ಈ ದಿನ ಸಂಪಾದಕೀಯ | ಏರಿದ ಬೆಲೆ; ಇಳಿದ ಜೀವನಮಟ್ಟ; ಇದೇನಾ ಮೋದಿಯವರ ಆರ್ಥಿಕ ಅಭಿವೃದ್ಧಿ?

Date:

ಬ್ಲೂಮ್‌ಬರ್ಗ್ ವೇದಿಕೆ ಮೇಲೆ ನಿಂತು ಪ್ರಧಾನಿ ಮೋದಿಯವರು, ಜಿಡಿಪಿ ಶೇ.7.8ರಷ್ಟು ಜಿಗಿದಿದೆ, ವಿದೇಶಿ ವಿನಿಮಯ ಮೀಸಲು ನಿಧಿ 700 ಬಿಲಿಯನ್ ಡಾಲರ್ ದಾಟಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ, ಈ ದೇಶದೊಳಗೆ ಬೆಲೆ ಏರಿಕೆಯಿಂದ ಬಡ ಹಾಗೂ ಮಧ್ಯಮ ವರ್ಗ ತತ್ತರಿಸಿ ಹೋಗಿದೆ. ಪದವೀಧರ ಯುವಕರು ಅನಿವಾರ್ಯವಾಗಿ ಗಿಗ್‌ ಉದ್ಯೋಗದತ್ತ ಮುಖ ಮಾಡುತ್ತಿದ್ದಾರೆ. ಕೈಯಲ್ಲಿ ಕಾಸಿಲ್ಲದೆ, ಜನರ ಖರೀದಿ ಸಾಮರ್ಥ್ಯ, ಜೀವನಮಟ್ಟ ಪಾತಾಳಕ್ಕೆ ಕುಸಿದಿದೆ. ಬಹುಶಃ ಮೋದಿಯವರು ಹೇಳುತ್ತಿರುವ ಆರ್ಥಿಕ ಅಭಿವೃದ್ಧಿ ಎಂದರೆ ಇದೇ ಇರಬಹುದು!

ಭಾರತದ ಆರ್ಥಿಕ ಬೆಳವಣಿಗೆಯು ಬಲವಾದ ಆಧಾರಸ್ತಂಭಗಳು ಮತ್ತು ನಿರಂತರ ಸುಧಾರಣೆಗಳ ಮೇಲೆ ನಿಂತಿದೆ. ಇತರೆ ರಾಷ್ಟ್ರಗಳ ವೆಚ್ಚದಲ್ಲಾಗಲೀ ಅಥವಾ ಅವರ ಹಿತಾಸಕ್ತಿಗೆ ಧಕ್ಕೆ ತರುವ ಮೂಲಕ ಜಾಗತಿಕವಾಗಿ ಆರ್ಥಿಕ ಪ್ರಭಾವವನ್ನು ವಿಸ್ತರಿಸಲಾಗಲೀ ಭಾರತ ಬಯಸುವುದಿಲ್ಲ. ಜಾಗತಿಕ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು, ವ್ಯಾಪಾರ ಅಡೆತಡೆಗಳು ಮತ್ತು ತಂತ್ರಜ್ಞಾನಕ್ಕಾಗಿ ಸ್ಪರ್ಧೆ ಏರ್ಪಟ್ಟಿರುವ ಇಂದಿನ ದಿನಗಳಲ್ಲಿ ಭಾರತವು ಅತ್ಯಂತ ವಿಶ್ವಾಸಾರ್ಹ ಆರ್ಥಿಕ ಪಾಲುದಾರನಾಗಿ ಹೊರಹೊಮ್ಮಿದೆ ಎಂದೆಲ್ಲಾ ಹೇಳಿ ಅಭಿವೃದ್ಧಿಗೆ ಅವರು ನೀಡಿರುವ ವ್ಯಾಖ್ಯಾನಗಳು ಬಿಲ್ಲಿಲ್ಲದ ಬಾಣದಂತೆ ಕಾಣುತ್ತಿವೆ. ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡೆದಂತೆ ಭಾಷಣ ಬಿಗಿಯುವಂತೆ ಭಾಸವಾಗುತ್ತದೆ.

