ರೈತರ ಸಹಕಾರಿ ಸಂಸ್ಥೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ: ಕೊತ್ತೂರು ಮಂಜುನಾಥ್

Date:

ಕೋಲಾರ: ಜಿಲ್ಲೆಯಲ್ಲಿರುವ ಕೃಷಿ ಪತ್ತಿನ ಸಹಕಾರಿ ಸಂಘಗಳು, ತಾಲೂಕು ಸೊಸೈಟಿಗಳು, ಹಾಲಿನ ಡೇರಿಗಳು, ಪಿಎಲ್ಡಿ ಮತ್ತು ಡಿಸಿಸಿ ಬ್ಯಾಂಕುಗಳು ರೈತರ ಜೀವನಾಡಿಯ ಸಂಸ್ಥೆಗಳಾಗಿದ್ದು ಅವುಗಳನ್ನು ಕಾಪಾಡಿಕೊಂಡು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.

- Advertisement -

ತಾಲೂಕಿನ ವೇಮಗಲ್ ಹೋಬಳಿಯ ವೀರೇನಹಳ್ಳಿ ಗ್ರಾಮದಲ್ಲಿ ಗುರುವಾರ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು ರೈತರು ಇದ್ದರೆ ಅಷ್ಟೇ ಜೀವನ ಅವರು ಏನಾದರೂ ಆಹಾರ ಬೆಳೆಯದೆ ಹೋದರೆ ಊಟಕ್ಕೂ ತೊಂದರೆಯಾಗುವ ಸಂದರ್ಭ ಬರುತ್ತದೆ ರೈತರು ಯಾವುದೇ ಕಾರಣಕ್ಕೂ ಜಮೀನು ಮಾರಾಟ ಮಾಡಲಿಕ್ಕೆ ಹೋಗಬೇಡಿ ಮುಂದೆ ಜಮೀನುಗಳಿಗೂ ಬಂಗಾರ ಅಂತಹ ಬಲೆ ಬರುತ್ತದೆ ಎಂದರು

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ಹಾಲು ಉತ್ಪಾದಕರು ಕಡ್ಡಾಯವಾಗಿ ಯಶಸ್ವಿನಿ ಯೋಜನೆಯ ಕಾರ್ಡ್ ಮಾಡಿಸಬೇಕು ಡೇರಿಯಲ್ಲಿ ಯಾವುದೇ ಕಾರಣಕ್ಕೂ ರಾಜಕಾರಣ ಮಾಡಬಾರದು ಪಕ್ಷಾತೀತವಾಗಿ ಡೇರಿಯನ್ನು ಮುನ್ನಡೆಸಿಕೊಂಡು ಹೋಗಬೇಕು ಡೇರಿ ವಿಚಾರದಲ್ಲಿ ಸರ್ಕಾರದಿಂದ ಮತ್ತು ಒಕ್ಕೂಟದಿಂದ ಸಂಪೂರ್ಣ ಸಹಕಾರ ನೀಡಲಾಗುತ್ತದೆ ಹಾಲು ಉತ್ಪಾದಕರು ಗುಣಮಟ್ಟದ ಹಾಲು ಪೊರೈಸಿ ಸಂಘಕ್ಕೆ ಲಾಭಾಂಶ ಪಡೆಯುವಂತೆ ಮಾಡಿಕೊಳ್ಳಿ ಎಂದರು.

ಈ ಸಂಧರ್ಭದಲ್ಲಿ ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ ರೈತರು ಬೆಳೆದ ಯಾವುದೇ ಬೆಳೆಗಳಿಗೂ ನಿಗದಿತ ಬೆಲೆ ಇಲ್ಲ ಆದರೆ ಹಾಲು ಉತ್ಪಾದಕರಿಗೆ ಮಾತ್ರ ನಿಗದಿತ ಬೆಲೆ ಇದೆ 15 ದಿನಗಳಿಗೆ ಒಮ್ಮೆ ಉತ್ಪಾದಕರಿಗೆ ಹಣ ಕೈಸೇರುತ್ತೆ ಜಿಲ್ಲೆಯಲ್ಲಿ ಸಹಕಾರಿ ಸಂಘಗಳು ರೈತರ ಆದಾಯದ ಮೂಲವಾಗಿದೆ ಮುಂದೆ ಒಕ್ಕೂಟದಿಂದ ಸೋಲಾರ್ ಘಟಕ, ಎಂವಿಕೆ ಡೇರಿ ಪ್ರಾರಂಭವಾಗಿ ಹಾಲು ಉತ್ಪಾದಕರಿಗೆ ಹೆಚ್ಚಿನ ಪೋತ್ಸಾಹ ಸಿಗುವಂತಾಗುತ್ತದೆ ಹೈನುಗಾರಿಕೆಗೆ ಸರ್ಕಾರದಿಂದ ಸಹ ಹೆಚ್ಚಿನ ನೆರವು ಸಿಗುತ್ತದೆ ಎಂದರು.

