ಗೂಗಲ್, ವಿಪ್ರೋ, ಒರಾಕಲ್ ಬಾಗಿಲು ತಟ್ಟಿದ ಕರವೇ: ಕನ್ನಡಿಗರ ಉದ್ಯೋಗ ಪ್ರಾತಿನಿಧ್ಯದ ವಿವರಕ್ಕೆ ಮನವಿ

Date:

ಕರ್ನಾಟಕದ ಉದ್ಯಮ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಆರಂಭಿಸಿರುವ ‘ಆಗ್ರಹ ಅಭಿಯಾನ’ ಮೂರನೇ ದಿನವೂ ಮುಂದುವರಿದಿದೆ. ಎಲೆಕ್ಟ್ರಾನಿಕ್ ಸಿಟಿ, ವೈಟ್‌ಫೀಲ್ಡ್, ಮಹದೇವಪುರ, ಸರ್ಜಾಪುರ ಹೆಬ್ಬಳ, ಬನ್ನೇರುಘಟ್ಟ ರಸ್ತೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅಭಿಯಾನ ನಡೆಯಿತು. ಒರಾಕಲ್, ಎಕ್ಸಂಚರ್, ಸ್ಯಾಮ್ ಸಾಂಗ್, ಜೆಪಿ ಮಾರ್ಗನ್, ಗೂಗಲ್, ಮಹದೇವಪುರ ಬ್ರಿಗೇಡ್ ಟೆಕ್ ಪಾರ್ಕ್‌ನ 30 ಕ್ಕೂ ಹೆಚ್ಚು ಕಂಪನಿಗಳು ಓಲಾ, ಬಯೋಕಾನ್, ವಿಪ್ರೋ, ಎಂಬೆಸಿ ಟೆಕ್ ವಿಲೇಜ್‌ನಲ್ಲಿರುವ, ಬ್ರಿಗೇಡ್ ಟೆಕ್ ಗಾರ್ಡನ್‌ನಲ್ಲಿರುವ ಕಂಪನಿಗಳು ಸೇರಿದಂತೆ ಪ್ರಮುಖ ಕಂಪನಿಗಳ ಪ್ರತಿನಿಧಿಗಳನ್ನು ಕರವೇ ತಂಡಗಳು ಭೇಟಿ ಮಾಡಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ನೀಡಿರುವ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡುವಂತೆ ಮನವಿ ಮಾಡಿದವು.

- Advertisement -

ಕರವೇ ಮಹಿಳಾ ಘಟಕ ಸೇರಿದಂತೆ ಹತ್ತಕ್ಕೂ ಹೆಚ್ಚು ತಂಡಗಳು ಇಂದಿನ ಅಭಿಯಾನದಲ್ಲಿ ಪಾಲ್ಗೊಂಡಿದ್ದವು. ಕರವೇ ರಾಜ್ಯ ಮುಖಂಡರುಗಳಾದ ದಾ.ಪಿ. ಆಂಜನಪ್ಪ, ಸುರೇಶ್ ಬ್ಯಾಟರಾಯನಪುರ, ಮೋಹನ್ ಗೌಡ, ಹಯಾತ್ ಕಾ‌ರ್ಗಾಲ್, ವೀರಭದ್ರ, ಅಬ್ಬಿಗೆರೆ ವಿನೋಧ್, ಟಿ.ಎ.ಧರ್ಮರಾಜ್ ಸಂಗೀತಗೌಡ, ಸಹನಾ ಶೇಖರ್, ಶ್ವೇತಗೌಡ ನೇತೃತ್ವದ ತಂಡಗಳು ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಇಂದಿನವರೆಗೆ ಒಟ್ಟಾರೆಯಾಗಿ 280ಕ್ಕೂ ಹೆಚ್ಚು ಕಂಪನಿಗಳ ಪ್ರತಿನಿಧಿಗಳನ್ನು ಭೇಟಿ ಮಾಡಿ ಆಗ್ರಹ ಪತ್ರ ಸಲ್ಲಿಸಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ʼಸ್ಟಿಂಗ್‌ʼ ಸರ್ಕಸ್‌ | ಬೇಳೆ ಬೇಯಿಸಿಕೊಂಡವರಾರೋ, ಸಂತ್ರಸ್ತರಾರೋ!

