ಸಂಸತ್ ವಿಶೇಷ ಅಧಿವೇಶನ: ಜಂಟಿ ಕಾರ್ಯತಂತ್ರ ರೂಪಿಸಲು ಖರ್ಗೆ ನಿವಾಸದಲ್ಲಿ ‘ಇಂಡಿಯಾ’ ಸಭೆ!

Date:

ಕೇಂದ್ರ ಸರ್ಕಾರ ಸೋಮವಾರ (ನವೆಂಬರ್ 30) ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಂಡಿಸಲು ಸಜ್ಜಾಗಿರುವ ‘ಸಂವಿಧಾನ (132ನೇ ತಿದ್ದುಪಡಿ) ಮಸೂದೆ, 2026 ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ. ಈ ಮಸೂದೆಯನ್ನು ಎದುರಿಸಲು ಜಂಟಿ ಕಾರ್ಯತಂತ್ರ ರೂಪಿಸುವ ಸಲುವಾಗಿ ‘ಇಂಡಿಯಾ’ (INDIA) ಮೈತ್ರಿಕೂಟದ ಸಂಸದೀಯ ಪಕ್ಷಗಳ ನಾಯಕರು ಶನಿವಾರ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಮಹತ್ವದ ಸಭೆ ನಡೆಸಿದರು.

- Advertisement -

ಖರ್ಗೆ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಪರವಾಗಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಪ್ರಧಾನ ಕಾರ್ಯದರ್ಶಿಗಳಾದ ಜೈರಾಮ್ ರಮೇಶ್, ಕೆ.ಸಿ. ವೇಣುಗೋಪಾಲ್ ಭಾಗವಹಿಸಿದ್ದರು. ಮಿತ್ರಪಕ್ಷಗಳ ಪರವಾಗಿ ಟಿಎಂಸಿಯ ಅಭಿಷೇಕ್ ಬ್ಯಾನರ್ಜಿ, ಆರ್‌ಜೆಡಿಯ ಮನೋಜ್ ಝಾ ಮತ್ತು ಅಭಯ್ ಕುಮಾರ್ ಸಿಂಗ್, ಸಿಪಿಐನ ಪಿ. ಸಂತೋಷ್ ಕುಮಾರ್, ಐಯುಎಂಎಲ್‌ನ ಇ.ಟಿ. ಮೊಹಮ್ಮದ್ ಬಶೀರ್, ಆರ್‌ಎಸ್‌ಪಿಯ ಎನ್.ಕೆ. ಪ್ರೇಮಚಂದ್ರನ್ ಹಾಗೂ ಸ್ವತಂತ್ರ ಸಂಸದ ಕಪಿಲ್ ಸಿಬಲ್ ಪಾಲ್ಗೊಂಡಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸುಪ್ತ ಆಯಾಸದ ಹಿಂದೆ ಅಡಗಿರುವ ರಕ್ತಹೀನತೆ: ಕರ್ನಾಟಕದ ಅರ್ಧದಷ್ಟು...

ದೈನಂದಿನ ಒತ್ತಡ, ನಿದ್ರೆಯ ಕೊರತೆ ಅಥವಾ ಬಿಡುವಿಲ್ಲದ ಜೀವನಶೈಲಿಯೆಂದು ನಿರ್ಲಕ್ಷಿಸುವ ಆಯಾಸದ ಹಿಂದೆ ರಕ್ತಹೀನತೆ ಅಡಗಿರಬಹುದು. ಕರ್ನಾಟಕದಲ್ಲಿ ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರಲ್ಲಿ ಶೇ. 50ಕ್ಕಿಂತ ಹೆಚ್ಚು ಮಂದಿ ರಕ್ತಹೀನತೆಯಿಂದ ಬಳಲುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ದೈನಂದಿನ...

20 ಬಂಡುಕೋರ ಟಿಎಂಸಿ ಸಂಸದರು ಮತ ಚಲಾಯಿಸಬಹುದೇ; ಮುಂದೆ...

