ರಾಮ-ಕೃಷ್ಣ ಹೋಲಿಕೆ ವಿವಾದ: ಬಾಗೇಶ್ವರ ಬಾಬಾ ವಿರುದ್ಧ ಯಾದವ ಸಮುದಾಯ ಆಕ್ರೋಶ!

Date:

ಧರ್ಮದ ಅಖಂಡತೆಯನ್ನು ಎತ್ತಿಹಿಡಿಯಬೇಕಾದ ಸಾರ್ವಜನಿಕ ವೇದಿಕೆಗಳೇ ಇತ್ತೀಚೆಗೆ ಧಾರ್ಮಿಕ ಒಡಕು ಮತ್ತು ವಿವಾದಗಳಿಗೆ ಆಸ್ಪದ ಮಾಡಿಕೊಡುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಕರೇರಾದಲ್ಲಿ ನಡೆದ ರಾಮಕಥೆ ಕಾರ್ಯಕ್ರಮದಲ್ಲಿ ಬಾಗೇಶ್ವರ ಧಾಮದ ಮುಖ್ಯ ಅರ್ಚಕ ಧೀರೇಂದ್ರ ಕೃಷ್ಣ ಶಾಸ್ತ್ರಿ (ಬಾಗೇಶ್ವರ ಬಾಬಾ) ಭಗವಾನ್ ಶ್ರೀರಾಮ ಮತ್ತು ಶ್ರೀಕೃಷ್ಣನ ಕುರಿತು ನಡೆಸಿದ ಹೋಲಿಕೆ ಹಾಗೂ ನೀಡಿದ ಹೇಳಿಕೆಗಳು ಈಗ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ.

- Advertisement -

ದೇವತೆಗಳ ನಡುವೆ ತಾರತಮ್ಯ ಎಸಗಿ, ಶ್ರೀಕೃಷ್ಣನನ್ನು ಕನಿಷ್ಠ ಎಂಬಂತೆ ಬಿಂಬಿಸಿ, ಶ್ರೀರಾಮನನ್ನು ಶ್ರೇಷ್ಠನೆಂದು ತೋರಿಸಲು ಹೊರಟ ಶಾಸ್ತ್ರಿಯವರ ಈ ನಡವಳಿಕೆಯು ಪೂಜ್ಯ ದೇವತೆಗಳನ್ನೂ ಧ್ರುವೀಕರಣ ಹಾಗೂ ವಿಭಜನೆಯ ಅಸ್ತ್ರವನ್ನಾಗಿ ಬಳಸಿಕೊಳ್ಳಲಾಗುತ್ತಿದೆಯೇ ಎಂಬ ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ʼಸ್ಟಿಂಗ್‌ʼ ಸರ್ಕಸ್‌ | ಬೇಳೆ ಬೇಯಿಸಿಕೊಂಡವರಾರೋ, ಸಂತ್ರಸ್ತರಾರೋ!

ರಾಜ್ಯಾದ್ಯಂತ ಈಗ ಭಾರೀ ಸದ್ದು ಮಾಡುತ್ತಿರುವ ಸ್ಟಿಂಗ್ ಆಪರೇಷನ್ ಪ್ರಕರಣವು ಹೊಸ ಪರ-ವಿರೋಧ ಚರ್ಚೆಗಳಿಗೆ ವೇದಿಕೆ ಸೃಷ್ಟಿಸಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ಚಸ್ಸನ್ನು ಕುಗ್ಗಿಸಲು ಮತ್ತು ಅವರ ತೇಜೋವಧೆ ಮಾಡಲೆಂದೇ ಈ...

ರಾಹುಲ್ ಗಾಂಧಿಯವರನ್ನು ಕೆಣಕಿದವರೇ, ಅವರು ಸಿಡಿದೇಳಲು ಕಾರಣರಾದರು! ಅದು...

