ಕುಡಿಯುವ ನೀರಿನ ಸಮಸ್ಯೆಯಾದರೆ ಅಧಿಕಾರಿಗಳ ವಿರುದ್ಧ ಕ್ರಮ : ಸಚಿವ ಚಲುವರಾಯಸ್ವಾಮಿ ಎಚ್ಚರಿಕೆ

Date:

ಯಾವುದೇ ಗ್ರಾಮದಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾದರೆ ಸಂಬಂಧಪಟ್ಟ ತಹಸೀಲ್ದಾರ್ ಮತ್ತು ಎಸಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅವರು ಎಚ್ಚರಿಕೆ ನೀಡಿದರು.

- Advertisement -

ನಗರದ ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ಇಂದು ನಡೆದ ಅಭಿವೃದ್ಧಿ ಕಾರ್ಯಕ್ರಮಗಳ ದ್ವಿತೀಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ (ಕೆಡಿಪಿ) ವಿವಿಧ ಇಲಾಖೆಗಳ ಕಾರ್ಯವೈಖರಿ ಬಗ್ಗೆ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಸವಣ್ಣನವರಿಂದ ಗಾಂಧಿಯವರೆಗೆ: ಆಯ್ದ ಕಥನಗಳ ಮೂಲಕ ಇತಿಹಾಸವನ್ನು ತಿರುಚುವ...

ಇತಿಹಾಸವನ್ನು ವಿಮರ್ಶಿಸುವ ಹಕ್ಕು ಎಲ್ಲರಿಗೂ ಇದೆ; ಆದರೆ ಇತಿಹಾಸವನ್ನು ತಿರುಚುವ ಹಕ್ಕು ಯಾರಿಗೂ ಇಲ್ಲ. ಬಸವಣ್ಣನವರನ್ನು ವೈದಿಕ ಚೌಕಟ್ಟಿಗೆ ಸೀಮಿತಗೊಳಿಸುವುದಾಗಲಿ, ಗಾಂಧಿಯವರ ಹತ್ಯೆಯನ್ನು ಗೋಡ್ಸೆಯ ಸಮರ್ಥನೆಯ ಮೂಲಕ ನ್ಯಾಯೀಕರಿಸುವುದಾಗಲಿ ಇತಿಹಾಸದ ಸಮಗ್ರ ಅಧ್ಯಯನಕ್ಕೆ...

ಕೋಲಾರ ಕ್ಲಾಕ್ ಟವರ್ ವಿವಾದ: ಜಿಲ್ಲಾಡಳಿತದ ನಿರ್ಧಾರದತ್ತ ಜನರ...

ಕೋಲಾರ ನಗರದ ಇತಿಹಾಸ ಪ್ರಸಿದ್ಧ ಕ್ಲಾಕ್‌ ಟವರ್‌ನಲ್ಲಿ ಸಂಸದರ ಅನುದಾನದಲ್ಲಿ ಅಳವಡಿಸಲಾಗುತ್ತಿರುವ ಎಚ್‌ಎಂಟಿ ಗಡಿಯಾರದಲ್ಲಿ ಸಂಸದ ಮಲ್ಲೇಶ್‌ ಬಾಬು ಹೆಸರಿರಬೇಕೋ, ಬೇಡವೋ ಎಂದು ಕಳೆದ ಮೂರ್ನಾಲ್ಕು ದಿನಗಳಿಂದ ನಡೆಯುತ್ತಿರುವ ಚರ್ಚೆ ಈಗ ವಿವಾದದ...

ಅಧಿಕೃತ ಕೆಲಸಕ್ಕೆ WHATSAPP ವೆಬ್ ಅಪಾಯಕಾರಿ ಏಕೆ? ಗೃಹ...

ಕಚೇರಿ, ಸಾರ್ವಜನಿಕ ಅಥವಾ ಹಲವರು ಹಂಚಿಕೊಂಡು ಬಳಸುವ ಕಂಪ್ಯೂಟರ್‌ಗಳಲ್ಲಿ WHATSAPP ವೆಬ್ ಬಳಸುವವರಿಗೆ ಕೇಂದ್ರ ಗೃಹ ಸಚಿವಾಲಯ ಮಹತ್ವದ ಭದ್ರತಾ ಎಚ್ಚರಿಕೆ ನೀಡಿದೆ. ಸಚಿವಾಲಯದ ಅಧೀನದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ...

