ಓಲಾ, ಉಬರ್ ಟ್ಯಾಕ್ಸಿಗಳಿಗೂ ಮೀಟರ್ ಕಡ್ಡಾಯ: ಸಾರಿಗೆ ಇಲಾಖೆಯ ಮಹತ್ವದ ನಿರ್ಧಾರ

Date:

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಓಲಾ, ಉಬರ್‌ನಂತಹ ಆ್ಯಪ್ ಆಧಾರಿತ ಟ್ಯಾಕ್ಸಿ ಹಾಗೂ ಆಟೋರಿಕ್ಷಾಗಳಿಗೆ ಮೀಟರ್ ಅಳವಡಿಸುವುದನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಲು ನಿರ್ಧರಿಸಿದೆ.

- Advertisement -

ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಈ ಕುರಿತು ಸೋಮವಾರ ಸುದ್ಧಿಗಾರರೊಂದಿಗೆ ಮಾತನಾಡಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಸಾಮಾನ್ಯ ಆಟೋರಿಕ್ಷಾಗಳಲ್ಲಿ ಅಳವಡಿಸಿರುವ ಮಾದರಿಯಲ್ಲೇ ಈ ಆ್ಯಪ್ ಆಧಾರಿತ ವಾಹನಗಳಿಗೂ ಮೀಟರ್ ಕಡ್ಡಾಯವಾಗಲಿದ್ದು, ಸರ್ಕಾರ ನಿಗದಿಪಡಿಸಿದ ದರವನ್ನೇ ಪ್ರಯಾಣಿಕರಿಂದ ಪಡೆಯಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮೀಟರ್ ಅಳವಡಿಕೆ ಕಡ್ಡಾಯಗೊಳಿಸಲು ಅಗತ್ಯ ರೂಪುರೇಷೆ ಹಾಗೂ ಕಾನೂನು ಸಿದ್ಧಪಡಿಸಲಾಗುತ್ತಿದ್ದು, ನಿಯಮ ಉಲ್ಲಂಘಿಸಿ ಸಂಚರಿಸುವ ಟ್ಯಾಕ್ಸಿಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮಹಿಳೆ ಮಾಡುತ್ತಿರುವ ಬಿಟ್ಟಿ ಚಾಕರಿಗಳೇನೇನು? ಇದನ್ನೇಕೆ ಅರಿಯಲು ಮುಂದಾಗಿದೆ...

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸರ್ಕಾರದ ಗುರಿಗೆ ಒಂದು ದೊಡ್ಡ ಅಡ್ಡಿ ಎದುರಾಗಿದೆ. ಅದೇನೆಂದರೆ; ಸಾಕಷ್ಟು ಸಂಖ್ಯೆಯ ಮಹಿಳೆಯರನ್ನು ಉದ್ಯೋಗ ಕ್ಷೇತ್ರಕ್ಕೆ ತರುವುದು. ವಿಶ್ವಬ್ಯಾಂಕ್ ಪ್ರಕಾರ, 2047ರ ವೇಳೆಗೆ...

ಭದ್ರತೆಯ ಹೆಸರಿನಲ್ಲಿ ಮಾಂಸದಂಗಡಿಗಳಿಗೆ ಬೀಗ: ಸರ್ಕಾರದ ಈ ನಿರ್ಧಾರದ...

ಈ ಬೆಳವಣಿಗೆ ಕಾಂಗ್ರೆಸ್ ಸರ್ಕಾರದ ಆಡಳಿತಾತ್ಮಕ ಹೊಣೆಗಾರಿಕೆಯನ್ನೂ ಮುನ್ನೆಲೆಗೆ ತಂದಿದೆ. ಪ್ರಧಾನಿಯ ಭೇಟಿಯ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್‌ಗಳ ಆಗಮನ ಮತ್ತು ನಿರ್ಗಮನದ ಭದ್ರತೆಯನ್ನು ನಿರ್ಬಂಧಕ್ಕೆ ಕಾರಣವೆಂದು ಸಮರ್ಥಿಸಲಾಗುತ್ತಿದ್ದರೆ, ಅದಕ್ಕೂ ಸಮಗ್ರ ವಿವರಣೆ ಬೇಕಾಗುತ್ತದೆ. ಪ್ರಧಾನಿ...

