ಮಹಿಳೆ ಮಾಡುತ್ತಿರುವ ಬಿಟ್ಟಿ ಚಾಕರಿಗಳೇನೇನು? ಇದನ್ನೇಕೆ ಅರಿಯಲು ಮುಂದಾಗಿದೆ ಮೋದಿ ಸರ್ಕಾರ?

Date:

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸರ್ಕಾರದ ಗುರಿಗೆ ಒಂದು ದೊಡ್ಡ ಅಡ್ಡಿ ಎದುರಾಗಿದೆ. ಅದೇನೆಂದರೆ; ಸಾಕಷ್ಟು ಸಂಖ್ಯೆಯ ಮಹಿಳೆಯರನ್ನು ಉದ್ಯೋಗ ಕ್ಷೇತ್ರಕ್ಕೆ ತರುವುದು. ವಿಶ್ವಬ್ಯಾಂಕ್ ಪ್ರಕಾರ, 2047ರ ವೇಳೆಗೆ ಭಾರತವು ಅಧಿಕ-ಆದಾಯದ ದೇಶವಾಗಲು ಅಗತ್ಯವಿರುವ 8%ರಷ್ಟು ಜಿಡಿಪಿ ಬೆಳವಣಿಗೆಯ ದರವನ್ನು ತಲುಪಲು, ಕಳೆದ ಸೆಪ್ಟೆಂಬರ್‌ನಲ್ಲಿ 34.6%ರಷ್ಟಿದ್ದ ಮಹಿಳಾ ಕಾರ್ಮಿಕ ಬಲದ ಪಾಲ್ಗೊಳ್ಳುವಿಕೆ ದರವನ್ನು (LFPR) 50%ಕ್ಕೆ ಏರಿಸುವುದೇ ಅತ್ಯುತ್ತಮ ಮಾರ್ಗವಾಗಿದೆ.

- Advertisement -

ಹಾಗಾದರೆ, ಹೆಚ್ಚಿನ ಮಹಿಳೆಯರು ಏಕೆ ಕೆಲಸ ಮಾಡುತ್ತಿಲ್ಲ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭದ್ರತೆಯ ಹೆಸರಿನಲ್ಲಿ ಮಾಂಸದಂಗಡಿಗಳಿಗೆ ಬೀಗ: ಸರ್ಕಾರದ ಈ ನಿರ್ಧಾರದ...

ಈ ಬೆಳವಣಿಗೆ ಕಾಂಗ್ರೆಸ್ ಸರ್ಕಾರದ ಆಡಳಿತಾತ್ಮಕ ಹೊಣೆಗಾರಿಕೆಯನ್ನೂ ಮುನ್ನೆಲೆಗೆ ತಂದಿದೆ. ಪ್ರಧಾನಿಯ ಭೇಟಿಯ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್‌ಗಳ ಆಗಮನ ಮತ್ತು ನಿರ್ಗಮನದ ಭದ್ರತೆಯನ್ನು ನಿರ್ಬಂಧಕ್ಕೆ ಕಾರಣವೆಂದು ಸಮರ್ಥಿಸಲಾಗುತ್ತಿದ್ದರೆ, ಅದಕ್ಕೂ ಸಮಗ್ರ ವಿವರಣೆ ಬೇಕಾಗುತ್ತದೆ. ಪ್ರಧಾನಿ...

ನಿಜಕ್ಕೂ ಭಾರತದ ಬಡತನ 16%ಗೆ ಇಳಿದಿದೆಯೇ? ವಾಸ್ತವ ಹೇಳುವುದೇನು?

ವಿಶ್ವಬ್ಯಾಂಕ್ ವರದಿ ಪ್ರಕಾರ, ಭಾರತದಲ್ಲಿ ಬಡತನ 16.1%ಗೆ ಮತ್ತು ತೀವ್ರ ಬಡತನ 2.6%ಗೆ ಇಳಿದಿದೆ. ಇದೇ ಅಂಕಿಅಂಶವನ್ನು ಬಳಸಿಕೊಂಡು ತಮ್ಮ ಸಾಧನೆ ಎಂಬಂತೆ ಕೇಂದ್ರ ಸರ್ಕಾರ ಸಂಭ್ರಮಿಸುತ್ತಿದೆ. ಆದರೆ, ದೇಶದ ಸುಮಾರು 80...

