ಮನಸ್ಸಿನ ಸಮಸ್ಯೆಗೆ ‘ಟೆಲಿ ಮನಸ್’ ಸೌಲಭ್ಯ; ಯಾರೆಲ್ಲ ಕರೆ ಮಾಡಬಹುದು

Date:

  • ಕರೆ ಮುಖಾಂತರ ಔಷಧಿ ಶಿಫಾರಸ್ಸು ಯೋಜನೆ ಶೀಘ್ರದಲ್ಲಿ ಜಾರಿ
  • 20 ಭಾಷೆಗಳಲ್ಲಿ ಮನಸ್ಸಿನ ಕಾಯಿಲೆ ನಿವಾರಣೆಗೆ ‘ಟೆಲಿ ಮನಸ್’ ಸೇವೆ

ಮನೋರೋಗಕ್ಕೆ ಸಂಬಂಧಿಸಿದಂತೆ ದೂರವಾಣಿ ಮೂಲಕ ಸಮಾಲೋಚನೆ ನಡೆಸುವ ‘ಟೆಲಿ ಮನಸ್’ ಸಹಾಯವಾಣಿ ಸೇವೆಯನ್ನು ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆಯು (ನಿಮ್ಹಾನ್ಸ್‌) ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಆರಂಭಿಸಿದ್ದು, ಯಾರೆಲ್ಲ ಕರೆ ಮಾಡಬಹುದು ಎಂಬುದರ ಪಟ್ಟಿ ನೀಡಿದೆ.

ಎಲ್ಲ ರೀತಿಯ ಮಾನಸಿಕ ಸಮಸ್ಯೆಗಳಿಗೆ ‘ಟೆಲಿ ಮನಸ್’ ಸಹಾಯವಾಣಿ ಮೂಲಕ ಸೇವೆ ಒದಗಿಸಲಾಗುತ್ತದೆ. ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವ ಮಾನಸಿಕ ಸಮಸ್ಯೆಗಳಿಗೆ ಸಂಬಂಧಿಸಿದ ಹೆಚ್ಚಿನ ಸಂಖ್ಯೆಯಲ್ಲಿ ಕರೆಗಳು ಬರುತ್ತಿವೆ. ಓದಿನಲ್ಲಿ ಹಿನ್ನಡೆ, ಅನಗತ್ಯವಾಗಿ ಭಯಕ್ಕೆ ಒಳಗಾಗುವುದು ಸೇರಿ ಹಲವು ಸಮಸ್ಯೆಗಳಿಗೆ ಪರಿಹಾರವನ್ನು ಫೋನಿನ ಮುಖಾಂತರ ನೀಡುವುದು ‘ಟೆಲಿ ಮನಸ್’ ಯೋಜನೆಯ ಕಾರ್ಯತಂತ್ರವಾಗಿದೆ.

‘ಟೆಲಿ ಮನಸ್’ ಸಹಾಯವಾಣಿಗೆ 40 ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದೆ. ಎಲ್ಲ ರೀತಿಯ ಮಾನಸಿಕ ಸಮಸ್ಯೆಗಳಿಗೆ 20 ಭಾಷೆಗಳಲ್ಲಿ ಸೇವೆ ಒದಗಿಸಲಾಗುತ್ತಿದೆ. ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿರುವವರು ಸಹಾಯವಾಣಿಗೆ ಸಂಪರ್ಕಿಸಿ, ತಜ್ಞರಿಂದ ಅಗತ್ಯ ಸಲಹೆಗಳನ್ನು ಪಡೆದುಕೊಳ್ಳಬೇಕು. ಮಾನಸಿಕ ತೊಂದರೆಗಳನ್ನು ಎದುರಿಸುತ್ತಿದ್ದರೆ ದೂರವಾಣಿ ಸಂಖ್ಗೆ 14416 ಕ್ಕೆ ಶುಲ್ಕರಹಿತ ಕರೆ ಮಾಡಬಹುದು.

