ಬೆಂಗಳೂರು-ಮೈಸೂರು ಹೆದ್ಧಾರಿಯಲ್ಲಿ ವೇಗವಾಗಿ ಚಲಿಸುತ್ತಿದ್ದ ಕಾರು ಟಿಪ್ಪರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ಇಂದು ಬೆಳಿಗ್ಗೆ ಇಂಡುವಾಳು ಗ್ರಾಮದ ಬಳಿ ನಡೆದಿದೆ.
ಈ ದುರ್ಘಟನೆಯಲ್ಲಿ ಕೇರಳ ಮೂಲದವರಾದ ಬಾಸಿಲ್ ಮಹಮದ್ ಅಲಿ, ಲಿಫೈಲ್ ಹಾಗೂ ಸ್ವಪ್ನ ಎಂಬ ಮೂವರು ದಾರುಣವಾಗಿ ಸಾವಿಗೀಡಾಗಿದ್ದಾರೆ. ಕಾರಿನಲ್ಲಿದ್ದ ಮತ್ತೊಬ್ಬನಿಗೆ ಗಂಭೀರ ಗಾಯಗಳಾಗಿದ್ದು, ಮಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇಂದು ಮುಂಜಾನೆ ಆರ್.ಟಿ.ಓ ಅಧಿಕಾರಿಗಳು ಜಲ್ಲಿ ತುಂಬಿದ್ದ ಟಿಪ್ಪರ್ (KA 53 AA 9541) ವಾಹನವನ್ನು ತಪಾಸಣೆಗಾಗಿ ಅಡ್ಡ ಹಾಕಿದ್ದರಿಂದ ಟಿಪ್ಪರ್ ನ ಚಾಲಕ ತಕ್ಷಣ ವಾಹನವನ್ನು ನಿಲುಗಡೆ ಮಾಡಿದ್ಧಾನೆ. ಈ ಸಂದರ್ಭದಲ್ಲಿ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಥಾರ್ ಕಾರು ಟಿಪ್ಪರ್ ಗೆ ರಭಸವಾಗಿ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ. ಭೀಕರ ಅಪಘಾತದಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಸ್ವಿಫ್ ಕಾರಿಗೆ ಬೆಂಕಿ
ಮತ್ತೊಂದು ಘಟನೆಯಲ್ಲಿ ಇಂದು ಮುಂಜಾನೆ 6 ಗಂಟೆಯ ಸಮಯದಲ್ಲಿ ಬೆಂಗಳೂರು ಮೈಸೂರು ಹೈವೇ ಚಿಕ್ಕ ಮಂಡ್ಯ ಬಳಿ ಸ್ವಿಫ್ಟ್ ಹೊತ್ತಿಕೊಂಡು ಸಂಪುರ್ಣ ಭಸ್ಮವಾಗಿದೆ. ಕಾರಿನದಲ್ಲಿದ್ದ ದಂಪತಿಗಳು ಪ್ರಾಣಪಾಯದಿಂದ ಪಾರಾಗಿದ್ದಾರೆ. ಮಂಡ್ಯ ಅಗ್ನಿಶಾಮಕ ಠಾಣೆಯಿಂದ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ




