ಗೌರಿಬಿದನೂರು | ನಮ್ಮೂರ ಸರ್ಕಾರಿ ಶಾಲೆ ನಮ್ಮೂರಲ್ಲೇ ಉಳಿಸಿ ಎಂದು ಆಗ್ರಹಿಸಿ ಬಿಇಒ ಗೆ ಮನವಿ

Date:

ಕರ್ನಾಟಕ ರಾಜ್ಯ ಸರ್ಕಾರ ರಾಜ್ಯದಾದ್ಯಂತ ಭುಗಿಲೆದ್ದಿರುವ ಪೋಷಕರ, ಗ್ರಾಮಸ್ಥರ, ವಿದ್ಯಾರ್ಥಿಗಳ ತೀವ್ರ ವಿರೋಧದ ನಡುವೆಯು ತನ್ನ ಹಠಮಾರಿ ದೋರಣೆಯಿಂದ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ಜಾರಿಗೊಳಿಸಿ, 40 ಸಾವಿರಕ್ಕೂ ಹೆಚ್ಚು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದೆ. ಈ ಪೈಕಿ ಗೌರಿಬಿದನೂರು ತಾಲೂಕಿನಲ್ಲಿ 3 ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು ನಿರ್ಮಿಸಿ, 20ಕ್ಕೂ ಹೆಚ್ಚು ಗ್ರಾಮೀಣ ಶಾಲೆಗಳನ್ನು ಮುಚ್ಚಲು ಹೊರಟಿದೆ. ಈ ಹಿನ್ನಲೆಯಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ಬಲಿಷ್ಠ ಹೋರಾಟ ಬೆಳೆಸುತ್ತಿರುವ AIDSO ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ನೇತೃತ್ವದಲ್ಲಿ ಮುದುಗೆರೆ, ಹಳೇಉಪ್ಪಾರಹಳ್ಳಿ, ಬಂದರಹಳ್ಳಿ, ರಂಗಪ್ಪನ ಪಾಳ್ಯ, ಗುರುಪನಹಳ್ಳಿ, ಹಾಗು ಭಕ್ತರಹಳ್ಳಿ ಶಾಲೆಗಳನ್ನು ಉಳಿಸಿಕೊಳ್ಳಲು ಪೋಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ನಿಯೋಗ ಗೌರಿಬಿದನೂರು ಬಿಇಒ ಕಛೇರಿಗೆ ಬೇಟಿ ನೀಡಿ ಮನವಿ ಪತ್ರ ಸಲಿಸಿದರು.

- Advertisement -

AIDSO ರಾಜ್ಯ ಕಾರ್ಯದರ್ಶಿ ಮಂಡಳಿಯ ಸದಸ್ಯರಾದ ವಿನಯ್ ಚಂದ್ರ , ರಾಜ್ಯ ಸರ್ಕಾರವು ಜಾರಿಗೆ ತಂದಿರುವ ‘ಕೆಪಿಎಸ್ ಮ್ಯಾಗ್ನೆಟ್ ಯೋಜನೆ’ಯು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ಮುಚ್ಚುವ ಪಿತೂರಿಯಾಗಿದೆ. ಈ ಯೋಜನೆಯ ಪೈಲೆಟ್ ಪ್ರಾಜೆಕ್ಟ್ ‘ಚನ್ನಪಟ್ಟಣ ಪೈಲಟ್ ಯೋಜನೆ’ಯನ್ನು ವಿರೋಧಿಸಿ ತಮ್ಮ ಹಳ್ಳಿಗಳ ಶಾಲೆಗಳನ್ನು ಉಳಿಸಿಕೊಳ್ಳಲು ಬಡ ಪೋಷಕರು ಮತ್ತು ಗ್ರಾಮಸ್ಥರು ಒಗ್ಗೂಡಿ ಬೃಹತ್ ಹೋರಾಟ ಮಾಡಿದ್ದಾರೆ. ಬಡ ಮಕ್ಕಳ, ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಹಳ್ಳಿಯ ಹಿರಿಯರು ಕಟ್ಟಿದ ಶಾಲೆಗಳನ್ನು ಮುಚ್ಚುವ ಮೂಲಕ ಅವರ ಕನಸುಗಳನ್ನು ಕಸದ ಬುಟ್ಟಿಗೆ ಹಾಕಲಾಗುತ್ತಿದೆ. ಇದು ಬರಿ ಕರ್ನಾಟಕಕ್ಕೆ ಸೀಮಿತವಾಗಿಲ್ಲ ಬೇರೆ ಬೇರೆ ಹೆಸರಿನಲ್ಲಿ ಇಡೀ ದೇಶದಲ್ಲಿ 91 ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ. ಮಧ್ಯಪ್ರದೇಶವೊಂದರಲ್ಲೇ 95,000 ಸರ್ಕಾರಿ ಶಾಲೆಗಳು ಮುಚ್ಚುವ ಭೀತಿ ಎದುರಾಗಿದೆ. ಈಗಾಗಲೇ ಹಳ್ಳಿಗಳಲ್ಲಿ ಸರ್ಕಾರಿ ಶಾಲೆಗಳಿದ್ದರೂ 15 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣದಿಂದ ಹೊರಗುಳಿದಿದ್ದಾರೆ ಎಂದು ಬೆಳಗಾವಿ ಅಧಿವೇಶನದಲ್ಲಿ ಆತಂಕ ವ್ಯಕ್ತವಾಗಿತ್ತು. ಹಳ್ಳಿಗಳಿಗೆ ಸರಿಯಾದ ಬಸ್ ಸೌಲಭ್ಯವೇ ಇಲ್ಲದಿದ್ದರೂ ‘ಉಚಿತ ಸಾರಿಗೆ’ಯ ಸುಳ್ಳು ಭರವಸೆ ನೀಡಿ ಗ್ರಾಮೀಣ ಮಕ್ಕಳ ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ; ಆದ್ದರಿಂದ ಈ ಮಾರಕ ಯೋಜನೆಯನ್ನು ತಕ್ಷಣ ಕೈಬಿಡದಿದ್ದರೆ ಚನ್ನಪಟ್ಟಣ ಮಾದರಿಯಲ್ಲೇ ಈ ‘ಶಾಲೆಗಳನ್ನು ಉಳಿಸಲು ಚಳವಳಿಯನ್ನು ತೀವ್ರಗೊಳಿಸಲಾಗುವುದು ಎಂದು ಹೆಚ್ಚರಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