ಶಾಂಘೈ ಕೌಶಲ್ಯ ಶೃಂಗಸಭೆಯಲ್ಲಿ ಮಿಂಚಿದ ಕರ್ನಾಟಕದ ಪ್ರತಿಭೆಗಳು…ಪದಕಗಳ ಸೂರೆ

ಚೀನಾದ ಶಾಂಘೈನಲ್ಲಿ ನಡೆದ ಜಾಗತಿಕ 'ಕೌಶಲ್ಯ ಒಲಿಂಪಿಕ್ಸ್' ವೇದಿಕೆಯಲ್ಲಿ ನಮ್ಮ ಕರುನಾಡಿನ ಯುವಪ್ರತಿಭೆಗಳು ಹೊಸ ಇತಿಹಾಸ ಬರೆದಿದ್ದಾರೆ. ಕೇವಲ ಕನಸುಗಳನ್ನಷ್ಟೇ ಹೊತ್ತೊಯ್ದಿದ್ದ ನಮ್ಮ ನಾಡಿನ ಪ್ರತಿಭೆಗಳು, ತಮ್ಮ ಬೆವರು, ಕಠಿಣ ಪರಿಶ್ರಮ ಹಾಗೂ...

“ಮನೆಯ ಆರೈಕೆ ಜವಾಬ್ದಾರಿಗಳ ಕಾರಣದಿಂದಾಗಿ ಮಹಿಳೆಯರು ಉದ್ಯೋಗಕ್ಕೆ ಸೇರುತ್ತಿಲ್ಲ. ಮನೆಯೊಳಗಿನ ದುಡಿಮೆಗೂ – ಉದ್ಯೋಗಕ್ಕೆ ಸೇರದೇ ಇರುವುದಕ್ಕೂ ನೇರ ಸಂಬಂಧವಿದೆ ಎಂಬುದನ್ನು ಮೊದಲು ವೈಜ್ಞಾನಿಕವಾಗಿ ಸಾಬೀತುಪಡಿಸಬೇಕಾಗಿದೆ. ಈ ಸಂಬಂಧವನ್ನು ಖಚಿತಪಡಿಸಲು ಸಾಕಷ್ಟು ಸ್ಥೂಲ ದತ್ತಾಂಶಗಳು ಲಭ್ಯವಿಲ್ಲದ ಕಾರಣ, ಇಲ್ಲಿಯವರೆಗೆ ಕೇವಲ ಸಾಮಾನ್ಯ ವಿಶ್ಲೇಷಣೆ ಮತ್ತು ವಾದಗಳನ್ನಷ್ಟೇ ಮಾಡಲಾಗಿದೆ,” ಎನ್ನುತ್ತಾರೆ ಮಹಿಳಾ ಅಭಿವೃದ್ಧಿ ಅಧ್ಯಯನ ಕೇಂದ್ರದ (CWDS) ಪ್ರಾಧ್ಯಾಪಕಿ ನೀತಾ ಎನ್.

ಹೀಗಾಗಿ, ಸರ್ಕಾರವು ಈಗ ಈ ದತ್ತಾಂಶಗಳ ಹುಡುಕಾಟದಲ್ಲಿದೆ. ಶಿಕ್ಷಣ ತಜ್ಞರು, ಸೂಕ್ಷ್ಮ, ಸಣ್ಣ, ಮಧ್ಯಮ ಉದ್ಯಮಗಳ ಸಚಿವಾಲಯ (MSME), ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ಹಾಗೂ ಸರ್ಕಾರದ ಉನ್ನತ ಆರ್ಥಿಕ ಸಲಹೆಗಾರರ ಮನವಿಯ ಮೇರೆಗೆ, ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು (MoSPI) ತನ್ನ ಪ್ರಮುಖ ಉದ್ಯೋಗ ಮತ್ತು ಅಸಂಘಟಿತ ವಲಯದ ಸಮೀಕ್ಷೆಗಳಲ್ಲಿ ಬದಲಾವಣೆಗಳನ್ನು ತರಲು ಪ್ರಸ್ತಾಪಿಸಿದೆ.

