ಚಿ೦ತಾಮಣಿ |ಸರ್ಕಾರಿ ಕೆರೆ ಮಣ್ಣು ಕೋಳಿ ಫಾರಂ ಪಾಲು, ಗ್ರಾಮಸ್ಥರ ಆಕ್ರೋಶ

Date:

ನಗರದ ಅಭಿವೃದ್ಧಿ ಹಾಗೂ ಕ್ರೀಡಾಂಗಣ ನಿರ್ಮಾಣದ ಹೆಸರಿನಲ್ಲಿ ಚಿಂತಾಮಣಿ ನಗರಸಭೆ ಪೌರಾಯುಕ್ತ ಜಿ.ಎನ್.ಚಲಪತಿ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಮಾಡಿಕೆರೆ ಗ್ರಾಮದ ವ್ಯಾಪ್ತಿಯ ಸರ್ಕಾರಿ ಕೆರೆಯ ಮಣ್ಣನ್ನು ಅಕ್ರಮವಾಗಿ ತಮ್ಮ ವೈಯಕ್ತಿಕ ಕೋಳಿ ಫಾರಂಗೆ ಸಾಗಿಸುತ್ತಿದ್ದಾರೆಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ.

- Advertisement -

ನಗರದ ಸೊಣ್ಣಶೆಟ್ಟಿಹಳ್ಳಿ ಸಮೀಪದ ಕ್ರಿಕೆಟ್ ಸ್ಟೇಡಿಯಂ ಅಭಿವೃದ್ಧಿಗಾಗಿ ಮಣ್ಣು ಸಾಗಿಸಲಾಗುತ್ತಿದೆ ಎಂಬ ಸೋಗಿನಲ್ಲಿ ಈ ಅಕ್ರಮ ನಡೆಯುತ್ತಿದೆ ಎನ್ನಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘Epstein’ ವಿವಾದದ ನಡುವೆಯೂ ಹರದೀಪ್ ಪುರಿಗೆ ಮಣೆ: ಸಿಖ್...

'Epstein files' ವಿವಾದವು ಹರದೀಪ್ ಸಿಂಗ್ ಪುರಿ ಅವರ ರಾಜಕೀಯ ಬದುಕಿನಲ್ಲಿ ಸಣ್ಣದೊಂದು ಬಿರುಗಾಳಿ ಎಬ್ಬಿಸಿದ್ದು ಸುಳ್ಳಲ್ಲ. ವಿರೋಧ ಪಕ್ಷಗಳ ಟೀಕೆಗಳು ಮತ್ತು ನೈತಿಕ ಹೊಣೆಗಾರಿಕೆಯ ಪ್ರಶ್ನೆಗಳು ಅವರನ್ನು ಸಂಪುಟದಿಂದ ಹೊರಗಟ್ಟುವ ಹಂತಕ್ಕೆ...

ಅಮೆರಿಕದಲ್ಲಿ ನೋಂದಾಯಿಸಿಕೊಂಡ RSS Friends; RSS ಜೊತೆ ಮೌಖಿಕ...

RSS Friends ಎಂಬ ಸಂಘಟನೆಯು ಅಮೆರಿಕದಲ್ಲಿ ಆರ್‌ಎಸ್‌ಎಸ್‌ನ ವಿದೇಶಿ ಏಜೆಂಟ್ ಆಗಿ ನೋಂದಾಯಿಸಿಕೊಂಡಿದೆ. ತನ್ನ ಉದ್ದೇಶಿತ ಚಟುವಟಿಕೆಗಳು ಮುಖ್ಯವಾಗಿ ಮಾಹಿತಿ ಪ್ರಸಾರ, ಶೈಕ್ಷಣಿಕ ಕಾರ್ಯಗಳು, ಸಾರ್ವಜನಿಕ ಸಂಪರ್ಕ ಮತ್ತು ಸಮುದಾಯದೊಂದಿಗಿನ ತೊಡಗಿಸಿಕೊಳ್ಳುವಿಕೆಯನ್ನು ಒಳಗೊಂಡಿರುತ್ತವೆ...

ಕುರ್ಚಿಗಾಗಿ ನಿಲುವುಗಳೇ ಬಲಿ; ವಿಶ್ವಾಸಾರ್ಹತೆಯನ್ನೇ ಕಳೆದುಕೊಳ್ಳುತ್ತಿರುವ ಎಚ್‌ಡಿಕೆ

ಕರ್ನಾಟಕ ರಾಜಕಾರಣದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಷ್ಟು ವೇಗವಾಗಿ ತಮ್ಮ ರಾಜಕೀಯ ನಿಲುವುಗಳನ್ನು ಬದಲಿಸಿಕೊಳ್ಳುವ ಮತ್ತೊಬ್ಬ ನಾಯಕ ಸಿಗುವುದು ಕಷ್ಟ. ನಿನ್ನೆ ವಿರೋಧಿಸಿದವರನ್ನು ಇಂದು ಸಮರ್ಥಿಸಿಕೊಳ್ಳುವುದು, ಹಿಂದೆ ಜೊತೆಗಿದ್ದವರನ್ನೇ ಇಂದು ದೂರುವುದು,...