ನಿಜಕ್ಕೂ ಭಾರತದ ಬಡತನ 16%ಗೆ ಇಳಿದಿದೆಯೇ? ವಾಸ್ತವ ಹೇಳುವುದೇನು?

ವಿಶ್ವಬ್ಯಾಂಕ್ ವರದಿ ಪ್ರಕಾರ, ಭಾರತದಲ್ಲಿ ಬಡತನ 16.1%ಗೆ ಮತ್ತು ತೀವ್ರ ಬಡತನ 2.6%ಗೆ ಇಳಿದಿದೆ. ಇದೇ ಅಂಕಿಅಂಶವನ್ನು ಬಳಸಿಕೊಂಡು ತಮ್ಮ ಸಾಧನೆ ಎಂಬಂತೆ ಕೇಂದ್ರ ಸರ್ಕಾರ ಸಂಭ್ರಮಿಸುತ್ತಿದೆ. ಆದರೆ, ದೇಶದ ಸುಮಾರು 80...

​ಸರ್ಕಾರದ ಈ ದಿಟ್ಟ ನಿರ್ಧಾರಕ್ಕೆ ಆ್ಯಪ್ ಕಂಪನಿಗಳ ವಿರುದ್ಧ ಕೇಳಿಬಂದಿರುವ ಸಾಲು ಸಾಲು ದೂರುಗಳೇ ಪ್ರಮುಖ ಕಾರಣವಾಗಿವೆ. ಆ್ಯಪ್ ಆಧಾರಿತ ಸೇವಾ ಕಂಪನಿಗಳು ಚಾಲಕರಿಂದ ಭಾರಿ ಪ್ರಮಾಣದ ಕಮಿಷನ್ ವಸೂಲಿ ಮಾಡುತ್ತಿವೆ ಎಂಬುದು ವಾಹನ ಮಾಲೀಕರು ಮತ್ತು ಚಾಲಕರ ಪ್ರಮುಖ ಆರೋಪವಾಗಿದೆ. ಪೆಟ್ರೋಲ್, ಡೀಸೆಲ್ ಮತ್ತು ಸಿಎನ್‌ಜಿ ಬೆಲೆಗಳು ಗಣನೀಯವಾಗಿ ಏರಿಕೆಯಾಗಿದ್ದರೂ, ಚಾಲಕರಿಗೆ ಅದಕ್ಕೆ ತಕ್ಕಂತೆ ಆದಾಯ ಸಿಗುತ್ತಿಲ್ಲ. ಇದಲ್ಲದೆ, ಸೇವಾ ಕಂಪನಿಗಳು ಚಾಲಕರಿಗೆ ಪಿಎಫ್, ಪಿಂಚಣಿ, ಆರೋಗ್ಯ ವಿಮೆಯಂತಹ ಯಾವುದೇ ಕನಿಷ್ಠ ಸಾಮಾಜಿಕ ಭದ್ರತೆಯನ್ನೂ ಒದಗಿಸುತ್ತಿಲ್ಲ. ಯಾವುದೇ ಜವಾಬ್ದಾರಿ ನಿಭಾಯಿಸದಿದ್ದರೂ ಈ ಕಂಪನಿಗಳು ಮಾತ್ರ ಕೋಟ್ಯಂತರ ರೂಪಾಯಿ ಲಾಭ ಗಳಿಸುತ್ತಿವೆ ಎಂದು ಕ್ಯಾಬ್ ಮಾಲೀಕರು ಹಾಗೂ ಚಾಲಕರು ಸರ್ಕಾರದ ಮೊರೆ ಹೋಗಿದ್ದರು. ಅವರ ಕೋರಿಕೆಯ ಮೇರೆಗೇ ಈ ಹೊಸ ನಿಯಮ ಜಾರಿಗೆ ತರಲಾಗುತ್ತಿದೆ.

