕು ಅಂತ ಡಿಸೈಡ್ ಮಾಡಿ, ಓದ್ ತಿಂಗ್ಳು ನಡುದ್ ಎಲೆಕ್ಸನ್ನಲ್ಲಿ ಸೋಲ್ಸಿ ಮನೆಗ್ ಕಳ್ಸೌರೆ. ಕ್ಯಾರ್‌ಪೇಟೆ ಜನುಕ್ಕೆ ನಮುಸ್ಕಾರ.

ಬರಹಗಳನ್ನು ಆಲಿಸಲು ಇಲ್ಲಿ ಕ್ಲಿಕ್ ಮಾಡಿ: ಈದಿನ.ಕಾಮ್ ಕೇಳುದಾಣ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊನ್ನಾಳಿ ಸೀಮೆಯ ಕನ್ನಡ | ನಮ್ಮೂರಾಗ ಎಲ್ಲಾ ಜಾತೇರು ಸೇರ್ಕೆಂದ್ ಮಾಡಾ ಮಯೇಶುರಿ ಹಬ್ಬ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮಾಲೂರು ಸೀಮೆಯ ಕನ್ನಡ | ಪ್ರೊಫೆಸರ್ ಮೈಲಾರಪ್ಪನ ಅಗ್ರ ಪೂಜಾ ಅಭಿಲಾಷೆ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಔರಾದ್ ಸೀಮೆಯ ಕನ್ನಡ | ಈವೊರ್ಷ್ ಯಳಮಾಸಿ ಭಜ್ಜಿ ಉಳ್ಳಾಕ್ ನಮ್ ಹೊಲ್ಕಡಿನೇ ಬರೀ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ದಾವಣಗೆರೆ ಸೀಮೆಯ ಕನ್ನಡ | ‘ಅವ್ರ್ ಕೊಡುಕ್ಕೆ ನಮ್ ಕೊಡಾನ ಯಾಕ್ ಮುಟ್ಟಿಸ್ಕ್ಯಬಾರ್ದು?’

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ಸ್ ಅಥವಾ ಸ್ಪಾಟಿಫೈ...

Download Eedina App Android / iOS

X