ಸಿನಿ ಪ್ರಿಯರ ಮನಸ್ಸು ಗೆದ್ದ ಪೃಥ್ವಿರಾಜ್ ನಟನೆಯ ನೈಜ ಕಥೆಯಾಧರಿಸಿದ ‘ಆಡು ಜೀವಿತಂ’ ಸಿನಿಮಾ

Date:

ಬಹುನಿರೀಕ್ಷಿತ ಮಲಯಾಳಂ ಚಿತ್ರ ‘ಆಡು ಜೀವಿತಂ’ ಅಥವಾ ‘ದಿ ಗೋಟ್‌ಲೈಫ್’ ಮಾರ್ಚ್ 28ರಂದು ಬಿಡುಗಡೆಯಾಗಿದ್ದು, ಸಿನಿಪ್ರಿಯರ ಮನಸ್ಸು ಗೆಲ್ಲುವ ಮೂಲಕ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ. ‘ಆಡುಜೀವಿತಂ’ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ತೆರೆ ಕಂಡಿದ್ದು, ನೈಜ ಕಥೆಯಾಧರಿಸಿದ ಈ ಸಿನಿಮಾದಲ್ಲಿ ನಟ ಪೃಥ್ವಿರಾಜ್ ಸುಕುಮಾರನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಬರೋಬ್ಬರಿ 16 ವರ್ಷಗಳ ಹಿಂದೆ ಪ್ರಾರಂಭವಾದ ಸಿನಿಮಾ ಇದು. ಈ ಸಿನಿಮಾಕ್ಕಾಗಿ ಪೃಥ್ವಿರಾಜ್ ಸುಕುಮಾರನ್, ನಿರ್ದೇಶಕ ಬ್ಲೆಸ್ಲಿ ಹಾಗೂ ಇಡೀ ಚಿತ್ರತಂಡ ಸಾಕಷ್ಟು ಕಷ್ಟಪಟ್ಟಿದೆ. ಸಿನಿಮಾ ಬಿಡುಗಡೆಗೆ ಮುನ್ನ ಸೆಲೆಬ್ರಿಟಿಗಳಿಗಾಗಿ ಆಯೋಜಿಸಲಾಗಿದ್ದ ಪ್ರೀಮಿಯರ್ ಶೋನಲ್ಲಿ ಸಿನಿಮಾ ನೋಡಿದ ದಿಗ್ಗಜರು ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಂಡಿದ್ದರು.

ಕನ್ನಡ ಸೇರಿದಂತೆ ಇನ್ನೂ ಕೆಲವು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಿದ್ದ ‘ಆಡುಜೀವಿತಂ’ ಸಿನಿಮಾ ಮೊದಲ ದಿನ ಏಳು ಕೋಟಿ ರೂಪಾಯಿ ಗಳಿಕೆ ಮಾಡಿದೆ. ಮಲಯಾಳಂ ಸಿನಿಮಾವೊಂದಕ್ಕೆ ಇದು ಉತ್ತಮ ಆರಂಭ ಎಂದು ಸಿನಿಮಾ ವಿಮರ್ಶಕರು ಅಭಿಪ್ರಾಯಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

‘ಆಡುಜೀವಿತಂ’ ಸಿನಿಮಾ ಕರ್ನಾಟಕ ಹಾಗೂ ತೆಲುಗು ರಾಜ್ಯಗಳಿಂದ ತಲಾ 40 ಲಕ್ಷ ರೂಪಾಯಿ ಗಳಿಕೆ ಮಾಡಿದೆ. ತಮಿಳುನಾಡಿನಲ್ಲಿ 55 ಲಕ್ಷ ಗಳಿಸಿದ್ದರೆ ಹಿಂದಿಯಿಂದ 10 ಲಕ್ಷ ರೂಪಾಯಿ ಗಳಿಸಿದೆ. ಸಿನಿಮಾ ಗಲ್ಫ್ ರಾಷ್ಟ್ರಗಳು ಸೇರಿದಂತೆ ಇನ್ನೂ ಕೆಲವು ಕಡೆ ಬಿಡುಗಡೆಯಾಗಿದ್ದು, ಅಲ್ಲಿಯೂ ಸಹ ಉತ್ತಮ ಗಳಿಕೆ ಮಾಡಿದೆ. ವಿಶ್ವದೆಲ್ಲೆಡೆಯ ಲೆಕ್ಕಾಚಾರದ ಪ್ರಕಾರ ಸಿನಿಮಾವು ₹16.7 ಕೋಟಿ ಕಲೆಕ್ಷನ್ ಮಾಡಿದೆ.