ಈ ಸಂಧರ್ಭದಲ್ಲಿ ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್ ಮಾತನಾಡಿ ಹಾಲು ಉತ್ಪಾದಕರ ಸಂಘಗಳು ರೈತರ ಸಂಸ್ಥೆಗಳಾಗಿವೆ ಕೊರೊನಾ ಅಂತಹ ಸಂಧರ್ಭದಲ್ಲಿ ಸಹ ರೈತರನ್ನು ಕೈಹಿಡಿದಿದ್ದು ಹಾಲು ಉತ್ಪಾದನೆ ಮಾತ್ರ ಹಾಲಿಗೆ ಯಾರು ಕೂಡ ನೀರು ಹಾಕಬೇಡಿ ಕಲಬೆರಕೆ ಹಾಲಿಗೆ ಬೆಲೆ ಇಲ್ಲ ಹಾಲು ಉತ್ಪಾದಕರಿಗೆ ಒಕ್ಕೂಟದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.

ಇದನ್ನು ಓದಿದ್ದೀರಾ..?ಸಮಾಜದ ಸ್ಥಾನ ಮಾನ ಗೌರವಿಸುವುದು ಭಾರತದ ಪ್ರಜೆಯ ಕರ್ತವ್ಯ

ಈ ಸಂಧರ್ಭದಲ್ಲಿ ವೀರೇನಹಳ್ಳಿ ಡೇರಿ ಅಧ್ಯಕ್ಷ ಎ.ಕೃಷ್ಣಪ್ಪ, ವೇಮಗಲ್ ನರಸಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಉರಟ ಅಗ್ರಹಾರ ಚೌಡರೆಡ್ಡಿ, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಕೋಮುಲ್ ಉಪ ವ್ಯವಸ್ಥಾಪಕ ಡಾ ಮಹೇಶ್, ಅಹಮದ್ ಅಸ್ವಕ್, ವಿಸ್ತರಣಾಧಿಕಾರಿ ಶಿವಕುಮಾರ್, ನಾಗೇಂದ್ರ, ಮುಖಂಡರಾದ ಮೈಲಾಂಡಹಳ್ಳಿ ಮುರಳಿ, ಮೇಡಹಾಳ ಮುನಿಅಂಜಿ, ರಾಮುಶಿವಣ್ಣ, ಕುಮಾರ್, ಚೌಡಪ್ಪ, ವೀರೇಂದ್ರ ಪಾಟೀಲ್, ಸೇರಿದಂತೆ ಡೇರಿ ನಿರ್ದೇಶಕರು ಹಾಲು ಉತ್ಪಾದಕರು ಗ್ರಾಮಸ್ಥರು ಇದ್ದರು

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಮಾಜಿ ಗ್ರಾ. ಪಂ ಸದಸ್ಯನ ಬರ್ಬರ ಹತ್ಯೆ

ಲಕ್ಕುಂಡಿ ಗ್ರಾಮದ ಹೊರವಲಯದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರೊಬ್ಬರನ್ನು ಬರ್ಬರವಾಗಿ ಹತ್ಯೆ...

ಹಾವೇರಿ‌ | ಬಾಲಕರ ವಸತಿ ನಿಲಯಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ

ಚುನಾವಣಾ ಸಂಬಂಧಿತ ಕಾರ್ಯಗಳ ಪರಿಶೀಲನೆಯ ಜೊತೆಗೆ, ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ...

ಗದಗ | ಮಾನವ ದಿನಗಳ ಸೃಜನೆ ಮಾಡದಿದ್ದರೇ ಶಿಸ್ತು ಕ್ರಮ : ಜಿಪಂ ಸಿಇಓ ಮುಕುಲ್ ಜೈನ್

ರೋಣ ತಾಲೂಕಿನಲ್ಲಿ ಮಾನವ ದಿನಗಳ ಸೃಜನೆ ತುಂಬಾ ಕಡಿಮೆ ಇದೆ. ಮಾನವ...

ಮಹಿಷಮಂಡಲದ ಇತಿಹಾಸಕ್ಕೆ ಮರುಜೀವ: ಮೈಸೂರಿನಲ್ಲಿ ಮಹಿಷಮಂಡಲೋತ್ಸವ-2026

ರಾಜ್ಯದ ಪ್ರಗತಿಪರ ಚಿಂತಕರು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ದಲಿತ ಸಂಘಟನೆಗಳು,...