ಕುಮಟಾ ಸೀಮೆಯ ಕನ್ನಡ | ನಮ್ಮನಿ ಹಿಂದಿನ ಸೊಪ್ಪಿನ ಬೆಟ್ಟ ಒಂದ್ ನಮನಿ ಮಾಲ್ ಇದ್ದಂಗೆ!

Date:

Advertisements
ದೊಡ್ಡವ್ರೆಲ್ಲ ದನದ ಸಗಣಿ ಬಿದ್ರೆ ಹೆಕ್ಕ ಬಂದು ಬರಣಿ ತಟ್ಟುದು, ಕಡ್ಲಕಾಯಿ ತಂದಿ ಉಪ್ಪಿನಕಾಯಿ ಹಾಕುದು, ಮಳಿಗಾಲ್ದಲ್ಲಿ ತಗಟಿ ಸೊಪ್ಪು, ಗಜಗೆಂಡಿ ಸೊಪ್ಪು ತಂದು ಪಲ್ಲೆ ಮಾಡುದು ಎಲ್ಲಾ ಇರ್ತಿತ್ತು. ಅದ್ರ, ಸಂತಿಗೆ ಬೋಕಳ ಹೂವು, ಕಡ್ಲ ಹೂವಿನ ಮಾಲಿ ಮಾಡಿ ಮುಡ್ಕಂತಿದ್ರು

ಸೊಪ್ಪಿನ ಬೆಟ್ಟ ಅಂದ್ರೆ ನಮ್ಮನಿ ಹಿಂದಿನ ದೊಡ್ಡ ಬೆಟ್ಟ… ಸಣ್ಣವ್ರಿದ್ದಾಗಿನ ಕಾಲದ ಸುದ್ದಿ ಕೇಳದ್ರೆ, ಬರೀ ಆ ಬೆಟ್ಟದ ಸಂತಿಗೇ ನಮ್ಮ ಮುಕ್ಕಾಲು ಜೀವನ.

ಮನಿಗೆ ಆಸ್ತಿ ಅಂತ ಗದ್ದಿ ಒಂದಿಷ್ಟಿದ್ರೆ ಅನ್ನಕಾಗ್ತಿತ್ತು ಕರೆ. ರಾಶಿ-ರಾಶಿ ದುಡ್ ಕೊಡ್ಲೆಲ ಅಂದ್ರೂ, ಚಂದದ ಬದ್ಕಿನ ಪಾಲು ಮಾತ್ರ ನಮ್ಮ ಬೆಟ್ಟದ್ದೇಯಾ.

ನಮ್ಮ ಮನಿ ಹಿಂದೇ ಮನಿಗೆ ತಾಗಿದ್ದಂಗೇ ನಮ್ ಬೆಟ್ಟ. ಆವಾಗೆಲ್ಲವಾ ದೊಡ್ಡ ಚರಿಗಿಲಿ ಕುಚ್ಚಕ್ಕಿ ಅನ್ನ ಮಾಡುದು, ಹಂಡಿಗಟ್ಲಿ ನೀರ ಕಾಸುದು, ಮೀನ ಸಾರು ಎಲ್ಲದೂ ಒಲಿಮೆನೆಯ. ದೊಡ್ಡ ಬೆಂಕಿ ಒಟ್ಟುಕೆ ಬೇಕಾದ ಸೌದಿಯೆಲ್ಲ ಬೆಟ್ಟದಿಂದೇ ತರುದಾಗಿತ್ತು.

Advertisements

ಆಗೆಲ್ಲವಾ ಹಸೀ ಮರ ಒಂದೂ ಮುಟ್ದದೇಯಾ ಇಡೀ ಬೆಟ್ಟ ತಿರ್ಗಾಡಿ, ಒಣಗಿಬಿದ್ದ ಜಿಗ್ಗೆಲ್ಲವಾ ದೊಡ್ಡ-ದೊಡ್ಡ ಹೊರೆ ಕಟ್ಕಬಂದಿ ಒಲಿ ಒಟ್ಟುದು. ಆಗಿನ ಕಾಲ್ದಲ್ಲಿ ಸೌದಿ ಒಟ್ಟುದ ನೋಡದ್ರೆ, ಈಗಿನಂಗೆ ಸಿಲಿಂಡರ್ ಬಳ್ಸುದಾಗಿದ್ರೆ ವಾರಕ್ಕೂ ಸಾಕಾಗುದಿಲ್ಲಾಗಿತ್ತು. 

