ಬಾಗಲಕೋಟೆ | ನವೆಂಬರ್ 20, 21ರಂದು ಜೈವಿಕ ತಂತ್ರಜ್ಞಾನ ಕುರಿತು ರಾಷ್ಟ್ರೀಯ ಕಾರ್ಯಾಗಾರ

Date:

ಬಿವಿವಿಎಸ್ ರಿಸರ್ಚ್ ಸೆಂಟರ್ ಫಾರ್ ಎಕ್ಸಲೆನ್ಸ್ ವತಿಯಿಂದ ನವೆಂಬರ್ 20 ಮತ್ತು 21ರಂದು ಈ ಕಾರ್ಯಾಗಾರ ನಡೆಯಲಿದ್ದು, ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಾಯೋಜಕತ್ವ ಇರಲಿದೆ ಎಂದು ಸಂಘದ ಕಾರ್ಯಾಧ್ಯಕ್ಷ ಡಾ. ವೀರಣ್ಣ ಚರಂತಿಮಠ ತಿಳಿಸಿದ್ದಾರೆ.

- Advertisement -

ಬಾಗಲಕೋಟೆ ನಗರದ ಎಚ್‌ಎಸ್‌ಕೆ ಕಾಲೇಜ್ ಆಫ್ ಫಾರ್ಮಸಿಯಲ್ಲಿ ಶನಿವಾರ ಕಾರ್ಯಾಗಾರದ ಪ್ರಚಾರ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಇಂದಿನ ವೈಜ್ಞಾನಿಕ ಸಂಶೋಧನೆಯಲ್ಲಿ ಸುಧಾರಿತ ಜೈವಿಕ ತಂತ್ರಜ್ಞಾನಗಳು ಮಹತ್ವದ ಪಾತ್ರ ವಹಿಸುತ್ತಿವೆ. ಇಂತಹ ತಂತ್ರಜ್ಞಾನಗಳ ಕುರಿತು ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ನೇರ ಅನುಭವದೊಂದಿಗೆ ಅರಿವು ಮೂಡಿಸುವುದು ಕಾರ್ಯಾಗಾರದ ಆಶಯವಾಗಿದೆ ಎಂದು ವಿವರಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಾವೇರಿ | ಡಿಜಿಟಲ್ ಜನನ ಪ್ರಮಾಣ ಪತ್ರ ಗೊಂದಲ:...

ಹಳೆ ಮಾದರಿಯ ಕೈಬರಹ ಜನನ ಪ್ರಮಾನ ಪತ್ರದ ವಿಧಾನವನ್ನು ಬಿಟ್ಟು, ಡಿಜಿಟಲ್ ಜನನ ಪ್ರಮಾಣ ಪತ್ರ ನಿಯಮ ಜಾರಿಗೊಳಿಸಿದ್ದರಿಂದ ಹಲವು ಸಮಸ್ಯೆಗಳು ಎದುರಾಗಿದ್ದು, ಹದಿನಾರು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ತಿದ್ದುಪಡಿ...

ವಲಸೆ ಹಳ್ಳಿಗರಿಗೆ ಮಾತ್ರವೇ? ಉದ್ಯೋಗಕ್ಕಾಗಿ ನಗರ ಸೇರುವ ಯುವಜನರೂ...

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ. ಹೆಚ್ಚುತ್ತಿರುವ ಜನಸಂಖ್ಯೆಯೊಂದಿಗೆ ಆಹಾರ, ಶಿಕ್ಷಣ, ಆರೋಗ್ಯ, ವಸತಿ ಮತ್ತು ಉದ್ಯೋಗದ ಬೇಡಿಕೆಯೂ ಹೆಚ್ಚುತ್ತಿದೆ. ದೇಶದ ಅಭಿವೃದ್ಧಿಗೆ ಮಾನವ ಸಂಪನ್ಮೂಲವೇ ದೊಡ್ಡ ಶಕ್ತಿಯಾಗಿದ್ದರೂ, ಆ...