- Advertisement -

ಆರ್ಥಿಕ ಪ್ರಗತಿ ಎಂದರೆ, ಅದೊಂದು ಜೀವಪರ ಕಾಳಜಿ. ಸಾಂಪ್ರದಾಯಿಕವಾಗಿ ಒಂದು ದೇಶದ ಒಟ್ಟು ಆರ್ಥಿಕ ಉತ್ಪಾದನೆ ಮತ್ತು ವಿದೇಶಿ ವಿನಿಮಯ ನಿಧಿಯನ್ನು ಆ ದೇಶದ ಪ್ರಗತಿಯ ಮಾನದಂಡವಾಗಿ ನೋಡಲಾಗುತ್ತದೆ. ಆದರೆ, ಈ ಲೆಕ್ಕಾಚಾರ ಸಂಪತ್ತು ಎಲ್ಲರಿಗೂ ಸಮಾನವಾಗಿ ತಲುಪುತ್ತಿದೆಯೇ ಎಂಬುದನ್ನು ತೋರಿಸುವುದಿಲ್ಲ. ಮಾನವ ಅಭಿವೃದ್ಧಿ ಸೂಚ್ಯಂಕದ ಪ್ರಕಾರ ನೈಜ ಅಭಿವೃದ್ಧಿ ಎನ್ನುವುದು ಆ ದೇಶದ ನಾಗರಿಕರ ಜೀವನಮಟ್ಟ ಎಷ್ಟಿದೆ? ಅವರ ಖರೀದಿ ಸಾಮರ್ಥ್ಯ ಉತ್ತಮವಾಗಿದೆಯೇ? ಎಂಬುದರ ಮೇಲೆ ನಿರ್ಧರಿಸಲ್ಪಡುತ್ತದೆ. ಓದಿಗೆ ತಕ್ಕ ಉದ್ಯೋಗ, ಕೆಲಸಕ್ಕೆ ತಕ್ಕ ಕೂಲಿ, ದಿನನಿತ್ಯದ ಅಗತ್ಯ ವಸ್ತುಗಳನ್ನು ಸುಲಭವಾಗಿ ಕೊಳ್ಳಲು ಜನರ ಕೈಯಲ್ಲಿರುವ ಹಣದ ಮೌಲ್ಯ ಆ ದೇಶದ ಪ್ರಗತಿಯನ್ನು ನಿರ್ಧರಿಸುತ್ತದೆ. ಗುಣಮಟ್ಟದ ಶಿಕ್ಷಣ, ಉತ್ತಮ ಆರೋಗ್ಯ ಸೇವೆಗಳು, ಸುರಕ್ಷಿತ ವಸತಿ ಮತ್ತು ಶುದ್ಧ ಕುಡಿಯುವ ನೀರಿನಂತಹ ಸೌಕರ್ಯಗಳು ಕೂಡ ಅಭಿವೃದ್ಧಿ ಅಳೆಯುವ ಅಳತೆಗೋಲುಗಳೇ. ಆದರೆ ಇದ್ಯಾವುದನ್ನೂ ಲೆಕ್ಕಕ್ಕಿಡದೆ ಮೋದಿಯವರು ಈ ದೇಶ ಸುಭಿಕ್ಷವಾಗಿದೆ, ಸುಸ್ಥಿರ ಆರ್ಥಿಕ ಪ್ರಗತಿಯಲ್ಲಿದೆ ಎಂದು ಹೇಳಿಕೊಳ್ಳುತ್ತಿರುವುದು ನಗೆಪಾಟಲಿಗೀಡಾಗಿದೆ. ಸಾರ್ವಜನಿಕವಾಗಿಯೂ ಟೀಕೆಗೆ ಗುರಿಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸರು ಇಷ್ಟೊಂದು ಭೀಕರ ಮತ್ತು ಕ್ರೂರವಾಗಿ ವರ್ತಿಸುವುದೇಕೆ?

ಸ್ವತಂತ್ರ ದೇಶದಲ್ಲಿ ತಮ್ಮ ಹಕ್ಕುಗಳಿಗಾಗಿ, ಪ್ರಜಾಪ್ರಭುತ್ವದ ರಕ್ಷಣೆಗಾಗಿ ಶಾಂತಿಯುತವಾಗಿ ಬೀದಿಗಿಳಿದ ಯುವಕ-ಯುವತಿಯರು, ವಿದ್ಯಾರ್ಥಿಗಳು ಹಾಗೂ ವೃತ್ತಿಪರ ಪತ್ರಕರ್ತರ ಮೇಲೆ ಪೊಲೀಸರು ಕನಿಕರವಿಲ್ಲದೆ ಮೃಗಗಳಂತೆ ಎರಗಿಬೀಳುತ್ತಿದ್ದಾರೆ. ಎಸ್‌ಐಆರ್‌ ವಿರುದ್ಧದ ಹೋರಾಟದಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು...