ರಾಜ್ಯಾದ್ಯಂತ ಈಗ ಭಾರೀ ಸದ್ದು ಮಾಡುತ್ತಿರುವ ಸ್ಟಿಂಗ್ ಆಪರೇಷನ್ ಪ್ರಕರಣವು ಹೊಸ ಪರ-ವಿರೋಧ ಚರ್ಚೆಗಳಿಗೆ ವೇದಿಕೆ ಸೃಷ್ಟಿಸಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ಚಸ್ಸನ್ನು ಕುಗ್ಗಿಸಲು ಮತ್ತು ಅವರ ತೇಜೋವಧೆ ಮಾಡಲೆಂದೇ ಈ...

ರಾಹುಲ್ ಗಾಂಧಿಯವರನ್ನು ಕೆಣಕಿದವರೇ, ಅವರು ಸಿಡಿದೇಳಲು ಕಾರಣರಾದರು! ಅದು...

ರಾಹುಲ್ ಗಾಂಧಿಯವರನ್ನು ರಾಜಕೀಯವಾಗಿ ಅಪ್ರಸ್ತುತಗೊಳಿಸಲು ನಿರಂತರವಾಗಿ ಪ್ರಯತ್ನಿಸಿದವರು, ಅವರ ಹೆಸರನ್ನು ದೇಶದ ರಾಜಕೀಯ ಚರ್ಚೆಯಿಂದ ಅಳಿಸಲು ಸಾಧ್ಯವಾಗಲಿಲ್ಲ. ಬದಲಾಗಿ ಅವರ ರಾಜಕೀಯ ಚಟುವಟಿಕೆಗಳು ಮತ್ತು ಅವರು ಎತ್ತುವ ಪ್ರಶ್ನೆಗಳೇ ಸಾರ್ವಜನಿಕ ಚರ್ಚೆಯ ಭಾಗವಾದವು. ರಾಜಕೀಯದಲ್ಲಿ...

ಅಮೆರಿಕದಲ್ಲಿ ಟ್ರಂಪ್ ಬೇಡ – ಭಾರತದಲ್ಲಿ ಮೋದಿ ಬೇಕು;...

ಅಮೆರಿಕದಲ್ಲಿ 2026ರ ನವೆಂಬರ್ ಮಧ್ಯಂತರ ಚುನಾವಣೆ ನಡೆದು, ಫಲಿತಾಂಶ ಪ್ರಕಟಗೊಳ್ಳುತ್ತಿದೆ. ಈ ಚುನಾವಣೆಗೂ ಮುನ್ನ ‘ಕಾರ್ನೆಗಿ ಎಂಡೋಮೆಂಟ್ ಫಾರ್ ಇಂಟರ್‌ನ್ಯಾಷನಲ್ ಪೀಸ್ ಮತ್ತು ಯೂಗವ್’ ಸಂಸ್ಥೆ ರಾಜಕೀಯ ಸಮೀಕ್ಷೆಯೊಂದನ್ನು ನಡೆಸಿದೆ. ಮಹತ್ವದ ರಾಜಕೀಯ...

ಇದನ್ನೂ ಓದಿ: ಮತದಾರರ ಪಟ್ಟಿ ಪರಿಷ್ಕರಣೆ ಕನ್ನಡದಲ್ಲೇ ನಡೆಯಲಿ: ಕರವೇ ಆಗ್ರಹ

Advertisements

ಮಹದೇವಪುರ ವ್ಯಾಪ್ತಿಯ ಬ್ರಿಗೇಡ್ ಸಂಕೀರ್ಣದಲ್ಲಿ ಇಂದು ಸುಮಾರು ಮೂವತ್ತು ಐಟಿ ಸಂಸ್ಥೆಗಳ ಮಾನವ ಸಂಪನ್ಮೂಲ ಅಧಿಕಾರಿಗಳ ಜೊತೆ ಕರವೇ ನಿಯೋಗ ಸಭೆ ನಡೆಸಿ ಎಲ್ಲಾ ಸಂಸ್ಥೆಗಳಿಗೂ ಆಗ್ರಹ ಪತ್ರ ಸಲ್ಲಿಸಿತು. ಎಲ್ಲಾ ಸಂಸ್ಥೆಗಳ ಪ್ರತಿನಿಧಿಗಳು ಕರವೇ ಮುಖಂಡರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಕರವೇ ರಾಜ್ಯಾಧ್ಯಕ್ಷ ಟಿ. ಎ. ನಾರಾಯಣ ಗೌಡರು ವೀಡಿಯೋ ಕಾಲ್ ಮೂಲಕ ಸಭೆಯಲ್ಲಿ ಪಾಲ್ಗೊಂಡು ಆಗ್ರಹ ಅಭಿಯಾನದ ಉದ್ದೇಶವನ್ನು ವಿವರಿಸಿದರು. ಕರವೇ ಮನವಿಗೆ ಸಕರಾತ್ಮಕವಾಗಿ ಸ್ಪಂದಿಸುವುದಾಗಿ ಎಲ್ಲಾ ಸಂಸ್ಥೆಗಳ ಪ್ರತಿನಿಧಿಗಳು ಭರವಸೆ ನೀಡಿದರು.