ಅಂಕಿಅಂಶ ಸಚಿವಾಲಯದ ಅಧಿಕಾರಿಯೊಬ್ಬರ ಪ್ರಕಾರ, ಹೊಸ ಪ್ರಶ್ನೆಗಳು ಮಹಿಳೆಯರು ನಿರ್ವಹಿಸುತ್ತಿರುವ ‘ಆರೈಕೆ ಕೆಲಸದ ಪ್ರಮಾಣ’ವನ್ನು ಅಳೆಯಲು ನೆರವಾಗುತ್ತವೆ. ಅಲ್ಲದೆ, ಆರೈಕೆ ಕೆಲಸವು ಔಪಚಾರಿಕ ಉದ್ಯೋಗದೊಂದಿಗೆ ಬೆರೆತುಹೋಗುವ ಸಾಧ್ಯತೆ ಇರುವುದರಿಂದ, ಉದ್ಯೋಗದಲ್ಲಿರುವ ವ್ಯಕ್ತಿಗಳು ಎಷ್ಟು ಪ್ರಮಾಣದ ಮನೆಗೆಲಸ ಮತ್ತು ಆರೈಕೆ ಜವಾಬ್ದಾರಿಗಳನ್ನು ನಿರ್ವಹಿಸುತ್ತಾರೆ ಎಂಬುದನ್ನೂ ಇವು ತೋರಿಸಲಿವೆ. “ನಿರುದ್ಯೋಗಿಗಳ ಪೈಕಿ ಎಷ್ಟು ಮಂದಿ ಕುಟುಂಬದ ಪ್ರಾಥಮಿಕ ಆರೈಕೆದಾರರಾಗಿದ್ದಾರೆ ಅಥವಾ ಆರೈಕೆ ಜವಾಬ್ದಾರಿಗಳ ಕಾರಣದಿಂದಾಗಿಯೇ ಎಷ್ಟು ಮಂದಿಗೆ ಉದ್ಯೋಗಕ್ಕೆ ಸೇರಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ನಾವು ತಿಳಿದುಕೊಳ್ಳಬೇಕಾಗಿದೆ,” ಎಂದು ಅವರು ಹೇಳಿದ್ದಾರೆ.

ಸಮೀಕ್ಷೆಯಲ್ಲಿನ ಹೊಸ ಪ್ರಶ್ನೆಗಳು

ಕುಟುಂಬದ ಸದಸ್ಯರು ಮಾಡುವ ವೇತನರಹಿತ ಕೆಲಸದ ಬಗ್ಗೆ ಹೆಚ್ಚು ವಿವರವಾದ ಉತ್ತರಗಳನ್ನು ಪಡೆಯಲು ಆವರ್ತಕ ಕಾರ್ಮಿಕ ಬಲ ಸಮೀಕ್ಷೆಗೆ (PLFS) ಹೊಸ ಪ್ರಶ್ನೆಗಳನ್ನು ಸೇರಿಸಲು MoSPI ಕಳೆದ ತಿಂಗಳು ಸಲಹೆ ನೀಡಿದೆ. ಅಡುಗೆ ಮಾಡುವುದು, ಮಕ್ಕಳಿಗೆ ಆಹಾರ ತಿನ್ನಿಸುವುದು ಹಾಗೂ ಆರೈಕೆ ಮಾಡುವುದು, ಹಿರಿಯರಿಗೆ ಸಹಾಯ ಮಾಡುವುದು ಮುಂತಾದ ಸೇವೆಗಳು ಮತ್ತು ಅವರು ತಯಾರಿಸುವ ವಸ್ತುಗಳು ಸ್ವಂತ ಬಳಕೆಗಾಗಿಯೇ ಅಥವಾ ಮಾರಾಟಕ್ಕಾಗಿಯೇ ಎಂದು ಕೇಳುವುದು ಇದರಲ್ಲಿ ಸೇರಿದೆ. ಜೊತೆಗೆ, ಕಳೆದ 30 ದಿನಗಳಲ್ಲಿ ವೇತನದ ಕೆಲಸಕ್ಕಾಗಿ ಸಕ್ರಿಯವಾಗಿ ಹುಡುಕಾಟ ನಡೆಸಿದ್ದೀರಾ, ಪ್ರಸ್ತುತ ಅಂತಹ ಕೆಲಸ ಮಾಡಲು ಬಯಸುತ್ತೀರಾ ಹಾಗೂ ಕೆಲಸ ಹುಡುಕದಿರಲು ಪ್ರಮುಖ ಕಾರಣವೇನು ಎಂದು ಕೇಳಲೂ ಪ್ರಸ್ತಾಪಿಸಲಾಗಿದೆ. ಕೊನೆಯ ಪ್ರಶ್ನೆಯ ಉತ್ತರದ ಆಯ್ಕೆಗಳಲ್ಲಿ ‘ಕುಟುಂಬ ಮತ್ತು ಮನೆಯ ಜವಾಬ್ದಾರಿಗಳು’ ಎಂಬ ಆಯ್ಕೆಯನ್ನೂ ನೀಡಲಾಗಿದೆ.

