ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ ಎಸಿಪಿ ವಿವೇಕ್ ಭಗತ್ FIR!

Date:

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ) ವಿವೇಕ್ ಭಗತ್, ಇದೀಗ ದೂರುದಾರ ಯುವತಿಯರ ವಿರುದ್ಧವೇ ಜಾತಿ ನಿಂದನೆಯ ಪ್ರತಿದೂರು (ಕೌಂಟರ್ ಕೇಸ್) ದಾಖಲಿಸಿದ್ದಾರೆ. ಘಟನೆ ನಡೆದು ಬರೋಬ್ಬರಿ ಹತ್ತು ದಿನಗಳ ಬಳಿಕ ಅಕ್ಟೋಬರ್ 13ರಂದು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಸ್ವತಂತ್ರ ಪತ್ರಕರ್ತೆ ರೋಸಿ, ಸಹೋದ್ಯೋಗಿ ಗಜೇಂದ್ರ ಸಿಂಗ್ ಹಾಗೂ ಮತ್ತೊಬ್ಬರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿರುವುದು ಪ್ರತಿಭಟನಾಕಾರರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

- Advertisement -

ಅಕ್ಟೋಬರ್ 3ರಂದು ಜಂತರ್ ಮಂತರ್ ಬಳಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯುವಾಗ ಎಸಿಪಿ ವಿವೇಕ್ ಭಗತ್ ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಪತ್ರಕರ್ತೆ ರೋಸಿ ಸೇರಿದಂತೆ ಮೂವರು ಮಹಿಳೆಯರು ದೂರು ನೀಡಿದ್ದರು. ಈ ಆರೋಪದ ಬೆನ್ನಲ್ಲೇ ವ್ಯಾಪಕ ಆಕ್ರೋಶ ವ್ಯಕ್ತವಾದ ಕಾರಣ, ಅಕ್ಟೋಬರ್ 5ರಂದು ಭಗತ್ ಅವರಿಗೆ ನೀಡಲಾಗಿದ್ದ ಹೆಚ್ಚುವರಿ ಡಿಸಿಪಿ ಹುದ್ದೆಯ ತಾತ್ಕಾಲಿಕ ಬಡ್ತಿಯನ್ನು ದೆಹಲಿ ಸರ್ಕಾರ ತಡೆಹಿಡಿದಿತ್ತು. ತನಿಖೆ ಮುಗಿಯುವವರೆಗೆ ತನ್ನ ಬಡ್ತಿ ಆದೇಶ ತಡೆಹಿಡಿಯುವಂತೆ ತಾನೇ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾಗಿ ಭಗತ್ ಹೇಳಿಕೊಂಡಿದ್ದರೂ, ಬಡ್ತಿಗೆ ತಡೆ ಬಿದ್ದ ಆಕ್ರೋಶದಿಂದಲೇ ರೊಚ್ಚಿಗೆದ್ದು ತಮ್ಮ ತಪ್ಪನ್ನು ಮುಚ್ಚಿಹಾಕಲು ಬಹಳ ತಡವಾಗಿ ಈ ಪ್ರತಿದೂರು ದಾಖಲಿಸಿದ್ದಾರೆ ಎಂಬ ತೀವ್ರ ಟೀಕೆ ವ್ಯಕ್ತವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

ಬಾಗಲಕೋಟೆ | ನಿಲ್ದಾಣಗಳಿದ್ದರೂ ರಸ್ತೆಯಲ್ಲೇ ಬಸ್‌ ನಿಲುಗಡೆ; ಟ್ರಾಫಿಕ್...

ಬಾಗಲಕೋಟೆ ನಗರದಲ್ಲಿ ಸುಗಮ ಸಂಚಾರಕ್ಕಾಗಿ ಬಸ್‌ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಪ್ರಯಾಣಿಕರು ಬಿಸಿಲು, ಮಳೆಯಿಂದ ರಕ್ಷಣೆ ಪಡೆಯಲು ಆಸನ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಬಸ್‌ಗಳು ನಿಲುಗಡೆಗೊಳ್ಳಲು ಪ್ರತ್ಯೇಕ ಜಾಗವನ್ನೂ ಗುರುತಿಸಲಾಗಿದೆ. ಆದರೆ, ಬಸ್‌ಗಳು ಮಾತ್ರ ನಿಲ್ದಾಣಕ್ಕೆ...