ರಾಹುಲ್ ಗಾಂಧಿಯವರನ್ನು ರಾಜಕೀಯವಾಗಿ ಅಪ್ರಸ್ತುತಗೊಳಿಸಲು ನಿರಂತರವಾಗಿ ಪ್ರಯತ್ನಿಸಿದವರು, ಅವರ ಹೆಸರನ್ನು ದೇಶದ ರಾಜಕೀಯ ಚರ್ಚೆಯಿಂದ ಅಳಿಸಲು ಸಾಧ್ಯವಾಗಲಿಲ್ಲ. ಬದಲಾಗಿ ಅವರ ರಾಜಕೀಯ ಚಟುವಟಿಕೆಗಳು ಮತ್ತು ಅವರು ಎತ್ತುವ ಪ್ರಶ್ನೆಗಳೇ ಸಾರ್ವಜನಿಕ ಚರ್ಚೆಯ ಭಾಗವಾದವು. ರಾಜಕೀಯದಲ್ಲಿ...

ಅಮೆರಿಕದಲ್ಲಿ ಟ್ರಂಪ್ ಬೇಡ – ಭಾರತದಲ್ಲಿ ಮೋದಿ ಬೇಕು;...

ಅಮೆರಿಕದಲ್ಲಿ 2026ರ ನವೆಂಬರ್ ಮಧ್ಯಂತರ ಚುನಾವಣೆ ನಡೆದು, ಫಲಿತಾಂಶ ಪ್ರಕಟಗೊಳ್ಳುತ್ತಿದೆ. ಈ ಚುನಾವಣೆಗೂ ಮುನ್ನ ‘ಕಾರ್ನೆಗಿ ಎಂಡೋಮೆಂಟ್ ಫಾರ್ ಇಂಟರ್‌ನ್ಯಾಷನಲ್ ಪೀಸ್ ಮತ್ತು ಯೂಗವ್’ ಸಂಸ್ಥೆ ರಾಜಕೀಯ ಸಮೀಕ್ಷೆಯೊಂದನ್ನು ನಡೆಸಿದೆ. ಮಹತ್ವದ ರಾಜಕೀಯ...

ಬಾಗೇಶ್ವರ ಬಾಬಾ ಹೇಳಿದ್ದೇನು?
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಬಾಗೇಶ್ವರ ಬಾಬಾ  ಶ್ರೀರಾಮ ಮತ್ತು ಶ್ರೀಕೃಷ್ಣನ ದೈಹಿಕ ಭಂಗಿ, ಶೈಲಿ ಹಾಗೂ ಧಾಮಗಳನ್ನು ಹೋಲಿಸುತ್ತಾ ಅತ್ಯಂತ ಹಗುರವಾದ ಶಬ್ದಗಳನ್ನು ಬಳಸಿದ್ದಾರೆ. 

“ನಿಮ್ಮ ಠಾಕೂರ್‌ಜಿ (ಶ್ರೀಕೃಷ್ಣ) ಪ್ರತಿಯೊಂದು ಫೋಟೋದಲ್ಲೂ ಸುತ್ತಲೂ ನೋಡುತ್ತಿರುವಂತೆ ಕಾಣುತ್ತಾರೆ. ನಿಂತಾಗಲೂ ಮೂರು ಕಡೆ ಬಗ್ಗಿದ್ದಾರೆ (ತ್ರಿಭಂಗಿ). ಕಾಲುಗಳು ಅಡ್ಡಲಾಗಿವೆ, ನಡುವಿನ ಭಾಗ ಎಲ್ಲೋ ಬಾಗಿದೆ, ಕುತ್ತಿಗೆ ಬಗ್ಗಿಸಿ ಕೊಳಲು ಬಾರಿಸುತ್ತಾರೆ. ಆದರೆ ನಮ್ಮ ರಾಮ ಹಾಗಲ್ಲ, ಆತ ನೇರವಾಗಿ ನಿಲ್ಲುತ್ತಾನೆ, ಆತನ ಹೆಸರು ನೇರ, ನೋಟ ನೇರ, ನಡಿಗೆಯೂ ನೇರ. ನಿಮ್ಮವನು ಡೊಂಕು, ಆತನ ನೋಟ ಮತ್ತು ನಡಿಗೆಯೂ ಡೊಂಕು,” ಎಂದು ವಿವರಿಸಿದ್ದರು.  “ಕೊಳಲು ಬಾರಿಸುವುದು ಒಂದು ಆಟವಷ್ಟೇ. ನಮ್ಮ ವೇದಿಕೆಯ ಮೇಲಿರುವ ಕಲಾಕಾರನೂ ಕೊಳಲು ಬಾರಿಸುತ್ತಾನೆ. ಆದರೆ ಧನುಸ್ಸು ಹಿಡಿಯುವುದು ಆಟವಲ್ಲ,” ಎನ್ನುವ ಮೂಲಕ ಶ್ರೀಕೃಷ್ಣನ ಕೊಳಲನ್ನು ಹಗುರವಾಗಿ ಕಂಡಿದ್ದರು.

