ಪದವೀಧರರ ಕ್ಷೇತ್ರ ಚುನಾವಣೆ; ಸೋಲು-ಗೆಲುವಿನಾಚೆ ತಿರಸ್ಕೃತ ಮತಗಳ ಚರ್ಚೆ

Date:

ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ. ಸಂಕನೂರ ಗೆಲುವು ಸಾಧಿಸಿದ್ದಾರೆ. ಆದರೆ ಈ ಚುನಾವಣೆಯ ಫಲಿತಾಂಶದ ನಡುವೆ 10,245 ಮತಗಳು ತಿರಸ್ಕೃತಗೊಂಡಿರುವುದು ಈಗ ಗಮನ ಸೆಳೆದಿದೆ. ಪದವೀಧರರ ಕ್ಷೇತ್ರವೆಂದರೆ ವಿದ್ಯಾವಂತ ಮತದಾರರೇ ನಿರ್ಣಾಯಕ ಪಾತ್ರ ವಹಿಸುವ ಕ್ಷೇತ್ರ. ಇಂತಹ ಚುನಾವಣೆಯಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯ ಮತಗಳು ತಿರಸ್ಕೃತಗೊಂಡಿರುವುದು ಮತದಾನದ ವಿಧಾನ, ಮತದಾರರ ಅರಿವು ಹಾಗೂ ಚುನಾವಣಾ ಆಯೋಗದ ಜಾಗೃತಿ ಕಾರ್ಯಗಳ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

- Advertisement -

ಗೆಲುವಿನ ಸಂಭ್ರಮದ ನಡುವೆ ತಿರಸ್ಕೃತ ಮತಗಳ ಚರ್ಚೆ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಾಗಲಕೋಟೆ | ಓದುಗರಿಲ್ಲದೆ ಧೂಳು ಹಿಡಿಯುತ್ತಿರುವ ಪುಸ್ತಕಗಳು; ಡಿಜಿಟಲ್...

ಸಾರ್ವಜನಿಕರ ತೆರಿಗೆ ಹಣದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಲಾದ ಆಧುನಿಕ ಡಿಜಿಟಲ್ ಗ್ರಂಥಾಲಯವೊಂದು ಸಾರ್ವಜನಿಕರ ಬಳಕೆಗೆ ಸಿಗದೆ ಮೂಲೆಗುಂಪಾಗಿರುವ ಘಟನೆ ಬಾಗಲಕೋಟೆಯಲ್ಲಿ ಬೆಳಕಿಗೆ ಬಂದಿದೆ. ಓದುಗರ ಹಾಗೂ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ನೆರವಾಗಬೇಕಿದ್ದ...

ಖಾಲಿ ಜೇಬಿನ ಸರ್ಕಾರ, ಪಟ್ಟು ಬಿಡದ ಕಬ್ಬು ಬೆಳೆಗಾರರು;...

ಚೂನಪ್ಪ ಪೂಜೇರಿ ಹಾಗೂ ಶಶಿಕಾಂತ ಗುರೂಜಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಕಬ್ಬಿಗೆ ಪ್ರತಿ ಟನ್‌ಗೆ ₹5,500 ಬೆಲೆ ನೀಡಬೇಕೆಂದು ಆಗ್ರಹಿಸಿ ಆರಂಭವಾದ ಹೋರಾಟ...

ಜಾಗತಿಕ ಪೈಪೋಟಿಗೆ ಕನ್ನಡಿಗರನ್ನು ಸಜ್ಜುಗೊಳಿಸುವ ಬೃಹತ್ ವೇದಿಕೆ ‘ಬೆಂಗಳೂರು...

ರಾಜ್ಯದ ಯುವಜನತೆಯನ್ನು ಭವಿಷ್ಯದ ಜಾಗತಿಕ ಉದ್ಯೋಗ ಮಾರುಕಟ್ಟೆಯ ತೀವ್ರ ಪೈಪೋಟಿ ಮತ್ತು ಸವಾಲುಗಳಿಗೆ ಸುಸಜ್ಜಿತವಾಗಿ ಸಿದ್ಧಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ ರಾಜ್ಯ ಸರ್ಕಾರವು ಬೃಹತ್ ಹೆಜ್ಜೆಯನ್ನಿಟ್ಟಿದೆ. ಇದರ ಅಂಗವಾಗಿ ಮುಂಬರುವ ನವೆಂಬರ್ 3, 4 ಹಾಗೂ...