ಸಂತ್ರಸ್ತ ಪತ್ರಕರ್ತೆಯರು ಘಟನೆಯ ದಿನ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆ ಮುಂದೆ 24 ಗಂಟೆಗಳ ಕಾಲ ಕಣ್ಣೀರಿಡುತ್ತಾ ಎಫ್‌ಐಆರ್ ದಾಖಲಿಸುವಂತೆ ಅಂಗಲಾಚಿದರೂ ಪೊಲೀಸರು ದೂರು ಸ್ವೀಕರಿಸಲು ಸಿದ್ಧರಿರಲಿಲ್ಲ. ಆರೋಪಿ ಎಸಿಪಿ ವಿರುದ್ಧ ಎಫ್‌ಐಆರ್ ದಾಖಲಿಸದೆ ಪ್ರಕರಣವನ್ನು ಕ್ರೈಂ ಬ್ರಾಂಚ್ ವಿಚಾರಣೆಗೆ ವರ್ಗಾಯಿಸಿದ ಪೊಲೀಸರು, ಸಂತ್ರಸ್ತೆಯನ್ನೇ ಆರೋಪಿಯಂತೆ ಕಾಣುತ್ತಾ ಆಕೆಯ ಹಿನ್ನೆಲೆ ಕುರಿತು 25 ಪ್ರಶ್ನೆಗಳ ಪ್ರಶ್ನಾವಳಿ ನೀಡಿ ಹೈರಾಣಾಗಿಸಿದ್ದಾರೆ. ಮಹಿಳೆಯರ ದೂರಿಗೆ ಎಫ್‌ಐಆರ್ ನಿರಾಕರಿಸಿದ ಅದೇ ಇಲಾಖೆ, ಕೇಂದ್ರದ ಮೋದಿ ಸರ್ಕಾರದ ಪರವಾಗಿ ನಿಂತು ಪ್ರತಿಭಟನಾಕಾರರನ್ನು ಹತ್ತಿಕ್ಕುತ್ತಿರುವ ಆರೋಪಿ ಅಧಿಕಾರಿ ಇಷ್ಟು ದಿನಗಳ ಬಳಿಕ ನೀಡಿದ ಪ್ರತಿದೂರಿಗೆ ತಕ್ಷಣವೇ ಎಫ್‌ಐಆರ್ ದಾಖಲಿಸಿರುವುದು ಪೊಲೀಸ್ ವ್ಯವಸ್ಥೆಯ ಇಬ್ಬಗೆಯ ನೀತಿಯನ್ನು ಬಯಲು ಮಾಡಿದೆ.

ವಿವೇಕ್ ಭಗತ್ ತಮ್ಮ ಪ್ರತಿದೂರಿನಲ್ಲಿ, ಪತ್ರಕರ್ತೆ ರೋಸಿ ತನ್ನನ್ನು ಕುರಿತು “ಇವನು ಭಗತ್, ಮೇಘವಾಲ್ ಜಾತಿಗೆ ಸೇರಿದವನು, ಇವರು ಕೆಳಜಾತಿಯವರಾಗಿದ್ದು ಹೊಲಿಗೆ-ನೇಯ್ಗೆ ಕೆಲಸ ಮಾಡುತ್ತಾರೆ, ಇವನು ಹೇಗೆ ಎಸಿಪಿಯಾದ?” ಎಂದು ನಿಂದಿಸಿದ್ದಾರೆಂದು ಆರೋಪಿಸಿದ್ದಾರೆ. ಆದರೆ ಪ್ರತಿಭಟನೆಯ ನಡುವೆ ಪೊಲೀಸರು ತಮ್ಮ ಸಮವಸ್ತ್ರದ ಮೇಲಿನ ನೇಮ್‌ಟ್ಯಾಗ್ ಕೂಡ ತೆಗೆದುಹಾಕಿ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ, ಚಿಕ್ಕ ವಯಸ್ಸಿನ ಯುವತಿ ರೋಸಿಗೆ ಆ ಅಧಿಕಾರಿಯ ಹೆಸರಾಗಲಿ ಅಥವಾ ‘ಭಗತ್’ ಎಂಬ ಉಪನಾಮದ ಹಿಂದಿರುವ ‘ಮೇಘವಾಲ್’ ಜಾತಿ ಮತ್ತು ಅದರ ಮೂಲ ಕಸುಬಿನ ವಿವರವಾಗಲಿ ತಿಳಿದಿರಲು ಹೇಗೆ ಸಾಧ್ಯ ಎಂಬ ಗಂಭೀರ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ.