ಶೇ. 25ರಷ್ಟು ನೀರಿಲ್ಲದ ಹಾಗೂ ಬರ ಆವರಿಸಿರುವ ಕೆರೆಗಳ ಮಾಹಿತಿ ಸಿದ್ಧಪಡಿಸಿ, ದಿನದ 24 ಗಂಟೆಯೂ ಸ್ಥಳೀಯ ಶಾಸಕರೊಂದಿಗೆ ಸಂಪರ್ಕದಲ್ಲಿದ್ದು ಅಲರ್ಟ್ ಆಗಿರಬೇಕು. ಯಾವುದೇ ಗ್ರಾಮದಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾದರೆ ಸಂಬಂಧಪಟ್ಟ ತಹಸೀಲ್ದಾರ್ ಮತ್ತು ಎಸಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಎಇಇ ಸೇರಿದಂತೆ ಎಂಜಿನಿಯರ್‌ಗಳು ಸಂಪರ್ಕಕ್ಕೆ ಸಿಗದಿದ್ದರೆ ಕೆಲಸ ಕಳೆದುಕೊಂಡು ಮನೆ ಸೇರಬೇಕಾಗುತ್ತದೆ ಎಂದು ಎಚ್ಚರಿಸಿದ ಸಚಿವರು, ನಿತ್ಯ ಎರಡು ಬಾರಿ ಡಿಸಿ ಹಾಗೂ ಸಿಇಒ ಈ ಬಗ್ಗೆ ನಿಗಾ ವಹಿಸಲಿದ್ದಾರೆ ಎಂದರು.

ಮದ್ದೂರು ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸೂಚನೆ

ಮದ್ದೂರು ಪಟ್ಟಣಕ್ಕೆ ನೀರು ಹರಿಸುವ ಮಾರ್ಗಮಧ್ಯೆ ಗ್ರಾಮೀಣ ಭಾಗಕ್ಕೂ ನೀರು ಪೂರೈಸುತ್ತಿರುವುದರಿಂದ ಪಟ್ಟಣಕ್ಕೆ ನೀರಿನ ರಭಸ ಕಡಿಮೆಯಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಜಲಧಾರೆ ಯೋಜನೆಯಡಿ ಗ್ರಾಮಗಳಿಗೆ ನೀರು ಪೂರೈಸಿ, ಕಾವೇರಿ ನೀರನ್ನು ನೇರವಾಗಿ ಮದ್ದೂರು ಪಟ್ಟಣಕ್ಕೆ ನೀಡುವಂತೆ ಸೂಚಿಸಿದರು. ನೀರಿನ ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ನೀಡಬೇಕು ಹಾಗೂ ಸೋರಿಕೆಯಾಗುತ್ತಿರುವ ನೀರಿನ ಬಳಕೆಗೆ ಕ್ರಿಯಾಯೋಜನೆ ಸಿದ್ಧಪಡಿಸಬೇಕು. ಆರ್ಥಿಕ ಸಮಸ್ಯೆ ಇದ್ದರೆ ಆರ್ಥಿಕ ಇಲಾಖೆಗೆ ಪತ್ರ ಬರೆಯುವಂತೆ ನಿರ್ದೇಶನ ನೀಡಿದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಬಾಗಳ ಕದನ | ರಾಮ್‌ದೇವ್ vs ಬಾಗೇಶ್ವರ ಸಂಘರ್ಷವೇನು?

ಉತ್ತರ ಪ್ರದೇಶದ ಕುಂದಾದಲ್ಲಿ ನಡೆದ ರಾಮಕಥಾ ಕಾರ್ಯಕ್ರಮದಲ್ಲಿ ಒಂದೇ ವೇದಿಕೆ ಹಂಚಿಕೊಂಡು...

ಇರಾನ್ ಯುದ್ಧದ ಬಿಸಿ: 2030ರ ವೇಳೆಗೆ ಗಲ್ಫ್ ರಾಷ್ಟ್ರಗಳಿಗೆ 475 ಬಿಲಿಯನ್ ಡಾಲರ್ ಬಜೆಟ್ ಕೊರತೆ ಭೀತಿ

ಪಶ್ಚಿಮ ಏಷ್ಯಾದಲ್ಲಿ ಮುಂದುವರಿದಿರುವ ಇರಾನ್-ಅಮೆರಿಕ ಸಂಘರ್ಷವು ಗಲ್ಫ್ ಸಹಕಾರ ಮಂಡಳಿಯ (GCC)...

ಶಿವಮೊಗ್ಗ | ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಿ : ರಾಜ್ಯ ಅಸಂಘಟಿತ ಕಾರ್ಮಿಕರ ಸಂಘ ಒತ್ತಾಯ

ರಾಜ್ಯದಲ್ಲಿ ಆರೋಗ್ಯ ಸೇವೆಗಳ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ₹15,000...

ಶಿವಮೊಗ್ಗ | ಪರಿಷ್ಕೃತ ವೇತನ ಜಾರಿಗೆ ಆಗ್ರಹ : ಮೆಗ್ಗಾನ್ ಆಸ್ಪತ್ರೆ ಸಫಾಯಿ ಕರ್ಮಚಾರಿಗಳಿಂದ ಪ್ರತಿಭಟನೆ

ರಾಜ್ಯ ಸರ್ಕಾರದ ಪರಿಷ್ಕೃತ ವೇತನ ಸುತ್ತೋಲೆಯನ್ನು ತಕ್ಷಣ ಜಾರಿಗೊಳಿಸಿ, ಸರ್ಕಾರಿ...