ಐಡಿಬಿಐ ಬ್ಯಾಂಕ್ ಮಾರಾಟಕ್ಕೆ ಕೇಂದ್ರ ಸಂಪುಟ ಅಸ್ತು: ₹52,878 ಕೋಟಿಗೆ ಫೇರ್‌ಫ್ಯಾಕ್ಸ್ ತೆಕ್ಕೆಗೆ

Date:

ಐಡಿಬಿಐ (IDBI) ಬ್ಯಾಂಕ್‌ನ ‘ಕಾರ್ಯತಂತ್ರದ ಪುನರ್‌ರಚನೆ’ಗೆ (Strategic Restructuring) ಕೇಂದ್ರ ಸಚಿವ ಸಂಪುಟವು ಬುಧವಾರ (ಅಕ್ಟೋಬರ್ 14, 2026) ಅನುಮೋದನೆ ನೀಡಿದೆ. ಇದರೊಂದಿಗೆ ಫೇರ್‌ಫ್ಯಾಕ್ಸ್ (Fairfax) ಸಂಸ್ಥೆಯು ₹52,878 ಕೋಟಿ ಮೊತ್ತಕ್ಕೆ ಐಡಿಬಿಐ ಬ್ಯಾಂಕ್‌ನ ಪಾಲನ್ನು ಖರೀದಿಸಲಿದೆ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ. ಈ ಮಾರಾಟ ಪ್ರಕ್ರಿಯೆಯ ಬಳಿಕ ಬ್ಯಾಂಕ್‌ನಲ್ಲಿ ಕೇಂದ್ರ ಸರ್ಕಾರದ ಪಾಲು ಶೇ 15ಕ್ಕೆ ಮತ್ತು ಭಾರತೀಯ ಜೀವ ವಿಮಾ ನಿಗಮದ (LIC) ಪಾಲು ಶೇ 19ಕ್ಕೆ ಇಳಿಕೆಯಾಗಲಿದೆ.

- Advertisement -

​ಸರ್ಕಾರವು ತನ್ನ ಪ್ರಕಟಣೆಯಲ್ಲಿ ಈ ಒಪ್ಪಂದವನ್ನು ‘ಕಾರ್ಯತಂತ್ರದ ಬಂಡವಾಳ ಹಿಂತೆಗೆತ’ ಎನ್ನುವ ಬದಲು ‘ಕಾರ್ಯತಂತ್ರದ ಪುನರ್‌ರಚನೆ’ ಎಂದು ಕರೆದಿದೆ. ಅಲ್ಲದೆ, ಇದು ಭಾರತದ ಇತಿಹಾಸದಲ್ಲೇ ಆರ್ಥಿಕ ವಲಯದಲ್ಲಿ ನಡೆಯುತ್ತಿರುವ ಅತಿದೊಡ್ಡ ವಿದೇಶಿ ನೇರ ಹೂಡಿಕೆ (FDI) ಆಗಿದೆ ಎಂದು ತಿಳಿಸಿದೆ. ಪ್ರಸ್ತುತ ಐಡಿಬಿಐ ಬ್ಯಾಂಕ್‌ನಲ್ಲಿ ಕೇಂದ್ರ ಸರ್ಕಾರವು ಶೇ 45.5ರಷ್ಟು ಹಾಗೂ ಎಲ್‌ಐಸಿಯು ಶೇ 49.2ರಷ್ಟು ಪಾಲನ್ನು ಹೊಂದಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಾಗಲಕೋಟೆ | ನಿಲ್ದಾಣಗಳಿದ್ದರೂ ರಸ್ತೆಯಲ್ಲೇ ಬಸ್‌ ನಿಲುಗಡೆ; ಟ್ರಾಫಿಕ್...

ಬಾಗಲಕೋಟೆ ನಗರದಲ್ಲಿ ಸುಗಮ ಸಂಚಾರಕ್ಕಾಗಿ ಬಸ್‌ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಪ್ರಯಾಣಿಕರು ಬಿಸಿಲು, ಮಳೆಯಿಂದ ರಕ್ಷಣೆ ಪಡೆಯಲು ಆಸನ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಬಸ್‌ಗಳು ನಿಲುಗಡೆಗೊಳ್ಳಲು ಪ್ರತ್ಯೇಕ ಜಾಗವನ್ನೂ ಗುರುತಿಸಲಾಗಿದೆ. ಆದರೆ, ಬಸ್‌ಗಳು ಮಾತ್ರ ನಿಲ್ದಾಣಕ್ಕೆ...