ಕೆಲಸ ಹುಡುಕದವರಿಗೆ ಅದಕ್ಕೆ ಮುಖ್ಯ ಕಾರಣವೇನು ಎಂಬ ಪ್ರಶ್ನೆಯನ್ನು ಈಗಗಲೇ PLFS ಒಳಗೊಂಡಿದೆ; ಇದರಲ್ಲಿ ಅರ್ಹತೆ ಇಲ್ಲದಿರುವುದು, ಆರೋಗ್ಯ ಮತ್ತು ವಯಸ್ಸು, ವಿದ್ಯಾಭ್ಯಾಸ ಮುಂದುವರಿಸುವ ಇಚ್ಛೆ ಹಾಗೂ ಮಕ್ಕಳ ಆರೈಕೆ ಅಥವಾ ಮನೆಗೆಲಸದ ವೈಯಕ್ತಿಕ ಜವಾಬ್ದಾರಿಗಳು ಎಂಬ ಆಯ್ಕೆಗಳಿವೆ.

ತಜ್ಞರ ಪ್ರಕಾರ ‘ತೀರಾ ಸಾಮಾನ್ಯವಾಗಿರುವ’ ಈ ಪ್ರಶ್ನೆಗೆ ಉತ್ತರವಾಗಿ, 2025ರಲ್ಲಿ 44.4%ರಷ್ಟು ಮಹಿಳೆಯರು ಕೆಲಸ ಹುಡುಕದಿರಲು ‘ಮಕ್ಕಳ ಆರೈಕೆ ಅಥವಾ ಮನೆಗೆಲಸದ ಜವಾಬ್ದಾರಿ’ಗಳೇ ಪ್ರಮುಖ ಕಾರಣ ಎಂದು ತಿಳಿಸಿದ್ದಾರೆ.

ಆದಾಗ್ಯೂ, ಈ ಸಾಮಾನ್ಯ ಪ್ರಶ್ನೆಯು ‘ಎಷ್ಟು ಮಹಿಳೆಯರು ತಮ್ಮ ಸ್ವಂತ ಇಚ್ಛೆಯಿಂದ ವೇತನರಹಿತ ಮನೆಗೆಲಸವನ್ನು ಮಾಡುತ್ತಿದ್ದಾರೆ ಮತ್ತು ಎಷ್ಟು ಮಂದಿ ಅದು ತಮ್ಮ ಕರ್ತವ್ಯವೆಂದು ಭಾವಿಸಿ ಮಾಡುತ್ತಿದ್ದಾರೆ’ ಎಂಬುದನ್ನು ಸ್ಪಷ್ಟಪಡಿಸುವುದಿಲ್ಲ ಎನ್ನುತ್ತಾರೆ ಮಹಿಳೆಯರಿಗೆ ಗುಣಮಟ್ಟದ ಕೆಲಸದ ಲಭ್ಯತೆ ಮತ್ತು ಪ್ರವೇಶವನ್ನು ಸುಧಾರಿಸಲು ಶ್ರಮಿಸುತ್ತಿರುವ ‘ದಿ ಉದಯಿತಿ ಫೌಂಡೇಶನ್’ನ ಸಂಸ್ಥಾಪಕ ಸಿಇಒ ಪೂಜಾ ಶರ್ಮಾ ಗೋಯಲ್.