ಕ್ರೀಡಾಂಗಣದ ಹೆಸರಿನಲ್ಲಿ ಸಾಗುವ ಪ್ರತಿ ಐದು ಟಿಪ್ಪರ್‌ಗಳಲ್ಲಿ ಮೂರು ನಗರದತ್ತ ಹೋದರೆ,ಉಳಿದ ಎರಡು ಟಿಪ್ಪರ್‌ಗಳು ಸದ್ದಿಲ್ಲದೆ ಪೌರಾಯುಕ್ತರ ಖಾಸಗಿ ಕೋಳಿ ಫಾರಂ ಸೇರುತ್ತಿವೆ ಎಂಬುದು ಪ್ರತಿಭಟನಾಕಾರರ ನೇರ ದೂರು.ಈ ಬಗ್ಗೆ ಸ್ಥಳದಲ್ಲಿ ಆಕ್ರಮವನ್ನು ಪ್ರಶ್ನಿಸಿದ ಗ್ರಾಮಸ್ಥರಿಗೆ ಪೌರಾಯುಕ್ತರು ದರ್ಪ ಪ್ರದರ್ಶಿಸಿದ್ದಲ್ಲದೆ, ಚಿಂತಾಮಣಿಗೆ ಬನ್ನಿ,ನಿಮ್ಮ ಮೇಲೆ ಕೇಸು ಹಾಕಿ ಜೈಲಿಗೆ ಅಟ್ಟುತ್ತೇನೆಂದು ಬಹಿರಂಗವಾಗಿ ಬೆದರಿಕೆ ಹಾಕಿರುವುದು ಯುವಕರ ಹಾಗೂ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಇಡೀ ಕೃತ್ಯಕ್ಕೆ ನಗರಸಭೆಯ ಸರ್ಕಾರಿ ಜೆಸಿಬಿಯನ್ನೇ ಬಳಕೆ ಮಾಡಿಕೊಳ್ಳುತ್ತಿರುವುದು ಅಧಿಕಾರಿಗಳ ನೈತಿಕ ಪತನಕ್ಕೆ ಸಾಕ್ಷಿಯಂತಿದೆ.

ಗ್ರಾಮಸ್ಥರು ವಾಹನಗಳನ್ನು ತೆಡೆದು ವಿಚಾರಿಸಲು ಮುಂದಾದ ಕೂಡಲೇ ಜೆಸಿಬಿ ಸ್ಥಳದಿಂದ ಪರಾರಿಯಾಗಿದೆ. ಇನ್ನು ತಾಲ್ಲೂಕು ಅನುಮತಿ ಪಂಚಾಯಿತಿ ನೀಡಿರುವ ಪತ್ರದಲ್ಲಿ ಸಂಖ್ಯೆ ನಮೂದಿಸದಿರುವುದು ಯಾವುದೇ ವಾಹನಗಳ ಮಣ್ಣು ವಾಹನಗಳಿಗೆ ಯಾವುದೇ ಹಾಗೂ ಸಾಗಾಟಕ್ಕೆ ಬಳಸುತ್ತಿರುವ ಅಧಿಕೃತ ದಾಖಲೆಗಳಿಲ್ಲದಿರುವುದು ಈ ಅಕ್ರಮಕ್ಕೆ ಬಲವಾದ ಸಾಕ್ಷಿಯಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಮತ್ತೊಂದೆಡೆ.ನಗರದ ಸ್ವಚ್ಛತೆ ಕಾಪಾಡಬೇಕಾದ ಪೌರಕಾರ್ಮಿಕರನ್ನು ಪೌರಾಯುಕ್ತರು ತಮ್ಮ ಫಾರಂನ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆಂಬ ಆಘಾತಕಾರಿ ಆರೋಪವೂ ಕೇಳಿಬಂದಿದೆ ಅಭಿವೃದ್ಧಿಗಾಗಿ ಕ್ಷೇತ್ರದ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಅಹೋರಾತ್ರಿ ಶ್ರಮಿಸಿ ಅನುದಾನ ತರುತ್ತಿದ್ದರೆ,