ಪೊಲೀಸರು ಇಷ್ಟೊಂದು ಭೀಕರ ಮತ್ತು ಕ್ರೂರವಾಗಿ ವರ್ತಿಸುವುದೇಕೆ?

ಸ್ವತಂತ್ರ ದೇಶದಲ್ಲಿ ತಮ್ಮ ಹಕ್ಕುಗಳಿಗಾಗಿ, ಪ್ರಜಾಪ್ರಭುತ್ವದ ರಕ್ಷಣೆಗಾಗಿ ಶಾಂತಿಯುತವಾಗಿ ಬೀದಿಗಿಳಿದ ಯುವಕ-ಯುವತಿಯರು, ವಿದ್ಯಾರ್ಥಿಗಳು ಹಾಗೂ ವೃತ್ತಿಪರ ಪತ್ರಕರ್ತರ ಮೇಲೆ ಪೊಲೀಸರು ಕನಿಕರವಿಲ್ಲದೆ ಮೃಗಗಳಂತೆ ಎರಗಿಬೀಳುತ್ತಿದ್ದಾರೆ. ಎಸ್‌ಐಆರ್‌ ವಿರುದ್ಧದ ಹೋರಾಟದಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು...

ರ‍್ಯಾಂಕ್ ಸಾಮರ್ಥ್ಯದ ಮಾನದಂಡವಲ್ಲ: ಮಕ್ಕಳ ವಿಕಾಸಕ್ಕೆ ಒತ್ತಡ ರಹಿತ...

ಶಿಕ್ಷಣವೆಂದರೆ ಕೇವಲ ಅಂಕ ಗಳಿಸುವುದು, ರ‍್ಯಾಂಕ್ ಪಡೆಯುವುದು ಅಥವಾ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸುವುದಷ್ಟೇ ಅಲ್ಲ. ಶಿಕ್ಷಣದ ನಿಜವಾದ ಉದ್ದೇಶ ಮಗುವಿನ ಜ್ಞಾನ, ಚಿಂತನಾ ಶಕ್ತಿ, ಸೃಜನಶೀಲತೆ, ಆತ್ಮವಿಶ್ವಾಸ, ಸಾಮಾಜಿಕ ಪ್ರಜ್ಞೆ...

​ಹಲವು ವರ್ಷಗಳ ಕಾಲ ತೀವ್ರ ಆರ್ಥಿಕ ಸಂಕಷ್ಟ ಎದುರಿಸಿದ್ದ ಐಡಿಬಿಐ ಬ್ಯಾಂಕ್ ಅನ್ನು 2017ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ನ (RBI) ‘ಪ್ರಾಂಪ್ಟ್ ಕರೆಕ್ಟಿವ್ ಆಕ್ಷನ್’ (PCA – ತ್ವರಿತ ಸುಧಾರಣಾ ಕ್ರಮ) ಚೌಕಟ್ಟಿನಡಿ ತರಲಾಗಿತ್ತು. ಬಳಿಕ 2019ರ ಜನವರಿಯಲ್ಲಿ ಎಲ್‌ಐಸಿಯು ಬ್ಯಾಂಕ್‌ನಲ್ಲಿ ₹21,624 ಕೋಟಿ ಬಂಡವಾಳ ಹೂಡುವ ಮೂಲಕ ಪ್ರಮುಖ ಪಾಲುದಾರಿಕೆಯನ್ನು ತನ್ನದಾಗಿಸಿಕೊಂಡಿತ್ತು ಹಾಗೂ ಬದಲಿಗೆ ಆದ್ಯತೆಯ ಷೇರುಗಳನ್ನು ಪಡೆದುಕೊಂಡಿತ್ತು. ಇದರ ಪರಿಣಾಮವಾಗಿ ಬ್ಯಾಂಕ್‌ನಲ್ಲಿ ಸರ್ಕಾರದ ಪಾಲು ಶೇ 51ಕ್ಕಿಂತ ಕೆಳಗಿಳಿದಿತ್ತು. ಅಂದಿನಿಂದ ಆರ್‌ಬಿಐ ಇದನ್ನು ಖಾಸಗಿ ಬ್ಯಾಂಕ್ ಎಂದು ವರ್ಗೀಕರಿಸಿತ್ತು.