ರ‍್ಯಾಂಕ್ ಸಾಮರ್ಥ್ಯದ ಮಾನದಂಡವಲ್ಲ: ಮಕ್ಕಳ ವಿಕಾಸಕ್ಕೆ ಒತ್ತಡ ರಹಿತ...

ಶಿಕ್ಷಣವೆಂದರೆ ಕೇವಲ ಅಂಕ ಗಳಿಸುವುದು, ರ‍್ಯಾಂಕ್ ಪಡೆಯುವುದು ಅಥವಾ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸುವುದಷ್ಟೇ ಅಲ್ಲ. ಶಿಕ್ಷಣದ ನಿಜವಾದ ಉದ್ದೇಶ ಮಗುವಿನ ಜ್ಞಾನ, ಚಿಂತನಾ ಶಕ್ತಿ, ಸೃಜನಶೀಲತೆ, ಆತ್ಮವಿಶ್ವಾಸ, ಸಾಮಾಜಿಕ ಪ್ರಜ್ಞೆ...

ಸಂವಿಧಾನದಲ್ಲಿ ಇಂಪೀಚ್‌ಮೆಂಟ್‌ ಮೂಲಕ ಮುಖ್ಯ ಚುನಾವಣಾ ಆಯುಕ್ತರನ್ನು ಪದಚ್ಯುತಿಗೊಳಿಸಲು...

ಮುಖ್ಯ ಚುನಾವಣಾ ಆಯುಕ್ತರಾದ ಗ್ಯಾನೇಶ್ ಕುಮಾರ್ ಅವರಿಗೆ 2023ರ ಕಾಯ್ದೆಯ ಮೂಲಕ ಸರ್ಕಾರ ಕಾನೂನು ರಕ್ಷಣೆ ಕೊಟ್ಟಿರಬಹುದು, ಆದರೆ ಅವರಿಗೆ ಯಾವುದೇ ರೀತಿಯ ಸಾಂವಿಧಾನಿಕ ರಕ್ಷಣೆ ಇಲ್ಲ. ಹಾಗಾಗಿ ಅವರು ತಾವಾಗಿಯೇ ರಾಜೀನಾಮೆ...

