ಜನನುಡಿ 2026 | ನಾವಿಂದು ಗಾಯಗೊಂಡ ಪ್ರಜಾಪ್ರಭುತ್ವದಲ್ಲಿ ಬದುಕುತ್ತಿದ್ದೇವೆ : ಕಿರಣ್ ಗಾಜನೂರು

Date:

ನಾವಿಂದು ಒಂದು ‘ಗಾಯಗೊಂಡ ಪ್ರಜಾಪ್ರಭುತ್ವ’ದಲ್ಲಿ ಬದುಕುತ್ತಿದ್ದೇವೆ. ಯಾವ ಸಮಾಜದಲ್ಲಿ ಧರ್ಮವು ರಾಜಕೀಯದ ಅಧಿಕಾರದ ಸಾಧನ ಅಥವಾ ಆಯುಧವಾಗುತ್ತದೆಯೋ, ಯಾವ ಸಮಾಜದಲ್ಲಿ ಸಂಪತ್ತು ಕೇವಲ ಕೆಲವೇ ಜನರ ಕೈಯಲ್ಲಿ ಕೇಂದ್ರೀಕೃತಗೊಳ್ಳುತ್ತದೆಯೋ, ಅಂತಹ ಸಮಾಜದಲ್ಲಿ ಪ್ರಜಾಪ್ರಭುತ್ವವು ಸದಾ ಗಾಯಗೊಂಡ ಸ್ಥಿತಿಯಲ್ಲೇ ಇರುತ್ತದೆ ಎಂಬ ಮಾತಿದೆ ಎಂದು ಕಿರಣ್‌ ಗಾಜನೂರು ಅವರು ಹೇಳಿದರು.

- Advertisement -

ಅವರು ಮಂಗಳೂರಿನಲ್ಲಿ ನಡೆಯುತ್ತಿರುವ ಜನನುಡಿ-2026 ರಲ್ಲಿ ನಡೆದ 9ನೇ ಗೋಷ್ಠಿಯಲ್ಲಿ “ಕೋಮುವಾದ-ಕ್ರೋನಿ ಕ್ಯಾಪಿಟಲಿಸಂ ಮೈತ್ರಿ-ಸವಾಲು” ವಿಷಯದ ಕುರಿತು ಮಾತನಾಡಿದರು. ಇವರ ಭಾಷಣದ ಪೂರ್ಣಪಾಠ ಇಲ್ಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕ್ಷೇತ್ರ ಮರುವಿಂಗಡಣೆಯ ಹಿಂದಿರುವ ಬಲಪಂಥೀಯ ರಾಜಕಾರಣದ ಗುಪ್ತ ಕಾರ್ಯಸೂಚಿ

ಕ್ಷೇತ್ರ ಮರುವಿಂಗಡಣೆ ಕೇವಲ ಲೋಕಸಭಾ ಸ್ಥಾನಗಳ ಹೆಚ್ಚಳವಲ್ಲ; ಅದು ದೇಶದ ರಾಜಕೀಯ ಅಧಿಕಾರದ ಹಂಚಿಕೆ, ಒಕ್ಕೂಟ ವ್ಯವಸ್ಥೆ ಮತ್ತು ಸಾಮಾಜಿಕ ನ್ಯಾಯದ ಭವಿಷ್ಯವನ್ನು ನಿರ್ಧರಿಸುವ ಪ್ರಕ್ರಿಯೆ. ಕ್ಷೇತ್ರಗಳ ಗಡಿ ಬದಲಾವಣೆಯಿಂದ ಅಹಿಂದ, ದಲಿತ,...

ಗುಳೇದಗುಡ್ಡ | ತಾಲೂಕಾಗಿ ಹತ್ತು ವರ್ಷ ಕಳೆದರೂ ಭೂ...

