ಅಲ್ಲಮನ ಅನನ್ಯ ಪದಪ್ರಯೋಗಗಳು | ಸಮ್ಯಕ್ ಜ್ಞಾನ 

Date:

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…

ಸಮ್ಯಕ್ ಜ್ಞಾನ
ಕೆಟ್ಟುದನರಸ ಹೋಗಿ ತಾನೆ ಕೆಟ್ಟಿತ್ತು ಹೇಳಲೆಂತೂ ಬಾರದು
ಕೇಳಲೆಂತೂ ಬಾರದು
ಎಂತಿರ್ದುದಂತೆ!
ಸಹಜ ಸ್ವಾನುಭಾವದ
ಸಮ್ಯಕ್ ಜ್ಞಾನವ ಅಜ್ಞಾನಿ ಬಲ್ಲನೆ ಗುಹೇಶ್ವರಾ?  

- Advertisement -

ವಚನಾರ್ಥ:
ಕೆಟ್ಟದುದನ್ನು ಹುಡುಕುತ್ತಾ ಹೋದರೆ ಮೊದಲು ಕೆಡುವವನು ತಾನೇ. ಒಳ್ಳೆಯದನ್ನು ಹುಡುಕುತ್ತಾ ಹೋದರೆ ಮೊದಲು ಒಳ್ಳೆಯದಾಗುವುದು ತನಗೇ. ಇದು ಸಹಜವಾದ ತರ್ಕ. ದೈವ ತನಗಿಂತ ಭಿನ್ನ ಅಂದುಕೊಂಡು ದೈವವನ್ನು ಹುಡುಕುತ್ತಾ ಹೋದರೆ ಮೊದಲು ಬಲಳುವವ ತಾನೇ. ದೈವ ತನ್ನೊಳಗೇ ನೆಲೆಸಿದೆ ಎಂದು ತಿಳಿದು ತನ್ನಲ್ಲಿ ತಾನು ಸತ್ಯದ ಶೋಧನೆ ಮಾಡುವವ ತಾನೇ ಮೊದಲು ದೈವತ್ವವನ್ನು ಪಡೆಯುತ್ತಾನೆ. ಈ ಪ್ರಕ್ರಿಯೆ ಇನ್ನೊಬ್ಬರಲ್ಲಿ ಹೇಳಲು ಬರುವಂತಹದಲ್ಲ. ಇನ್ನೊಬ್ಬರನ್ನು ಕೇಳಿ ತಿಳಿದುಕೊಳ್ಳುವಂತದಲ್ಲ. ಅದು ಹೇಗಿದೆಯೋ ಹಾಗೆಯೇ ಸಹಜವಾಗಿ ಸ್ವಂತವಾದ ಅನುಭಾವದಿಂದ ಅರಿತುಕೊಳ್ಳಬೇಕು. ಎಂತಿರ್ದುದಂತೆ!  ಶರಣನು ಈ ಸ್ಥಿತಿಯಲ್ಲಿ ಐಕ್ಯಸ್ಥಲದ ಆನಂದವನ್ನು ಅನುಭವಿಸುವ ಹಂತವನ್ನು ತಲುಪಿರುತ್ತಾನೆ. ಇದು ಸಹಜ ಸ್ವ ಅನುಭಾವದ ಸಮ್ಯಕ್ ಜ್ಞಾನದಿಂದ ಉಂಟಾಗುವ ಫಲಶೃತಿ. ಇದು ಅಜ್ಞಾನಿಗಳಿಗೆ ಅರ್ಥವಾಗುವುದಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

SIRನ ಒಳನೋಟ: ಸೇರ್ಪಡೆಗಿಂತ ಹೊರಗಿಡುವುದಕ್ಕೆ ಆದ್ಯತೆ ನೀಡಿದಾಗ ಏನಾಗುತ್ತದೆ?

SIR ಕರಡು ಪಟ್ಟಿಯಲ್ಲಿರುವ ಮತದಾರರ ಸಂಖ್ಯೆಯು ನೈಜ ವಯಸ್ಕ ಜನಸಂಖ್ಯೆಯ ಅಂದಾಜಿಗಿಂತ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿರುವುದಕ್ಕೆ ಕಾರಣವೇನು? ಈ ಕಾಣೆಯಾದ ಮತದಾರರೆಲ್ಲ ಯಾರು? ಅವರು ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದು ಹೇಗೆ?...

