ಬಾಗಲಕೋಟೆ | ರೈತರು ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ – ಗುರುಪಾದ ಶ್ರೀಗಳು

Date:

ಕೃಷಿ ಕ್ಷೇತ್ರದಲ್ಲಿ ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ರೈತರು ಹೊಂದಿಕೊಳ್ಳುವುದರ ಜೊತೆಗೆ ಸುಧಾರಿತ ತಳಿಗಳ ಆಯ್ಕೆ, ವೈಜ್ಞಾನಿಕ ಬೆಳೆ ನಿರ್ವಹಣೆ ಹಾಗೂ ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕೆಂದು ಮರೇಗುದ್ದಿಯ ಅಡವಿಸಿದ್ದೇಶ್ವರ ಮಠದ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಶ್ರೀ ಗುರುಪಾದ ಮಹಾಸ್ವಾಮಿಗಳು ಹೇಳಿದರು.

- Advertisement -

ತಾಲೂಕಿನ ನಾವಲಗಿ ಗ್ರಾಮದ ಶ್ರೀ ಗಣೇಶ ಟ್ರೆಂಡಿಂಗ್ ಕಂಪನಿಯ ಸಹಯೋಗದಲ್ಲಿ ಜರುಗಿದ ರಾಶಿ ಸೀಡ್ಸ್ ಪ್ರೈವೇಟ್ ಲಿಂ ಕಂಪನಿಯ ಹೈಬ್ರಿಡ್ ಮೆಕ್ಕೆಜೋಳದ ಆರ್-3414 ತಳಿಯ ಮಹಾ ಕ್ಷೇತ್ರೋತ್ಸವ ಹಾಗೂ ಡೀಲರ್ ಕ್ರಾಪ್ ಟೂರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರೈತರು ಕೃಷಿಯನ್ನು ಕೇವಲ ಸಾಂಪ್ರದಾಯಿಕ ಪದ್ಧತಿಗೆ ಸೀಮಿತಗೊಳಿಸದೆ ಕಾಲಕ್ಕೆ ತಕ್ಕಂತೆ ಹೊಸ ತಂತ್ರಜ್ಞಾನ ಹಾಗೂ ಕೃಷಿ ಸಂಶೋಧನೆಗಳ ಮಾಹಿತಿ ಪಡೆದುಕೊಳ್ಳುವ ಮೂಲಕ ರೈತರಿಗೆ ಅನುಭವದ ಜೊತೆಗೆ ತಜ್ಞರ ಮಾರ್ಗದರ್ಶನವೂ ಕೃಷಿಯಲ್ಲಿ ಯಶಸ್ಸು ಸಾಧಿಸಲು ಸಹಕಾರಿಯಾಗುತ್ತದೆ. ಇಂತಹ ಕ್ಷೇತ್ರೋತ್ಸವಗಳು ರೈತರಿಗೆ ಪ್ರಾಯೋಗಿಕವಾಗಿ ಬೆಳೆಯ ಗುಣಮಟ್ಟ ಮತ್ತು ಬೆಳವಣಿಗೆ ವೀಕ್ಷಿಸಲು ಉತ್ತಮ ಅವಕಾಶ ಕಲ್ಪಿಸುತ್ತವೆ ಆದ್ದರಿಂದ ಇಂತಹ ಕ್ಷೇತ್ರೋತ್ಸವಗಳು ನಿರಂತರ ಜರುಗವಂತಾಗಲಿ ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸುಪ್ತ ಆಯಾಸದ ಹಿಂದೆ ಅಡಗಿರುವ ರಕ್ತಹೀನತೆ: ಕರ್ನಾಟಕದ ಅರ್ಧದಷ್ಟು...