ತಿಪಟೂರು | ಕೊಬ್ಬರಿ ವ್ಯಾಪಾರದಲ್ಲಿ ಅಂಡರ್ ಬಿಲ್ಲಿಂಗ್ ಆಟ;...

ತಿಪಟೂರು ಕೊಬ್ಬರಿ ವ್ಯಾಪಾರದಲ್ಲಿ ಅಂಡರ್ ಬಿಲ್ಲಿಂಗ್ ಆಟ ಜೋರಿದೆ. ಟೆಂಡರ್ ದರ ಒಂದಾದರೆ, ಸುತ್ತಮುತ್ತಲಿನ ಮಾರುಕಟ್ಟೆಗಳಲ್ಲಿ ನೇರ ಖರೀದಿ (URD) ಮತ್ತು ರವಾನೆ ಕೊಬ್ಬರಿ ಖರೀದಿಗೆ ಮತ್ತೊಂದು ಬೆಲೆ ನಿಗದಿಯಾಗಿದೆ. ಅಂಡರ್ ಬಿಲ್ಲಿಂಗ್...

ಆಧುನಿಕ ಜೈವಿಕ ತಂತ್ರಜ್ಞಾನಗಳ ಅನಾವರಣಕ್ಕೆ ಬಾಗಲಕೋಟೆಯಲ್ಲಿ ರಾಷ್ಟ್ರೀಯ ಕಾರ್ಯಾಗಾರ
ನವಂಬರ್ 20, 21ರಂದು ತಜ್ಞರ ಮಾರ್ಗದರ್ಶನದಲ್ಲಿ ಪ್ರಾಯೋಗಿಕ ತರಬೇತಿ ರಾಷ್ಟೀಯ ಕಾರ್ಯಗಾರ.

ವೈದ್ಯಕೀಯ ಸಂಶೋಧನೆ, ಔಷಧ ಅಭಿವೃದ್ಧಿ ಹಾಗೂ ಜೀವ ವಿಜ್ಞಾನ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿರುವ ಆಧುನಿಕ ತಂತ್ರಜ್ಞಾನಗಳ ಪರಿಚಯದೊಂದಿಗೆ ಪ್ರಾಯೋಗಿಕ ಜ್ಞಾನವನ್ನು ವಿಸ್ತರಿಸುವ ಉದ್ದೇಶದಿಂದ ಬಾಗಲಕೋಟೆಯಲ್ಲಿ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರ ಆಯೋಜಿಸಲಾಗಿದೆ.

ಕೋಶ ಸಂಸ್ಕೃತಿಯ ಸುಧಾರಿತ ವಿಧಾನಗಳು, ಮೂರು ಆಯಾಮದ (3ಡಿ) ಬಯೋಪ್ರಿಂಟಿಂಗ್, ವಿವಿಧ ಬಗೆಯ ಕೋಶಗಳನ್ನು ವಿಶ್ಲೇಷಿಸಲು ನೆರವಾಗುವ ಫ್ಲೋ ಸೈಟೋಮೆಟ್ರಿ ಹಾಗೂ ಔಷಧ ಸಂಶೋಧನೆಯಲ್ಲಿ ಉಪಯೋಗಿಸುವ ಕ್ಯೂಪಿಸಿಆರ್ ತಂತ್ರಜ್ಞಾನಗಳ ಕುರಿತು ಕಾರ್ಯಾಗಾರದಲ್ಲಿ ಗಮನ ಹರಿಸಲಾಗುತ್ತದೆ.