ಪಶ್ಚಿಮ ಪದವೀಧರರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆಯ ಮತ ಎಣಿಕೆ ಅಕ್ಟೋಬರ್ 27ರಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಆರಂಭವಾಗಿ ಅಕ್ಟೋಬರ್ 28ರ ಮಧ್ಯರಾತ್ರಿ 2 ಗಂಟೆಗೆ ಮುಕ್ತಾಯಗೊಂಡಿದೆ. ಚುನಾವಣಾಧಿಕಾರಿಯಾಗಿರುವ ಬೆಳಗಾವಿ ಪ್ರಾದೇಶಿಕ ಆಯುಕ್ತೆ ಕೆ.ಎಂ. ಜಾನಕಿ ಅವರ ಮಾಹಿತಿ ಪ್ರಕಾರ, ಮೊದಲ ಪ್ರಾಶಸ್ತ್ಯದ ಮತಗಳ ಎಣಿಕೆಯಲ್ಲಿ ಎಸ್.ವಿ. ಸಂಕನೂರ 33,711 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ 24,388 ಮತಗಳನ್ನು ಪಡೆದಿದ್ದು, ಸಂಕನೂರ ಅವರು 9,323 ಮತಗಳ ಅಂತರದಿಂದ ಗೆದ್ದಿದ್ದಾರೆ.

WhatsApp Image 2026 10 28 at 11.24.26 AM 1

ಆದರೆ, ಈ ಚುನಾವಣೆಯಲ್ಲಿ ಚಲಾವಣೆಯಾದ ಮತಗಳ ಪೈಕಿ 10,245 ಮತಗಳು ತಿರಸ್ಕೃತಗೊಂಡಿವೆ. ಅಂದರೆ, ಒಟ್ಟು ಮತಗಳ ಸುಮಾರು ಶೇ.13.9ರಷ್ಟು ಮತಗಳು ತಿರಸ್ಕೃತವಾಗಿವೆ. ಸರಳವಾಗಿ ಹೇಳುವುದಾದರೆ, ಚಲಾವಣೆಯಾದ ಪ್ರತಿ 100 ಮತಗಳಲ್ಲಿ ಸುಮಾರು 14 ಮತಗಳು ಎಣಿಕೆಗೆ ಮಾನ್ಯವಾಗಿಲ್ಲ.

ಪದವೀಧರರ ಕ್ಷೇತ್ರದಲ್ಲೇ ಇಷ್ಟೊಂದು ಮತಗಳು ತಿರಸ್ಕೃತವಾಗಿದ್ದೇಕೆ?

ಪದವೀಧರರ ಕ್ಷೇತ್ರದಲ್ಲಿ ಮತ ಚಲಾಯಿಸುವವರೇ ವಿದ್ಯಾರ್ಹತೆ ಹೊಂದಿರುವವರು. ಹೀಗಿರುವಾಗ ಮತದಾನದ ವೇಳೆ ಇಷ್ಟೊಂದು ಮತಗಳು ತಿರಸ್ಕೃತವಾಗಿರುವುದು ಸಹಜವಾಗಿಯೇ ಪ್ರಶ್ನೆ ಮೂಡಿಸುತ್ತದೆ. ಮತದಾರರಿಗೆ ಪ್ರಾಶಸ್ತ್ಯದ ಮತದಾನದ ವಿಧಾನ ಸರಿಯಾಗಿ ಅರ್ಥವಾಗಿರಲಿಲ್ಲವೇ? ಮತಪತ್ರದಲ್ಲಿ ಮತ ದಾಖಲಿಸುವಾಗ ತಪ್ಪುಗಳಾಗಿವೆಯೇ? ಮತದಾನದ ಮುನ್ನ ಅಗತ್ಯವಿರುವಷ್ಟು ಮಾಹಿತಿ ನೀಡಲಾಗಿತ್ತೇ? ಎಂಬ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಗಬೇಕಿದೆ.

ವಿದ್ಯಾವಂತರು ಎಂಬ ಕಾರಣಕ್ಕೆ ಪ್ರತಿಯೊಬ್ಬರಿಗೂ ಚುನಾವಣೆಯ ತಾಂತ್ರಿಕ ವಿಧಾನಗಳ ಬಗ್ಗೆ ಸಂಪೂರ್ಣ ಅರಿವು ಇರುತ್ತದೆ ಎಂದು ಹೇಳಲಾಗದು. ಪದವಿ ಪಡೆದಿರುವುದು ಒಂದು ವಿಚಾರವಾದರೆ, ಪ್ರಾಶಸ್ತ್ಯದ ಮತದಾನದ ನಿಯಮಗಳನ್ನು ತಿಳಿದುಕೊಂಡು ಮತ ಚಲಾಯಿಸುವುದು ಮತ್ತೊಂದು ವಿಚಾರ. ಈ ಎರಡರ ನಡುವಿನ ವ್ಯತ್ಯಾಸವನ್ನು ಈ ಫಲಿತಾಂಶ ಗಮನಕ್ಕೆ ತರುತ್ತಿದೆ.

