ಬೇಲೂರು | ಮೋದಿ ಭಾಷಣ ಏನಿದ್ದರೂ ಕೇಂದ್ರಕ್ಕೆ ಸೀಮಿತ: ಶಾಸಕ ಲಿಂಗೇಶ್

Date:

ಮೋದಿ ಬಗ್ಗೆ ಎಲ್ಲರಿಗೂ ಅಭಿಮಾನವಿದೆ. ಆದರೆ, ಹಾಸನ ಜಿಲ್ಲೆಗೆ ಯಾರೇ ಬಂದು ಹೋದರು ನಮ್ಮ ಜೆಡಿಎಸ್ ಶಕ್ತಿ ಕುಗ್ಗಿಸಲು ಅಸಾಧ್ಯವೆಂದು ಶಾಸಕ ಕೆ.ಎಸ್ ಲಿಂಗೇಶ್ ಹೇಳಿದರು.

ವಿಧಾನಸಭಾ ಚುನಾವಣೆಯ ಹಿನ್ನೆಲೆ ಜೆಡಿಎಸ್ ವತಿಯಿಂದ ಬೇಲೂರು ಪುರಸಭೆ ವ್ಯಾಪ್ತಿಯಲ್ಲಿ ಪ್ರಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. “ಈ ದೇಶಕ್ಕೆ ಎಚ್.ಡಿ ದೇವೇಗೌಡರು ಪ್ರಧಾನಿಯಾಗಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಅಲ್ಪಾವಧಿಯಲ್ಲೇ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು, ಜಿಲ್ಲೆಗೆ ಅಲ್ಲದೆ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಅದರಂತೆ ಮೋದಿ ಬಗ್ಗೆ ಗೌರವವಿದೆ. ಜಿಲ್ಲೆಗೆ ಯಾರೇ ಬಂದು ಹೋಗಲಿ ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ ಅವರ ಶಕ್ತಿಯನ್ನು ಕುಗ್ಗಿಸಲು ಅಸಾಧ್ಯ” ಎಂದರು.

“ಮೋದಿ ಜಿಲ್ಲೆಗೆ ಬಂದಾಕ್ಷಣ ಬೇಲೂರು ಬಿಜೆಪಿ ಪಾಲಾಗುತ್ತದೆ ಎನ್ನುವುದು ಅವರ ಭ್ರಮೆ. ಮೋದಿ ಭಾಷಣ ಏನಿದ್ದರೂ ಕೇಂದ್ರಕ್ಕೆ ಸೀಮಿತ. ಇಲ್ಲಿ ಕುಮಾರಸ್ವಾಮಿ, ರೇವಣ್ಣ ಅವರೇ ನಾಯಕರು. ರಾಜ್ಯದಲ್ಲಿ ಈ ಬಾರಿ ಜೆಡಿಎಸ್ ಅಧಿಕಾರ ಹಿಡಿಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಪಂಚರತ್ನ ಯಾತ್ರೆಯಿಂದ ರಾಜ್ಯದ ಜನತೆಗೆ ಅನುಕೂಲವಾಗುತ್ತದೆ. ನೀರಾವರಿ, ಶಿಕ್ಷಣ, ಕೃಷಿ, ಆರೋಗ್ಯ ಸೇರಿದಂತೆ  ಜನಸಾಮಾನ್ಯರಿಗೆ ಅವಶ್ಯಕತೆ ಇರುವ ಹಲವಾರು ಯೋಜನೆಗಳನ್ನು ಕುಮಾರಣ್ಣ ಗಮನದಲ್ಲಿಟ್ಟುಕೊಂಡಿದ್ದಾರೆ. ಅವುಗಳನ್ನು ಜಾರಿಗೆ ತರಲು ಜೆಡಿಎಸ್ ಬೆಂಬಲಿಸಬೇಕು” ಎಂದು ಮನವಿ ಮಾಡಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಬೇಲೂರು ವಿಧಾನಸಭಾ ಕ್ಷೇತ್ರಕ್ಕೆ ನನ್ನನ್ನು ಮತ್ತೊಮ್ಮೆ ಶಾಸಕನಾಗಲು ನಿಮ್ಮ ಸಹಕಾರ, ಬೆಂಬಲ ಅಗತ್ಯ, ಬೇಲೂರು ತಾಲೂಕನ್ನು ಇನ್ನೂ ಅಭಿವೃದ್ಧಿಪಡಿಸಬೇಕಿದೆ. ಹಾಗಾಗಿ ಮತ್ತೊಮ್ಮೆ ಅವಕಾಶ ಕೋರುತ್ತಿದ್ದೇನೆ. ಅಲ್ಲದೆ ನಾನು ಸ್ಥಳೀಯ ಅಭ್ಯರ್ಥಿ, ಬೇಲೂರಿನವನು ನಿಮ್ಮ ಮನೆಮಗನಾದ ನನ್ನನ್ನು ಆಶೀರ್ವದಿಸಿ” ಎಂದು ಮನವಿ ಮಾಡಿದರು.