ಅಭಿಯಾನ ನವೆಂಬರ್ 30ರವರೆಗೆ ಮುಂದುವರಿಯಲಿದ್ದು, ಕರ್ನಾಟಕದ ಇತರ ಜಿಲ್ಲೆಗಳ ವಿವಿಧ ವಲಯಗಳ ಖಾಸಗಿ ಸಂಸ್ಥೆಗಳ ಪ್ರತಿನಿಧಿಗಳನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಲಾಗುವುದು. ಸಂಗ್ರಹಿಸಿದ ಮಾಹಿತಿಯ ಆಧಾರದಲ್ಲಿ ರಾಜ್ಯದ ಉದ್ಯಮ ವಲಯದಲ್ಲಿ ಕನ್ನಡಿಗರ ಉದ್ಯೋಗ ಪ್ರಾತಿನಿಧ್ಯದ ಕುರಿತು ಸಮಗ್ರ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಕರವೇ ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡರು ತಿಳಿಸಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪತ್ರಿಕಾ ಸ್ವಾತಂತ್ರ್ಯ ಭಕ್ಷಕರು: ಜಾಗತಿಕ ಕಪ್ಪುಪಟ್ಟಿಗೆ ಅದಾನಿ, ಓಪ್‌ಇಂಡಿಯಾ, ಟ್ರಂಪ್ ಸೇರ್ಪಡೆ!

ಪ್ರಪಂಚದಾದ್ಯಂತ ಮಾಧ್ಯಮಗಳ ಧ್ವನಿಯನ್ನು ಅಡಗಿಸಲು ಮತ್ತು ಪತ್ರಕರ್ತರನ್ನು ವ್ಯವಸ್ಥಿತವಾಗಿ ಗುರಿಯಾಗಿಸಲು ಮುಂದಾಗಿರುವ...

‘ಬ್ರೋ’ ಗ್ಯಾನೇಶ್ ನಂಬರ್ ಕೊಡಲಾ: ಯುಎಸ್ ಮಧ್ಯಂತರ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಟ್ರಂಪ್ – ಸಿಇಸಿ ಮೀಮ್ಸ್ ವೈರಲ್

ಅಮೆರಿಕದ 2026ರ ಮಧ್ಯಂತರ ಚುನಾವಣೆಯ ಫಲಿತಾಂಶದಲ್ಲಿ ಡೆಮಾಕ್ರಟಿಕ್ ಪಕ್ಷವು ಹಿನ್ನಡೆಯಲ್ಲಿದ್ದ ಪ್ರಮುಖ...

ವಿಜಯಪುರ | ಕಸ ವಿಲೇವಾರಿ ಘಟಕವನ್ನು ಹಸಿರು ಪರಿಸರದ ಮಾದರಿಯಾಗಿಸಿ: ಜಿಲ್ಲಾಧಿಕಾರಿ ಆನಂದ ಕೆ

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದ ಇವಣಗಿ ರಸ್ತೆಯಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ...

ʼಸ್ಟಿಂಗ್‌ʼ ಸರ್ಕಸ್‌ | ಬೇಳೆ ಬೇಯಿಸಿಕೊಂಡವರಾರೋ, ಸಂತ್ರಸ್ತರಾರೋ!

ರಾಜ್ಯಾದ್ಯಂತ ಈಗ ಭಾರೀ ಸದ್ದು ಮಾಡುತ್ತಿರುವ ಸ್ಟಿಂಗ್ ಆಪರೇಷನ್ ಪ್ರಕರಣವು ಹೊಸ...