ಈ ಕನ್ನಡ ಕೇಳಿದ್ದೀರಾ?: ಹೊನ್ನಾಳಿ ಸೀಮೆಯ ಕನ್ನಡ | ನನ್ ಬಾಯ್ಮಾತ್ ಯಾರ್ಕೆಳ್ತಾರಾ…

ಹಂಗೇಯ, ಕೊಟ್ಟಿಗಿಲಿ ಇರು ದನಕ್ಕೆ ದಿನಾನೂ ಹಾಸು  ಸೊಪ್ಪು ಕೊಯ್ದು ಚೂಳಿಲಿ, ಕಲ್ಲಿಲಿ ತುಂಬ್ಕಂಡಿ ಹೊತ್ಕ ಬರುದೇಯ. ಬ್ಯಾಸಿಗಿಲಿ ಒಣಾ ತರಕು ಬರಗುದಂತೂ ದೊಡ್ಡ  ಕೆಲಸ. ಇಡೀ ಬೆಟ್ಟ ತೆಂಗಿನ ಮಂಜಾರ ತಕಂಡಿ ಕಸ ಗುಡ್ಸಿದಂಗೆ ಗುಡ್ಸಕಂತಿ ತರಕಿನ ದೊಡ್ಡ ರಾಶಿ ಕೆಳ್ಗೆ ತರುದು. ಅದನ್ನ ಮನಿ ಹೆಂಗಸ್ರು, ಗಂಡಸ್ರು, ಕೆಲಸದವ್ರೂ ಎಲ್ಲಾ ಸೇರೇ ತಿಂಗಳಗಟ್ಲೆ ಮಾಡ್ತಿದ್ರು.

ಸಣ್ಣಿದ್ದಾಗ ಬೆಟ್ಟದಿಂದ ಗೇರ್ ಬೀಜ ಹೆಕ್ಕಬಂದಿ ಮಾರಿ ದುಡ್ಡು ಮಾಡುದಂತೂ  ಹಬ್ಬಾ ನಮ್ಗೆ. ರಜೆ ಇದ್ದಾಗೆಲ್ಲವಾ ದಿನಾ ಗೇರ ಮರದ್ ಕೆಳ್ಗೆ ಇರುದೇಯಾ. ‌ಹಣ್ಣು ತಿನ್ನುದ್ಕಿಂತ ಹೆಚ್ಚು ಬೀಜ ಹುಡ್ಕಿ-ಹುಡ್ಕಿ ಹೆಕ್ಕಬಂದಿ, ಪಾಲ ಮಾಡಿ, ಕೂಡ್ಸಿಟ್ಟು, ತೇಲು ಬೀಜ – ಮುಳುಗು ಬೀಜ ಬೇರೆ-ಬೇರೆ ಮಾಡಿ ಬೇರೆ-ಬೇರೆ ರೇಟಿಗೆ ಸುಬ್ರಾಯಣ್ಣಗೆ ಮಾರುದಾಗಿತ್ತು. ನೂರೋ ಇನ್ನೂರೋ ಬಂದ್ಬಿಟ್ರೆ ಚಪ್ಪಲ್ ತಕಂಬುದಾ, ಚತ್ರಿ ತಕಂಬುದಾ ಅಂದಿ ನಿದ್ರಿನೇ ಬರುದಿಲ್ಲಾಗಿತ್ತು. ಅದ್ರ ಲೆಕ್ಕಾ ಕೇಳುದ್ ಬ್ಯಾಡಾ…

ಬ್ಯಾಸಗಿಲಿ ಚಿಕ್ಕಮ್ಮ, ಅತ್ತಿಗಿ, ಅಕ್ಕನೋರೆಲ್ಲ ಬ್ಯಾಣಕ್ಕೆ ಜಿಗ್ಗು ಕಡುಕೆ ಹೋದ್ರೆ ನಾವು ಮುಳ್ಳಣ್ಣು, ಕಾರಿ ಹಣ್ಣು, ಕಡ್ಲಣ್ಣು ಕೊಯ್ಕಂಡಿ, ಎಲೆ ಕೊಟ್ಟೆ ಮಾಡಿ ಹಾಕಂಡಿ ತಿನ್ನುದೇ ಒಂದ ಮಜಾ.

