ಮೈಸೂರು | ಸಕಲ ಸರ್ಕಾರಿ ಗೌರವದೊಂದಿಗೆ ಬಲರಾಮನ ಅಂತ್ಯಕ್ರಿಯೆ

Date:

  • ಕನ್ನಡದಲ್ಲಿ ಟ್ವೀಟ್‌ ಮಾಡಿ ಕಂಬನಿ ಮಿಡಿದ ಪ್ರಧಾನಿ ಮೋದಿ
  • 13 ಬಾರಿ ಮೈಸೂರು ದಸರಾ ಅಂಬಾರಿ ಹೊತ್ತಿದ್ದ ಬಲರಾಮ

13 ಬಾರಿ ವಿಶ್ವವಿಖ್ಯಾತ ಮೈಸೂರು ದಸರಾ ಅಂಬಾರಿ ಹೊತ್ತು ನಾಡಿಗೆ ಗೌರವ ತಂದಿದ್ದ ಬಲರಾಮ ಆನೆ ಭಾನುವಾರ ಮೃತಪಟ್ಟಿದೆ. ಆನೆಯ ಅಂತ್ಯಕ್ರಿಯೆಯನ್ನು ಸೋಮವಾರ ಅರಣ್ಯ ಇಲಾಖೆ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಿದೆ.

ಅನಾರೋಗ್ಯಕ್ಕೆ ತುತ್ತಾಗಿ ಬಲರಾಮ ಆನೆ ಮೃತಪಟ್ಟಿತ್ತು. ನಾಗರಹೊಳೆ ಹುಲಿ ಅಭಯಾರಣ್ಯರಲ್ಲಿಆನೆಯ ಮರಣೋತ್ತರ ಪರೀಕ್ಷೆ ನಡೆಸಿದ್ದು, ಬಳಿಕ ಅಂತ್ಯಕ್ರಿಯೆ ನಡೆಸಲಾಗಿದೆ.

67 ವರ್ಷ ವಯಸ್ಸಿನ ಬಲರಾಮ ಆನೆ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿತ್ತು. ನಾಗರಹೊಳೆ ಉದ್ಯಾನವನದ ಹುಣಸೂರು ರೇಂಜ್ ವ್ಯಾಪ್ತಿಯ ಭೀಮನಕಟ್ಟೆ ಆನೆ ಶಿಬಿರದಲ್ಲಿ ಪಶು ವೈದ್ಯರ ತಂಡ ಬಲರಾಮನಿಗೆ ಚಿಕಿತ್ಸೆ ನೀಡುತ್ತಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಮೃತಪಟ್ಟಿತ್ತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ನಾಡಹಬ್ಬ ದಸರಾ ಮಹೋತ್ಸವದಲ್ಲಿ 13 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಬಲರಾಮನ ಅಂತ್ಯಕ್ರಿಯನ್ನು ಅರಣ್ಯ ಇಲಾಖೆ ಸಕಲ ಸರ್ಕಾರಿ ಗೌರವಗಳಿಂದಿಗೆ ನೆರವೇರಿಸಿದೆ. ಈ ವೇಳೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಪಾಲ್ಗೊಂಡು ಗೌರವ ಸಲ್ಲಿಸಿದರು.

ಕಂಬನಿ ಮಿಡಿದ ಪ್ರಧಾನಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈ ಕುರಿತು ಕನ್ನಡದಲ್ಲಿಯೇ ಟ್ವೀಟ್ ಮಾಡಿ, “ಹಲವು ವರ್ಷಗಳಿಂದ, ಗಜರಾಜ ಬಲರಾಮ ಮೈಸೂರಿನ ಸಾಂಪ್ರದಾಯಿಕ ದಸರಾ ಆಚರಣೆಯ ಪ್ರಮುಖ ಭಾಗವಾಗಿದ್ದನು. ಅವನು ಚಾಮುಂಡೇಶ್ವರಿ ಮಾತೆಯ ಮೂರ್ತಿಯನ್ನು ಹೊತ್ತಿದ್ದನ್ನು ಜನರು ನೆನಪಿಸಿಕೊಳ್ಳುತ್ತಾರೆ. ಅವನು ಅಸಂಖ್ಯಾತ ಜನರಿಗೆ ಪ್ರೀತಿಪಾತ್ರನಾಗಿದ್ದನು. ಅವನ ಅಗಲಿಕೆಯಿಂದ ದುಃಖವಾಗಿದೆ. ಓಂ ಶಾಂತಿ” ಎಂದು ಬಲರಾಮನಿಗೆ ಕಂಬನಿ ಮಿಡಿದಿದ್ದಾರೆ.

ಆರೋಗ್ಯ ಕೆಡಿಸಿದ ಮರದ ಕವಲಿನ ತುಂಡು

ಬಲರಾಮನ ಸಾವಿಗೆ ಅನಾರೋಗ್ಯದೊಂದಿಗೆ ಕರುಳು ಬೇನೆಯೂ ಕಾರಣ.  ಕಳೆದ ತಿಂಗಳು ಏ. 19ರಂದು ಕುಡಿದ ನೀರನ್ನೆಲ್ಲಾ ವಾಂತಿ ಮಾಡಿಕೊಳ್ಳುತ್ತಿದ್ದ ಬಲರಾಮನಿಗೆ ಪರೀಕ್ಷೆ ಮಾಡಿದಾಗ ಗಂಟಲಿನಲ್ಲಿ ಯಾವುದೋ ವಸ್ತು ಸಿಕ್ಕಿ ಹಾಕಿಕೊಂಡಿರುವ ಶಂಕೆ ವ್ಯಕ್ತವಾಗಿತ್ತು. ಈ ವೇಳೆ ಗಂಜಿ ಮಾದರಿಯ ಆಹಾರವನ್ನು ನೀಡಿ ಉಪಚರಿಸಲಾಗಿತ್ತು.