ಮತದಾನದ ಅರಿವು ಮೂಡಿಸುವುದು ಯಾರ ಜವಾಬ್ದಾರಿ?

ಮತದಾರರು ನಿಯಮಗಳನ್ನು ತಿಳಿದುಕೊಂಡು ಮತ ಚಲಾಯಿಸುವ ಜವಾಬ್ದಾರಿ ಹೊಂದಿರುತ್ತಾರೆ. ಅದೇ ರೀತಿ, ಮತದಾನದ ಪ್ರಕ್ರಿಯೆ ಸರಿಯಾಗಿ ಅರ್ಥವಾಗುವಂತೆ ಅಗತ್ಯ ಮಾಹಿತಿ ಒದಗಿಸುವುದು ಮತ್ತು ಜಾಗೃತಿ ಮೂಡಿಸುವುದೂ ಚುನಾವಣಾ ವ್ಯವಸ್ಥೆಯ ಪ್ರಮುಖ ಜವಾಬ್ದಾರಿಯಾಗಿದೆ.

ವಿಶೇಷವಾಗಿ ಪ್ರಾಶಸ್ತ್ಯದ ಮತದಾನ ನಡೆಯುವ ಚುನಾವಣೆಗಳಲ್ಲಿ ಮತಪತ್ರದಲ್ಲಿ ಮತ ದಾಖಲಿಸುವ ಸರಿಯಾದ ವಿಧಾನ, ಮತ ಅಮಾನ್ಯವಾಗಲು ಕಾರಣವಾಗುವ ತಪ್ಪುಗಳು ಹಾಗೂ ಮತದಾರರು ಪಾಲಿಸಬೇಕಾದ ನಿಯಮಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡುವುದು ಅಗತ್ಯ. ಕೇವಲ ಮತದಾನಕ್ಕೆ ಕರೆ ನೀಡುವುದಷ್ಟೇ ಅಲ್ಲದೆ, ಮತದಾನ ಹೇಗೆ ಮಾಡಬೇಕು ಎಂಬುದನ್ನೂ ಮತದಾರರಿಗೆ ಅರ್ಥವಾಗುವಂತೆ ತಿಳಿಸಬೇಕಿದೆ.

ಈ ಚುನಾವಣೆಯಲ್ಲಿ ತಿರಸ್ಕೃತಗೊಂಡ 10,245 ಮತಗಳಿಗೆ ಒಂದೇ ಕಾರಣವಿದೆ ಎಂದು ತೀರ್ಮಾನಿಸಲಾಗದು. ಮತಗಳು ಯಾವ ಯಾವ ಕಾರಣಗಳಿಂದ ತಿರಸ್ಕೃತಗೊಂಡಿವೆ ಎಂಬುದರ ಕುರಿತು ಅಧಿಕೃತ ವಿವರ ಲಭ್ಯವಾದರೆ ಮಾತ್ರ ಸಮಸ್ಯೆಯ ನಿಖರ ಸ್ವರೂಪ ತಿಳಿಯಲಿದೆ. ಆದ್ದರಿಂದ ಚುನಾವಣಾ ಆಯೋಗವು ತಿರಸ್ಕೃತ ಮತಗಳ ಕಾರಣಗಳ ಬಗ್ಗೆ ಮಾಹಿತಿ ನೀಡುವುದು ಸಾರ್ವಜನಿಕ ಚರ್ಚೆಗೆ ಸಹಕಾರಿಯಾಗಲಿದೆ.

