ಬಹುನಿರೀಕ್ಷಿತ ‘ಕಿಚ್ಚ 46’ ಟೀಸರ್ ಬಿಡುಗಡೆ | ರಕ್ತದೋಕುಳಿಯ ಮುನ್ಸೂಚನೆ

Date:

ವಿ. ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕಿಚ್ಚ 46 ಸಿನಿಮಾ ನಿರ್ಮಾಣ

- Advertisement -

ವಿಜಯ್ ಕಾರ್ತಿಕೇಯನ್ ಅವರ ಚೊಚ್ಚಲ ನಿರ್ದೇಶನದ ಚಿತ್ರ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ನಟರಾಜ್ ಹುಳಿಯಾರ್ ಅವರ ‘ಡಾಕ್ಟರ್...

ಇತ್ತೀಚೆಗೆ ಲೋಕಾರ್ಪಣೆಗೊಂಡ ನಟರಾಜ್ ಹುಳಿಯಾರ್ ಅವರ 'ಡಾಕ್ಟರ್ ಸಾಹೇಬ್- ರಾಮಮನೋಹರ ಲೋಹಿಯಾ ಜೀವನಯಾನ' ಕೃತಿಯಿಂದ ಆಯ್ದ 'ಲೋಹಿಯಾ ಮತ್ತು ಕರ್ನಾಟಕ' ಅಧ್ಯಾಯ, ಭಾನುವಾರದ ವಿರಾಮದ ಓದಿಗಾಗಿ... 'ಮಾರ್ಕ್ಸ್, ಗಾಂಧಿ ಅಂಡ್ ಸೋಷಲಿಸಂ' ಪುಸ್ತಕಕ್ಕೆ ಮುನ್ನುಡಿ...

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

ಒಂದು ವರ್ಷದ ದೀರ್ಘ ಅವಧಿಯ ನಂತರ ನಟ ಸುದೀಪ್ ಅವರ ಹೊಸ ಸಿನಿಮಾದ ‘ಕಿಚ್ಚ 46’ ಹೆಸರಿನ ಟೀಸರ್ ಭಾನುವಾರ (ಜುಲೈ 2) ಬಿಡುಗಡೆಯಾಗಿದೆ.

ವಿಕ್ರಾಂತ್ ರೋಣ ಸಿನಿಮಾ ಬಳಿಕ ನಟ ಸುದೀಪ್ ಕೆಲ ಕಾಲ ವಿರಾಮ ಪಡೆದಿದ್ದರು. ಇತ್ತೀಚೆಗೆ ಹೊಸ ಸಿನಿಮಾ ಕುರಿತು ಮಾಹಿತಿ ಹಂಚಿಕೊಳ್ಳುವುದಾಗಿ ಹೇಳಿಕೊಂಡಿದ್ದರು. ಸುದೀಪ್ ಸಿನಿಮಾ ಮಾಹಿತಿ ಬಗ್ಗೆ ಎದುರು ನೋಡುತ್ತಿದ್ದ ಅಭಿಮಾನಿಗಳ ಕುತೂಹಲವನ್ನು ಈ ಟೀಸರ್ ತಣಿಸಿದೆ.

ಕಿಚ್ಚ 46 ಹೆಸರಿನ ಚಿತ್ರ ಇತ್ತೀಚೆಗೆ ಸೆಟ್ಟೇರಿತ್ತು. ಸಿನಿಮಾಗೆ ಶೀರ್ಷಿಕೆಯನ್ನು ಇನ್ನೂ ನೀಡಿಲ್ಲ. ಇದು ಸುದೀಪ್ ಅವರ 46 ನೇ ಚಿತ್ರವಾದ್ದರಿಂದ ಸದ್ಯ ಟೀಸರ್ ಈ ಹೆಸರಿನಿಂದಲೇ ಬಿಡುಗಡೆಯಾಗಿದೆ.

ಸಿನಿಮಾದ ಪ್ರೋಮೊ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವುದಾಗಿ ಕಿಚ್ಚ ಸುದೀಪ್ ಇತ್ತೀಚೆಗೆ ಹೇಳಿದ್ದರು. ಈಗ ಬಿಡುಗಡೆಯಾಗಿರುವ ಟೀಸರ್‌ನಲ್ಲಿ ಸುದೀಪ್ ಅವರು ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು ಅವರ ಪಾತ್ರದ ಬಗ್ಗೆ ಅಭಿಮಾನಿಗಳ ಕುತೂಹಲ ಗರಿಗೆದರಿದೆ.