ಆದರೆ ಜನರು ಪ್ರಾಮಾಣಿಕವಾಗಿ ಉತ್ತರಿಸುತ್ತಾರೆಯೇ?

“ಕೆಲಸದ ವಿಚಾರ ಬಂದಾಗ, ಸಮೀಕ್ಷೆಗೆ ಒಳಗಾಗುವವರು ಎಂದಿಗೂ ಸುಳ್ಳು ಉತ್ತರಗಳನ್ನು ನೀಡುವುದಿಲ್ಲ ಅಥವಾ ಉತ್ತರಿಸಲು ನಿರಾಕರಿಸುವುದಿಲ್ಲ. ಸರ್ಕಾರಿ ಅಧಿಕಾರಿಗಳು ತಮ್ಮ ಕೆಲಸದ ಬಗ್ಗೆ ವಿಚಾರಿಸಿದಾಗ, ಸರ್ಕಾರದಿಂದ ಯಾವುದಾದರೂ ಸೌಲಭ್ಯ ಅಥವಾ ಯೋಜನೆ ಸಿಗಬಹುದು ಎಂದು ಜನರು ಭಾವಿಸುತ್ತಾರೆ. ಪರಿಣಾಮವಾಗಿ, ಉತ್ತರಿಸುವವರು ನಿಖರವಾಗಿ ಮಾಹಿತಿ ನೀಡುತ್ತಾರೆ ಅಥವಾ ಸ್ವಲ್ಪ ಹೆಚ್ಚಿಸಿ ಹೇಳುತ್ತಾರೆಯೇ ಹೊರತು, ಮಾಹಿತಿಯನ್ನು ಮುಚ್ಚಿಡುವುದಿಲ್ಲ,” ಎನ್ನುತ್ತಾರೆ MoSPI ಅಧಿಕಾರಿಯೊಬ್ಬರು.

ಆಯ್ಕೆಯೋ ಅಥವಾ ಕರ್ತವ್ಯವೋ?

ವೇತನರಹಿತ ಮನೆಗೆಲಸ ಮತ್ತು ಆರೈಕೆ ಕಾರ್ಯವು ಮಹಿಳೆಯರು ವೇತನದ ಉದ್ಯೋಗಗಳನ್ನು ಪಡೆಯುವುದನ್ನು ತಡೆಯುವ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಸರ್ಕಾರದ ‘ಸಮಯ ಬಳಕೆ ಸಮೀಕ್ಷೆ’ಗಳ (Time Use Surveys) ಪ್ರಕಾರ, ದುಡಿಯುವ ವಯಸ್ಸಿನ (15-59 ವರ್ಷ ವಯಸ್ಸಿನವರು) ಪುರುಷರು 2019ರಲ್ಲಿ ವಿವಿಧ ವೇತನರಹಿತ ಚಟುವಟಿಕೆಗಳಿಗಾಗಿ ದಿನಕ್ಕೆ 74 ನಿಮಿಷಗಳನ್ನು ವ್ಯಯಿಸುತ್ತಿದ್ದರೆ, 2024ರಲ್ಲಿ ಅದು 62 ನಿಮಿಷಗಳಿಗೆ ಇಳಿದಿದೆ.

ಇದಕ್ಕೆ ಹೋಲಿಸಿದರೆ, ಅದೇ ವಯೋಮಾನದ ಮಹಿಳೆಯರು ತಮ್ಮ ಮನೆಯಲ್ಲಿರುವ ಮಕ್ಕಳು ಮತ್ತು ಹಿರಿಯರ ಆರೈಕೆ ಸೇರಿದಂತೆ ವೇತನರಹಿತ ಚಟುವಟಿಕೆಗಳಿಗೆ ವ್ಯಯಿಸುವ ಸಮಯವು 2019ರಲ್ಲಿ ದಿನಕ್ಕೆ 364 ನಿಮಿಷಗಳಷ್ಟಿತ್ತು. ಇದು 2024ರಲ್ಲಿ 366 ನಿಮಿಷಗಳಿಗೆ ಏರಿಕೆಯಾಗಿದೆ. ಆದರೂ, ಇದೇ ಅವಧಿಯಲ್ಲಿ ಮಹಿಳಾ ಕಾರ್ಮಿಕ ಬಲದ ಪಾಲ್ಗೊಳ್ಳುವಿಕೆ ದರ (LFPR) ಸುಮಾರು 26.5%ನಿಂದ 43.6%ಗೆ ಏರಿದೆ.