ಡಿಲಿಮಿಟೇಷನ್ ಹಾಗೂ ಮಹಿಳಾ ಮೀಸಲಾತಿ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮುಂದಿನ ವಾರ ಸಂಸತ್ತಿನಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಸಜ್ಜಾಗಿರುವ ಹೊತ್ತಿನಲ್ಲಿ, ಲೋಕಸಭಾ ಸ್ಪೀಕರ್ ಮುಂದೆ ಅನರ್ಹತೆ ವಿಚಾರಣೆ ಎದುರಿಸುತ್ತಿರುವ 20 ಬಂಡುಕೋರ ಟಿಎಂಸಿ...

ಸಿನಿಮಾ ಪ್ರಶಸ್ತಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯ ಏಳು ಸುತ್ತಿನ...

ಪ್ರಶಸ್ತಿಗೆ ಮತ್ತು ಸಬ್ಸಿಡಿಗೆ ಅರ್ಜಿ ಸಲ್ಲಿಸಲು ನಿರ್ಮಾಪಕರು, ನಿರ್ದೇಶಕರು ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣ, ನಮ್ಮ ಚಿತ್ರರಂಗದಲ್ಲಿ ಪೂರ್ಣ ಪ್ರಮಾಣದ ನಿರ್ಮಾಣ ಸಂಸ್ಥೆಗಳಿರುವುದು ಕೇವಲ ಬೆರಳೆಣಿಕೆಯಷ್ಟು, ಉಳಿದಂತೆ ಬಹುತೇಕ ನಿರ್ಮಾಣ...

ಆದರೆ, ‘ಇಂಡಿಯಾ’ ಕೂಟದ ಹೊರಗಿರುವ ಪ್ರಮುಖ ಪಕ್ಷಗಳಾದ ಡಿಎಂಕೆ, ಆಮ್ ಆದ್ಮಿ ಪಕ್ಷ ಮತ್ತು ಬಿಜೆಡಿ ಪಕ್ಷಗಳಿಗೆ ಆಹ್ವಾನ ನೀಡಲಾಗಿದ್ದರೂ, ಅವು ಸಭೆಯಿಂದ ದೂರ ಉಳಿದಿರುವುದು ವಿಪಕ್ಷಗಳ ಒಗ್ಗಟ್ಟಿಗೆ ಹಿನ್ನಡೆಯಾಗಿ ಪರಿಣಮಿಸಿದೆ.

ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಹಿರಿಯ ವಕೀಲ ಹಾಗೂ ಸಂಸದ ಕಪಿಲ್ ಸಿಬಲ್, ಕೇಂದ್ರ ಸರ್ಕಾರದ ಉದ್ದೇಶವನ್ನು ಪ್ರಶ್ನಿಸಿದರು. “ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡಲು ನಾವು ಸಿದ್ಧರಿದ್ದೇವೆ. ಇದನ್ನು ಹಾಲಿ ಇರುವ 543 ಸ್ಥಾನಗಳಲ್ಲೇ ತಕ್ಷಣವೇ ಜಾರಿಗೊಳಿಸಬಹುದು. ಆದರೆ ಸರ್ಕಾರದ ನಿಜವಾದ ಉದ್ದೇಶ ಮಹಿಳಾ ಸಬಲೀಕರಣವಲ್ಲ, ಬದಲಾಗಿ ಮುಂದಿನ 30-40 ವರ್ಷಗಳ ಕಾಲ ಅಧಿಕಾರದಲ್ಲಿ ಉಳಿಯುವುದು,” ಎಂದು ಸಿಬಲ್ ಆರೋಪಿಸಿದರು. ಚುನಾವಣಾ ಆಯೋಗಕ್ಕೆ ಜ್ಞಾನೇಶ್ ಕುಮಾರ್ ಅವರನ್ನು ನೇಮಿಸಿದ ಮಾದರಿಯಲ್ಲೇ, ಕ್ಷೇತ್ರ ಪುನರ್ವಿಂಗಡಣೆ ಆಯೋಗಕ್ಕೂ ತಮಗೆ ಬೇಕಾದವರನ್ನು ಸರ್ಕಾರ ನೇಮಿಸಿಕೊಳ್ಳಲಿದೆ. ಉತ್ತರ ಪ್ರದೇಶ, ಹರಿಯಾಣ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ತಮಗೆ ಅನುಕೂಲವಾಗುವಂತೆ ಕ್ಷೇತ್ರಗಳ ಗಡಿಗಳನ್ನು ಬದಲಾಯಿಸುವ ಮೂಲಕ ಮುಂದಿನ ನಾಲ್ಕು ದಶಕಗಳ ಕಾಲ ಅಧಿಕಾರ ಹಿಡಿಯುವ ಸಂಚು ಇದರ ಹಿಂದಿದೆ ಎಂದು ಅವರು ದೂರಿದರು.