ಜಿಡಿಪಿ ಏರಿದರೂ, ಅದಕ್ಕೆ ತಕ್ಕಂತೆ ದೇಶದಲ್ಲಿ ಬದುಕಿಗೆ ಆಧಾರವಾಗುವ ಸುಸ್ಥಿರ ಉದ್ಯೋಗಗಳು ಸೃಷ್ಟಿಯಾಗದೆ ದೇಶ ಉದ್ಯೋಗ ರಹಿತ ಬೆಳವಣಿಗೆಯಲ್ಲಿಯೇ ಮುಂದುವರೆದಿದೆ. ಪ್ರತಿವರ್ಷ ಇಂಜಿನಿಯರಿಂಗ್, ಎಂಬಿಎ, ಪದವಿ ಹಾಗೂ ಸ್ನಾತಕೋತ್ತರ ಪದವಿ ಮುಗಿಸಿ ಹೊರಬರುತ್ತಿರುವ ಲಕ್ಷಾಂತರ ಯುವಕ-ಯುವತಿಯರಿಗೆ ಕೆಲಸವಿಲ್ಲ. ಜೊಮಾಟೊ, ಸ್ವಿಗ್ಗಿ, ಅಮೆಜಾನ್ನ ಡೆಲಿವರಿ ಬಾಯ್‌ಗಳಾಗಿಯೋ, ಕ್ಯಾಬ್ ಚಾಲಕರಾಗಿಯೋ ಕೆಲಸ ಮಾಡುತ್ತಿದ್ದಾರೆ. ಎಷ್ಟೋ ಮಂದಿ ಮಾಡುತ್ತಿರುವ ಕೆಲಸಕ್ಕೂ ತೆಗೆದುಕೊಂಡಿರುವ ಪದವಿಗೂ ಸಂಬಂಧವೇ ಇಲ್ಲ. ಖಾಯಂ ಉದ್ಯೋಗ ಕೊರತೆಯನ್ನು ನೀಗಿಕೊಳ್ಳಲು ತಾತ್ಕಾಲಿಕ ಕೆಲಸಗಳಿಗೆ ಶರಣಾಗುತ್ತಿರುವುದೇ ಆರ್ಥಿಕ ನೀತಿಗಳ ದೊಡ್ಡ ವೈಫಲ್ಯ. ತಂತ್ರಜ್ಞಾನ, ಯುಪಿಐ, ಡಿಜಿಟಲ್ ಸಾಮರ್ಥ್ಯಗಳನ್ನು ಗ್ಲೋಬಲ್ ಸೌತ್ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳುತ್ತಿದ್ದೇವೆ ಎಂದು ಪ್ರದರ್ಶಿಸಿಕೊಳ್ಳುವ ಮೋದಿ, ಕಾರ್ಪೊರೇಟ್ ಸ್ಪರ್ಧೆ, ನಿರಂತರ ನೀತಿ ಬಿಕ್ಕಟ್ಟುಗಳಿಂದಾಗಿ ಬಾಗಿಲು ಮುಚ್ಚುತ್ತಿರುವ ಭಾರತದ ಆರ್ಥಿಕತೆಯ ಬೆನ್ನೆಲುಬಾಗಿರುವ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ನಶಿಸುತ್ತಿರುವ ಸಾಂಪ್ರದಾಯಿಕ ನೇಯ್ಗೆ ಮತ್ತು ಸಂಕಷ್ಟದಲ್ಲಿರುವ ಕೃಷಿ ಕ್ಷೇತ್ರವನ್ನು ಮೇಲೆತ್ತಲು ಸಣ್ಣ ಪ್ರಯತ್ನವನ್ನೂ ಮಾಡುತ್ತಿಲ್ಲ. . ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡುವ ಐಟಿ, ಆಟೊಮೇಷನ್ ಕ್ಷೇತ್ರಗಳು ಕಡಿಮೆ ಜನರನ್ನು ಬಳಸಿ ಹೆಚ್ಚು ಉತ್ಪಾದನೆ ಮಾಡಿ ಲಾಭ ಗಳಿಸುತ್ತವೆಯೇ ಹೊರತು ಶ್ರಮಿಕ ವರ್ಗಕ್ಕೆ ಉದ್ಯೋಗ ಸೃಷ್ಟಿಸುತ್ತಿಲ್ಲ. ಉದ್ಯೋಗವಿಲ್ಲವೆಂದರೆ ವೇತನವಿಲ್ಲ, ಕಾಸಿಲ್ಲದೆ ಏನೂ ಇಲ್ಲ!