ಮಹಿಳಾ ಅಭಿವೃದ್ಧಿ ಅಧ್ಯಯನ ಕೇಂದ್ರದ ಪ್ರಾಧ್ಯಾಪಕಿ ನೀತಾ ಪ್ರಕಾರ, “ಸಮಯ ಬಳಕೆ ಸಮೀಕ್ಷೆಯ ದತ್ತಾಂಶಗಳ ಜೊತೆಗೆ ಹೊಸ PLFS ಪ್ರಶ್ನೆಗಳು ಸೇರಿಕೊಂಡಾಗ, ವಿವರವಾದ ವಿಶ್ಲೇಷಣೆಗೆ ಅಗತ್ಯವಾದ ಮಾಹಿತಿ ಸಿಗಲಿದೆ. ಮಹಿಳೆಯರ ಕೆಲಸವನ್ನು ಇನ್ನಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಲು ನಮಗೆ ಸಹಾಯವಾಗಲಿದೆ.”

“ಬಹಳಷ್ಟು ನೀತಿ ನಿರೂಪಣೆ ಮತ್ತು ಸಲಹೆಗಳು ಸ್ಥೂಲ ಮಟ್ಟದಲ್ಲಿ ನಡೆಯುತ್ತವೆ. ಆದರೆ, ಪ್ರತಿ ರಾಜ್ಯದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಏನಾಗುತ್ತಿದೆ, ಯುವಕರು ಮತ್ತು ವಯಸ್ಕರ ಪರಿಸ್ಥಿತಿ ಹೇಗಿದೆ ಎಂಬುದನ್ನು ಹೇಳಲು ನಮಗೆ ಸಾಧ್ಯವಾಗಬೇಕು. ರಾಷ್ಟ್ರೀಯ ಸಮೀಕ್ಷೆಯು ಮಹಿಳೆಯರಿಗೆ ಕೆಲಸ ಮಾಡುವ ಆಸಕ್ತಿಯಿದೆ ಎಂದು ತೋರಿಸಿದರೆ, ‘ಆ ರಾಜ್ಯಗಳಲ್ಲಿ ಮಹಿಳೆಯರಿಗೆ ಕೆಲಸ ಮಾಡುವುದಕ್ಕೇ ಇಷ್ಟವಿಲ್ಲ’ ಎಂಬ ನಮ್ಮಲ್ಲಿರುವ ಈಗಿನ ಪೂರ್ವಾಗ್ರಹಪೀಡಿತ ಭಾವನೆಗೆ ಅದು ಸಂಪೂರ್ಣ ವಿರುದ್ಧವಾಗಿರುತ್ತದೆ,” ಎನ್ನುತ್ತಾರೆ ನಿಕೋರ್ ಅಸೋಸಿಯೇಟ್ಸ್ ಸಂಸ್ಥಾಪಕಿ ಹಾಗೂ ಅರ್ಥಶಾಸ್ತ್ರಜ್ಞೆ ಮಿತಾಲಿ ನಿಕೋರ್.