SIRನ ಒಳನೋಟ: ಸೇರ್ಪಡೆಗಿಂತ ಹೊರಗಿಡುವುದಕ್ಕೆ ಆದ್ಯತೆ ನೀಡಿದಾಗ ಏನಾಗುತ್ತದೆ?

SIR ಕರಡು ಪಟ್ಟಿಯಲ್ಲಿರುವ ಮತದಾರರ ಸಂಖ್ಯೆಯು ನೈಜ ವಯಸ್ಕ ಜನಸಂಖ್ಯೆಯ ಅಂದಾಜಿಗಿಂತ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿರುವುದಕ್ಕೆ ಕಾರಣವೇನು? ಈ ಕಾಣೆಯಾದ ಮತದಾರರೆಲ್ಲ ಯಾರು? ಅವರು ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದು ಹೇಗೆ?...

AIDSO ರಾಜ್ಯ ಕಾರ್ಯದರ್ಶಿ ಮಂಡಳಿಯ ಇನ್ನೋರ್ವ ಸದಸ್ಯರಾದ ತುಳಸಿ ಮಾತನಾಡಿ, ಈ ಕೂಡಲೇ ಹೊಸೂರು ಕೆಪಿಎಸ್ ಮ್ಯಾಗ್ನೆಟ್ ಶಾಲೆಯ ಯೋಜನೆಯನ್ನು ಕೈ ಬಿಡಬೇಕು, ಯಾವುದೇ ಕಾರಣಕ್ಕೂ ಒಂದೇ ಒಂದು ಸರ್ಕಾರಿ ಶಾಲೆಯನ್ನೂ ವಿಲೀನದ ಹೆಸರಿನಲ್ಲಿ ಮುಚ್ಚಬಾರದು, ಒತ್ತಾಯಪೂರ್ವಕವಾಗಿ ಯಾವುದೇ ಹಳ್ಳಿಯ ಶಿಕ್ಷಕರನ್ನು ವರ್ಗಾವಣೆ ಮಾಡಬಾರದು, ಪ್ರತಿಯೊಂದು ಸರ್ಕಾರಿ ಶಾಲೆಗೂ ಅಗತ್ಯವಿರುವಷ್ಟು ಖಾಯಂ ಶಿಕ್ಷಕರನ್ನು ನೇಮಕ ಮಾಡಿ, ಮೂಲಭೂತಸೌಕರ್ಯಗಳನ್ನು ಒದಗಿಸಿ, ಬಲಪಡಿಸಲು ಲಿಖಿತ ಭರವಸೆ ನೀಡಬೇಕು ಎಂದು ಆಗ್ರಹಿಸಿದರು.

ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಿಗೆ ಕುತ್ತು ತಂದಿರುವ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರುದ್ಧ ಗ್ರಾಮಸ್ಥರ ಆಕ್ರೋಶ:

“ಸರ್ಕಾರದ ಈ ನೀತಿ ‘ತಂದೆ ಊಟ ಕೊಟ್ಟು, ತಾಯಿ ತಟ್ಟೆ ಕಿತ್ಕೊಂಡ ಹಾಗೆ’ ಇದೆ. ಒಂದು ಕೈಯಲ್ಲಿ ಉಚಿತ ಬಸ್, ಹೈಟೆಕ್ ಶಾಲೆ ಅಂತ ಆಸೆ ತೋರಿಸಿ, ಇನ್ನೊಂದು ಕೈಯಲ್ಲಿ ನಮ್ಮ ಕಣ್ಣೆದುರಿನ ಹಳ್ಳಿಯ ಶಾಲೆಯನ್ನೇ ಕಿತ್ತುಕೊಳ್ಳಲಾಗುತ್ತಿದೆ. ಈ ನಿಯೋಗ ಕೇವಲ ಆರಂಭವಷ್ಟೇ; ನಮ್ಮ ಕ್ಲಸ್ಟರ್ ವ್ಯಾಪ್ತಿಯ ಯಾವುದೇ ಒಂದು ಶಾಲೆಯನ್ನು ಮುಚ್ಚಲು ನಾವು ಯಾವುದೇ ಕಾರಣಕ್ಕೂ ಬಿಡುವುದಿಲ್ಲ”- ತಿಮ್ಮಯ್ಯ, ಮುದುಗೆರೆ ಗ್ರಾಮಸ್ಥರು.

“ಇಂದು ನಮ್ಮ ಹಳ್ಳಿಗಳ ಸರ್ಕಾರಿ ಶಾಲೆಗಳು ಮುಚ್ಚಿ ಹೋದರೆ, ನಮ್ಮ ಮಕ್ಕಳ ಭವಿಷ್ಯವೇ ಸಂಪೂರ್ಣವಾಗಿ ನಾಶವಾಗುತ್ತದೆ. 5 ರಿಂದ 6 ಕಿಲೋಮೀಟರ್ ದೂರದಲ್ಲಿರುವ ಶಾಲೆಗಳನ್ನು ಒಟ್ಟಿಗೆ ವಿಲೀನಗೊಳಿಸುವ ಈ ಅವೈಜ್ಞಾನಿಕ ಕೆಪಿಎಸ್ ನೀತಿಯನ್ನು ಸರ್ಕಾರ ತಕ್ಷಣವೇ ರದ್ದುಗೊಳಿಸಬೇಕು”- ನರಸಿಂಹಯ್ಯ, ರಂಗಪ್ಪನಪಾಳ್ಯ ಗ್ರಾಮಸ್ಥರು.

ಕಛೇರಿಯ ಮುಂದೆ ಪ್ರತಿಭಟನೆ ಮಾಡಿದ ನಂತರ ಕ್ಷೇತ್ರ ಶಿಕ್ಷಣಾಧಿಕಾರಿ ಇಲ್ಲದ ಕಾರಣ ಕಛೇರಿಯ ನಿರ್ವಾಹಕರು ಬಂದು ಗ್ರಾಮಸ್ಥರ ಮನವಿಯನ್ನು ಸ್ವಿಕರಿಸಿ ಮಾತನಾಡಿದರು, “ ಈ ಯೋಜನೆಯನ್ನು ಮರು ಪರಿಶೀಲನೆ ಮಾಡಲು ಹಾಗು ಯಾವುದೇ ಗ್ರಾಮದ ಸರ್ಕಾರಿ ಶಾಲೆಯನ್ನು ಮುಚ್ಚದೆ ಇರಲು ಈ ನಿಮ್ಮಯ ಮನವಿಯನ್ನು ಮೇಲದಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ತಲುಪಿಸುತ್ತೇವೆ ಎಂದು 6 ಹಳ್ಳಿಗಳಿಂದ ನೆರೆದಿದ್ದ 100ಕ್ಕೂ ಹೆಚ್ಚು ಗ್ರಾಮಸ್ಥರ ಮುಂದೆ ಹೇಳಿದರು.