ಮೋದಿಯವರ ಆಪ್ತ ಬಳಗದ ಕೆಲವೇ ಕೆಲವು ಕಾರ್ಪೊರೇಟ್ ಕುಳಗಳ ಸಂಪತ್ತು ಈ ದೇಶದ ಭವಿಷ್ಯಕ್ಕಿಂತಲೂ ಪ್ರಕಾಶಮಾನವಾಗಿ ಉರಿಯುತ್ತಿದೆ. ದೇಶದ ನೈಸರ್ಗಿಕ ಸಂಪನ್ಮೂಲಗಳು, ವಿಮಾನ ನಿಲ್ದಾಣಗಳು, ಬಂದರುಗಳು, ವಿದ್ಯುತ್ ಮತ್ತು ಸಾರ್ವಜನಿಕ ರಂಗದ ಆಸ್ತಿಗಳು ಒಂದೊಂದಾಗಿ ಆಪ್ತ ಸಿರಿವಂತರ ಮಡಿಲಿಗೆ ಸೇರುತ್ತಿವೆ. ಅವರಿಗೆ ದಿನದ ಅಥವಾ ತಿಂಗಳಿನ ಆದಾಯವಲ್ಲ ನಿಮಿಷದ ಆದಾಯ! ಆದರೆ, ಅದೇ ದೇಶದ ಕೋಟ್ಯಂತರ ಜನಸಾಮಾನ್ಯರ ಸರಾಸರಿ ತಲಾದಾಯ ಮಾತ್ರ ಜಾಗತಿಕ ಮಟ್ಟದಲ್ಲೇ ಅತಿ ಕಳಪೆ ಹಂತದಲ್ಲಿದೆ. ದೇಶದ ಶೇಕಡಾ 80ಕ್ಕೂ ಹೆಚ್ಚು ಜನ ಉಚಿತ ರೇಷನ್ ಧಾನ್ಯ ನೆಚ್ಚಿ ದಿನ ದೂಡುವ ದಯನೀಯ ಸ್ಥಿತಿ ಒಂದೆಡೆಯಿದ್ದರೆ, ಇಡೀ ದೇಶದ ಸಂಪತ್ತಿನ ಸಿಂಹಪಾಲು ಕೇವಲ ಶೇಕಡಾ ಒಂದರಷ್ಟು ಶ್ರೀಮಂತರ ಜೇಬು ತುಂಬಿದೆ. ಆದಾಯ ಮತ್ತು ಸಂಪನ್ಮೂಲಗಳು ಸಂಪೂರ್ಣವಾಗಿ ಆಪ್ತ ಸ್ನೇಹಿತರ ಬಳಿಯಲ್ಲೇ ಕೇಂದ್ರೀಕೃತವಾಗುತ್ತಿರುವಾಗ, ದೇಶ ಆರ್ಥಿಕವಾಗಿ ಅಭಿವೃದ್ಧಿಯಾಗಿದೆ ಎಂದು ಯಾವ ಬಾಯಿಂದ ಹೇಳಲು ಸಾಧ್ಯ?

ಇದನ್ನೂ ಓದಿ: ಈ ದಿನ ಸಂಪಾದಕೀಯ | ಸಂಸದೀಯ ಸಮಿತಿ ಸಭೆಯಿಂದ ಸುಪ್ರೀಂ ಕೋರ್ಟ್‌ ಹಿಂದೆ ಸರಿದದ್ದು ಸ್ವಾಗತಾರ್ಹ!

ಜಿಡಿಪಿ ಏರಿದ ತಕ್ಷಣ ಈ ದೇಶದ ಬಡವನ ಬದುಕು ಬದಲಾಗಿಬಿಡುತ್ತದೆಯೇ? ಸರ್ಕಾರದ ವಿದೇಶಿ ಖಾತೆಯ ಮೀಸಲು ಹೆಚ್ಚಿದ ತಕ್ಷಣ ಪ್ರಜೆಯ ಜೇಬು ತುಂಬಿಬಿಡುತ್ತದೆಯೇ? ಮೋದಿಯವರೇ, ಕೆಂಪು ರತ್ನಗಂಬಳಿ ಮೇಲಿಂದ ಇಳಿದು, ಕಣ್ಣೆತ್ತಿ ಈ ದೇಶದ ಜನರ ದೈನಂದಿನ ಬದುಕಿನತ್ತ ಒಮ್ಮೆಯಾದರೂ ನೋಡಿ. ಉನ್ನತ ಶಿಕ್ಷಣ ಪಡೆದ ಯುವಕರಿಗೆ ಉದ್ಯೋಗವಿಲ್ಲದೆ ಬೀದಿಗೆ ಬಿದ್ದಿದ್ದಾರೆ, ಹಗಲಿರುಳು ದುಡಿಯುವ ಶ್ರಮಿಕರಿಗೆ ನಾಳಿನ ಭವಿಷ್ಯಕ್ಕೆ ನಯಾಪೈಸೆ ಉಳಿತಾಯವಿಲ್ಲ, ಬೆಳೆ ಬೆಳೆಯುವ ರೈತನಿಗೆ ಬೆಲೆ ಸಿಗದೆ ನೆಮ್ಮದಿಯಿಲ್ಲ, ಬೆಳಗಿನ ಹಾಲಿನಿಂದ ಹಿಡಿದು ಹಣ್ಣು ತರಕಾರಿಗಳ ಬೆಲೆಯೂ ಗಗನಕ್ಕೇರಿದೆ. ಇದೇನಾ ನೀವು ವಿಶ್ವದ ಮುಂದೆ ಮೆರೆಸುತ್ತಿರುವ ‘ಆರ್ಥಿಕ ಪ್ರಗತಿ’?