ಕೆಲಸಕ್ಕೆ ಇರುವ ಅಡೆತಡೆಗಳು

MoSPI ಕೇವಲ PLFSಗೆ ಮಾತ್ರ ಹೊಸ ಪ್ರಶ್ನೆಗಳನ್ನು ಸೇರಿಸಲು ನೋಡುತ್ತಿಲ್ಲ. ತನ್ನ ‘ಅಸಂಘಟಿತ ವಲಯದ ಉದ್ಯಮಗಳ ವಾರ್ಷಿಕ ಸಮೀಕ್ಷೆ’ಯ (ASUSE) ಮೂಲಕ, ಉದ್ಯಮಶೀಲತೆಗೆ ಲಭ್ಯವಿರುವ ಸಮಯದ ನಿರ್ಬಂಧಗಳು, ಮನೆಯಿಂದ ಹೊರಗೆ ಮಹಿಳೆಯರ ಓಡಾಟಕ್ಕೆ ಇರುವ ನಿರ್ಬಂಧಗಳು ಹಾಗೂ ಮನೆಗೆಲಸ ಅಥವಾ ಆರೈಕೆ ಜವಾಬ್ದಾರಿಗಳು ಕೆಲಸದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯ ಮೇಲೆ ಪರಿಣಾಮ ಬೀರುತ್ತವೆಯೇ ಎಂದು ಮಹಿಳಾ ಉದ್ಯಮಿಗಳನ್ನು ಕೇಳಲು ಸಚಿವಾಲಯ ಬಯಸಿದೆ.

ಈ ಲೇಖನ ಓದಿದ್ದೀರಾ?: ಸಮಾನತೆಯ ಮರೆಯಲ್ಲಿ ಅಸಮಾನತೆಯ ನೆರಳು: ಹಸಿರು ಕನಸುಗಳ ಕಾಲಡಿಯಲ್ಲಿ ಸಿಲುಕಿದ ಸತ್ಯಾನ್ವೇಷಣೆ!

ಇವು ಕೆಲಸಕ್ಕೆ ಇರುವ ತೀರಾ ಸ್ಪಷ್ಟವಾದ ಅಡೆತಡೆಗಳಂತೆ ಕಾಣುತ್ತವೆ. ಆದರೂ, ಬಹಳ ಕಡಿಮೆ ರಾಜ್ಯಗಳು ಮಾತ್ರ ಇವುಗಳನ್ನು ಬಗೆಹರಿಸುವಲ್ಲಿ ಯಶಸ್ವಿಯಾಗಿವೆ; ಅವುಗಳಲ್ಲಿ ತಮಿಳುನಾಡು ಪ್ರಮುಖವಾಗಿದೆ. ಕಾರ್ಖಾನೆಗಳ ಬಳಿಯೇ ಮಹಿಳಾ ಕಾರ್ಮಿಕರಿಗೆ ವಸತಿ ನಿಲಯಗಳನ್ನು ಒದಗಿಸುವ ಚೀನಾ ಮಾದರಿಯನ್ನು ಅನುಸರಿಸುವ ಮೂಲಕ ತಮಿಳುನಾಡು ತನ್ನ ಉತ್ಪಾದನಾ ವಲಯಕ್ಕೆ ಬಲ ತುಂಬಿದೆ. ಈ ಕ್ರಮದಿಂದಾಗಿ, ಇಂದು ದೇಶದ ಒಟ್ಟು ಮಹಿಳಾ ಕಾರ್ಖಾನೆ ಕಾರ್ಮಿಕರಲ್ಲಿ 40%ರಷ್ಟು (ಪ್ರತಿ 10ರಲ್ಲಿ ನಾಲ್ವರು) ಮಹಿಳೆಯರು ತಮಿಳುನಾಡಿನಲ್ಲೇ ಉದ್ಯೋಗ ಪಡೆದಿದ್ದಾರೆ.

ಜನಸಂಖ್ಯೆಯು ವೃದ್ಧಾಪ್ಯದತ್ತ ಸಾಗುತ್ತಿರುವ ದಕ್ಷಿಣದ ರಾಜ್ಯಗಳಿಗೆ ವಲಸೆ ಕಾರ್ಮಿಕರು ಅತ್ಯಗತ್ಯವಾಗಿರುವುದರಿಂದ, ಕಾರ್ಖಾನೆಗಳ ಸಮೀಪ ಅಥವಾ ಆವರಣದಲ್ಲೇ ವಸತಿ ನಿಲಯಗಳನ್ನು ನಿರ್ಮಿಸುವುದು ಪ್ರಮುಖ ಕ್ರಮವಾಗಿದೆ. ಏಕೆಂದರೆ, ಇದು ಕೆಲಸ ಮಾಡಲು ಬಯಸುವ ಮಹಿಳೆಯರಿಗೆ ಇರುವ ಎರಡು ಪ್ರಮುಖ ಅಡೆತಡೆಗಳಾದ ಕೆಲಸದ ಸ್ಥಳದ ದೂರ ಮತ್ತು ವಸತಿ ವ್ಯವಸ್ಥೆಯ ಸಮಸ್ಯೆಯನ್ನು ಪರಿಹರಿಸುತ್ತದೆ.