ಗುಳೇದಗುಡ್ಡ ತಾಲೂಕು ರಚೆನೆಯಾಗಿ ಹತ್ತು ವರ್ಷ ಕಳೆದಿದೆ. ತಾಲೂಕು ವ್ಯಾಪ್ತಿಯ ಪಟ್ಟಣ ಹಾಗೂ ಗ್ರಾಮಗಳಿಗೆ ಸಂಬಂಧಿಸಿದ ಭೂದಾಖಲೆಗಳು ಬಾದಾಮಿ ತಹಸೀಲ್ದಾರ್ ಕಚೇರಿ ಮತ್ತು ಗದಗ ರಸ್ತೆಯ ಎಪಿಎಂಸಿ ಸಮೀಪದ ಕಚೇರಿಯಲ್ಲಿ ಸಂಗ್ರಹವಾಗಿವೆ....

ಸುಪ್ತ ಆಯಾಸದ ಹಿಂದೆ ಅಡಗಿರುವ ರಕ್ತಹೀನತೆ: ಕರ್ನಾಟಕದ ಅರ್ಧದಷ್ಟು...

ದೈನಂದಿನ ಒತ್ತಡ, ನಿದ್ರೆಯ ಕೊರತೆ ಅಥವಾ ಬಿಡುವಿಲ್ಲದ ಜೀವನಶೈಲಿಯೆಂದು ನಿರ್ಲಕ್ಷಿಸುವ ಆಯಾಸದ ಹಿಂದೆ ರಕ್ತಹೀನತೆ ಅಡಗಿರಬಹುದು. ಕರ್ನಾಟಕದಲ್ಲಿ ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರಲ್ಲಿ ಶೇ. 50ಕ್ಕಿಂತ ಹೆಚ್ಚು ಮಂದಿ ರಕ್ತಹೀನತೆಯಿಂದ ಬಳಲುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ದೈನಂದಿನ...

ಭಾರತದ ರಾಜಕೀಯ ಇತಿಹಾಸವನ್ನು ಅವಲೋಕಿಸಿದರೆ, ಆರಂಭದಿಂದಲೂ ನಮ್ಮ ಪ್ರಜಾಪ್ರಭುತ್ವ ಇಂತಹದ್ದೇ ಗಾಯಗೊಂಡ ಸ್ಥಿತಿಯಲ್ಲಿದೆ ಇದಕ್ಕೆ ಮುಖ್ಯವಾಗಿ ಎರಡು ಪ್ರಮುಖ ಕಾರಣಗಳನ್ನು ಗುರುತಿಸಬಹುದು : ಇಲ್ಲಿರುವ ಬಂಡವಾಳಶಾಹಿ ರಾಜ್ಯವ್ಯವಸ್ಥೆ, (Capitalist State) ಅದರ ಉಪ-ಉತ್ಪನ್ನವಾದ ಕೋಮುವಾದ

ಸಾಮಾನ್ಯವಾಗಿ ನಾವು ಕೋಮುವಾದವನ್ನು ಅರ್ಥಮಾಡಿಕೊಳ್ಳುವಾಗ ಅಥವಾ ಶೈಕ್ಷಣಿಕವಾಗಿ ಪರಿಚಯಿಸಿಕೊಳ್ಳುವಾಗ, ಅದನ್ನು ಅತ್ಯಂತ ಸರಳೀಕೃತಗೊಳಿಸಿ ನೋಡಲಾಗುತ್ತದೆ. ನಮ್ಮ ಶಾಲಾ ಪಠ್ಯಪುಸ್ತಕಗಳಲ್ಲೂ ಸಹ “ಕೋಮುವಾದವೆಂದರೆ ಎರಡು ಧಾರ್ಮಿಕ ಸಮುದಾಯಗಳ ನಡುವೆ ನಡೆಯುವ ಸಂಘರ್ಷ” (A conflict between two religious groups) ಎಂಬ ಮಟ್ಟಕ್ಕೆ ಸೀಮಿತಗೊಳಿಸಿ ಕಲಿಸಲಾಗುತ್ತದೆ. ಆದರೆ ನಿಜವಾಗಿಯೂ ಕೋಮುವಾದ ಅಷ್ಟು ಸರಳವಾದ ವಿದ್ಯಮಾನವೇ ಎಂದು ಪ್ರಶ್ನಿಸಿಕೊಂಡರೆ, ಖಂಡಿತವಾಗಿಯೂ ಅಲ್ಲ.