ಹಸು ಮೇಯಿಸುವುದು ಯಾರಾದರೂ ಮಾಡಬಹುದು, ಆದರೆ ಕಪಿಗಳನ್ನು ಆಡಿಸುವುದು ಸಾಮಾನ್ಯವಲ್ಲ ಎಂದು ಹೇಳಿದ್ದಲ್ಲದೆ, ಅಯೋಧ್ಯೆ ಮತ್ತು ಬೃಂದಾವನ ಹಾಗೂ ‘ನಮ್ಮ ರಾಮ’ ಮತ್ತು ‘ನಿಮ್ಮ ಕೃಷ್ಣ’ ಎಂಬ ಪದ ಬಳಕೆಯ ಮೂಲಕ ಭಕ್ತರ ನಡುವೆಯೇ ‘ನಾವು-ನೀವು’ ಎಂಬ ಭೇದಭಾವ ಸೃಷ್ಟಿಸಲು ಯತ್ನಿಸಿದ್ದರು.

ಶಾಸ್ತ್ರಿಯವರ ಈ ಹೇಳಿಕೆ ಹೊರಬೀಳುತ್ತಿದ್ದಂತೆಯೇ ದೇಶದ ವಿವಿಧ ಮೂಲೆಯ ಧಾರ್ಮಿಕ ಮುಖಂಡರು, ಮಥುರಾ-ಬೃಂದಾವನದ ಸಂತರು ಹಾಗೂ ಶ್ರೀಕೃಷ್ಣನ ಭಕ್ತರು ತೀವ್ರವಾಗಿ ಖಂಡಿಸಿದ್ದಾರೆ.

ಮಧ್ಯಪ್ರದೇಶದ ‘ಯಾದವ ಸಮಾಜ (ಯಾದವಂಶಿ) ಸಂಘಟನೆ’ ಶಾಸ್ತ್ರಿಯವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಶ್ರೀಕೃಷ್ಣನನ್ನು ಕನಿಷ್ಠಗೊಳಿಸಿ, ಸನಾತನ ಸಂಸ್ಕೃತಿಯ ಹಂದರಕ್ಕೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ, ಗ್ವಾಲಿಯರ್ ಪೊಲೀಸ್ ಸೂಪರಿಂಟೆಂಡೆಂಟ್ ಅವರಿಗೆ ಬಾಗೇಶ್ವರ ಬಾಬಾ  ವಿರುದ್ಧ ಎಫ್‌ಐಆರ್ (FIR) ದಾಖಲಿಸಿ ಕಾನೂನು ಕ್ರಮ ಜರುಗಿಸುವಂತೆ ಮನವಿ ಸಲ್ಲಿಸಿದೆ.