ಕಿಚ್ಚ 46 ಹೆಸರಿನ ಹ್ಯಾಶ್‌ಟ್ಯಾಗ್ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ. ನಟ ಸುದೀಪ್ ಅಭಿಮಾನಿಗಳ ವಲಯದಲ್ಲೂ ಟೀಸರ್ ವೈರಲ್ ಆಗಿದೆ. ಟೀಸರ್‌ನಲ್ಲಿ ಸುದೀಪ್ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್ ಕೊನೆಯಲ್ಲಿ ‘ನಾನು ಮನುಷ್ಯ ಅಲ್ಲ, ರಾಕ್ಷಸ’ ಎಂಬ ಸುದೀಪ್ ಸಂಭಾಷಣೆ ಇದೆ.

ಟೀಸರ್‌ನಲ್ಲಿ ರಕ್ತಪಾತದ ದೃಶ್ಯಗಳೇ ತುಂಬಿವೆ. ಸುದೀಪ್ ಮೈಗೆ ಅಂಟಿದ ರಕ್ತದ ಕಲೆ, ಬಸ್ ಒಳಗೆ ಸುತ್ತಲೂ ಬಿದ್ದಿರುವ ಮೃತದೇಹದ ಭಾಗಗಳು ಮತ್ತು ಬಂದೂಕು ಹಿಡಿದು ಖಳನಾಯಕನ ತಲೆಗೆ ಗುರಿಯಿಟ್ಟು ಗುಂಡಿಕ್ಕುವ ದೃಶ್ಯ ಮತ್ತು ಎದುರಾಳಿಗಳನ್ನು ಕಾದಾಟಕ್ಕೆ ಆಹ್ವಾನಿಸುವ ದೃಶ್ಯದ ಜತೆಗೆ ‘ನಾನು ಮನಷ್ಯನಲ್ಲ, ರಾಕ್ಷಸ’ ಎಂಬ ಡೈಲಾಗ್‌ನೊಂದಿಗೆ ಟೀಸರ್ ಮುಕ್ತಾಯವಾಗಿದೆ. ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಟೀಸರ್‌ ಬಿಡುಗಡೆಗೊಂಡಿದೆ.

ಸಿನಿಮಾ ಶೀರ್ಷಿಕೆಯ ಅಡಿಬರಹವಾಗಿ ‘ರಾಕ್ಷಸನ ಹೋರಾಟ ಆರಂಭ’ ಎಂಬ ಸಾಲನ್ನು ಬರೆದುಕೊಂಡಿರುವ ಸುದೀಪ್‌ ಟೀಸರ್‌ ಅನ್ನು ಹಂಚಿಕೊಂಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಇದು ಸ್ಟೇಷನ್‌ ಮಾಸ್ಟರ್‌ ಮಾಡುವ ಕೆಲಸ; ಪ್ರಧಾನಿಯ ವಂದೇ ಭಾರತ್ ಉದ್ಘಾಟನೆ ಛೇಡಿಸಿದ ಪ್ರಕಾಶ್‌ ರೈ

ಕಾಲಿವುಡ್‌ನ ಖ್ಯಾತ ನಿರ್ಮಾಣ ಸಂಸ್ಥೆ ವಿ. ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕಬಾಲಿ, ತುಪಾಕಿ ಮತ್ತು ಅಸುರನ್ ಮೊದಲಾದ ಹಿಟ್‌ ಸಿನಿಮಾಗಳ ನೀಡಿರುವ ಕಲೈಪುಲಿ ಎಸ್. ತನು ಅವರು ಕಿಚ್ಚನ 46ನೇ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕಿಚ್ಚ ಕ್ರಿಯೇಷನ್ಸ್‌ ಸಹ ನಿರ್ಮಾಣದ ಪಾಲು ಹೊಂದಿದೆ.

ಈ ಬಾರಿಯೂ ಸುದೀಪ್ ಅವರು ಹೊಸ ಪ್ರತಿಭೆಗೆ ಮಣೆ ಹಾಕಿದ್ದಾರೆ. ಕಿಚ್ಚ 46 ಚಿತ್ರ ವಿಜಯ್ ಕಾರ್ತಿಕೇಯನ್ ನಿರ್ದೇಶನದ ಚೊಚ್ಚಲ ಸಿನಿಮಾವಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ ಚಿತ್ರರಂಗ ಕಂಡ ಅಪ್ರತಿಮ ಮಾಂತ್ರಿಕ ಸಿಂಗೀತಂ ಶ್ರೀನಿವಾಸರಾವ್

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ...

ಸುಂಟರಗಾಳಿ ಚಿತ್ರದ ಲೇಡಿ ವಿಲನ್, ‘ಸಾರಾಯಿ ಶಾರದೆ’ ಖ್ಯಾತಿಯ ಹಿರಿಯ ನಟಿ ಲಲಿತಮ್ಮ ನಿಧನ

ಕನ್ನಡ ಚಿತ್ರರಂಗ ಹಾಗೂ ರಂಗಭೂಮಿಯ ಹಿರಿಯ ಪೋಷಕ ನಟಿ, 'ಸುಂಟರಗಾಳಿ' ಸಿನಿಮಾದ...