- ರೈತ ಭವನ ಕಟ್ಟಡ ನಿರ್ಮಾಣ ಮಾಡುವಂತೆ ಗ್ರಾಮಸ್ಥರ ಒತ್ತಾಯ
- ತಹಸೀಲ್ದಾರ ಮೂಲಕ ಜಿಲ್ಲಾಧಿಕರಿಗಳಿಗೆ ಮನವಿ
ಭಾಲ್ಕಿ ತಾಲೂಕಿನ ಹುಣಜಿ(ಕೆ) ಗ್ರಾಮದಲ್ಲಿ ಸೂಕ್ತ ಸರಕಾರಿ ಜಮೀನು ಗುರುತಿಸಿ ರೈತ ಭವನ ಕಟ್ಟಡ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಗ್ರಾಮದ ಮುಖಂಡ ಹುಲೇಪ್ಪ ಮಾನಕಾರ್ ನೇತೃತ್ವದಲ್ಲಿ ತಹಸೀಲ್ದಾರಗೆ ಮನವಿ ಸಲ್ಲಿಸಿದ್ದರು.
ಈ ಕುರಿತು ಪಟ್ಟಣದ ತಹಸೀಲ್ ಕಚೇರಿಯಲ್ಲಿ ಪ್ರಮುಖರು ತಹಸೀಲ್ದಾರ್ ಮೂಲಕ ಜಿಲ್ಲಾಧಿಕರಿಗಳಿಗೆ ಮನವಿ ಸಲ್ಲಿಸಿದ ಗ್ರಾಮಸ್ಥರು, “ಗ್ರಾಮದ ಕೆರೆ ಪ್ರದೇಶದಲ್ಲಿ ಅನಧಿಕೃತವಾಗಿ ನಿರ್ಮಾಣವಾಗುತ್ತಿದ್ದ ರೈತ ಭವನ ಕಟ್ಟಡ ತಡೆ ಹಿಡಿದಿರುವುದನ್ನು ಸ್ವಾಗತಿಸುತ್ತೇವೆ. ಗ್ರಾಮದ ನಾಲ್ಕೈದು ಕಡೆಗಳಲ್ಲಿ ಸರಕಾರಿ ಜಮೀನು ಲಭ್ಯವಿದ್ದು, ಸೂಕ್ತ ಸ್ಥಳವಕಾಶ ಗುರುತಿಸಿ ರೈತ ಸಂಪರ್ಕ ಕೇಂದ್ರ ಭವನ ಕಟ್ಟಡ ನಿರ್ಮಿಸಬೇಕು” ಎಂದು ಗ್ರಾಮದ ಪ್ರಮುಖರು ಒತ್ತಾಯಿಸಿದ್ದಾರೆ.
“ಗ್ರಾಮದ ಸರಕಾರಿ ನೀರಾವರಿ ಇಲಾಖೆ, ಸರಕಾರಿ ಗೈರಾಣು, ಕಾರಂಜಾ ಜಲಾಶಯ ವಿಭಾಗ ಸೇರಿ ವಿವಿಧ 5-6 ಎಕರೆ ಸರಕಾರಿ ಜಮೀನು ಇದ್ದು, ಜಿಲ್ಲಾಡಳಿತ ಖುದ್ದಾಗಿ ಪರಿಶೀಲಿಸಿ ಸೂಕ್ತ ಸ್ಥಳವಕಾಶ ಗುರುತಿಸಿ ರೈತ ಭವನ ಕಟ್ಟಡ ನಿರ್ಮಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು” ಎಂದು ಒತ್ತಾಯಿಸಿದ್ದರು.
ಈ ಸಂದರ್ಭದಲ್ಲಿ ಪ್ರಮುಖರಾದ ಹುಲೇಪ್ಪ ಮಾನಕಾರ್, ಜಗನ್ನಾಥ ಸಿರಂಜೆ, ಮಾಣಿಕರಾವ ಪಾಟೀಲ್, ಗುರುನಾಥ ಗೌಡಪ್ಪನೋರ್, ಜಗನ್ನಾಥ ಬಗಚೇಡಿ ಸೇರಿದಂತೆ ಮುಂತಾದವರು ಇದ್ದರು.