ಸಾಮಾನ್ಯ ಚುನಾವಣೆಗಳಲ್ಲಿ (ವಿಧಾನಸಭೆ/ಲೋಕಸಭೆ) ಮತದಾರರು ತಾವು ಇಷ್ಟಪಟ್ಟ ಒಬ್ಬ ಅಭ್ಯರ್ಥಿಗೆ ಮಾತ್ರ ಮತ ಚಲಾಯಿಸುತ್ತಾರೆ. ಆದರೆ ವಿಧಾನ ಪರಿಷತ್ತು ಅಥವಾ ರಾಜ್ಯಸಭಾ ಚುನಾವಣೆಗಳಲ್ಲಿ ಪ್ರಾಶಸ್ತ್ಯದ ಮತದಾನ ಪದ್ಧತಿ ಇರುತ್ತದೆ. ಇಲ್ಲಿ ಮತದಾರರು 1, 2, 3… ಹೀಗೆ ತಮ್ಮ ಆದ್ಯತೆಗಳನ್ನು ಅಂಕಿಗಳಲ್ಲಿ (ಅಥವಾ ರೋಮನ್ ಅಂಕಿ) ನಮೂದಿಸಬೇಕು. ಅನೇಕ ಮತದಾರರು ‘1’ ಎಂದು ಒಂದೇ ಕಡೆ ಗುರುತು ಮಾಡುವುದು, ಒಂದೇ ಸಂಖ್ಯೆಯನ್ನು ಇಬ್ಬರಿಗೆ ನೀಡುವುದು, ಅಥವಾ ಅಭ್ಯರ್ಥಿಯ ಹೆಸರಿನ ಮುಂದೆ ‘ಟಿಕ್‌’ ಅಥವಾ ‘X’ ಗುರುತು ಹಾಕುವುದು ಇತ್ಯಾದಿ ಕಾರಣಗಳಿಂದ ಮತಗಳು ಅಮಾನ್ಯಗೊಳ್ಳುತ್ತವೆ. ಪದವೀಧರರಾದರೂ ಈ ಗೊಂದಲದ ಬಗ್ಗೆ ಸ್ಪಷ್ಟತೆಯ ಕೊರತೆಯಿರುವುದು ಈ ಫಲಿತಾಂಶದಿಂದ ಸ್ಪಷ್ಟವಾಗುತ್ತದೆ.

WhatsApp Image 2026 10 28 at 11.24.27 AM

ಈ ಚುನಾವಣೆಯಲ್ಲಿ ವಿಜೇತ ಎಸ್.ವಿ. ಸಂಕನೂರ ಮತ್ತು ಎರಡನೇ ಸ್ಥಾನ ಪಡೆದ ಮೋಹನ ಲಿಂಬಿಕಾಯಿ ನಡುವಿನ ಮತಗಳ ವ್ಯತ್ಯಾಸ 9,323 ಆಗಿದ್ದರೆ, ತಿರಸ್ಕೃತಗೊಂಡ ಮತಗಳ ಸಂಖ್ಯೆ ಬರೋಬ್ಬರಿ 10,245. ಅಂದರೆ, ಸೋಲು-ಗೆಲುವಿನ ಅಂತರಕ್ಕಿಂತ ತಿರಸ್ಕೃತ ಮತಗಳೇ ಹೆಚ್ಚಿವೆ. ಇದು ಪ್ರಜಾಪ್ರಭುತ್ವದ ದೃಷ್ಟಿಯಿಂದ ಅತ್ಯಂತ ಗಂಭೀರವಾದ ವಿಷಯ. ಒಂದು ವೇಳೆ ಈ ತಿರಸ್ಕೃತ ಮತಗಳು ಮಾನ್ಯವಾಗಿದ್ದಿದ್ದರೆ, ಫಲಿತಾಂಶದ ಚಿತ್ರಣವೇ ಬದಲಾಗುವ ಸಾಧ್ಯತೆಯನ್ನೂ ತಳ್ಳಿಹಾಕಲಾಗುವುದಿಲ್ಲ.

ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲಾ ಪಂಚಾಯತ್

ಕೇವಲ ಜಾಹೀರಾತುಗಳನ್ನು ನೀಡುವುದರ ಜೊತೆಗೆ, ಪದವೀಧರರ ಸಂಘಗಳು, ಕಾಲೇಜುಗಳು, ಮತ್ತು ವೃತ್ತಿಪರ ವೇದಿಕೆಗಳ ಮೂಲಕ ‘ಮಾದರಿ ಮತಪತ್ರ’ ಬಳಸಿ ಪ್ರಾಯೋಗಿಕ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳುವುದು ಅತ್ಯಗತ್ಯ. ಚುನಾವಣೆಗಳಲ್ಲಿ ಸ್ಪರ್ಧಿಸುವ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ತಮ್ಮ ಮತದಾರರಿಗೆ ಕೇವಲ ಪ್ರಚಾರ ಮಾಡುವುದಷ್ಟೇ ಅಲ್ಲದೆ, ಮತವನ್ನು ಸರಿಯಾಗಿ ದಾಖಲಿಸುವುದು ಹೇಗೆ? ಎಂಬುದರ ಕುರಿತು ತರಬೇತಿ ಅಥವಾ ಕರಪತ್ರಗಳ ಮೂಲಕ ಅರಿವು ಮೂಡಿಸಲೂ ಬೇಕು.