ಈ ಸುದ್ದಿ ಓದಿದ್ದೀರಾ?: ಕೃತಕ ಸಿಹಿಕಾರಕ ಬಳಕೆ; ಆರೋಗ್ಯಕ್ಕೆ ಹಾನಿಕಾರಕ

2022ರಲ್ಲಿ ಆರಂಭವಾದ ‘ಟೆಲಿ ಮನಸ್’ ಕಾರ್ಯಕ್ರಮದಿಂದ ಏಪ್ರಿಲ್‌ವರೆಗೂ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಇದರ ಫಲಾನುಭವಿಗಳಾಗಿದ್ದಾರೆ. ಹೀಗಾಗಿ, ಕರೆ ಮಾಡಿ ಸಮಸ್ಯೆ ಬಗೆ ಹರಿಸುವುದರೊಂದಿಗೆ, ಅದಕ್ಕೆ ಪೂರಕವಾದ ಔಷಧಿಗಳನ್ನು ಸಹ ಮನೋವೈದ್ಯರು ಶಿಫಾರಸ್ಸು ಮಾಡುವಂತೆ ನಿಯಮ ಶೀಘ್ರವೇ ಕೈಗೊಳ್ಳಲಾಗುವುದು ಎನ್ನಲಾಗಿದೆ.

ಯಾರೆಲ್ಲ ಕರೆ ಮಾಡಹುದು?

  • ವ್ಯಥೆಗೆ ಒಳಪಟ್ಟವರು
  • ಪರೀಕ್ಷಾ ಒತ್ತಡಕ್ಕೊಳಗಾದವರು
  • ಕೌಟುಂಬಿಕ ಸಮಸ್ಯೆಗೊಳಗಾದವರು
  • ಆತ್ಮಹತ್ಯೆ ಆಲೋಚನೆಗಳು
  • ಮಾದಕ ವಸ್ತು ವ್ಯಸನದ ಸಮಸ್ಯೆಯಲ್ಲಿರುವವರು
  • ಸಂಬಂಧಗಳ ಸಮಸ್ಯೆಯಲ್ಲಿ ಸಿಲುಕಿರುವವರು ಜ್ಞಾಪಕಶಕ್ತಿ ತೊಂದರೆಯುಳ್ಳವರು
  • ಆರ್ಥಿಕ ಒತ್ತಡದಲ್ಲಿರುವವರು
  • ಇತರೆ ಯಾವುದೇ ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರು

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರೋಗಿಗಳಿಗಿಲ್ಲ ವ್ಯವಸ್ಥಿತ ಚಿಕಿತ್ಸೆ; ವೈದ್ಯರ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ

'ಕರ್ತವ್ಯ ನಿರ್ವಹಿಸದ ವೈದ್ಯಾಧಿಕಾರಿ-ಸಿಬ್ಬಂದಿಗಳ ಮೇಲೆ ಕ್ರಮ' ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿಗಳ ಸಾವು;...

ಸುದ್ದಿವಿವರ | ಸೊಳ್ಳೆಬತ್ತಿಯ ಹೊಗೆ ತಂಬಾಕಿನಷ್ಟೇ ಹಾನಿಕಾರಕ!

ಅಕಾಲಿಕವಾಗಿ ಸುರಿದ ಮಳೆಯಿಂದ ಸೊಳ್ಳೆಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಅವುಗಳ ಕಾಟವೂ ಹೆಚ್ಚಾಗಿದೆ....

ತಾಯಿ, ಮಗು ಸಾವು ಸೂಚ್ಯಂಕ; 10 ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ ಅಗ್ರಸ್ಥಾನ

2020ರಲ್ಲಿ ಭಾರತದಲ್ಲಿ ಗರ್ಭಾವಸ್ಥೆ ಮತ್ತಿತ್ತರ ಕಾರಣದಿಂದ 7,88,000 ಸಾವು ತಾಯಂದಿರ ಮತ್ತು ನವಜಾತ...

ಮಾರುಕಟ್ಟೆಗೆ ಲಗ್ಗೆಯಿಟ್ಟ ಮಾನವನ ಮೈ ಬಣ್ಣದ ಬ್ಯಾಂಡ್‌ ಏಡ್‌ಗಳು!

ಚರ್ಮದ ಟೋನ್‌ ಹೊಂದಿಸುವುದು ಲಿಪ್‌ಸ್ಟಿಕ್ ವ್ಯಾಪಾರಕ್ಕೆ ಒಳ್ಳೆಯದು ಬ್ಯಾಂಡ್ ಏಡ್‌ಗಳನ್ನು ಶೂ...