ಈ ಸುದ್ದಿ ಓದಿದ್ದೀರಾ? ಭಾಲ್ಕಿ ಕ್ಷೇತ್ರ | ‘ಕೈ’ ಭ್ರದಕೋಟೆಯಲ್ಲಿ ‘ಕಮಲ’ ಕಮಾಲ್; ದಾಯಾದಿಗಳ ಕಾಳಗ

“ಜೆಡಿಎಸ್ ಅಧಿಕಾರಕ್ಕೆ ಬಂದರೆ ಇಡೀ ಜಿಲ್ಲೆ ಅಲ್ಲದೆ ರಾಜ್ಯದ ಅಭಿವೃದ್ಧಿ ಸಾಧ್ಯ. ಕುಮಾರಸ್ವಾಮಿ ಅಲ್ಪ ಅವಧಿಯಲ್ಲಿ ಆಡಳಿತ ನಡೆಸಿದರೂ ರಾಜ್ಯದ ಜನತೆ ಮೆಚ್ಚುವ ಕೆಲಸ ಮಾಡಿದ್ದಾರೆ. ನೀವು ಕಾಂಗ್ರೆಸ್ಸಿಗೆ ವೋಟ್ ಹಾಕಿದರೆ ಬಿಜೆಪಿಗೆ ಹಾಕಿದಂತೆ ಇದನ್ನು ಯಾರು ಮರೆಯಬಾರದು” ಎಂದು  ಪುರಸಭೆ ಮಾಜಿ ಅಧ್ಯಕ್ಷ ತಜ್ಜಮುಲ್ಲಪಾರ ಹೇಳಿದರು.

ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಟಿ.ಎ. ಶ್ರೀನಿಧಿ, ಸದಸ್ಯ ಜಗದೀಶ್, ನಗರ ಪ್ರಧಾನ ಕಾರ್ಯದರ್ಶಿ ಖಾದರ್, ಸುರೇಶ್, ಮಂಜುನಾಥ್, ಅಸ್ಲಾಂಪಾಷ, ಆರೀಫ್, ನವೀದ್, ಜಮೀಲ್ ಇತರರು ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಡ್ಯ | ‘ಸೊಳ್ಳೆ ಉತ್ಪಾದನಾ ಕೇಂದ್ರ’ವಾದ ವೈದ್ಯಕೀಯ ಕಾಲೇಜು; ಕಣ್ಮುಚ್ಚಿ ಕುಳಿತ ಅಧಿಕಾರಿಗಳು!

ಇಡೀ ರಾಜ್ಯದಲ್ಲಿ ಡೆಂಘೀ ಜ್ವರ ಹರಡುತ್ತಾ ಇರುವಾಗ ನೈರ್ಮಲ್ಯ ಕಾಪಾಡಿ, ನೀರು...

ವಿಜಯಪುರ | ಎನ್‌ಎಸ್‌ಎಸ್ ಸ್ವಯಂ ಸೇವಕರಲ್ಲಿ ತಾಳ್ಮೆ, ಶಿಸ್ತಿನ ಜೊತೆಗೆ ಧೈರ್ಯ ತುಂಬುತ್ತದೆ: ಡಾ.ಪ್ರತಾಪ್ ಲಿಂಗಯ್ಯ

"ಎನ್‌ಎಸ್‌ಎಸ್ ಎಂಬುದು ಮನುಷ್ಯನಲ್ಲಿ ಸಹನೆ, ತಾಳ್ಮೆ ಹಾಗೂ ಶಿಸ್ತಿನ ಜೊತೆಗೆ ಧೈರ್ಯವನ್ನು...

ವಿಜಯಪುರ | ನೂತನ ವಸತಿ ನಿಲಯ ಮಂಜೂರು ಮಾಡುವಂತೆ ದಲಿತ ವಿದ್ಯಾರ್ಥಿ ಪರಿಷತ್ ಆಗ್ರಹ

ವಿಜಯಪುರ ನಗರದಲ್ಲಿರುವ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದಲ್ಲಿ ಹಿಂದುಳಿದ ವರ್ಗಗಳ ಮತ್ತು...

ಚಿಕ್ಕಬಳ್ಳಾಪುರ | ಶಾಶ್ವತ ನೀರಾವರಿ ಯೋಜನೆಗಾಗಿ ಪ್ರಧಾನಿ ಭೇಟಿ : ಶಾಸಕ ಸಮೃದ್ಧಿ ಮಂಜುನಾಥ್‌ ವಾಗ್ದಾನ

"ಬರಪೀಡಿತ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ತರುವ ಕುರಿತು ಪ್ರಧಾನಿ ಮೋದಿ ಭೇಟಿಗೆ...