ಚುನಾವಣಾ ಆಯೋಗವು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಾಶಸ್ತ್ಯದ ಮತ ಚಲಾಯಿಸುವ ಸರಳ ಚಿತ್ರಸಹಿತ ಅಥವಾ ಅನಿಮೇಷನ್ ವೀಡಿಯೊಗಳನ್ನು ವ್ಯಾಪಕವಾಗಿ ಬಿಡುಗಡೆ ಮಾಡಬೇಕು. ಮತದಾನ ಕೇಂದ್ರಗಳ ಒಳಗೆ ಕನಿಷ್ಠ ಪಕ್ಷ ಮತಪತ್ರವನ್ನು ಹೇಗೆ ಭರ್ತಿ ಮಾಡಬೇಕು ಎಂಬುದರ ದೊಡ್ಡದಾದ ಚಿತ್ರಸಹಿತ ಫಲಕಗಳನ್ನು (Flex/Posters) ಕಣ್ಣಿಗೆ ಕಾಣುವಂತೆ ಪ್ರದರ್ಶಿಸಬೇಕು. ಕಾಲೇಜು ಹಂತದಲ್ಲೇ ವಿದ್ಯಾರ್ಥಿಗಳಿಗೆ ಚುನಾವಣಾ ವ್ಯವಸ್ಥೆ ಮತ್ತು ಸಂವಿಧಾನಾತ್ಮಕ ಪ್ರಕ್ರಿಯೆಗಳ ಬಗ್ಗೆ ಪ್ರಾಯೋಗಿಕ ಜ್ಞಾನ ನೀಡುವ ಮೂಲಕ ಭವಿಷ್ಯದಲ್ಲಿ ಇಂತಹ ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳಬಹುದು.

+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಭಿವೃದ್ಧಿಯಿಂದ ದೂರ ಉಳಿದ ಜೀವನಮರಡಗಿ: ಬಸ್ ಇಲ್ಲ, ನೀರಿಲ್ಲ, ಊರಲ್ಲಿ ಪಡಿತರವೂ ಇಲ್ಲ!

ಸ್ವಾತಂತ್ರ್ಯಾನಂತರದ ಅಭಿವೃದ್ಧಿಯ ಹಾದಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯಗಳನ್ನು ತಲುಪಿಸುವ ಪ್ರಯತ್ನಗಳು...

ದಾಂಡೇಲಿ | ನಗರ ಪಾರ್ಕ್ ಅಭಿವೃದ್ಧಿ ಕಾಮಗಾರಿ ಕಳಪೆ: ತನಿಖೆ ನಡೆಸಿ ಕ್ರಮಕ್ಕೆ ಡಿ. ಸ್ಯಾಮ್ಸನ್ ಆಗ್ರಹ

ಕೇಂದ್ರ ಸರ್ಕಾರದ ಅನುದಾನದಲ್ಲಿ ದಾಂಡೇಲಿ ನಗರದಲ್ಲಿ ಕೈಗೆತ್ತಿಕೊಂಡಿರುವ ಪಾರ್ಕ್ ಅಭಿವೃದ್ಧಿ ಕಾಮಗಾರಿ...

ದಾಂಡೇಲಿ | ಆಶ್ರಯ ನಿವೇಶನ ಅಕ್ರಮವಾಗಿ ನೋಂದಣಿ ಆರೋಪ: ಕ್ರಮಕ್ಕೆ ಆಗ್ರಹಿಸಿ ದೂರು

ದಾಂಡೇಲಿ: ಜೋಯಿಡಾ ತಾಲೂಕಿನ ವೆಂಕಟೇಶ @ ಸ್ವಾಮಿ ಸುಬ್ಬಯ್ಯ ಭೂಪಾನಿ ಅವರಿಗೆ...

ಮುಂಡಗೋಡ | ಜುವೆಲರ್ಸ್ ಅಂಗಡಿಯಲ್ಲಿ 1.30 ಲಕ್ಷ ರೂ. ಮೌಲ್ಯದ ಬೆಳ್ಳಿ ಕಾಲು ಚೈನ್ ಕಳವು

ಮುಂಡಗೋಡ: ಪಟ್ಟಣದ ಶಿರಸಿ ರಸ್ತೆಯಲ್ಲಿರುವ ಶ್ರೀ ರಾಜಲಕ್ಷ್ಮೀ ಜುವೆಲರ್ಸ್ ಅಂಗಡಿಯಲ್ಲಿ ಸುಮಾರು...