ಕೋಮುವಾದವು ಬಂಡವಾಳಶಾಹಿ ರಾಜ್ಯ ವ್ಯವಸ್ಥೆಯ ಒಂದು ವ್ಯವಸ್ಥಿತ ಉಪ-ಉತ್ಪನ್ನ. ಸಮಾಜದಲ್ಲಿ ಸಂಭವಿಸುವ ಧಾರ್ಮಿಕ ಸಂಘರ್ಷಗಳು ಆ ವ್ಯವಸ್ಥೆಯ ಒಂದು ಲಕ್ಷಣವಷ್ಟೇ. ನಾವು ಕೇವಲ ಆ ಸಂಘರ್ಷಗಳನ್ನೇ ‘ಕೋಮುವಾದ’ವೆಂದು ತಪ್ಪಾಗಿ ಭಾವಿಸುತ್ತಿದ್ದೇವೆ. ಎಲ್ಲಿಯವರೆಗೆ ಬಂಡವಾಳಶಾಹಿ ರಾಜ್ಯವ್ಯವಸ್ಥೆಯ ಆಂತರಿಕ ರಚನಾ ಸ್ವರೂಪ ಮತ್ತು ಅದರ ಕಾರ್ಯವಿಧಾನವನ್ನು ನಾವು ಗ್ರಹಿಸುವುದಿಲ್ಲವೋ, ಅಲ್ಲಿಯವರೆಗೆ ಕೋಮುವಾದದ ಪೂರ್ಣ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ನಾವು ಅಂತಹ ಅತ್ಯಂತ ರಚನಾತ್ಮಕ (Structured) ರಾಜಕಾರಣದ ಕಾಲಘಟ್ಟದಲ್ಲಿ ಬದುಕುತ್ತಿದ್ದೇವೆ. ಹಾಗಾಗಿ, ಕೋಮುವಾದವನ್ನು ಕೇವಲ ಎರಡು ಸಮುದಾಯಗಳ ನಡುವಿನ ತಿಕ್ಕಾಟವೆಂಬ ನೆಲೆಯಿಂದ ಮೀರಿ, ಅದು ಬಂಡವಾಳಶಾಹಿ ರಾಜ್ಯದ ಮೂಲ ರಚನೆಯ ಭಾಗ ಎಂಬುದನ್ನು ನಾವಿಂದು ಗುರುತಿಸಬೇಕಿದೆ.

ನಿನ್ನೆ ಇದೇ ವೇದಿಕೆಯಲ್ಲಿ ಮಾತನಾಡುತ್ತಾ ಶಿವಸುಂದರ್ ಅವರು ಒಂದು ಮಹತ್ವದ ಅಂಶವನ್ನು ಪ್ರಸ್ತಾಪಿಸಿದರು: “ಕ್ರೋನಿ ಕ್ಯಾಪಿಟಲಿಸಂ (ಆಪ್ತ ಬಂಡವಾಳಶಾಹಿ) ಎಂಬುದು ಪ್ರತ್ಯೇಕ ವಿದ್ಯಮಾನವೇ ಅಲ್ಲ.” ಏಕೆಂದರೆ, ಯಾವುದೇ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಸಂಪತ್ತು ಅಂತಿಮವಾಗಿ ಕೆಲವರ ಬಳಿ ಏಕಸ್ವಾಮ್ಯಗೊಳ್ಳುತ್ತಾ (Monopolize ಆಗುತ್ತಾ) ಹೋಗುವುದು ಅದರ ಸಹಜ ಗುಣ. ನಾವು ಯಾವಾಗ ‘ಕ್ರೋನಿ ಕ್ಯಾಪಿಟಲಿಸಂ’ ಎಂಬ ಪರಿಕಲ್ಪನೆಯನ್ನು ಪ್ರತ್ಯೇಕವಾಗಿ ಮುಂದಿಡುತ್ತೇವೋ, ಆಗ ಬಂಡವಾಳಶಾಹಿಯ ಮೇಲಿನ ನಮ್ಮ ವಿಮರ್ಶೆಯ ತೀವ್ರತೆಯನ್ನು ಕಡಿಮೆ ಮಾಡುತ್ತೇವೆ. ಅಂದರೆ, “ಬಂಡವಾಳಶಾಹಿ ವ್ಯವಸ್ಥೆ ಸರಿಯಾಗಿದೆ, ಆದರೆ ಅದರೊಳಗಿನ ಕ್ರೋನಿ ಬಂಡವಾಳಶಾಹಿಯಷ್ಟೇ ಅಪಾಯಕಾರಿ” ಎಂಬ ತಪ್ಪು ಸಮರ್ಥನೆಗೆ ಜಾರುವ ಅಪಾಯವಿರುತ್ತದೆ. ಇಂತಹ ಪರಿಭಾಷೆಗಳ ಹಿಂದಿರುವ ರಾಜಕಾರಣವನ್ನು ನಾವು ಎಚ್ಚರಿಕೆಯಿಂದ ಗಮನಿಸಬೇಕಿದೆ.