ಇದನ್ನು ಓದಿದ್ದೀರಾ..? ಕೋಲಾರ | ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಅಗತ್ಯ ದಾಖಲೆಗಳನ್ನು ರಾಜ್ಯ ಸರಕಾರ ಜನತೆಗೆ ಒದಗಿಸುವಂತೆ ಸಿಪಿಐಎಂ ಆಗ್ರಹ

ಈ ನಿಯೋಗದಲ್ಲಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಚಿಕ್ಕಬಳ್ಳಾಪುರ ಜಿಲ್ಲೆಯ ಉಪಾಧ್ಯಕ್ಷರಾದ ಕೃಷ್ಣ, ಸದಸ್ಯರುಗಳಾದ: ಐಶ್ವರ್ಯ , ನವಾಜ್ , ಕಿರಣ್, ಮುದುಗೆರೆಯ ತಿಮಯ್ಯ, ಜಗದೀಶ್, ಬಸವರಾಜ್, ರಾಜಶೇಖರ್, ಹಳೇಉಪ್ಪಾರಹಳ್ಳಿಯ ಸಿದ್ದರೆಡ್ಡಿ, ಅಜ್ಜಪ್ಪ, ಮಹಾಲಕ್ಷ್ಮಿ, ಭಾರತಿ, ಬಂದರಹಳ್ಳಿಯ ಗಂಗಾಧರ, ಮಂಜುನಾಥ, ಗಂಗಾಧರ, ರಂಗಪ್ಪನಪಾಳ್ಯದ ರಂಗಸ್ವಾಮಿ, ನರಸಿಂಹ, ಗುರಪ್ಪನಹಳ್ಳಿಯ ಹನುಮಂತ, ಲೊಕೇಶ್, ಹಾಗೂ ಭಕ್ತರಹಳ್ಳಿಯ ರಂಗಪ್ಪ, ಚೌಡಯ್ಯ, ಶೋಭಾ, ಶಿಲ್ಪ, ಶೈಲಾ, ಮೋಹನ್, ಹಾಗೂ ರಾಘವೇಂದ್ರ, ಕಾರ್ಮಿಕ ಮುಖಂಡ ಹನುಮೇಶ್, ಶ್ರೀಕಾಂತ ಉಪಸ್ಥಿತರಿದ್ದರು.

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಂತಾಮಣಿ | ನಗರಸಭೆಯ ಏಕಾಏಕಿ ನಿರ್ಧಾರಕ್ಕೆ ಬಡವರ ಬದುಕು ಅಯೋಮಯ : ಪತ್ರಿಕಾಗೋಷ್ಠಿ ಯಲ್ಲಿ ಮೊಹಮ್ಮದ್ ಶಫೀಕ್ ಕಿಡಿ

ನಗರದ ಐಡಿಎಸ್ ಎಂಟಿ ಕಾಂಪ್ಲೆಕ್ಸ್ ಮಳಿಗೆಗಳ ತೆರವಿಗೆ ಸಂಬಂಧಿಸಿದಂತೆ ಮಾಜಿ ನಗರಸಭಾ...

ಬಾಗೇಪಲ್ಲಿ | ಎಸ್ಟಿ ಸಮುದಾಯದ 16 ಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ಸಲಕರಣೆ ವಿತರಣೆ

ರೈತರಿಗೆ ಕೊಡುವ ಸರ್ಕಾರಿ ಸೌಲಭ್ಯಗಳಲ್ಲಿ ದಲ್ಲಾಳಿಗಳು, ಮುಖಂಡರು ಪಾಲುದಾರರು ಆಗಬಾರದೆಂಬ ಉದ್ದೇಶಕ್ಕಾಗಿ...

​ಚಿಂತಾಮಣಿ |ಕೆಆರ್‌ಎಸ್ ಪಕ್ಷದ ವತಿಯಿಂದ ಸರ್ವ ಸದಸ್ಯರ ಸಭೆ – ಪಕ್ಷದ ಸಂಘಟನೆಗೆ ಒತ್ತು

ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ(ಕೆಆರ್‌ಎಸ್)ಪಕ್ಷದ ವತಿಯಿಂದ ರಾಜ್ಯಾಧ್ಯಕ್ಷರಾದ ದೀಪಕ್...

ಚಿ೦ತಾಮಣಿ |ಸರ್ಕಾರಿ ಕೆರೆ ಮಣ್ಣು ಕೋಳಿ ಫಾರಂ ಪಾಲು, ಗ್ರಾಮಸ್ಥರ ಆಕ್ರೋಶ

ನಗರದ ಅಭಿವೃದ್ಧಿ ಹಾಗೂ ಕ್ರೀಡಾಂಗಣ ನಿರ್ಮಾಣದ ಹೆಸರಿನಲ್ಲಿ ಚಿಂತಾಮಣಿ ನಗರಸಭೆ ಪೌರಾಯುಕ್ತ...