​”ಈ ಹಿನ್ನೆಲೆಯಲ್ಲಿ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು (CCEA) ಐಡಿಬಿಐ ಬ್ಯಾಂಕ್‌ನ ಕಾರ್ಯತಂತ್ರದ ಪುನರ್‌ರಚನೆಗೆ ಒಪ್ಪಿಗೆ ನೀಡಿದೆ. ಅದರಂತೆ ಬ್ಯಾಂಕ್‌ನ ಒಟ್ಟು ಶೇ 60.72ರಷ್ಟು ಈಕ್ವಿಟಿ ಪಾಲನ್ನು ಕಾರ್ಯತಂತ್ರದ ಖರೀದಿದಾರರಿಗೆ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಇದರಲ್ಲಿ ಭಾರತ ಸರ್ಕಾರದ ಶೇ 30.48ರಷ್ಟು ಮತ್ತು ಎಲ್‌ಐಸಿಯ ಶೇ 30.24ರಷ್ಟು ಪಾಲು ಸೇರಿದೆ. ಈ ಮಾರಾಟದ ನಂತರ ಬ್ಯಾಂಕ್‌ನಲ್ಲಿ ಸರ್ಕಾರದ ಬಳಿ ಶೇ 15ರಷ್ಟು ಮತ್ತು ಎಲ್‌ಐಸಿ ಬಳಿ ಶೇ 19ರಷ್ಟು ಪಾಲು ಮಾತ್ರ ಉಳಿಯಲಿದೆ” ಎಂದು ಸರ್ಕಾರ ತನ್ನ ಪ್ರಕಟಣೆಯಲ್ಲಿ ವಿವರಿಸಿದೆ. ಅಂತಿಮವಾಗಿ ಬಿಡ್ಡಿಂಗ್‌ಗೆ ಅರ್ಹತೆ ಪಡೆದಿದ್ದ ಎರಡು ಕಂಪನಿಗಳ ಪೈಕಿ, ಕೆನಡಾ ಮೂಲದ ‘ಫೇರ್‌ಫ್ಯಾಕ್ಸ್ ಫೈನಾನ್ಷಿಯಲ್ ಹೋಲ್ಡಿಂಗ್ಸ್’ ಪ್ರತಿ ಷೇರಿಗೆ ₹81ರಂತೆ ಬಿಡ್ ಸಲ್ಲಿಸುವ ಮೂಲಕ ಜಯಗಳಿಸಿದೆ.

​ಕೇಂದ್ರ ಹಣಕಾಸು ಸಚಿವಾಲಯದ ಮೂಲಗಳ ಪ್ರಕಾರ, ಈ ಪುನರ್‌ರಚನೆಯಿಂದ ಬ್ಯಾಂಕ್‌ನ ನಿಯಂತ್ರಣ ವ್ಯವಸ್ಥೆಯಲ್ಲಾಗಲಿ ಅಥವಾ ಗ್ರಾಹಕರಿಗೆ ನೀಡುವ ಸೇವೆಗಳಲ್ಲಾಗಲಿ ಯಾವುದೇ ಬದಲಾವಣೆ ಆಗುವುದಿಲ್ಲ. “ಆರ್‌ಬಿಐ ಎಂದಿನಂತೆ ಬ್ಯಾಂಕ್‌ನ ಸಂಪೂರ್ಣ ನಿಯಂತ್ರಣ ಮತ್ತು ಮೇಲ್ವಿಚಾರಣೆಯನ್ನು ಮುಂದುವರಿಸಲಿದೆ. ಈ ಪ್ರಕ್ರಿಯೆಯಿಂದ ಯಾವುದೇ ಠೇವಣಿದಾರರಿಗೆ ಅಥವಾ ಸಾಲಗಾರರಿಗೆ ತೊಂದರೆಯಾಗುವುದಿಲ್ಲ” ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

