ಗಿನ್ನಿಸ್‌ ದಾಖಲೆ ಬರೆದ ಶಾರುಖ್‌ ಖಾನ್‌ ಅಭಿಮಾನಿಗಳು

Date:

1,050 ಕೋಟಿ ರೂಪಾಯಿ ಗಳಿಸಿರುವ ಶಾರುಖ್‌ ಖಾನ್‌ ಸಿನಿಮಾ

- Advertisement -

ಸದ್ಯದಲ್ಲೇ ಕಿರುತೆರೆಯಲ್ಲಿ ಪ್ರಸಾರವಾಗಲಿರುವ ʼಪಠಾಣ್‌ʼ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

​ಮೋದಿ-ಶಾ ಅಸಲಿ ಮುಖ ಅನಾವರಣ: ಅಂಕಿತಾ ಭಂಡಾರಿ ಕೊಲೆ...

ವೇದಿಕೆಗಳಲ್ಲಿ ‘ಬೇಟಿ ಬಚಾವೋ’ ಎಂದು ಭಾಷಣ ಬಿಗಿಯುವ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು, ಹಾಡಹಗಲೇ ಕೊಲೆಯಾದ ಬಡ ಯುವತಿಯ ಸಾವಿನ ಸುತ್ತ ಕಳಂಕದ ಹುತ್ತ ಹೊತ್ತಿರುವ...

ನಿದ್ರೆಯಲ್ಲೂ ಮಿದುಳಿಗೆ ಮಸಾಜ್‌! ಮಾತ್ರೆಯಿಲ್ಲದೆ ಗಾಢ ನಿದ್ರೆ ತರಬಲ್ಲದೇ...

ಒತ್ತಡದ ಬದುಕಿನಲ್ಲಿ ನೆಮ್ಮದಿಯ ನಿದ್ರೆ ಎನ್ನುವುದೇ ಹಲವರ ಕನಸು. ನಿದ್ರೆಗಾಗಿ ಮಾತ್ರೆಗಳ ಮೊರೆ ಹೋಗುವವರ ಸಂಖ್ಯೆಯೂ ಕಡಿಮೆಯಿಲ್ಲ. ಇಂತಹವರ ಸಮಸ್ಯೆಗೆ ಪರ್ಯಾಯವೊಂದು ಸಿಕ್ಕರೆ ಹೇಗಿರಬಹುದು? ಮೆದುಳಿಗೆ ಅಲ್ಟ್ರಾಸೌಂಡ್‌ ತರಂಗಗಳ ಮೂಲಕ ಪ್ರಚೋದನೆ ನೀಡಿ...

ಸಾರ್ವಜನಿಕ ಸಭ್ಯತೆ ಮತ್ತು ಹೆಣ್ಣುಮಕ್ಕಳು ಮಾಡಿಕೊಳ್ಳುವ ಲೆಕ್ಕಾಚಾರಗಳು

ಫೀಲ್ಡ್‌ಗೆ ಇಳಿದು ಕೆಲಸ ಮಾಡುವಾಗ ಮಹಿಳಾ ಪತ್ರಕರ್ತೆಯರು ಎದುರಿಸುವ ರಿಸ್ಕ್ ಮತ್ತು ವರದಿ ಮಾಡುವ ಜವಾಬ್ದಾರಿ- ಇವೆರಡನ್ನೂ ನಿಭಾಯಿಸಬೇಕಾದಾಗ ಮಾಡಿಕೊಳ್ಳುವ ಲೆಕ್ಕಾಚಾರಗಳ ಬಗೆಗಿನ ಒಂದು ಸ್ವಾನುಭವ. ಕಳೆದ ಕೆಲವು ವಾರಗಳಿಂದ ಭಾರತದಲ್ಲಿ ಹೆಣ್ಣುಮಕ್ಕಳ ಮೇಲೆ...

ಬಾಲಿವುಡ್‌ನ ಖ್ಯಾತ ನಟ ಶಾರುಖ್‌ ಖಾನ್‌ ಅಭಿನಯದ ʼಪಠಾಣ್‌ʼ ಸಿನಿಮಾ ಚಿತ್ರಮಂದಿರಗಳಲ್ಲಿ ಮತ್ತು ಒಟಿಟಿ ವೇದಿಕೆಯಲ್ಲಿ ಭರ್ಜರಿ ಯಶಸ್ಸು ಗಳಿಸಿದೆ. ಗಲ್ಲಾ ಪೆಟ್ಟಿಗೆಯಲ್ಲೂ ಭಾರೀ ಮೊತ್ತವನ್ನು ಕಲೆ ಹಾಕಿರುವ ಈ ಚಿತ್ರ ಸದ್ಯದಲ್ಲೇ ಕಿರುತೆರೆಯಲ್ಲಿ ಪ್ರಸಾರವಾಗಲಿದೆ. ಈ ಹಿನ್ನೆಲೆ ಶಾರುಖ್‌ ಖಾನ್‌ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಗಿನ್ನಿಸ್‌ ದಾಖಲೆ ಬರೆದಿದ್ದಾರೆ.

ಹಿಂದಿಯ ಜನಪ್ರಿಯ ವಾಹಿನಿ ʼಸ್ಟಾರ್‌ ಗೋಲ್ಡ್‌ʼ, ʼಪಠಾಣ್‌ʼ ಸಿನಿಮಾ ಸ್ಯಾಟ್‌ಲೈಟ್‌ ಹಕ್ಕನ್ನು ದುಬಾರಿ ಮೊತ್ತಕ್ಕೆ ಖರೀದಿ ಮಾಡಿದೆ. ಇದೇ ಜೂನ್‌ 18ರಂದು ರಾತ್ರಿ 8 ಗಂಟೆಗೆ ಚಿತ್ರ ʼಸ್ಟಾರ್‌ ಗೋಲ್ಡ್‌ʼನಲ್ಲಿ ಚಿತ್ರ ಪ್ರಸಾರವಾಗಲಿದೆ. ಈ ಹಿನ್ನೆಲೆ ಕಳೆದ ಶನಿವಾರ 250ಕ್ಕೂ ಹೆಚ್ಚು ಮಂದಿ ಅಭಿಮಾನಿಗಳು ʼಮನ್ನತ್‌ʼ (ಶಾರುಖ್‌ ಖಾನ್‌ ನಿವಾಸ) ಎದುರು ಏಕಕಾಲಕ್ಕೆ ಶಾರುಖ್‌ ಖಾನ್‌ ಅವರ ಜನಪ್ರಿಯ ಪೋಸ್‌ ಅನ್ನು ಪ್ರದರ್ಶಿಸಿದ್ದಾರೆ. ಜೊತೆಗೆ ʼಪಠಾಣ್‌ʼ ಸಿನಿಮಾದ ಜನಪ್ರಿಯ “ಝೂಮೇ ಜೋ ಪಠಾಣ್‌.. ಮೇರಿ ಜಾನ್‌..” ಹಾಡಿಗೂ ಹೆಜ್ಜೆ ಹಾಕಿದ್ದಾರೆ. ವಿಶೇಷ ಎಂದರೆ ಸ್ವತಃ ಶಾರುಖ್‌ ಖಾನ್‌ ಕೂಡ ಅಭಿಮಾನಿಗಳ ಜೊತೆ ಹೆಜ್ಜೆ ಹಾಕಿದ್ದು, ಕೈ ಚಾಚಿ ಪೋಸ್‌ ಕೂಡ ನೀಡಿದ್ದಾರೆ.

250 ಮಂದಿ ಅಭಿಮಾನಿಗಳು ಏಕಕಾಲಕ್ಕೆ ಶಾರುಖ್‌ ಖಾನ್‌ ಅವರ ಜನಪ್ರಿಯ ಪೋಸ್ ಅನ್ನು ಅನುಕರಿಸಿರುವ ವಿನೂತನ ಪ್ರಯತ್ನ ಗಿನ್ನಿಸ್‌ ದಾಖಲೆಯ ಪುಟ ಸೇರಿದೆ. ತಮ್ಮ ಜನಪ್ರಿಯ ಪೋಸ್‌ ಅನ್ನು ಅನುಕರಿಸಿ ಗಿನ್ನಿಸ್‌ ವಿಶ್ವ ದಾಖಲೆ ಬರೆದ ಅಭಿಮಾನಿಗಳಿಗೆ ಶಾರುಖ್‌ ಖಾನ್‌ ಕೂಡ ಧನ್ಯವಾದ ತಿಳಿಸಿದ್ದಾರೆ. ʼಸ್ಟಾರ್‌ ಗೋಲ್ಡ್‌ʼ ವಾಹಿನಿ ಈ ವಿನೂತನ ಕಾರ್ಯಕ್ರಮವನ್ನು ಆಯೋಜಿಸಿತ್ತು.

‌ಈ ಸುದ್ದಿ ಓದಿದ್ದೀರಾ? ರಾಜ್‌ಕುಮಾರ್ ಸರಳತೆ, ಸಂಸ್ಕಾರದ ರಾಯಭಾರಿ ; ಸಿಎಂ ಸಿದ್ದರಾಮಯ್ಯ

ಅಂದಹಾಗೆ ಗಲ್ಲಾ ಪೆಟ್ಟಿಗೆಯಲ್ಲಿ 1,050 ಕೋಟಿ ರೂಪಾಯಿ ಗಳಿಸುವ ಮೂಲಕ ಹೊಸ ದಾಖಲೆ ಬರೆದಿದ್ದ ʼಪಠಾಣ್‌ʼ ಸಿನಿಮಾ 6 ತಿಂಗಳ ಬಳಿಕ ಮತ್ತೆ ತೆರೆಗೆ ಬರಲು ಸಜ್ಜಾಗಿದೆ. ಜುಲೈ 13ರಂದು ರಷ್ಯಾ ಸೇರಿದಂತೆ 7 ಪ್ರಮುಖ ದೇಶಗಳ 3 ಸಾವಿರ ಪರದೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಜಾಗತಿಕವಾಗಿ ಅತಿಹೆಚ್ಚು ಗಳಿಕೆ ಮಾಡಿದ ಭಾರತೀಯ ಸಿನಿಮಾಗಳ ಪೈಕಿ ಸದ್ಯ ಐದನೇ ಸ್ಥಾನದಲ್ಲಿರುವ ʼಪಠಾಣ್‌ʼ ಮೂರನೇ ಸ್ಥಾನಕ್ಕೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ ಚಿತ್ರರಂಗ ಕಂಡ ಅಪ್ರತಿಮ ಮಾಂತ್ರಿಕ ಸಿಂಗೀತಂ ಶ್ರೀನಿವಾಸರಾವ್

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ...

ಸುಂಟರಗಾಳಿ ಚಿತ್ರದ ಲೇಡಿ ವಿಲನ್, ‘ಸಾರಾಯಿ ಶಾರದೆ’ ಖ್ಯಾತಿಯ ಹಿರಿಯ ನಟಿ ಲಲಿತಮ್ಮ ನಿಧನ

ಕನ್ನಡ ಚಿತ್ರರಂಗ ಹಾಗೂ ರಂಗಭೂಮಿಯ ಹಿರಿಯ ಪೋಷಕ ನಟಿ, 'ಸುಂಟರಗಾಳಿ' ಸಿನಿಮಾದ...