“ವ್ಯಾಸಪೀಠದಂತಹ ಪವಿತ್ರ ವೇದಿಕೆಯಲ್ಲಿ ಕುಳಿತು ಕೋಟ್ಯಂತರ ಭಕ್ತರ ಆರಾಧ್ಯ ದೈವ ಶ್ರೀಕೃಷ್ಣನನ್ನು ಅಪಹಾಸ್ಯ ಮಾಡುವುದು ಶೋಚನೀಯ. ಎದೆಯ ಮೇಲೆ ಸೀತಾರಾಮ ಎಂದು ಬರೆದುಕೊಂಡು ನಾಲಿಗೆಯಲ್ಲಿ ಕೃಷ್ಣನ ವಿರುದ್ಧ ವಿಷ ಕಾರುತ್ತಿದ್ದಾರೆ,” ಎಂದು ಬೃಂದಾವನದ ಧಾರ್ಮಿಕ ಮುಖಂಡರು ಕಿಡಿಕಾರಿದ್ದಾರೆ.

 ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಈ ಘಟನೆಯನ್ನು ತೀವ್ರವಾಗಿ ಖಂಡಿಸಿ, “ಶ್ರೀರಾಮ ಮತ್ತು ಶ್ರೀಕೃಷ್ಣ ಇಬ್ಬರೂ ಒಂದೇ ಪರಂಜ್ಯೋತಿಯ ಅವತಾರಗಳು. ಇಂತಹ ಧ್ರುವೀಕರಣದ ಹೇಳಿಕೆಗಳನ್ನು ನೀಡುವವರ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆದು ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಅವರ ಕಾರ್ಯಕ್ರಮಗಳನ್ನು ರದ್ದುಗೊಳಿಸಬೇಕು,” ಎಂದು ಆಗ್ರಹಿಸಿದ್ದಾರೆ.

ಶ್ರೀರಾಮ ಮತ್ತು ಶ್ರೀಕೃಷ್ಣ ಇಬ್ಬರೂ ಭಗವಾನ್ ವಿಷ್ಣುವಿನ ಪ್ರಮುಖ ಅವತಾರಗಳಾಗಿದ್ದು, ಧರ್ಮ ಸಂಸ್ಥಾಪನೆಗಾಗಿಯೇ ಅವತರಿಸಿದವರು. ಆದರೆ, ಸಾರ್ವಜನಿಕರನ್ನು ಸೆಳೆಯಲು ಮತ್ತು ಭಕ್ತರ ಮೂಲ ನಂಬಿಕೆಗಳನ್ನೇ ಬಳಸಿಕೊಂಡು ಪಂಥೀಯ ಅಥವಾ ದೇವತೆಗಳ ಆಧಾರಿತ ಧ್ರುವೀಕರಣ ಸೃಷ್ಟಿಸಲು ಯತ್ನಿಸಿದ್ದು ಸನಾತನ ಧರ್ಮದ ತತ್ವಕ್ಕೇ ವಿರುದ್ಧ ಎಂಬ ಮಾತುಗಳು ಕೇಳಿಬಂದಿವೆ.

ವಿವಾದ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ, ಕೀನ್ಯಾದ ನೈರೋಬಿಯಲ್ಲಿದ್ದ ಬಾಗೇಶ್ವರ ಬಾಬಾ  ವಿಡಿಯೋ ಸಂದೇಶದ ಮೂಲಕ ಕ್ಷಮಾಪಣೆ ಕೇಳಿದ್ದಾರೆ. “ನಾನು ಶ್ರೀಕೃಷ್ಣನ ಪರಮ ಭಕ್ತ. ಬೃಂದಾವನ ಮತ್ತು ಠಾಕೂರ್‌ಜಿಯ ಕೃಪೆಯಿಂದಲೇ ನನ್ನ ಅಸ್ತಿತ್ವವಿದೆ. ಗೋಪಿಕೆಯರು ಅಥವಾ ಬ್ರಜ್‌ನ ಸಂತರು (ವಿಂದು ಜಿ ಮಹಾರಾಜ್ ಅವರಂತೆ) ಕೃಷ್ಣನಿಗೆ ಪ್ರೀತಿಯಿಂದ ಕೊಡುವ ‘ಭಾವಪೂರ್ಣ ಉಲಾಹನಾ’ ಶೈಲಿಯಲ್ಲಿ ನಾನು ಮಾತನಾಡಿದ್ದೇನೆಯೇ ವಿನಃ ದೇವತೆಗಳ ನಡುವೆ ತಾರತಮ್ಯ ಮಾಡುವ ಉದ್ದೇಶ ನನಗಿರಲಿಲ್ಲ. ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ,” ಎಂದು ಕ್ಷಮೆ ಕೇಳಿದ್ದಾರೆ. 