ಈ ಕನ್ನಡ ಕೇಳಿದ್ದೀರಾ?: ಬೀದರ್ ಸೀಮೆಯ ಕನ್ನಡ | ‘ಬಿಸಿ-ಬಿಸಿ ರೊಟ್ಟಿ, ಬಳ್ಳೊಳ್ಳಿ ಖಾರಾ, ಇಲ್ಲಾ ಸೇಂಗಾದ್ ಹಿಂಡಿ…’

ದೊಡ್ಡವ್ರೆಲ್ಲ ದನದ ಸಗಣಿ ಬಿದ್ರೆ ಹೆಕ್ಕ ಬಂದು ಬರಣಿ ತಟ್ಟುದು, ಕಡ್ಲಕಾಯಿ ತಂದಿ ಉಪ್ಪಿನಕಾಯಿ ಹಾಕುದು, ಮಳಿಗಾಲ್ದಲ್ಲಿ ತಗಟಿ ಸೊಪ್ಪು, ಗಜಗೆಂಡಿ ಸೊಪ್ಪು ತಂದು ಪಲ್ಲೆ ಮಾಡುದು ಎಲ್ಲಾ ಇರ್ತಿತ್ತು. ಅದ್ರ, ಸಂತಿಗೆ ಬೋಕಳ ಹೂವು, ಕಡ್ಲ ಹೂವಿನ ಮಾಲಿ ಮಾಡಿ ಮುಡ್ಕಂತಿದ್ರು.

ಅಂಗಳ ಮಾಡುಕೆ ಮಣ್ಣು, ಬಲೀಂದ್ರನ ಮಾಡುಕೆ ಶೇಡಿ, ದೃಷ್ಟಿ ತೆಗುಕೆ ಬೋಕಳ ಎಲೆ, ಕಜ್ಜಿ ಹೊಟ್ಟೆ ನೋವಿಗೆಲ ಕೊಡಸಲ ಬೇರು, ಕೊಟ್ಟಿ ರೊಟ್ಟಿ ಮಾಡುಕೆ ಹಲಸಿನ ಎಲಿ ಎಲ್ಲದು ಬೆಟ್ಟಕ್ ಹೋಗಿ ತರುದೇಯ.

ನಮಗೆ ಅದೊಂದು ನಮನಿ ಈಗಿನ್ ಕಾಲದ ಮಾಲ್ ಇದ್ದಂಗೇಯ. ಸಂತಿಗೆ ನಮ್ಮ ದೆವ್ವ-ದ್ಯಾವ್ರು ಎಲ್ಲಾ ಇರುದು ಅಲ್ಲೇಯ ಆಗಿತ್ತು.

ಈಗೆಲ್ಲಾ ಬೆಟ್ಟ ಹತ್ತಿದ್ರೆ  ಅಕೇಶಿಯಾ ಗಿಡದ ಪೊದೆ ಬಿಟ್ರೆ ಸಣ್ಣ ಹುಲ್ಲೂ ಕಾಣುದೆಲಾ. ಎಲ್ಲಿ ನೋಡಿದ್ರೂ ಅದೇ ತುಂಬ್ಕಂಡಿ, ಯಾವ್ದು ನಮ್ಮ ಕಡ್ಲ ಗಿಡ, ಎಲ್ಲಿ ಮುಳ್ಳಣ್ಣಿತ್ತು ಅಂದಿ ಹುಡ್ಕುಕಾಗ್ದೆ, ಬೆಟ್ಟನು ಬ್ಯಾಡಾ ಎಂತದ್ದೂ ಬ್ಯಾಡ ಹೇಳಿ ಕಣ್ಣಲ್ಲಿ ನೀರ ಹಾಕಂಡಿ ಸುಮ್ಮನೆ ಇಳ್ಕ ಬರುದೇಯ.

ಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ

ಕಲಾಕೃತಿ ಕೃಪೆ: ಅಖಿಲ್ ತ್ಯಾಗರಾಜನ್

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಸಂಧ್ಯಾ ನಾಯ್ಕ ಅಘನಾಶಿನಿ
ಸಂಧ್ಯಾ ನಾಯ್ಕ ಅಘನಾಶಿನಿ
ಜೀವನದಿ ಅಘನಾಶಿನಿಯ ತಟದವರು. ಅದೇ ನದಿಯ ಹೆಸರಿನ ಊರಿನವರು ಕೂಡ. ಚಿಕ್ಕ ಮಕ್ಕಳಿಗೆ ಪಾಠ ಹೇಳುವ ಮೇಷ್ಟ್ರು. ಹೊಳೆ, ಮೀನು, ನದಿ, ಶಾಲೆ ಜೊತೆಗೇ ತಮ್ಮ ಪರಿಸರದ ಜನಜೀವನದ ಬಗ್ಗೆಯೂ ವಿಪರೀತ ಅಕ್ಕರೆ.

