ಬಾಗೇಪಲ್ಲಿ:ಪಟ್ಟಣದ ಎಲ್ಲಾ ವಾರ್ಡ್ ಗಳಲ್ಲಿ ಬಹುತೇಕ ಸಿಸಿ ರಸ್ತೆಗಳು ಚರಂಡಿ ಕಾಮಗಾರಿ ಮಾಡಲಾಗುತ್ತಿದೆ ಹಂತ ಹಂತವಾಗಿ ಎಲ್ಲಾ ರಸ್ತೆಗಳನ್ನ ಪೂರ್ಣಗೊಳಿಸಲಾಗುವುದು ಎಂದು ಶಾಸಕ ಎಸ್ಎನ್. ಸುಬ್ಬಾರೆಡ್ಡಿ ತಿಳಿಸಿದರು.
ಅವರು ಇಂದು ಪಟ್ಟಣದ 23 22 ವಾರ್ಡ್ ಗಳ ಮಧ್ಯದಲ್ಲಿ ಹಾದುಹೋಗುವ ನ್ಯೂ ಹಾರಿಜನ್ ಶಾಲೆಯವರೆಗೆ ಸಿಸಿ ಕಾಮಗಾರಿಗೆ 17 ಲಕ್ಷ ರೂಪಾಯಿ ವೆಚ್ಚದಲ್ಲಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಪಟ್ಟಣದ 23 ವಾರ್ಡ್ಗಳಲ್ಲಿ ಬಹುತೇಕ ಸಿಸಿ ರಸ್ತೆಗಳು ನಿರ್ಮಾಣವಾಗಿದ್ದು ಉಳಿದ ಕಡೆ ಹಂತ ಹಂತವಾಗಿ ಪೂರ್ಣಗೊಳಿಸಲಾಗುವುದು ಹಾಗೂ ಎಲ್ಲಾ ವಾರ್ಡ್ ಗಳಿಗೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನ ಈಗಾಗಲೇ ನಿರ್ಮಾಣ ಮಾಡಲಾಗಿದೆ ಅವಶ್ಯಕತೆ ಇರುವ ಕಡೆ ಮುಂದಿನ ದಿನಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗುವುದು ಎಂದ ಅವರು ನಾಡಿನ ಸಮಸ್ತ ಜನತೆಗೆ 70ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಎಂದು ಹೇಳಿದರು.
ಇದನ್ನು ಓದಿದ್ದೀರಾ..? ಕನ್ನಡ ರಾಜ್ಯೋತ್ಸವದಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರೇಮಿಗಳು
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಎ ಶ್ರೀನಿವಾಸ್ ಉಪಾಧ್ಯಕ್ಷ ಸುಜಾತ ಬಿ ನರಸಿಂಹ ನಾಯ್ಡು, ಪುರಸಭೆ ಮುಖ್ಯ ಅಧಿಕಾರಿ ಶ್ರೀನಿವಾಸ್, ಇನ್ಸ್ಪೆಕ್ಟರ್ ಪ್ರಶಾಂತ್ ವರ್ಣಿ, ಸದಸ್ಯರಾದ ಶ್ರೀನಿವಾಸ ರೆಡ್ಡಿ, 22ನೇ ವಾರ್ಡಿನ ಜಬಿವುಲ್ಲಾ, ಗಡ್ಡಂ ರಮೇಶ್, ಕರವೇ ಸ್ವಾಭಿಮಾನಿ ಬಳಗದ ಅಧ್ಯಕ್ಷ ಬಿ.ಟಿ. ಶ್ರೀನಿವಾಸ್. ಮಲ್ಲೇಶ್, ಮುಖಂಡರಾದ ರಾಮಚಂದ್ರ ನಾಯ್ಡು. ಕೇಬಲ್ ಶ್ರೀನಿವಾಸ್ ರೆಡ್ಡಿ ನಾಗರಾಜ್. ನೂರುಲ್ಲಾ, ರಮೇಶ್,ಬಾಬು, ನಾಗಮ್ಮ , ಭಾಗ್ಯಮ್ಮ , ಸುಕನ್ಯಾ ಸುಧಾ. ಸರೋಜಮ್ಮ. ಸ್ವರ್ಣ. ಇನ್ನು ಮುಂತಾದವರು ಇದ್ದರು.
ಹಾರಿಜನ್ ಶಾಲೆಯವರೆಗೆ ಸಿಸಿ ಕಾಮಗಾರಿಗೆ 17 ಲಕ್ಷ ರೂಪಾಯಿ ವೆಚ್ಚದಲ್ಲಿ ಶಾಸಕರಿಂದ ಭೂಮಿ ಪೂಜೆ
ಪೋಸ್ಟ್ ಹಂಚಿಕೊಳ್ಳಿ:
ಪೋಸ್ಟ್ ಹಂಚಿಕೊಳ್ಳಿ:
This video cannot be played in your browser. Open the video directly
ಈ ಹೊತ್ತಿನ ಪ್ರಮುಖ ಸುದ್ದಿ
ವಿಡಿಯೋ