ಲೋಕಸಭೆಯ ಬಲವನ್ನು 850ಕ್ಕೆ ಹೆಚ್ಚಿಸಿ, ಅದರಲ್ಲಿ ಮೂರನೇ ಎರಡರಷ್ಟು ಬಹುಮತವನ್ನು ಪಡೆದುಕೊಂಡರೆ, ಆಡಳಿತಾರೂಢ ಪಕ್ಷವು ಖಂಡಿತವಾಗಿಯೂ ಸಂವಿಧಾನವನ್ನೇ ಬದಲಾಯಿಸಲಿದೆ ಎಂದು ಸಿಬಲ್ ಎಚ್ಚರಿಸಿದರು.

ಏನಿದು ಸಂವಿಧಾನ (132ನೇ ತಿದ್ದುಪಡಿ) ಮಸೂದೆ, 2026?

ನವೆಂಬರ್ 30ರಿಂದ ಡಿಸೆಂಬರ್ 3ರವರೆಗೆ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ (ಲೋಕಸಭೆ ನ. 30ಕ್ಕೆ ಹಾಗೂ ರಾಜ್ಯಸಭೆ ಡಿ. 2ಕ್ಕೆ ಸಮಾವೇಶಗೊಳ್ಳಲಿದೆ) ಮಂಡನೆಯಾಗಲಿರುವ ಈ ಮಸೂದೆಯ ಪ್ರಮುಖ ಅಂಶಗಳನ್ನ ಒಳಗೊಂಡಿದೆ. 