​ಮತ್ತೊಂದೆಡೆ, ಸಾರ್ವಜನಿಕರು ಕೂಡ ಈ ಆ್ಯಪ್ ಸೇವೆಗಳ ವಿರುದ್ಧ ಸರ್ಕಾರದ ಮೆಟ್ಟಿಲೇರಿದ್ದರು. ಚಾಲಕರು ಪದೇಪದೇ ಬುಕಿಂಗ್ ರದ್ದು ಮಾಡುವುದು, ಹೋಗಬೇಕಾದ ಸ್ಥಳ ತಿಳಿದುಕೊಂಡ ಮೇಲೆ ‘ಬರುವುದಿಲ್ಲ’ ಎನ್ನುವುದು ಹಾಗೂ ನಿಗದಿತ ಸಮಯಕ್ಕೆ ತಲುಪದೆ ವಿಳಂಬ ಮಾಡುವುದು ದೈನಂದಿನ ಸಮಸ್ಯೆಯಾಗಿತ್ತು. ಮಳೆ ಬಂದಾಗ ಅಥವಾ ಸಂಚಾರ ದಟ್ಟಣೆ ಹೆಚ್ಚಾದಾಗ ದರವನ್ನು ಮಿತಿಮೀರಿ ಏರಿಸುವುದು, ಆ್ಯಪ್‌ನಲ್ಲಿ ತೋರಿಸಿದ್ದಕ್ಕಿಂತ ಹೆಚ್ಚಿನ ಹಣಕ್ಕೆ ಪೀಡಿಸುವಂತಹ ಪ್ರಕರಣಗಳ ಬಗ್ಗೆಯೂ ಪ್ರಯಾಣಿಕರು ದೂರು ಸಲ್ಲಿಸಿದ್ದರು. ಈ ಎಲ್ಲಾ ಅಂಶಗಳನ್ನು ಆಧರಿಸಿ, ಆ್ಯಪ್ ಸೇವೆ ನೀಡುವ ಸಂಸ್ಥೆಗಳು ಹಾಗೂ ಚಾಲಕರ ನಡವಳಿಕೆಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ.

​ಹೊಸ ಸೇವೆಗಳ ನಿಯಂತ್ರಣದ ಬಗ್ಗೆಯೂ ಮಾತನಾಡಿರುವ ಸಚಿವರು, ‘ವಿಯೋಮ್’ (Viom) ಮೂಲದ ಗ್ರೀನ್ ಎಕ್ಸ್‌ಯುವಿ ಟ್ಯಾಕ್ಸಿಗಳ ಕಾರ್ಯಾಚರಣೆಗೆ ತಾತ್ಕಾಲಿಕ ತಡೆ ನೀಡಿದ್ದಾರೆ. ಈಗಾಗಲೇ 100 ಟ್ಯಾಕ್ಸಿಗಳ ನೋಂದಣಿಯಾಗಿದ್ದರೂ, ರಾಜ್ಯದ ಸ್ಥಳೀಯ ಚಾಲಕರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಮುಂದಿನ ಆದೇಶದವರೆಗೆ ಇವುಗಳ ನೋಂದಣಿ ಮಾಡದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಅನುಮತಿ ನೀಡಬೇಕೇ ಅಥವಾ ಬೇಡವೇ ಎಂಬುದರ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಬೈರತಿ ಸುರೇಶ್ ತಿಳಿಸಿದ್ದಾರೆ.

​ಸಾರಿಗೆ ನಿಗಮಗಳ ನೌಕರರಿಗೆ ಇದೇ ವೇಳೆ ಸಂತಸದ ಸುದ್ದಿ ನೀಡಿರುವ ಸರ್ಕಾರ, ಬಾಕಿ ಇದ್ದ ವೇತನ ಪಾವತಿಗೆ 280 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಸಾರಿಗೆ ನೌಕರರಿಗೆ ಒಟ್ಟು 1,200 ಕೋಟಿ ರೂ. ವೇತನ ಪಾವತಿ ಬಾಕಿ ಇತ್ತು. ಈ ಪೈಕಿ ಮೊದಲ ಕಂತಿನಲ್ಲಿ 450 ಕೋಟಿ ರೂ., ಎರಡನೇ ಕಂತಿನಲ್ಲಿ 170 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಇದೀಗ ಮೂರನೇ ಕಂತಾಗಿ 280 ಕೋಟಿ ರೂ. ಬಿಡುಗಡೆಯಾಗಿದ್ದು, ಇನ್ನುಳಿದ 300 ಕೋಟಿ ರೂಪಾಯಿಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ.