“ಹಿರಿಯರ ಆರೈಕೆ, ಮಕ್ಕಳ ಆರೈಕೆ… ಇವೆಲ್ಲವೂ ಒಂದಕ್ಕೊಂದು ಬೆಸೆದುಕೊಳ್ಳುತ್ತವೆ. ಮಹಿಳೆಯರನ್ನು ಕಾರ್ಮಿಕ ಬಲದಿಂದ ಹೊರಹಾಕುವ ಮೊದಲ ಅಂಶಗಳಲ್ಲಿ ಇವು ಪ್ರಮುಖವಾಗಿವೆ. ಆದರೆ, ಮಹಿಳೆಯರು ಮತ್ತೆ ಉದ್ಯೋಗಕ್ಕೆ ಮರಳಬೇಕಾದರೆ – ವೇತನ, ಸೂಕ್ತವಾದ ಉದ್ಯೋಗದ ಸ್ಥಳ, ಕೆಲಸಕ್ಕೆ ಹೋಗಲು ಸುರಕ್ಷಿತ ಮಾರ್ಗ ಮತ್ತು ಆರೈಕೆಯ ಬೆಂಬಲ – ಎಲ್ಲವೂ ಸರಿಯಾಗಿ ಹೊಂದಿಕೆಯಾಗಬೇಕು. ಉದ್ಯೋಗಗಳೇ ವಿರಳವಾಗಿರುವ ಇಂದಿನ ಪರಿಸ್ಥಿತಿಯಲ್ಲಿ ಇವೆಲ್ಲವೂ ಒಟ್ಟಿಗೆ ಸಿಗುವುದು ತೀರಾ ಅಪರೂಪ,” ಎನ್ನುತ್ತಾರೆ ನಿಕೋರ್.

ಮೂಲ: ದಿ ಇಂಡಿಯನ್ ಎಕ್ಸ್‌ಪ್ರೆಸ್‌

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

₹227 ಕೋಟಿ ವನ್ಯಜೀವಿ ಶುಲ್ಕವನ್ನು ₹2.27 ಕೋಟಿಗೆ ಇಳಿಸಿದ್ದ ಅದಾನಿ ಯೋಜನೆಗೆ ಬ್ರೇಕ್!

ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ಸಂಸ್ಥೆಯ 'ತಾರಲಿ ಪಂಪ್ಡ್ ಸ್ಟೋರೇಜ್ ಜಲವಿದ್ಯುತ್...

ಶಾಂಘೈ ಕೌಶಲ್ಯ ಶೃಂಗಸಭೆಯಲ್ಲಿ ಮಿಂಚಿದ ಕರ್ನಾಟಕದ ಪ್ರತಿಭೆಗಳು…ಪದಕಗಳ ಸೂರೆ

ಚೀನಾದ ಶಾಂಘೈನಲ್ಲಿ ನಡೆದ ಜಾಗತಿಕ 'ಕೌಶಲ್ಯ ಒಲಿಂಪಿಕ್ಸ್' ವೇದಿಕೆಯಲ್ಲಿ ನಮ್ಮ ಕರುನಾಡಿನ...

ವಿಜಯಪುರ | ಸಂವಿಧಾನದ ಬಗ್ಗೆ ಸುಳ್ಳು ಬಿತ್ತುವ ಕಾವಿಧಾರಿಗೆ ಗಡಿಪಾರು ಶಿಕ್ಷೆಯಾಗಲಿ: ಸಂಜು ಕಂಬಾಗಿ

ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಕುರಿತು ಸುಳ್ಳು ಹೇಳಿಕೆಗಳನ್ನು...