ದೈನಂದಿನ ಒತ್ತಡ, ನಿದ್ರೆಯ ಕೊರತೆ ಅಥವಾ ಬಿಡುವಿಲ್ಲದ ಜೀವನಶೈಲಿಯೆಂದು ನಿರ್ಲಕ್ಷಿಸುವ ಆಯಾಸದ ಹಿಂದೆ ರಕ್ತಹೀನತೆ ಅಡಗಿರಬಹುದು. ಕರ್ನಾಟಕದಲ್ಲಿ ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರಲ್ಲಿ ಶೇ. 50ಕ್ಕಿಂತ ಹೆಚ್ಚು ಮಂದಿ ರಕ್ತಹೀನತೆಯಿಂದ ಬಳಲುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ದೈನಂದಿನ...

20 ಬಂಡುಕೋರ ಟಿಎಂಸಿ ಸಂಸದರು ಮತ ಚಲಾಯಿಸಬಹುದೇ; ಮುಂದೆ...

ಡಿಲಿಮಿಟೇಷನ್ ಹಾಗೂ ಮಹಿಳಾ ಮೀಸಲಾತಿ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮುಂದಿನ ವಾರ ಸಂಸತ್ತಿನಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಸಜ್ಜಾಗಿರುವ ಹೊತ್ತಿನಲ್ಲಿ, ಲೋಕಸಭಾ ಸ್ಪೀಕರ್ ಮುಂದೆ ಅನರ್ಹತೆ ವಿಚಾರಣೆ ಎದುರಿಸುತ್ತಿರುವ 20 ಬಂಡುಕೋರ ಟಿಎಂಸಿ...

ಸಿನಿಮಾ ಪ್ರಶಸ್ತಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯ ಏಳು ಸುತ್ತಿನ...

ಪ್ರಶಸ್ತಿಗೆ ಮತ್ತು ಸಬ್ಸಿಡಿಗೆ ಅರ್ಜಿ ಸಲ್ಲಿಸಲು ನಿರ್ಮಾಪಕರು, ನಿರ್ದೇಶಕರು ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣ, ನಮ್ಮ ಚಿತ್ರರಂಗದಲ್ಲಿ ಪೂರ್ಣ ಪ್ರಮಾಣದ ನಿರ್ಮಾಣ ಸಂಸ್ಥೆಗಳಿರುವುದು ಕೇವಲ ಬೆರಳೆಣಿಕೆಯಷ್ಟು, ಉಳಿದಂತೆ ಬಹುತೇಕ ನಿರ್ಮಾಣ...

ಈ ಸಂದರ್ಭದಲ್ಲಿ ರೈತರಿಗೆ ಹೈಬ್ರಿಡ್ ಮೆಕ್ಕೆಜೋಳದ ಆರ್-3414 ತಳಿಯ ವಿಶೇಷತೆಗಳು, ಬಿತ್ತನೆ ವಿಧಾನ, ಬೆಳೆಯ ವಿವಿಧ ಹಂತಗಳಲ್ಲಿ ಕೈಗೊಳ್ಳಬೇಕಾದ ನಿರ್ವಹಣಾ ಕ್ರಮಗಳು ಹಾಗೂ ಉತ್ತಮ ಇಳುವರಿ ಪಡೆಯಲು ಅನುಸರಿಸಬೇಕಾದ ಕೃಷಿ ಪದ್ಧತಿಗಳ ಕುರಿತು ಮಾಹಿತಿ ನೀಡಲಾಯಿತು.