ಇತ್ತ ಪೌರಾಯುಕ್ತರು ಇಂತಹ ಕೃತ್ಯಗಳ ಮೂಲಕ ಸಚಿವರ ಹೆಸರಿಗೆ ಕಳಂಕ ತರುವ ಕೆಲಸ ಮಾಡುತ್ತಿದ್ದಾರೆಂದು ಗ್ರಾಮಸ್ಥರು ದೂರಿದ್ದಾರೆ. ಪ್ರಶ್ನಿಸಿದವರ ಮೇಲೆ ಪೌರಾಯುಕ್ತರು ಬೆದರಿಕೆ ಹಾಕಿರುವುದರಿಂದ ತಮಗೆ ಏನೇ ಪ್ರಾಣಾಪಾಯವಾದಲ್ಲಿ ಚಲಪತಿ ಅವರೇ ನೇರ ಕಾರಣರಾಗಿದ್ದು,

ಈ ಸಂಬಂಧ ಅವರ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದಾಗಿ ನಿರ್ಧರಿಸಿದ್ದು,ಜಿಲ್ಲಾಧಿಕಾರಿಗಳು ಕೂಡಲೇ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಪೌರಾಯುಕ್ತರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಇದನ್ನು ಓದಿದ್ದೀರಾ..? ಕೋಲಾರ |ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರೋದು ಗೊತ್ತು, ನಮ್ಮನ್ನು ದೂರ ಮಾಡಿದ್ರೆ ಅಧಿಕಾರದಿಂದ ಇಳಿಸೋದು ಗೊತ್ತು

ಎಂ ಜಿ ರಾಜೇಶ್,ಮುಖಂಡ ಮಣಿಕಂಠ.ವಿ,ಪ್ರತಿಭಟನೆಯಲ್ಲಿ ಗ್ರಾಮ.ಪಂಚಾಯತಿ.ಮಾಜಿ ಸದಸ್ಯ ಹರೀಶ್,ಲಕ್ಷ್ಮಿರೆಡ್ಡಿ ಮುರಳಿ,ಶ್ರೀನಿವಾಸ್,ಎಂ.ಎಸ್.ಶ್ರೀನಾಥ್, ಸುದೀಪ್ ರೆಡ್ಡಿ,ನಂದೀಶ್,ಮಂಜುನಾಥ್,ಆರ್.ಎ.ನವೀನ್, ಮಂಜುನಾಥ್,ರೆಡ್ಡಿ,ಪ್ರಭಾಕರ್, ಮಲ್ಲಿರೆಡ್ಡಿ,ಚೌಡರೆಡ್ಡಿ,ಶಿವರಾಜ್, ಯುವರಾಜ್,ಎನ್.ವಿಜಯ್ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗೇಪಲ್ಲಿ | ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ಸಿಗದೆ ಮರೀಚಿಕೆ:ವೈದ್ಯರು ಮತ್ತು ಸಿಬ್ಬಂದಿ ನೇಮಕ ಮಾಡಿಲ್ಲ ಎಂಬುದು ಸಾರ್ವಜನಿಕರ ಆರೋಪ

ಪಟ್ಟಣದ ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆಯಿಂದ...

ಚಿಂತಾಮಣಿ | ನಗರಸಭೆಯ ಏಕಾಏಕಿ ನಿರ್ಧಾರಕ್ಕೆ ಬಡವರ ಬದುಕು ಅಯೋಮಯ : ಪತ್ರಿಕಾಗೋಷ್ಠಿ ಯಲ್ಲಿ ಮೊಹಮ್ಮದ್ ಶಫೀಕ್ ಕಿಡಿ

ನಗರದ ಐಡಿಎಸ್ ಎಂಟಿ ಕಾಂಪ್ಲೆಕ್ಸ್ ಮಳಿಗೆಗಳ ತೆರವಿಗೆ ಸಂಬಂಧಿಸಿದಂತೆ ಮಾಜಿ ನಗರಸಭಾ...

ಬಾಗೇಪಲ್ಲಿ | ಎಸ್ಟಿ ಸಮುದಾಯದ 16 ಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ಸಲಕರಣೆ ವಿತರಣೆ

ರೈತರಿಗೆ ಕೊಡುವ ಸರ್ಕಾರಿ ಸೌಲಭ್ಯಗಳಲ್ಲಿ ದಲ್ಲಾಳಿಗಳು, ಮುಖಂಡರು ಪಾಲುದಾರರು ಆಗಬಾರದೆಂಬ ಉದ್ದೇಶಕ್ಕಾಗಿ...

​ಚಿಂತಾಮಣಿ |ಕೆಆರ್‌ಎಸ್ ಪಕ್ಷದ ವತಿಯಿಂದ ಸರ್ವ ಸದಸ್ಯರ ಸಭೆ – ಪಕ್ಷದ ಸಂಘಟನೆಗೆ ಒತ್ತು

ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ(ಕೆಆರ್‌ಎಸ್)ಪಕ್ಷದ ವತಿಯಿಂದ ರಾಜ್ಯಾಧ್ಯಕ್ಷರಾದ ದೀಪಕ್...