2008ರಲ್ಲಿಯೇ ಚಿತ್ರ ನಿರ್ಮಾಣ ಪ್ರಕ್ರಿಯೆ ಪ್ರಾರಂಭವಾದರೂ, ಮಾರ್ಚ್ 2018ರಿಂದ ಜುಲೈ 2022ರವರೆಗೆ ಚಿತ್ರೀಕರಣವನ್ನು ವಿವಿಧ ಹಂತಗಳಲ್ಲಿ ಪ್ರಾರಂಭಿಸಿ ಮುಗಿಸಲಾಗಿದೆ. ವಾಡಿ ರಮ್, ಜೋರ್ಡನ್ ಮತ್ತು ಅಲ್ಜೀರಿಯಾದ ಸಹಾರಾ ಮರುಭೂಮಿಗಳು ಹಾಗೂ ಹೆಚ್ಚುವರಿ ದೃಶ್ಯಗಳನ್ನು ಕೇರಳದಲ್ಲಿಯೂ ಚಿತ್ರೀಕರಿಸಲಾಗಿದೆ. ಒಟ್ಟಾರೆ ಇಡೀ ಚಿತ್ರ ತಂಡ 16 ವರ್ಷಗಳ ಕಾಲ ಚಿತ್ರಕ್ಕಾಗಿ ಶ್ರಮಿಸಿರುವುದು ವಿಶೇಷ.

‘ಆಡುಜೀವಿತಂ’ಗಾಗಿ ಪೃಥ್ವಿರಾಜ್ ಸುಕುಮಾರನ್ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಹೀಗಾಗಿಯೇ ಚಿತ್ರ ಪ್ರೇಕ್ಷಕರ ಮನಸ್ಸು ಗೆದ್ದಿದೆ. ಸ್ವತಃ ಚಿತ್ರಕ್ಕೆ ಕಥೆ ಬರೆದಿರುವ ರಾಷ್ಟ್ರೀಯ ಪ್ರಶಸ್ತಿ ವಿಜೇತ ಬ್ಲೆಸ್ಸಿ ನಿರ್ದೇಶನದ ಜೊತೆಗೆ ಸಹ-ನಿರ್ಮಾಣವನ್ನೂ ಮಾಡಿದ್ದಾರೆ. ಸಹ-ನಿರ್ಮಾಣ ಕೆಲಸ ಭಾರತ ಮತ್ತು ಅಮೆರಿಕದ ಕಂಪನಿಗಳನ್ನು ಒಳಗೊಂಡಿದೆ.

ಮಲಯಾಳಂ ಸಾಹಿತ್ಯ ಪ್ರಪಂಚದಲ್ಲಿ ಅತ್ಯಂತ ಜನಪ್ರಿಯವಾದ ಬೆಸ್ಟ್ ಸೆಲ್ಲರ್‌ಗಳಲ್ಲಿ ಒಂದಾದ, ಹೆಸರಾಂತ ಬರಹಗಾರ ಬೆನ್ಯಾಮಿನ್ ಬರೆದಿರುವ ‘ಆಡುಜೀವಿತಂ’ ಕಾದಂಬರಿ ಆಧಾರಿತ ಈ ಚಿತ್ರ, 90ರ ದಶಕದ ಆರಂಭದಲ್ಲಿ ಕೇರಳದಿಂದ ವಿದೇಶದಲ್ಲಿ ಅದೃಷ್ಟ ಅರಸುತ್ತಾ ವಲಸೆ ಹೋದ ಯುವಕ ನಜೀಬ್‌ ಎಂಬಾತನ ಜೀವನಕಥೆ ಹೇಳುತ್ತದೆ.

ಮರುಭೂಮಿಯಲ್ಲಿ ಮೇಕೆ ಮೇಯಿಸುವುದಕ್ಕೆ ಬಲವಂತದಿಂದ ಜೀತದಾಳಾಗಿ ಒಳಗಾಗುವ ಮಲಯಾಳಿ ವಲಸೆ ಕಾರ್ಮಿಕ ನಜೀಬ್ ಪಾತ್ರವನ್ನು ಪೃಥ್ವಿರಾಜ್ ಮಾಡಿದ್ದಾರೆ. ನಜೀಬ್​ ಅನುಭವಿಸುವ ಸಂಕಷ್ಟ, ನೋವು, ಹತಾಶೆ ಮತ್ತು ಬಂಧನದಿಂದ ತಪ್ಪಿಸಿಕೊಳ್ಳಲು ಮಾಡುವ ಹೋರಾಟದ ಕಥೆ ಕಣ್ಣೀಗೆ ಕಟ್ಟುವಂತೆ ಬ್ಲೆಸ್ಸಿ ಹೆಣೆದಿದ್ದಾರೆ. ಕಮಲ್ ಹಾಸನ್, ಮಣಿರತ್ನಂ ಸೇರಿದಂತೆ ಚಿತ್ರಕ್ಕೆ ಅನೇಕ ಸ್ಟಾರ್ ನಿರ್ದೆಶಕರು,  ನಟ-ನಟಿರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