ಈ ದೇಶದ ಪ್ರಜೆಗಳು ತೆತ್ತ ತೆರಿಗೆ, ಅವರ ಬೆವರಿನ ಶ್ರಮ ಮತ್ತು ದೇಶದ ಪ್ರಕೃತಿ ಸಂಪನ್ಮೂಲಗಳಿಂದ ರೂಪುಗೊಳ್ಳುವ ಆರ್ಥಿಕ ಶಕ್ತಿಯ ನೈಜ ಫಲ ಪ್ರತಿಯೊಬ್ಬ ನಾಗರಿಕನ ತಟ್ಟೆಯಲ್ಲೂ ಕಾಣಿಸಬೇಕು. ʼಪ್ರಗತಿ ಎಂದರೆ ಭಾಷಣ ಬಿಗಿದು ಚಪ್ಪಾಳೆ ಗಿಟ್ಟಿಸುವುದಲ್ಲ, ಕಟ್ಟಕಡೆಯ ಪ್ರಜೆಯ ಬದುಕಿಗೆ ನೆಮ್ಮದಿ ಮತ್ತು ಭದ್ರತೆ ನೀಡುವುದುʼ ಎಂಬುದನ್ನು ಮೋದಿಯವರು ಇನ್ಮುಂದೆಯಾದರೂ ಮನಗಾಣಬೇಕಿದೆ!

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಸಂಸದೀಯ ಸಮಿತಿ ಸಭೆಯಿಂದ ಸುಪ್ರೀಂ ಕೋರ್ಟ್‌ ಹಿಂದೆ ಸರಿದದ್ದು ಸ್ವಾಗತಾರ್ಹ!

ಸಂವಿಧಾನದ 143ನೇ ವಿಧಿಯಡಿ ಸಂಸದೀಯ ಸಮಿತಿಯು ಮಹತ್ವದ ಕಾನೂನು ರೂಪಿಸುವಾಗ, ಸುಪ್ರೀಂ...

ಈ ದಿನ ಸಂಪಾದಕೀಯ | ಡಿಕೆಶಿ ಪ್ರತಿರೋಧಕ್ಕೆ ಮಣಿದ ಚುನಾವಣಾ ಆಯೋಗ; ಈವರೆಗಿನ ಅಕ್ರಮಗಳಿಗೆ ಹೊಣೆ ಯಾರು?

ಕರ್ನಾಟಕದಲ್ಲಿ ಎಸ್‌ಐಆರ್‌ ಆರಂಭವಾಗುವ ಮೊದಲೇ ನಾಗರಿಕ ಸಂಘಟನೆಗಳು ಕಾಂಗ್ರೆಸ್‌ ಗೆ ಎಸ್‌ಐಆರ್‌...

ಈ ದಿನ ಸಂಪಾದಕೀಯ | ದೇಶಕ್ಕೆ ಆರ್ಥಿಕ ಬಿಕ್ಕಟ್ಟು ಎದುರಾಗಲಿದೆಯೇ, ನಾಯಕರ ಮಾತು ಎಚ್ಚರಿಕೆಯ ಗಂಟೆಯೇ?

ವಿದೇಶಾಂಗ ನೀತಿ ಗೊತ್ತಿಲ್ಲದ ಜೈಶಂಕರ್‌, ಬಡವರು ಹೇಗೆ ಬದುಕುತ್ತಿದ್ದಾರೆ ಎಂದು ಅರಿಯದ...

ಈ ದಿನ ಸಂಪಾದಕೀಯ | ಹೆಣ್ಣುಮಕ್ಕಳ ಹತ್ಯೆ ಅತ್ಯಾಚಾರಗಳ ಬಗ್ಗೆ ನಿಮಗೆ ʼಕಲ್ಚರಲ್ ಶಾಕ್ʼ ಆಗೋದು ಯಾವಾಗ ಮೋದೀಜಿ?

ಜಂತರ್‌ ಮಂತರ್‌ನಲ್ಲಿ ಹದಿಹರೆಯದ ಬಾಲಕಿಯೊಬ್ಬಳ ಮಾತು ಕೇಳಿ ‘ಕಲ್ಚರಲ್ ಶಾಕ್’ ಅನುಭವಿಸುವಷ್ಟು...