31 COMMENTS

  1. ಮನೆ ಮಾತು ಬಳಸಿ ಹೆಣದ ನೈಜ ಕಥಾ ಹಂದರ ತುಂಬಾ ಚೆನ್ನಾಗಿದೆ.ಕುಶಿ💐💐🎉

  2. ಭಾಷೆ ಅಂದರೆ ಇಬ್ಬರ ನಡುವೆ ಸಂಭಾಷಣೆ ತುಂಬಾ ಸರಳವಾಗಿ ವೇಗವಾಗಿ ಅರ್ಥವಾಗು ಮಾದ್ಯಮ ಅದು ನಮ್ಮ ಕುಮುಟಾ ಕನ್ನಡದಷ್ಟು ವೇಗವಾಗಿ ಮಾತುಡುವಷ್ಟು ಇ ಪ್ರಪಂಚದಲ್ಲಿ ಯಾವ ಭಾಷೆನು ಇಲ್ಲ

    • ನಿಜ. ಮಾತನಾಡುವ ವೇಗದಿಂದ ಅರ್ಥ ಮಾಡಿಕೊಳ್ಳಲು ತ್ರಾಸಾಗದೆ ಇರೋದು ಕುಮಟಾ ಸೀಮೆಯ ಕನ್ನಡದ ವಿಶೇಷ. ‘ಈದಿನ.ಕಾಮ್’ಗೆ ಭೇಟಿ ನೀಡಿದ್ದಕ್ಕಾಗಿ ನನ್ನಿ.

  3. ಅಜ್ಜಿ ಮನಿ ಗೇರಸಪ್ಪ ಹೊಳಿ ಆಚಿಗೆ. ಬ್ಯಾಸ್ಗಿ ರಜಿ ಬಂದ್ರೆ ಸಾಕು ಓಡುದೇ ಆಗಿತ್ತು. ಎಂತಕೆ ಅಂದ್ರೆ ಗ್ಯಾರ್ಬಿಜಾ ಹೆಕ್ಕುಕೆ 😍😍.ರಜಿ ಮುಗ್ಸಿ ಪರತ್ ಬರ್ಬೇಕಾರೆ ಗ್ಯಾರ್ಬಿಜ ಮಾರಿ ದುಡ್ ತಕ ಬರುದು. ನಿಮ್ ಬರವಣಿಗೆ ನಂಗೆ ಒಂದ್ ಸಲ ನನ್ ಅಜ್ಜಿ ಮನಿಯ ಬಾಲ್ಯದ ದಿನಗಳು ಕಣ್ಮುಂದೆ ರಪಕ್ನೆ ಬಂದ್ ಹೋಯ್ತು. ಅದ್ಭುತವಾದ ಸಾಲುಗಳು. ಥ್ಯಾಂಕ್ ಯು

    • ಥ್ಯಾಂಕ್ಯೂ ಮೇಡಂ. ನಿಮ್ಮ ನೆನಪುಗಳು ಸದಾ ಹಸಿರಾಗಿರಲಿ. ಸಾಧ್ಯವಾದರೆ, ನಿಮ್ಮ ಬೇಸಿಗೆ ರಜೆಯ ಬಾಲ್ಯದ ಕತೆಯನ್ನು ಬರೆದು ಕಳಿಸಿ. ನಮ್ಮ ಇಮೇಲ್ ವಿಳಾಸ: features.eedina@gmail.com

    • ನಿಮ್ಮ ಭಾಷೆ ಬಳಕೆ ಚೆನ್ನಾಗಿದೆ ಮಮತಾ .. ಥ್ಯಾಂಕ್ಯೂ 🙏

  4. Nangantu nammane hale nenapaytu. Nammaneluva gerbizava nammajji, nammakkana sangada koyda nenapaytu. Bala khushi aaytu. Namma bhashi estu chenda ala. Akkore nimge nammane kadeyinda namaskar.

    • ಪ್ರತಿಕ್ರಿಯೆಗಾಗಿ ಧನ್ಯವಾದಗಳು ಸರ್. ‘ಈದಿನ.ಕಾಮ್’ಗೆ ಭೇಟಿ ನೀಡಿದ್ದಕ್ಕಾಗಿ ನನ್ನಿ. ಸಾಧ್ಯವಾದರೆ, ನಿಮ್ಮ ನೆನಪುಗಳನ್ನು ಬರೆದು ಕಳಿಸಿ, ಜೊತೆಗೆ ಆಡಿಯೊ ಕೂಡ ಇರಲಿ: ನಮ್ಮ ಇಮೇಲ್ ವಿಳಾಸ: features.eedina@gmail.com

  5. Nava ಸಣ್ಣ idhgalu ಒಲೆ ಮೇಲೇನೆ ಅಡುಗೆ madodhgaithu ಈಗಾ ಗ್ಯಾಸ್ ಮೇಲೆ ಅಡುಗೆ ಈಗಿನ ಮಕ್ಳಿಗೆ mbl ಇದ್ರೆ ಸಾಕು ಅದೇ ಪ್ರಪಂಚ ಆಗಿ ಹೋಗಿದೆ. ನಾವು ಮಳೆಗಾಲ ಆದ್ರೆ ಸಾಕು ಗೋಟಿ ಆಡೋದು ಮೂರ್ಗೊಳಿ ಅದೊಡೆಲ್ ಇತು ಇವಗ yvdhu eaill ಅಕ್ಕ.