ಕ್ಷೇತ್ರೋತ್ಸವದ ಅಂಗವಾಗಿ ರೈತರು ಮೆಕ್ಕೆಜೋಳದ ಪ್ರಾತ್ಯಕ್ಷಿಕೆ ಕ್ಷೇತ್ರಕ್ಕೆ ಭೇಟಿ ನೀಡಿ ಬೆಳೆಯ ಬೆಳವಣಿಗೆ, ಸಸ್ಯಗಳ ಸ್ಥಿತಿ ಹಾಗೂ ಕಾಳು ಕಟ್ಟುವ ಹಂತವನ್ನು ವೀಕ್ಷಿಸಿದರು. ಕಂಪನಿಯ ಪ್ರತಿನಿಧಿಗಳೊಂದಿಗೆ ಕೃಷಿ ಸಂಬಂಧಿತ ವಿಷಯಗಳ ಕುರಿತು ಚರ್ಚಿಸಿ ಮಾಹಿತಿ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಶ್ರೀಶೈಲ್ಲಯ್ಯ ಹಿರೇಮಠ, ಕಾಡಯ್ಯ ಕಾಡದೇವರ ಸೆಲ್ಸ್ ಮ್ಯಾನೇಜರ್ ಮುತ್ತಪ್ಪ ಯಾಳವಾರ, ಪ್ರಕಾಶ ಎಂ ಎಂ.ಶ್ರೀಶೈಲ ಕುಂಬಾರ ಮಹೇಶ ಚಿಂಚಖಂಡಿ, ಮಹಾಂತೇಶ ಕಾಂತಿ, ಮಂಜು ಕಾಂತಿ, ರೈತರಾದ ದಾನಪ್ಪ ಆಸಂಗಿ, ಹಣಮಂತ ಸವದಿ, ಶಿವಪ್ಪ ವಾಲಿ, ತುಕ್ಕಪ್ಶ ಬೂಮಕ್ಕನವರ, ಜಗದೀಶ ಪಾಟೀಲ, ನಾಗಪ್ಪ ಹೂಗಾರ, ಶಂಕರ ಅಮ್ಮಲಜೇರಿ ಸೇರಿದಂತೆ ಸುತ್ತಮುತ್ತಲಿನ ರೈತರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಿರಿಯ ಲೇಖಕಿ, ಬಂಡಾಯ ಸಾಹಿತ್ಯದ ಪ್ರಮುಖ ಧ್ವನಿ ಸ. ಉಷಾ ಇನ್ನಿಲ್ಲ

ಕನ್ನಡ ಸಾಹಿತ್ಯ ಲೋಕದ ಹಿರಿಯ ಲೇಖಕಿ, ಕವಯತ್ರಿ, ಪ್ರಾಧ್ಯಾಪಕಿ ಸ. ಉಷಾ...

ಬಾಗಲಕೋಟೆ | ಆನ್‌ಲೈನ್ ಗೇಮಿಂಗ್ ಆಮಿಷದ ವಂಚನೆಗೆ ಬ್ರೇಕ್: 495 ಲಿಂಕ್ ಪತ್ತೆ, ಬ್ಲಾಕ್‌ಗೆ ಪೊಲೀಸ್ ಕ್ರಮ

ಆನ್‌ಲೈನ್ ಗೇಮಿಂಗ್, ಬೆಟ್ಟಿಂಗ್ ಹಾಗೂ ಕ್ಯಾಸಿನೋ ಆಟಗಳ ಆಮಿಷವೊಡ್ಡಿ ಸಾರ್ವಜನಿಕರನ್ನು ವಂಚಿಸುತ್ತಿರುವ...

ಉಡುಪಿ | ಶಿವಪುರ, ಕೆರೆಬಿಟ್ಟು ಕೃಷಿ ಭೂಮಿ ಸ್ವಾಧೀನ ಕೈಬಿಡಲು ಕುಮಾರಸ್ವಾಮಿಗೆ ಜೆಡಿಎಸ್ ಮನವಿ

ಕಾರ್ಕಳ ವಿಧಾನಸಭಾ ಕ್ಷೇತ್ರದ ಹೆಬ್ರಿ ತಾಲ್ಲೂಕಿನ ಶಿವಪುರ ಹಾಗೂ ಕೆರೆಬಿಟ್ಟು ಗ್ರಾಮಗಳ...

ರಾಯಚೂರು | ಮೂಲಸೌಲಭ್ಯಗಳ ಕೊರತೆಯಿಂದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ ವಿಳಂಬ: ಶಾಸಕ ಮಾನಪ್ಪ ವಜ್ಜಲ್ ಸ್ಪಷ್ಟನೆ

ತಾಯಿ ಮತ್ತು ಮಕ್ಕಳ ಆಸತ್ರೆಯಲ್ಲಿ ಅಗತ್ಯ ಮೂಲಸೌಲಭ್ಯಗಳ ಕೊರತೆ ಇರುವುದರಿಂದ ಉದ್ಘಾಟನೆ...