ʼಹೊಯ್ಸಳʼನ ಮೆಚ್ಚಿಕೊಂಡ ʼಕೆಂಪೇಗೌಡ’

Date:

  • ಮಾರ್ಚ್‌ 30ರಂದು ತೆರೆಗೆ ಬರಲಿದೆ ಹೊಯ್ಸಳ
  • ತೆರೆಕಾಣುವ ಮೊದಲೇ ಸಿನಿಮಾ ವೀಕ್ಷಿಸಿದ ಸುದೀಪ್‌

ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟ ಡಾಲಿ ಧನಂಜಯ್‌ ಅಭಿನಯದ ‘ಹೊಯ್ಸಳ’ ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಟ್ರೈಲರ್‌ ಮತ್ತು ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರವನ್ನು ಬಿಡುಗಡೆಗೂ ಮೊದಲೇ ಖ್ಯಾತ ನಟ ಕಿಚ್ಚ ಸುದೀಪ್‌ ವೀಕ್ಷಿಸಿದ್ದಾರೆ.

ಚಿತ್ರಕ್ಕೆ ಬಂಡವಾಳ ಹೂಡಿರುವ ʼಕೆಆರ್‌ಜಿ ಕನೆಕ್ಟ್ಸ್‌ʼ ಸಂಸ್ಥೆ ಸುದೀಪ್‌ ಚಿತ್ರತಂಡದ ಜೊತೆಗೂಡಿ ಸಿನಿಮಾ ವೀಕ್ಷಿಸಿದ ಸಂದರ್ಭದ ಫೋಟೋವನ್ನು ಹಂಚಿಕೊಂಡು ಟ್ವೀಟ್‌ ಮಾಡಿದ್ದು, ‘ಹೊಯ್ಸಳ’ ಚಿತ್ರವನ್ನು ಸುದೀಪ್‌ ಮೊದಲಿಗರಾಗಿ ವೀಕ್ಷಿಸಿದ್ದಾರೆ. ಚಿತ್ರವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ‘ಹೊಯ್ಸಳ’ ಖಂಡಿತವಾಗಿಯೂ ಯಶಸ್ಸು ಕಾಣುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ” ಎಂದು ಸಂತಸ ವ್ಯಕ್ತಪಡಿಸಿದೆ.

ಧನಂಜಯ್‌ ಪೊಲೀಸ್‌ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಹೊಯ್ಸಳ’ ಸಿನಿಮಾ ಮಾರ್ಚ್‌ 30ರಂದು ತೆರೆಗೆ ಬರುತ್ತಿದೆ. ಯುವ ನಿರ್ದೇಶಕ ವಿಜಯ್‌, ಬೆಳಗಾವಿ ಗಡಿ ವಿವಾದ, ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಹೋರಾಡುವ ಪೊಲೀಸ್‌ ಅಧಿಕಾರಿಯ ಬದುಕಿನ ಸುತ್ತ ಚಿತ್ರದ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ.

ಈ ಸುದ್ದಿ ಓದಿದ್ದೀರಾ? ಕುದುರೆ ವ್ಯಾಪಾರದ ಬಗ್ಗೆ ಮಾತಾಡಿ ಬುದ್ವಂತ್ರೆ : ನೆಟ್ಟಿಗರ ವಿರುದ್ಧ ಉಪೇಂದ್ರ ವ್ಯಂಗ್ಯ

ಅಮೃತಾ ಅಯ್ಯಂಗಾರ್‌ ಚಿತ್ರದಲ್ಲಿ ಧನಂಜಯ್‌ಗೆ ಜೊತೆಯಾಗಿ ಕಾಣಿಸಿಕೊಂಡಿದ್ದು, ನವೀನ್‌ ಶಂಕರ್‌, ಅವಿನಾಶ್‌ ಬಿಎಸ್‌, ರಾಜೇಶ್‌ ನಟರಂಗ, ಅಚ್ಯುತ್‌ ಕುಮಾರ್‌, ಮಯೂರಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕಾರ್ತಿಕ್‌ ಗೌಡ ಮತ್ತು ಯೋಗಿ ಜಿ.ರಾಜ್‌ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಅಜನೀಶ್‌ ಲೋಕನಾಥ್‌ ಸಂಗೀ ಸಂಯೋಜನೆ ಮಾಡಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಡಿಶಾ ರೈಲು ದುರಂತ | ಸಂತ್ರಸ್ತರ ನೆರವಿಗೆ ಸಹಾಯವಾಣಿ ತೆರೆದ ಸೋನು ಸೂದ್‌

ಸಂತ್ರಸ್ತ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲು ಮುಂದಾದ ಸ್ಟಾರ್‌ ನಟ ಸೋನು ಸೂದ್‌...

ಕುತೂಹಲ ಹೆಚ್ಚಿಸಿದ ʼಆದಿಪುರುಷ್‌ʼ 2ನೇ ಟ್ರೈಲರ್‌

ಜೂನ್‌ 16ಕ್ಕೆ ತೆರೆಗೆ ಬರಲಿದೆ ʼಆದಿಪುರುಷ್‌ʼ ಒಂದೂವರೆ ಕೋಟಿ ವೀಕ್ಷಣೆ ಪಡೆದ ಟ್ರೈಲರ್‌ ತೆಲುಗಿನ...

ಈ ದಿನ ವಿಶೇಷ | ಗ್ಯಾರಂಟಿ ಯೋಜನೆಗಳ ಬಗ್ಗೆ ಸಿನಿ ತಾರೆಯರ ಮಾತು

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಚುನಾವಣೆಗೂ ಮುನ್ನ ನೀಡಿದ್ದ ಗ್ಯಾರಂಟಿಯ...

2 ಭಾಗಗಳಲ್ಲಿ ತೆರೆಗೆ ಬರಲಿದೆ ʼಸಪ್ತ ಸಾಗರದಾಚೆ ಎಲ್ಲೋʼ

40ನೇ ವಸಂತಕ್ಕೆ ಕಾಲಿಟ್ಟ ರಕ್ಷಿತ್‌ ಶೆಟ್ಟಿ ನಿರೀಕ್ಷೆ ಹೆಚ್ಚಿಸಿದ ʼಸಪ್ತ ಸಾಗರದಾಚೆ ಎಲ್ಲೋʼ...