ಆದಾಗ್ಯೂ, ವ್ಯಾಸಪೀಠದಲ್ಲಿ ಕುಳಿತು ಮಾತನಾಡುವಾಗ ಧಾರ್ಮಿಕ ಮುಖಂಡರು ಅತ್ಯಂತ ಜವಾಬ್ದಾರಿಯಿಂದ ವರ್ತಿಸಬೇಕು ಮತ್ತು ಸಮಾಜವನ್ನು ವಿಭಜಿಸುವಂತಹ ಸಾಲುಗಳನ್ನು ಬಳಸಬಾರದು ಎಂಬುದಕ್ಕೆ ಈ ವಿವಾದ ಪ್ರಸ್ತುತ ಉದಾಹರಣೆಯಾಗಿ ಉಳಿದಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಷಾರ್ ಕಪೂರ್ ಬೆನ್ನಲ್ಲೇ ಆಯುಷ್ಮಾನ್ ಖುರಾನಾಗೆ ಬೆದರಿಕೆ: ‘ಬಿಷ್ಣೋಯ್ ಗ್ಯಾಂಗ್’ ಹೆಸರಲ್ಲಿ ಹಫ್ತಾಗೆ ಬೇಡಿಕೆ

ಬಾಲಿವುಡ್‌ ತಾರೆಯರಿಗೆ ಬೆದರಿಕೆ ಕರೆಗಳ ಸರಮಾಲೆ ಮುಂದುವರಿದಿದ್ದು, ನಟ ತುಷಾರ್ ಕಪೂರ್...

ಬಾಗಲಕೋಟೆ | ಕ್ರೀಡೆಯಲ್ಲಿ ಸೋಲು ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯ: ಗಜಾನನ ಬಾಲೆ

ಕ್ರೀಡಾ ಸ್ಪರ್ಧೆಗಳಲ್ಲಿ ಸೋಲು-ಗೆಲುವಿಗಿಂತ ಭಾಗವಹಿಸುವುದು ಹಾಗೂ ಕ್ರೀಡಾ ಮನೋಭಾವ ಬೆಳೆಸಿಕೊಳ್ಳುವುದು ಅತ್ಯಂತ...

‘ನಮ್ಮ ಶಾಲೆ ನಮ್ಮ ಜವಾಬ್ದಾರಿ’; ಗ್ರಾಮೀಣ ಶಾಲೆ ದತ್ತು ಪಡೆಯಲು ಡಿ.ಕೆ ಶಿವಕುಮಾರ್ ಕರೆ!

ರಾಜ್ಯದ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಮೂಲಸೌಕರ್ಯ ಹಾಗೂ ಶಿಕ್ಷಣದ ಗುಣಮಟ್ಟ...

ಅನಿಲ್ ಅಂಬಾನಿಯ ₹23,100 ಕೋಟಿ ಆಸ್ತಿ ಜಪ್ತಿ ಮಾಡಿದ ಇಡಿ!

ಸಾಲದ ಸುಳಿಗೆ ಸಿಲುಕಿ ವಿವಾದಗಳ ಕೇಂದ್ರಬಿಂದುವಾಗಿರುವ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್...