ಹೊಸ ಮಸೂದೆಯ ಪ್ರಸ್ತಾವನೆಯ ಪ್ರಕಾರ, ಪ್ರಸ್ತುತ 543 ಸ್ಥಾನಗಳಿರುವ (ಹಾಲಿ 540 ಸದಸ್ಯರು) ಲೋಕಸಭೆಯ ಗರಿಷ್ಠ ಬಲವನ್ನು 850 ಸ್ಥಾನಗಳಿಗೆ (ರಾಜ್ಯಗಳಿಂದ 815 ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ 35) ಹೆಚ್ಚಿಸಲು ಉದ್ದೇಶಿಸಲಾಗಿದೆ. ಅದೇ ರೀತಿ, ರಾಜ್ಯ ವಿಧಾನಸಭೆಗಳ ಗರಿಷ್ಠ ಸದಸ್ಯ ಬಲದ ಮಿತಿಯನ್ನು ಈಗಿರುವ 500ರಿಂದ 650 ಸ್ಥಾನಗಳಿಗೆ ಏರಿಸಲಾಗುತ್ತಿದೆ. 1971ರ ಜನಗಣತಿಯ ಆಧಾರದ ಮೇಲೆ ಸ್ಥಿರವಾಗಿದ್ದ ಸ್ಥಾನಗಳ ಹಂಚಿಕೆಯನ್ನು ಬದಲಿಸಿ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸ್ಥಾನಗಳಲ್ಲಿ ಶೇ. 50ರಷ್ಟು ಏಕರೂಪದ ಹೆಚ್ಚಳ ಮಾಡಲು ಈ ಮಸೂದೆ ಪ್ರಸ್ತಾಪಿಸುತ್ತದೆ. ಈ ಪುನರ್ವಿಂಗಡಣೆ ಪ್ರಕ್ರಿಯೆಯ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರನ್ನೂ ಒಳಗೊಂಡಂತೆ ಒಟ್ಟಾರೆ ಶೇ. 33ರಷ್ಟು ಮಹಿಳಾ ಮೀಸಲಾತಿಯನ್ನು ತಕ್ಷಣವೇ ಜಾರಿಗೆ ತರಲಾಗುವುದು. ಅಲ್ಲದೆ, 2026ರವರೆಗೆ ಇದ್ದ ಕ್ಷೇತ್ರ ಪುನರ್ವಿಂಗಡಣೆಯ ತಡೆಯನ್ನು ಬದಲಿಸಿ, ಈ ಹೊಸದಾಗಿ ಪರಿಷ್ಕೃತಗೊಂಡ ಸ್ಥಾನಗಳು ಮತ್ತು ಕ್ಷೇತ್ರಗಳ ಗಡಿಗಳನ್ನು 2051ರವರೆಗೆ ಸ್ಥಿರವಾಗಿ ಇರಿಸಲು ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಕಳೆದ ಏಪ್ರಿಲ್ 17, 2026ರಂದು ಸರ್ಕಾರ ಇದೇ ರೀತಿಯ ತಿದ್ದುಪಡಿ ಮಸೂದೆಯನ್ನು ಮಂಡಿಸಿದಾಗ, ಅದು ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತ ಪಡೆಯಲು 54 ಮತಗಳ ಕೊರತೆ ಎದುರಿಸಿ ಸೋಲುಂಡಿತ್ತು (ಪರವಾಗಿ 298, ವಿರುದ್ಧವಾಗಿ 230 ಮತಗಳು ಬಿದ್ದಿದ್ದವು). ಆದರೆ ಕಳೆದ ಏಳು ತಿಂಗಳಲ್ಲಿ ರಾಜಕೀಯ ಸಮೀಕರಣಗಳು ಸಂಪೂರ್ಣ ಬದಲಾಗಿವೆ. 

ಕಳೆದ ಜೂನ್‌ನಲ್ಲಿ ತೃಣಮೂಲ ಕಾಂಗ್ರೆಸ್‌ನ 20 ಸಂಸದರು ಪಕ್ಷ ತೊರೆದು, ಎನ್‌ಡಿಎ ಬೆಂಬಲಿತ ‘ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ’ ಜೊತೆ ವಿಲೀನಗೊಂಡಿದ್ದಾರೆ. ಇವರ ಅನರ್ಹತೆ ಅರ್ಜಿ ಸ್ಪೀಕರ್ ಓಂ ಬಿರ್ಲಾ ಅವರ ಮುಂದೆ ಬಾಕಿ ಇದ್ದರೂ, ಇವರ ಬೆಂಬಲ ಸರ್ಕಾರಕ್ಕೆ ಸಿಗುವ ನಿರೀಕ್ಷೆಯಿದೆ.

ಏಪ್ರಿಲ್‌ನಲ್ಲಿ ಮಸೂದೆಯನ್ನು ವಿರೋಧಿಸಿದ್ದ 22 ಸಂಸದರ ಬಲದ ಡಿಎಂಕೆ, ಈ ಬಾರಿ ಮಸೂದೆಗೆ ಬೆಂಬಲ ಸೂಚಿಸಿದೆ. ಹಾಗೆಯೇ, ಎಲ್ಲಾ ರಾಜ್ಯಗಳಿಗೂ ಏಕರೂಪವಾಗಿ ಶೇ. 50ರಷ್ಟು ಸ್ಥಾನಗಳನ್ನು ಹೆಚ್ಚಿಸುವುದಾದರೆ ತಾವು ಬೆಂಬಲ ನೀಡುವುದಾಗಿ 8 ಸಂಸದರನ್ನು ಹೊಂದಿರುವ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (SP) ಶುಕ್ರವಾರ ಘೋಷಿಸಿದೆ. ದಕ್ಷಿಣ ಭಾರತದ ರಾಜ್ಯಗಳಿಗೆ ಜನಸಂಖ್ಯೆ ನಿಯಂತ್ರಣದಿಂದಾಗಿ ಸ್ಥಾನಗಳು ಕಡಿಮೆಯಾಗಬಹುದು ಎಂಬ ಆತಂಕವನ್ನು ‘ಏಕರೂಪದ ಶೇ. 50 ಹೆಚ್ಚಳ’ ಸೂತ್ರದ ಮೂಲಕ ಕೇಂದ್ರ ಸರ್ಕಾರ ಶಮನಗೊಳಿಸಿದೆ.