​ಇನ್ನು, ರಸ್ತೆ ಸುರಕ್ಷತೆಗಾಗಿ ಕಠಿಣ ನಿಯಮಗಳನ್ನು ಪ್ರಕಟಿಸಲಾಗಿದೆ. ದ್ವಿಚಕ್ರ ವಾಹನ ಸವಾರರು ಹಾಗೂ ಹಿಂಬದಿ ಸವಾರರ ರಕ್ಷಣೆಗಾಗಿ ‘ಹಾಫ್ ಹೆಲ್ಮೆಟ್’ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳು ಪೂರ್ಣಗೊಳ್ಳುತ್ತಿದ್ದು, ಹೊಸ ವರ್ಷದಿಂದ (2027ನೇ ಜನವರಿ) ಈ ನಿಯಮ ಕಟ್ಟುನಿಟ್ಟಾಗಿ ಜಾರಿಗೆ ಬರಲಿದೆ. ಇದರ ಜೊತೆಗೆ, ‘ಒನ್ ವೇ’ (ಏಕಮುಖ ಸಂಚಾರ) ಮಾರ್ಗಗಳಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸುವವರ ಮೇಲಿನ ದಂಡವನ್ನು ಬರೋಬ್ಬರಿ ಮೂರು ಪಟ್ಟು ಹೆಚ್ಚಿಸಲಾಗಿದೆ. ಮೊದಲ ಬಾರಿಗೆ ನಿಯಮ ಮೀರಿದರೆ 5,000 ರೂ., ಎರಡನೇ ಬಾರಿಗೆ 10,000 ರೂ. ದಂಡ ವಿಧಿಸಲಾಗುತ್ತದೆ ಹಾಗೂ ಮೂರನೇ ಬಾರಿಯೂ ಉಲ್ಲಂಘಿಸಿದರೆ ವಾಹನವನ್ನೇ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದು ಸಚಿವರು ವಿವರಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆಂಧ್ರದತ್ತ ಮುನ್ನುಗ್ಗುತ್ತಿರುವ ‘ಅಕ್ವಾನ್’ ಚಂಡಮಾರುತ: ಕರಾವಳಿಯಲ್ಲಿ 145 ಕಿ.ಮೀ ವೇಗದ ಬಿರುಗಾಳಿ ಭೀತಿ

ಆಗ್ನೇಯ ಮತ್ತು ಅದಕ್ಕೆ ಸಮೀಪದಲ್ಲಿರುವ ನೈರುತ್ಯ ಬಂಗಾಳಕೊಲ್ಲಿಯ ಭಾಗದಲ್ಲಿ ಕಳೆದ ಕೆಲವು...

SIR ಕಡಿತಗಳ ಆರೋಪದ ನಡುವೆಯೇ, ಕರ್ನಾಟಕದ ಮತದಾರರ ಪಟ್ಟಿಯ SSR ಘೋಷಿಸಿದ ECI

ಇತ್ತೀಚೆಗಷ್ಟೇ ಮುಕ್ತಾಯಗೊಂಡ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವೇಳೆ ಮತದಾರರ ಪಟ್ಟಿಯಿಂದ...

ಬಾಗಲಕೋಟೆ |ಸೆಂಟ್ರಲ್ ಕ್ಲಸ್ಟರ್ ಕಿಚನ್ ಯೋಜನೆ ಕೈಬಿಡಲು ಬಿಸಿಯೂಟ ನೌಕರರ ಆಗ್ರಹ

ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟ ತಯಾರಿಸಿ ವಿತರಿಸುವ ಜವಾಬ್ದಾರಿಯನ್ನು ಕೇಂದ್ರೀಕೃತ ಅಡುಗೆ...