ಇನ್ನು ಈ ‘ಮೇಘವಾಲ್’ (ಅಥವಾ ಮೇಘ್) ಸಮುದಾಯದ ಸಾಮಾಜಿಕ ಹಾಗೂ ವೃತ್ತಿಪರ ಹಿನ್ನೆಲೆಯನ್ನು ಕೂಲಂಕಷವಾಗಿ ಪರಿಶೀಲಿಸಿದರೆ ಅಧಿಕಾರಿಯ ದೂರಿನ ಹಿಂದಿನ ವಾಸ್ತವ ಮತ್ತಷ್ಟು ಸ್ಪಷ್ಟವಾಗುತ್ತದೆ. ಮುಖ್ಯವಾಗಿ ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಕಂಡುಬರುವ ಮೇಘವಾಲ್ ಸಮುದಾಯದ ಮೂಲ ಕಸುಬು ಕೈಮಗ್ಗ ನೇಕಾರಿಕೆ, ಕೃಷಿ ಹಾಗೂ ಪಶುಪಾಲನೆಯಾಗಿದೆ. ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಕೂಡ ಇದೇ ಸಮುದಾಯಕ್ಕೆ ಸೇರಿದವರಾಗಿದ್ದು, ಕಸೂತಿ ಮತ್ತು ಜವಳಿ ಕಲೆಯಲ್ಲಿ ಗುರುತಿಸಿಕೊಂಡಿರುವ ಈ ಸಮುದಾಯವು ಇಂದು ಶೈಕ್ಷಣಿಕವಾಗಿ ಹಾಗೂ ಸರ್ಕಾರಿ ಸೇವೆಗಳಲ್ಲಿ ಸಾಕಷ್ಟು ಮುಂಚೂಣಿಯಲ್ಲಿದೆ.

ಮೇಘವಾಲ್ ಜಾತಿಯು ಸಾಂವಿಧಾನಿಕವಾಗಿ ಪರಿಶಿಷ್ಟ ಜಾತಿ (ಎಸ್‌ಸಿ) ಪಟ್ಟಿಯಲ್ಲಿದ್ದರೂ, ಸಾಮಾಜಿಕ ಶ್ರೇಣೀಕರಣದ ದೃಷ್ಟಿಯಿಂದ ಇದು ತೀರಾ ತಳಮಟ್ಟದಲ್ಲಿ ಶೋಷಣೆಗೊಳಗಾದ ಸಮುದಾಯವಲ್ಲ. ತಳಮಟ್ಟದ ಶೋಷಿತ ಸಮುದಾಯಗಳಿಗಿಂತ ಸಾಮಾಜಿಕವಾಗಿ ಮೇಲ್ಸ್ತರದಲ್ಲಿರುವ ಈ ಸಮುದಾಯವು, ಐತಿಹಾಸಿಕವಾಗಿ ಋಷಿ ಮೇಘನ ವಂಶಸ್ಥರೆಂದೂ ಹಾಗೂ ರಜಪೂತ, ಚರಣ್, ಜಾಟ್ ಮತ್ತು ಬ್ರಾಹ್ಮಣ ಮೂಲಗಳಿಂದ ಬಂದ ಉಪಪಂಗಡಗಳನ್ನು ಒಳಗೊಂಡಿದೆಯೆಂದೂ ಸಮಾಜಶಾಸ್ತ್ರೀಯ ದಾಖಲೆಗಳು ಹೇಳುತ್ತವೆ. ಹೀಗಿರುವಾಗ ನೈಜ ಶೋಷಿತರ ರಕ್ಷಣೆಗಿರುವ ಕಾಯ್ದೆಯನ್ನು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಲೈಂಗಿಕ ಕಿರುಕುಳದ ಆರೋಪದಿಂದ ತಪ್ಪಿಸಿಕೊಳ್ಳಲು ಗುರಾಣಿಯಾಗಿ ಬಳಸಿಕೊಂಡಿರುವುದು ವಿಪರ್ಯಾಸವಾಗಿದೆ.

ಇದಕ್ಕೂ ಮುನ್ನ ಜುಲೈನಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ನಡೆಸಿದ ಪ್ರತಿಭಟನೆಯಲ್ಲೂ ಎಸಿಪಿ ವಿವೇಕ್ ಭಗತ್ ವಿರುದ್ಧ ದೌರ್ಜನ್ಯದ ಆರೋಪ ಕೇಳಿಬಂದಿತ್ತು. ಪ್ರತಿಭಟಿಸುತ್ತಿದ್ದ ಯುವತಿಯೊಬ್ಬಳ ಗುದದ್ವಾರದತ್ತ ಅಸಭ್ಯವಾಗಿ ಲಾಠಿ ತೂರಿಸಲು ಮುಂದಾದ ವಿಡಿಯೋ ಹರಿದಾಡಿದಾಗ, ದೆಹಲಿ ಪೊಲೀಸರು ಅದನ್ನು ‘ಎಐ (ಕೃತಕ ಬುದ್ಧಿಮತ್ತೆ) ನಿರ್ಮಿತ ವಿಡಿಯೋ’ ಎಂದು ಹೇಳಿ ಹರಿಯಾಣದ ನದೀಮ್ ಅಹ್ಮದ್ ಎಂಬಾತನನ್ನು ಬಂಧಿಸಿದ್ದರು. ಆದರೆ ತನ್ನ ಬಳಿ ಅಧಿಕಾರಿಯ ದೌರ್ಜನ್ಯದ ಅಸಲಿ ವಿಡಿಯೋ ಸಾಕ್ಷ್ಯವಿದ್ದು, ಎಫ್‌ಐಆರ್ ದಾಖಲಾದ ತಕ್ಷಣವೇ ಸಲ್ಲಿಸುವುದಾಗಿ ಸಂತ್ರಸ್ತೆ ರೋಸಿ ಸ್ಪಷ್ಟಪಡಿಸಿದ್ದಾರೆ.