ಹಾಗಾದರೆ ಈ ಬಂಡವಾಳಶಾಹಿ ಮತ್ತು ಕೋಮುವಾದದ ಮೂಲ ಎಲ್ಲಿದೆ?

ನಾವು ಕಟ್ಟಿಕೊಂಡ ಆಧುನಿಕ ‘ರಾಷ್ಟ್ರ-ರಾಜ್ಯ’ (Nation-State) ಪರಿಕಲ್ಪನೆಯಲ್ಲೇ ಇದರ ಬೇರುಗಳಿವೆ. ರಾಜಕೀಯ ಇತಿಹಾಸವನ್ನು ಗಮನಿಸಿದರೆ, 1648ರ ವೆಸ್ಟ್‌ಫೇಲಿಯಾ ಒಪ್ಪಂದದ ನಂತರ ರೂಪಿತವಾದ ನೇಷನ್-ಸ್ಟೇಟ್ ಕಲ್ಪನೆಯು ಅಂದಿನ ವ್ಯಾಪಾರಿ ವರ್ಗ ಮತ್ತು ಊಳಿಗಮಾನ್ಯ (Feudal) ಹಿತಾಸಕ್ತಿಗಳ ಕಣ್ಣೋಟದಿಂದ ರೂಪುಗೊಂಡದ್ದು. ಅಂತಹ ರಾಷ್ಟ್ರ-ರಾಜ್ಯದ ಚೌಕಟ್ಟಿನಲ್ಲಿ ಬಂಡವಾಳ ಮತ್ತು ಕೋಮುವಾದಿ ಅಸ್ಮಿತೆಗಳ ನೆರವಿಲ್ಲದೆ ಆ ವ್ಯವಸ್ಥೆ ತನ್ನನ್ನು ತಾನು ಉಳಿಸಿಕೊಳ್ಳುವುದು ಕಷ್ಟಸಾಧ್ಯ.

ಆದ್ದರಿಂದಲೇ, ನಂತರದ ಫ್ರೆಂಚ್ ಕ್ರಾಂತಿಯು ಈ ಮಾದರಿಯನ್ನು ಪ್ರಶ್ನಿಸಿತು. ಈ ರಾಷ್ಟ್ರ-ರಾಜ್ಯ ವ್ಯವಸ್ಥೆಯು ಕೇವಲ ಕೆಲವೇ ಜನರ ಹಿತಾಸಕ್ತಿಯನ್ನು ರಕ್ಷಿಸುತ್ತಾ, ಜನರನ್ನು ಸಂಕುಚಿತ ಅಸ್ಮಿತೆಗಳ ಮೂಲಕ ಒಡೆದು ಅಸಮಾನತೆಯನ್ನು ಹೆಚ್ಚಿಸುತ್ತಿದೆ ಎಂದು ಎಚ್ಚರಿಸಿತು. ಆ ಮೂಲಕ “ನಮಗೆ ಬೇಕಾಗಿರುವುದು ಕೇವಲ ಆಡಳಿತಾತ್ಮಕ ರಾಷ್ಟ್ರ-ರಾಜ್ಯವಲ್ಲ (Nation-State); ಬದಲಾಗಿ ಜನರ ಸಾರ್ವಭೌಮತೆಯುಳ್ಳ ಪ್ರಜಾರಾಜ್ಯ (People’s State)” ಎಂಬ ವಿಶಾಲ ಕಣ್ಣೋಟವನ್ನು ಜಗತ್ತಿನ ಮುಂದಿಟ್ಟಿತು.