ಪದ ಪ್ರಯೋಗಾರ್ಥ:
ಸಮ್ಯಕ್ ಜ್ಞಾನ  ಅಂದರೆ ಸರಿಯಾದ ಮತ್ತು ಸಮರ್ಪಕವಾದ ಜ್ಞಾನ ಎಂದರ್ಥ. ಯಾವುದು ಒಪ್ಪು ಯಾವುದು ತಪ್ಪು ಎಂದು ತಿಳಿಯುವುದು ಸಹಜ ಜ್ಞಾನ. ಜ್ಞಾನವನ್ನು  ತಿಳಿಯದಿರುವುದು ಅಜ್ಞಾನ. ಜ್ಞಾನವನ್ನು ಸರಿಯಾಗಿ, ಸ್ಪಷ್ಟವಾಗಿ, ಸಂದೇಹವಿಲ್ಲದೆ ತಿಳಿಯುವುದು ಸಮ್ಯಕ್ ಜ್ಞಾನ. ಜಿನಧರ್ಮ ಪರಂಪರೆಯಲ್ಲಿ ಸಮ್ಯಕ್ ಜ್ಞಾನಕ್ಕೆ ವಿಶೇಷವಾದ ಸ್ಥಾನವಿದೆ. ಸರಿಯಾದ ದರ್ಶನ, ಸರಿಯಾದ ಜ್ಞಾನ ಮತ್ತು ಸರಿಯಾದ ಚಾರಿತ್ರ್ಯಗಳು ಮೋಕ್ಷ ಮಾರ್ಗಕ್ಕೆ ಸೋಪಾನಗಳೆಂದು ಜೈನ ಧರ್ಮ ಬೋಧಿಸುತ್ತದೆ. ಹತ್ತನೇ ಶತಮಾನದಲ್ಲಿ ಆದಿಕವಿ ಪಂಪ ಬರೆದ ಕನ್ನಡದ ಜೈನಕಾವ್ಯ ಆದಿಪುರಾಣದಲ್ಲಿ ಸಮ್ಯಕ್ ಜ್ಞಾನದ  ಪ್ರಸ್ತಾಪವಿದೆ. ಹನ್ನೆರಡನೇ ಶತಮಾನದಲ್ಲಿ ಶರಣರು ರಚಿಸಿದ ವಚನ ಸಾಹಿತ್ಯದಲ್ಲಿ ವಿವಿಧ ಶರಣರು ತಮ್ಮ ವಚನಗಳಲ್ಲಿ ಸಮ್ಯಕ್ ಜ್ಞಾನ ಎಂಬ ಪದಪ್ರಯೋಗ ಮಾಡಿದ್ದಾರೆ. ಈ ವಚನದಲ್ಲಿ ಅಲ್ಲಮ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದು ಬರೀ ಸಮ್ಯಕ್ ಜ್ಞಾನವಲ್ಲ. ಸಹಜ ಸ್ವಾನುಭಾವದ ಸಮ್ಯಕ್ ಜ್ಞಾನ. ಜ್ಞಾನವು ಸಮರ್ಪಕವಾಗಿರಬೇಕು. ಜ್ಞಾನದಲ್ಲಿ ಸಹಜತೆ ಇರಬೇಕು. ಸಮ್ಯಕ್ ಜ್ಞಾನವು ಯಾರೋ ಹೇಳಿಕೊಟ್ಟ ಗಿಳಿಪಾಠವಾಗದೆ ಸ್ವ ಅನುಭಾವದಿಂದ ಕೂಡಿರಬೇಕು. ಸಮ್ಯಕ್ ಜ್ಞಾನ ಈ ವಚನದಲ್ಲಿ ಅಲ್ಲಮ ಬಳಸಿರುವ ಅನನ್ಯ ಪದ.

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಒಡಲು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅಗ್ನಿಸ್ತಂಭದ ರಕ್ಷೆ

ಶಿವಕುಮಾರ್
ಹರಿಹರ ಶಿವಕುಮಾರ್
+ posts

ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಹರಿಹರ ಶಿವಕುಮಾರ್
ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅವಳ ಕಣ್ಣೋಟ | ಲಿಪ್‌ಸ್ಟಿಕ್‌ನ ಬಣ್ಣದ ಕೆಳಗೆ ಹುದುಗಿದ ಕನಸುಗಳು

ಭಾರತೀಯ ಚಿತ್ರರಂಗಕ್ಕೆ ಮಹಿಳೆಯ ಆಸೆ, ಲೈಂಗಿಕತೆ, ದಾಂಪತ್ಯದೊಳಗಿನ ಅಸಮಾನತೆ ಮತ್ತು ಸ್ವಾತಂತ್ರ್ಯದ...

ಕಾಲಮಾನ | ದೇಹವೇ ನೈತಿಕ ಹೋರಾಟದ ತಾಣವಾದಾಗ…

ಉಪವಾಸ ಸತ್ಯಾಗ್ರಹ ಬಲಪ್ರಯೋಗದ ಬದಲು ಸ್ವಯಂಪ್ರೇರಿತ ವೇದನೆ/ಯಾತನೆಯನ್ನು ಅವಲಂಬಿಸುತ್ತದೆ. ಅದು ಮಣಿಸುವುದಕ್ಕಿಂತಲೂ...

ದಿಲ್ಲಿಮಾತು | ಟ್ರೋಲ್ ಮಾಡುವುದರಿಂದ ವಾಸ್ತವ ಬದಲಾಗದು!

“ಅತ್ಯಾಚಾರಕ್ಕೊಳಗಾದ ಮಹಿಳೆ ಬದುಕಿ ಉಳಿದರೆ, ಅವಳ ಗೌರವ ಕಡಿಮೆ ಆಗುತ್ತದೆಯೇ ?...