543 ಸದಸ್ಯ ಬಲದ ಲೋಕಸಭೆಯಲ್ಲಿ 3 ಸ್ಥಾನಗಳು ಖಾಲಿ ಇದ್ದು, 540 ಹಾಲಿ ಸದಸ್ಯರಿದ್ದಾರೆ. ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರ ಅಮಾನತು ಮುಂದುವರಿದರೆ, ಸ್ಪೀಕರ್ ಹೊರತುಪಡಿಸಿ 538 ಸದಸ್ಯರು ಮತದಾನಕ್ಕೆ ಅರ್ಹರಾಗಿರುತ್ತಾರೆ. ಎಲ್ಲಾ ಸದಸ್ಯರು ಹಾಜರಾದಲ್ಲಿ ಮಸೂದೆ ಅಂಗೀಕಾರವಾಗಲು 359 ಮತಗಳ (ಮೂರನೇ ಎರಡರಷ್ಟು ಬಹುಮತ) ಅಗತ್ಯವಿದೆ. ವಿಪಕ್ಷಗಳ ಒಡಕು ಹಾಗೂ ಪ್ರಾದೇಶಿಕ ಪಕ್ಷಗಳ ಬೆಂಬಲದಿಂದಾಗಿ ಈ ಬಾರಿ ಮಸೂದೆ ಸುಲಭವಾಗಿ ಪಾಸಾಗಲಿದೆ ಎಂಬ ವಿಶ್ವಾಸದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉತ್ತರ ಕನ್ನಡ |ಮಂಗನ ಕಾಯಿಲೆ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಹರ್ಷಲ್ ಬೊಯರ್

ಜಿಲ್ಲೆಯಲ್ಲಿ ಮಂಗನ ಕಾಯಿಲೆ (ಕೆಎಫ್‌ಡಿ) ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು,...

ಸಮಾನತೆ, ಕಾಯಕ-ದಾಸೋಹದ ತತ್ವಗಳಿಗೆ ಸಾಕ್ಷಿಯಾದ ನೆಲ ಬಸವಕಲ್ಯಾಣ

ಬಸವಕಲ್ಯಾಣ ಸಮಾನತೆ, ಕಾಯಕ ಮತ್ತು ದಾಸೋಹದ ತತ್ವಗಳನ್ನು ಸಾರುವ ಪವಿತ್ರ ಭೂಮಿಯಾಗಿದ್ದು,...

ಕಾರವಾರ |ಅರಣ್ಯದಲ್ಲಿ ಅಕ್ರಮ ಮದ್ಯ ಸಾಗಾಟ : 64 ಸಾವಿರ ಮೌಲ್ಯದ ಮದ್ಯ ಜಪ್ತಿ

ಮೈಂಗಿಣಿ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಗೋವಾ ರಾಜ್ಯದ ಮದ್ಯ ಸಾಗಾಟ ಮಾಡುತ್ತಿದ್ದ...

ಅಜಿತ್ ಪವಾರ್ ವಿಮಾನ ದುರಂತಕ್ಕೆ 10 ತಿಂಗಳು: ಇನ್ನೂ ಎಫ್‌ಐಆರ್ ಇಲ್ಲ, ತನಿಖೆಯೂ ಇಲ್ಲ: ರೋಹಿತ್ ಪವಾರ್ ಆಕ್ರೋಶ

ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ವಿಮಾನ ದುರಂತದಲ್ಲಿ ನಿಧನರಾಗಿ...