​”ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮದ (DICGC) ಅಡಿಯಲ್ಲಿ ಪ್ರತಿಯೊಬ್ಬ ಠೇವಣಿದಾರರ ₹5 ಲಕ್ಷದವರೆಗಿನ ಠೇವಣಿಗೆ ವಿಮಾ ಭದ್ರತೆ ಮುಂದುವರಿಯಲಿದೆ. ಅಲ್ಲದೆ, ಎಲ್ಲಾ ಖಾಸಗಿ ವಾಣಿಜ್ಯ ಬ್ಯಾಂಕ್‌ಗಳಿಗೆ ಅನ್ವಯವಾಗುವ ಶೇ 40ರಷ್ಟು ಆದ್ಯತಾ ವಲಯದ ಸಾಲ (Priority Sector Lending) ನೀಡುವ ಕಡ್ಡಾಯ ಗುರಿ ಇದಕ್ಕೂ ಅನ್ವಯಿಸುತ್ತದೆ” ಎಂದು ಅವರು ತಿಳಿಸಿದ್ದಾರೆ. ಜೊತೆಗೆ ಪ್ರಧಾನ ಮಂತ್ರಿ ಜನ್ ಧನ್ ಯೋಜನೆ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ ಹಾಗೂ ಅಟಲ್ ಪಿಂಚಣಿ ಯೋಜನೆಯಂತಹ (APY) ಆರ್ಥಿಕ ಒಳಗೊಳ್ಳುವಿಕೆ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳನ್ನು ಐಡಿಬಿಐ ಬ್ಯಾಂಕ್ ಎಂದಿನಂತೆ ಮುಂದುವರಿಸಲಿದೆ.

​ಐಡಿಬಿಐ ಖಾಸಗಿ ಬ್ಯಾಂಕ್ ಆಗಿ ಬದಲಾದ ನಂತರ ಅದರ ಆರ್ಥಿಕ ಸ್ಥಿತಿಯಲ್ಲಿ ಭಾರಿ ಚೇತರಿಕೆ ಕಂಡುಬಂದಿದೆ. ಬ್ಯಾಂಕ್‌ನ ಒಟ್ಟು ವಸೂಲಾಗದ ಸಾಲದ (Gross NPA) ಪ್ರಮಾಣವು 2018ರ ಸೆಪ್ಟೆಂಬರ್‌ನಲ್ಲಿದ್ದ ಶೇ 31.8ರಿಂದ 2026ರ ಮಾರ್ಚ್ ವೇಳೆಗೆ ಶೇ 2.3ಕ್ಕೆ ಇಳಿಕೆಯಾಗಿದೆ. ಹಾಗೆಯೇ ಬಂಡವಾಳ ಪರ್ಯಾಪ್ತತಾ ಅನುಪಾತವು (Capital Adequacy Ratio) 2018ರಲ್ಲಿದ್ದ ಶೇ 6.22ರಿಂದ 2026ರ ಮಾರ್ಚ್‌ನಲ್ಲಿ ಶೇ 26.65ಕ್ಕೆ ಜಿಗಿದಿದೆ. ಆರ್‌ಬಿಐನ ಪಿಸಿಎ (PCA) ನಿರ್ಬಂಧಗಳಿಂದ ಹೊರಬಂದಿರುವ ಬ್ಯಾಂಕ್, 2025-26ನೇ ಸಾಲಿನಲ್ಲಿ ₹9,513 ಕೋಟಿಗಳ ದಾಖಲೆಯ ನಿವ್ವಳ ಲಾಭವನ್ನು ಗಳಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿವಾದ: ಕುಂದಾಪುರದ ಲೇಖಕನ ಕೃತಿಗೆ ದೊರೆತ ಪ್ರಶಸ್ತಿಯ ಹಿಂದೆ ವಂಚನೆ, ಲಾಬಿ ಶಂಕೆ

ಕುಂದಾಪುರ ಮೂಲದ ಲೇಖಕ ಪ್ರದೀಪ್ ಕೆಂಚನೂರು ಅವರ ‘ನಾನಿರುವುದೆ ನಿಮಗಾಗಿ ನಾಡಿರುವುದೆ...

ಎಸ್‌ಐಆರ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಓವೈಸಿ: ಅರ್ಜಿಯ ತುರ್ತು ವಿಚಾರಣೆಗೆ ಮನವಿ

ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (ಎಸ್‌ಐಆರ್) ನಡೆಸುತ್ತಿರುವ ಚುನಾವಣಾ ಆಯೋಗದ...

ಪ್ರಜಾತಾಂತ್ರಿಕ ಹಕ್ಕುಗಳ ಹರಣ: ಕೇಂದ್ರ ಬಿಜೆಪಿ ನಡೆಗೆ ಎಐಡಿಎಸ್‌ಒ ಆಕ್ಷೇಪ

ದೆಹಲಿ ಪೊಲೀಸರು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುವುದನ್ನು ನಿರ್ಬಂಧ ಹೇರಿದ್ದಕ್ಕೆ ವಿಜಯನಗರ...