ಸೈನು (ನಜೀಬ್ ಪತ್ನಿ) ಆಗಿ ಅಮಲಾ ಪೌಲ್, ಇಬ್ರಾಹಿಂ ಖಾದರಿಯಾಗಿ ಹಾಲಿವುಡ್​ ನಟ ಜಿಮ್ಮಿ ಜೀನ್ ಲೂಯಿಸ್, ಉಮ್ಮಾ (ನಜೀಬ್ ತಾಯಿ) ಆಗಿ ಶೋಭಾ ಮೋಹನ್, ಹಕೀಮ್ ಆಗಿ ಕೆ.ಆರ್.ಗೋಕುಲ್, ಖಫೀಲ್ ಆಗಿ ತಾಲಿಬ್ ಅಲ್ ಬಲೂಶಿ, ರಿಕ್ ಅಬಿ ನಟಿಸಿದ್ದಾರೆ. ಆಸ್ಕರ್​ ವಿಜೇತ ಎ.ಆರ್.ರೆಹಮಾನ್ ಸಂಗೀತ ನಿರ್ದೇಶನ ಮಾಡಿರುವುದು ಮತ್ತೊಂದು ವಿಶೇಷ. ರಸೂಲ್ ಪೂಕುಟ್ಟಿ ಮತ್ತು ಸುನಿಲ್‌ ಕೆ.ಎಸ್‌. ಚಿತ್ರದ ಅದ್ಭುತ ದೃಶ್ಯಗಳನ್ನು ಸೆರೆ ಹಿಡಿದಿದ್ದು, ಶ್ರೀಕರ್ ಪ್ರಸಾದ್ ಸಂಕಲನ ಮಾಡಿದ್ದಾರೆ. ಈ ಸಿನಿಮಾದ ನಟನೆಗಾಗಿ ಪೃಥ್ವಿರಾಜ್ ಅವರಿಗೆ ರಾಷ್ಟ್ರಪ್ರಶಸ್ತಿ ಸಿಗಲೆಂದು ಸಿನಿಮಾ ಪ್ರಿಯರು ಹಾರೈಸಿದ್ದಾರೆ.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘RCB ಸೋಲಿಗೆ ಅಶ್ವಿನಿ ಪುನೀತ್ ರಾಜ್​ಕುಮಾರ್ ಕಾರಣ’ ಎಂದು ಅವಹೇಳನಕಾರಿ ಟ್ವೀಟ್: ಕಮಿಷನರ್‌ಗೆ ದೂರು

ಕನ್ನಡ ಚಿತ್ರರಂಗದ ನಟ, ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ...

ಅಕ್ರಮವಾಗಿ ಮಗು ದತ್ತು ಪಡೆದ ಪ್ರಕರಣ: ರೀಲ್ಸ್‌ ಸ್ಟಾರ್ ಸೋನು ಶ್ರೀನಿವಾಸ್ ಗೌಡಗೆ ಜಾಮೀನು

ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ, ಬಿಗ್...

ಪ್ರಕಾಶ್ ರಾಜ್ ಬಿಜೆಪಿ ಸೇರ್ಪಡೆ ವದಂತಿ: ಬಹುಭಾಷಾ ನಟ ಹೇಳಿದ್ದೇನು?

ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ರಾಜಕೀಯ ಮುಖಂಡರು ಆ ಪಕ್ಷದಿಂದ ಈ ಪಕ್ಷಕ್ಕೆ...

ಸಿನಿಮಾ ವಿಮರ್ಶೆ | ನೋಡುಗನನ್ನು ನಜೀಬನ ಮರುಭೂಮಿಯ ಆಡಿನ ದೊಡ್ಡಿಗೆ ಕರೆದೊಯ್ಯುವ ‘ಆಡುಜೀವಿತಂ’

ಮಲಯಾಳಂ ಸಾಹಿತ್ಯ ಜಗತ್ತಿನಲ್ಲಿ ದಾಖಲೆ ನಿರ್ಮಿಸಿದ ಕಾದಂಬರಿ 'ಆಡುಜೀವಿತಂ'(ಆಡು ಜೀವನ). ಇದು...