  6. ಎಷ್ಟು ಚೋಲೋ ನಮ್ಮ ಊರಿನ ಭಾಷೆಯಲ್ಲಿ ಬರದೀರಿ ಅಂದರೆ ಸೂಪರ್ ಹಂ…ನಿಜವಾಗಿಯೂ ನಿಮ್ಮ ಬರವಣಿಗೆ ತುಂಬಾ ಇಷ್ಟ ಆಯ್ತು. ಇದು ವರೆಗೂ ನಮ್ಮ ಕುಮಟಾ ಭಾಷೆಯನ್ನು ಇಷ್ಟು ಸರಿಯಾಗಿ ಬರವಣಿಗೆಯಲ್ಲಿ ಬರೆದಿದ್ದನ್ನು ನಾನು ಓದಿರಲಿಲ್ಲ.
    ಬರವಣಿಗೆ ಮುಂದುವರೆಸಿ ಒಳ್ಳೆಯದಾಗಲಿ..

    • ನಿಮ್ಮ ಅಭಿಮಾನಕ್ಕೆ ಶರಣು. ಪ್ರತಿಕ್ರಿಯೆಯನ್ನು ಲೇಖಕರಿಗೆ ತಲುಪಿಸಲಾಗಿದೆ. ಈದಿನ.ಕಾಮ್ ಜಾಲತಾಣಕ್ಕೆ ಭೇಟಿ ಕೊಟ್ಟಿದ್ದಕ್ಕೆ ನನ್ನಿ.

    • ಥ್ಯಾಂಕ್ಯೂ. ಈದಿನ.ಕಾಮ್ ಜಾಲತಾಣಕ್ಕೆ ಭೇಟಿ ಕೊಟ್ಟಿದ್ದಕ್ಕೆ ಧನ್ಯವಾದಗಳು.

    • ಆಹಾ… ಥ್ಯಾಂಕ್ಯೂ. ನಿಮ್ಮ ಪ್ರತಿಕ್ರಿಯೆಯನ್ನು ಲೇಖಕರಿಗೆ ತಲುಪಿಸಲಾಗಿದೆ. ಈದಿನ.ಕಾಮ್ ಜಾಲತಾಣಕ್ಕೆ ಭೇಟಿ ಕೊಡ್ತಾ ಇರಿ, ಸಾಧ್ಯವಾದರೆ ಇನ್ನಷ್ಟು ಭಾಷಾ ವೈವಿಧ್ಯದ ಲೇಖನಗಳನ್ನು ಓದಿ ನಿಮ್ಮ ಅಭಿಪ್ರಾಯ ತಿಳಿಸಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊನ್ನಾಳಿ ಸೀಮೆಯ ಕನ್ನಡ | ನಮ್ಮೂರಾಗ ಎಲ್ಲಾ ಜಾತೇರು ಸೇರ್ಕೆಂದ್ ಮಾಡಾ ಮಯೇಶುರಿ ಹಬ್ಬ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮಾಲೂರು ಸೀಮೆಯ ಕನ್ನಡ | ಪ್ರೊಫೆಸರ್ ಮೈಲಾರಪ್ಪನ ಅಗ್ರ ಪೂಜಾ ಅಭಿಲಾಷೆ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಔರಾದ್ ಸೀಮೆಯ ಕನ್ನಡ | ಈವೊರ್ಷ್ ಯಳಮಾಸಿ ಭಜ್ಜಿ ಉಳ್ಳಾಕ್ ನಮ್ ಹೊಲ್ಕಡಿನೇ ಬರೀ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ದಾವಣಗೆರೆ ಸೀಮೆಯ ಕನ್ನಡ | ‘ಅವ್ರ್ ಕೊಡುಕ್ಕೆ ನಮ್ ಕೊಡಾನ ಯಾಕ್ ಮುಟ್ಟಿಸ್ಕ್ಯಬಾರ್ದು?’

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ಸ್ ಅಥವಾ ಸ್ಪಾಟಿಫೈ...

Download Eedina App Android / iOS

X