ಅಲ್ಲಿಂದ ಆರಂಭಿಸಿ ಉದಾರವಾದಿ (Liberal) ರಾಜಕಾರಣದ ಹಂತಗಳನ್ನು ದಾಟಿ, ನಾವಿಂದು ನವ-ಉದಾರವಾದಿ (Neo-liberal) ಕಾಲಘಟ್ಟದಲ್ಲಿ ಬಂದು ನಿಂತಿದ್ದೇವೆ. ಇಂದಿನ ಈ ಸಂದಿಗ್ಧ ಸಂದರ್ಭದಲ್ಲಿ: ನಾವು ಕೇಳಿಕೊಳ್ಳಬೇಕಾದ ಪ್ರಶ್ನೆಗಳು ಯಾವುದಾಗಿರಬೇಕು.

ಕೋಮುವಾದ ಮತ್ತು ಕ್ರೋನಿ ಬಂಡವಾಳಶಾಹಿ ವಿದ್ಯಮಾನಗಳನ್ನು ನಾವು ಹೇಗೆ ಗ್ರಹಿಸಬೇಕು?
ಇವೆರಡರ ನಡುವಿನ ಅಪವಿತ್ರ ಮೈತ್ರಿ ಹೇಗೆ ಕೆಲಸ ಮಾಡುತ್ತಿದೆ?
ಈ ಮೈತ್ರಿಯು ಪ್ರಜಾಪ್ರಭುತ್ವ ಮತ್ತು ಬಹುತ್ವಕ್ಕೆ ಒಡ್ಡುತ್ತಿರುವ ನೈಜ ಸವಾಲುಗಳು ಯಾವುವು?

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜನನುಡಿ 2026 | ಬಂಡವಾಳಶಾಹಿ ಮತ್ತು ರಾಜಕೀಯದ ಅಪವಿತ್ರ ಮೈತ್ರಿಯ ಕರಾಳ ಮುಖವೇ ಕೋಮುವಾದ: ಎ ನಾರಾಯಣ್‌

ಬಂಡವಾಳಶಾಹಿಗಳು ಮತ್ತು ರಾಜಕೀಯ ಅಧಿಕಾರದ ಮೈತ್ರಿಗಳು ಕೋಮುವಾದಿ ಶಕ್ತಿಗಳ ಜೊತೆ ಮಾಡಿಕೊಂಡಿರುವ...

ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ವಿರೋಧ: ವಿಜಯೇಂದ್ರ ವಿರುದ್ಧ ಭುಗಿಲೆದ್ದ ಆಕ್ರೋಶ

ಬಸವಕಲ್ಯಾಣದಲ್ಲಿ ಶನಿವಾರ ನಡೆದ 47ನೇ ಶರಣ ಕಮ್ಮಟ ಮತ್ತು ಅನುಭವ ಮಂಟಪ...

ಜೀವಂತವಾಗಿರುವಾತನನ್ನು ಮೃತನೆಂದು ಘೋಷಿಸಿದ ಆಸ್ಪತ್ರೆ: ‘ಬದುಕಿದ್ದೇನೆ’ ಎಂದು ಸಾಬೀತುಪಡಿಸಲು ಜೈಪುರ ಯುವಕನ ಪರದಾಟ!

ಸರ್ಕಾರಿ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಬದುಕಿರುವ ಯುವಕನೊಬ್ಬ ಕಳೆದ 25 ದಿನಗಳಿಂದ...

ಹಿರಿಯ ಕವಯಿತ್ರಿ ಸ. ಉಷಾ ನಿಧನ: ಕನ್ನಡ ಮಹಿಳಾ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ

ಹಿರಿಯ ಕವಯಿತ್ರಿ ಹಾಗೂ ಸಾಹಿತಿ ಸ. ಉಷಾ ಅವರು ಅನಾರೋಗ್ಯದಿಂದ ನಿಧನರಾಗಿರುವುದು...