ಮತ್ತೊಂದೆಡೆ, ಪೊಲೀಸ್ ದೌರ್ಜನ್ಯಕ್ಕೊಳಗಾದ ಸಿಜೆಪಿ ಹೋರಾಟಗಾರರು ಹಾಗೂ ಸಂತ್ರಸ್ತ ಯುವತಿಯರನ್ನು ಕೂರಿಸಿಕೊಂಡು ಸಂವಾದ ನಡೆಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪತ್ರಿಕಾಗೋಷ್ಠಿ ನಡೆಸಿ ಕೇಂದ್ರದ ಮೋದಿ ಸರ್ಕಾರ ಮತ್ತು ದೆಹಲಿ ಪೊಲೀಸರ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಂತಿಯುತವಾಗಿ ಪ್ರತಿಭಟಿಸುವ ಯುವಜನರನ್ನು ಜೈಲಿಗಟ್ಟುವುದು ಹೇಡಿತನ ಎಂದಿರುವ ಅವರು, ಮೋದಿ ಸರ್ಕಾರದ ಪರವಾಗಿ ಕಾರ್ಯನಿರ್ವಹಿಸುತ್ತಾ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ ಅಧಿಕಾರಿಯನ್ನು ರಕ್ಷಿಸುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ. ಪ್ರೆಸ್ ಕ್ಲಬ್ ಆಫ್ ಇಂಡಿಯಾ ಖಂಡನೆ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ನೋಟಿಸ್ ನಡುವೆಯೇ, ಆರೋಪಿ ಎಸಿಪಿ ದಾಖಲಿಸಿರುವ ಪ್ರತಿದೂರು ಆತನ ದರ್ಪ ಹಾಗೂ ಪೊಲೀಸ್ ವ್ಯವಸ್ಥೆಯ ದ್ವಂದ್ವ ನಿಲುವನ್ನು ಸಾಬೀತುಪಡಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಂತರ್ ಮಂತರ್ ಧರಣಿ ಸ್ಥಳ ರದ್ದತಿ ಖಂಡಿಸಿ ಎಸ್‌ಎಫ್‌ಐ, ಡಿವೈಎಫ್‌ಐ ಪ್ರತಿಭಟನಾ ಮೆರವಣಿಗೆ: ಹಲವು ನಾಯಕರು ಪೊಲೀಸ್ ವಶಕ್ಕೆ

ದೇಶದ ರಾಜಧಾನಿ ದೆಹಲಿಯ ಐತಿಹಾಸಿಕ 'ಜಂತರ್ ಮಂತರ್' ಅನ್ನು ಪ್ರಜಾಸತ್ತಾತ್ಮಕ ಪ್ರತಿಭಟನಾ...

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿವಾದ: ಕುಂದಾಪುರದ ಲೇಖಕನ ಕೃತಿಗೆ ದೊರೆತ ಪ್ರಶಸ್ತಿಯ ಹಿಂದೆ ವಂಚನೆ, ಲಾಬಿ ಶಂಕೆ

ಕುಂದಾಪುರ ಮೂಲದ ಲೇಖಕ ಪ್ರದೀಪ್ ಕೆಂಚನೂರು ಅವರ ‘ನಾನಿರುವುದೆ ನಿಮಗಾಗಿ ನಾಡಿರುವುದೆ...

ಎಸ್‌ಐಆರ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಓವೈಸಿ: ಅರ್ಜಿಯ ತುರ್ತು ವಿಚಾರಣೆಗೆ ಮನವಿ

ಮತದಾರರ ಪಟ್ಟಿಯ 'ವಿಶೇಷ ತೀವ್ರ ಪರಿಷ್ಕರಣೆ' (ಎಸ್‌ಐಆರ್) ನಡೆಸುತ್ತಿರುವ ಚುನಾವಣಾ ಆಯೋಗದ...