ಪ್ರಯೋಗಾಲಯಗಳಲ್ಲಿ ಬಳಕೆಯಾಗುವ ಆಧುನಿಕ ತಂತ್ರಜ್ಞಾನಗಳ ಕಾರ್ಯವಿಧಾನ, ಅವುಗಳ ಸಂಶೋಧನಾ ಉಪಯೋಗ ಹಾಗೂ ಪ್ರಾಯೋಗಿಕ ಅನ್ವಯಗಳ ಬಗ್ಗೆ ತಿಳಿದುಕೊಳ್ಳಲು ಈ ಕಾರ್ಯಾಗಾರ ನೆರವಾಗಲಿದೆ. ಜೀವ ವಿಜ್ಞಾನ ಮತ್ತು ಔಷಧ ಸಂಶೋಧನಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ವಿಜ್ಞಾನಾಸಕ್ತರಿಗೆ ಇದು ಉಪಯುಕ್ತ ವೇದಿಕೆಯಾಗಲಿದೆ.

ಬಾಗಲಕೋಟೆಯ ಬಿವಿವಿಎಸ್ ಹಳೆಯ ಕ್ಯಾಂಪಸ್‌ನಲ್ಲಿರುವ ಎಚ್‌ಎಸ್‌ಕೆ ಕಾಲೇಜ್ ಆಫ್ ಫಾರ್ಮಸಿಯ ಮೊದಲ ಮಹಡಿಯಲ್ಲಿರುವ ಬಿವಿವಿಎಸ್ ರಿಸರ್ಚ್ ಸೆಂಟರ್ ಫಾರ್ ಎಕ್ಸಲೆನ್ಸ್‌ನಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ತಿಳಿಸಿದರು. ಈ ವೇಳೆ ಬಿವಿವಿ ಸಂಸ್ಥೆಯ ಸಿಬ್ಬಂದಿಗಳು ಮತ್ತು ಇತರರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಉಗ್ರ ಕೃತ್ಯದ ಆರೋಪಿಗೆ ಇಷ್ಟೊಂದು ವಿನಾಯಿತಿ ಏಕೆ?’- ಅಮೆರಿಕ ಪ್ರಜೆ ವ್ಯಾನ್‌ಡೈಕ್ ಬಿಡುಗಡೆಗೆ ಕಾಂಗ್ರೆಸ್ ಕಿಡಿ

ಮ್ಯಾನ್ಮಾರ್‌ ಶಸ್ತ್ರಾಸ್ತ್ರ ತರಬೇತಿ ಪ್ರಕರಣದಲ್ಲಿ ಆರೋಪಿಯಾಗಿರುವ ಅಮೆರಿಕದ ಪ್ರಜೆ ಮ್ಯಾಥ್ಯೂ ವ್ಯಾನ್‌ಡೈಕ್...

‘ SIR’ ಫಾರಂ-7 ದುರ್ಬಳಕೆ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಿ: ಜಾಗೃತ ಕರ್ನಾಟಕ ಒತ್ತಾಯ

ಮೈಸೂರಿನ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಮತದಾರರ ಪಟ್ಟಿಯ ವಿಶೇಷ ಸಮಗ್ರ...

KPSC ಅಕ್ರಮ ಪ್ರಕರಣ; IAS ಅಧಿಕಾರಿ ಗಂಗ್ವಾರ್‌ ವಿರುದ್ಧ ಕಾನೂನು ಕ್ರಮಕ್ಕೆ ರಾಜ್ಯ ಸರ್ಕಾರ ಅನುಮತಿ

ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ...

30 ವರ್ಷಗಳ ಹಿಂದಿನ ಕುಂಬ್ಳೆ-ಶ್ರೀನಾಥ್ ಆಟ ನೆನಪಿಸಿದ ಹೈದರಾಬಾದ್ ಹುಡುಗರಾದ ತಿಲಕ್-ನಿತೀಶ್ ಗೆಲುವಿನಾಟ

ನ್ಯೂಜಿಲೆಂಡ್ ವಿರುದ್ಧದ ಕ್ರೈಸ್ಟ್‌ಚರ್ಚ್‌ ಟಿ20 ಪಂದ್ಯದಲ್ಲಿ ಭಾರತ ಭರ್ಜರಿ ಜಯ ಸಾಧಿಸಿದೆ....