ಬಳಿಕ ಗಂಟಲಿನಲ್ಲಿ ಸಿಲುಕಿದ್ದ ಮರದ ತುಂಡು ಹೊಟ್ಟೆ ಸೇರಿತ್ತು. ಆ ನಂತರ ಹಿಂಭಾಗದಿಂದ(ಗುದದ್ವಾರ) ಕೈ ಹಾಕಿ ಹೊಟ್ಟೆಯಲ್ಲಿದ್ದ  ಮರದ ತುಂಡನ್ನು ಹೊರಗೆ ತೆಗೆಯಲಾಗಿತ್ತು. ಸೊಪ್ಪು ತಿನ್ನುವ ವೇಳೆ ವೈ ಆಕಾರದ(ಕವಲು) ಮರದ ತುಂಡು ಗಂಟಲಿನಲ್ಲಿ ಸಿಕ್ಕಿಹಾಕೊಂಡಿತ್ತು. ಅದು ಹೊಟ್ಟೆಗೆ ಜಾರುವಾಗ ಕರುಳಿಗೆ ಕೆಲ ಕಡೆ ತೂತು ಉಂಟು ಮಾಡಿತ್ತು. ಅದರಿಂದ ರಕ್ತಸಾವ್ರವಾಗಿ ನಿತ್ರಾಣಗೊಳಿಸಿತ್ತು. ಹಾಗಾಗಿ ವಯೋಸಹಜ ಸಮಸ್ಯೆಯೊಂದಿಗೆ ಅನಾರೋಗ್ಯ ಸಮಸ್ಯೆಯಿಂದ ಬಳಲಿ ಮೃತಪಟ್ಟಿದೆ ಎನ್ನಲಾಗಿದೆ.

ಏಳು ತಿಂಗಳ ಹಿಂದೆ ಗುಂಡೇಟು ತಿಂದಿದ್ದ ಬಲರಾಮ

ವಯೋ ಸಹಜ ಸಮಸ್ಯೆಯಿಂದ ಬಳಲುತ್ತಿದ್ದ ಬಲರಾಮನನ್ನು ಭೀಮನಕಟ್ಟೆ ಕ್ಯಾಂಪ್‍ನಲ್ಲಿಡಲಾಗಿತ್ತು. 2022ರ ಡಿ. 14ರಂದು ರಾತ್ರಿ ಕ್ಯಾಂಪ್ ಸಮೀಪ ಇರುವ ಹೊಲದ ಮಾಲೀಕ ಕಾಡಾನೆಯೆಂದು ಭಾವಿಸಿ ಕಾವಲು ಕಾಯಲು ನಿರ್ಮಿಸಿದ್ದ ಅಟ್ಟಣೆ ಮೇಲಿಂದ ಸಮೀಪದಿಂದಲೇ ಬಲರಾಮನ ಮೇಲೆ ಗುಂಡು ಹಾರಿಸಿದ್ದ. ಆದರೆ ಬಲರಾಮನ ಮೈಗೆ 45 ಕಡೆ ಚೆರ್ರಿ ತೂರಿ ಗಾಯವಾಗಿತ್ತು. ಸುಸ್ತಾಗಿ ಬಿದ್ದಿದ್ದ ಬಲರಾಮನನ್ನು ಕ್ಯಾಂಪ್‍ಗೆ ಕರೆತಂದು ಮೆಟಲ್ ಡಿಟೆಕ್ಟರ್ ಮೂಲಕ ದೇಹಹೊಕ್ಕಿದ್ದ ಗುಂಡಿನ ಚೆರ್ರಿಯನ್ನು ಹೊರತೆಗೆಯಲಾಗಿತ್ತು. ಬಳಿಕ ಸಪ್ಟಿಕ್ ಆಗದಂತೆ ಚಿಕಿತ್ಸೆ ನೀಡಿದ್ದ ವೈದ್ಯ ಡಾ. ರಮೇಶ್ ಬಲರಾಮನನ್ನು ಗುಣಪಡಿಸಿದ್ದರು.

ಬಲರಾಮ 02

13 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಬಲರಾಮ

ನಾಡಹಬ್ಬ ದಸರಾ ಮಹೋತ್ಸವದಲ್ಲಿ ಸತತ 13 ಬಾರಿ ಚಿನ್ನದ ಅಂಬಾರಿ ಹೊತ್ತು ಯಶಸ್ವಿಯಾಗಿ ಸಾಗಿ ಲಕ್ಷಾಂತರ ಮಂದಿಯ ಪ್ರೀತಿ, ಗೌರವಕ್ಕೆ ಪಾತ್ರವಾಗಿದ್ದ ಬಲರಾಮ (67) ನಿನ್ನೆ ಕೊನೆಯುಸಿರೆಳೆದಿತ್ತು.

ಹುಣಸೂರು ತಾಲೂಕಿನ ಭೀಮನಕಟ್ಟೆ ಆನೆ ಕ್ಯಾಂಪ್‍ ನಲ್ಲಿ ಆಶ್ರಯ ಪಡೆದಿದ್ದ ಬಲರಾಮ ಕಳೆದ ಒಂದು ತಿಂಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿತ್ತು. ಇಲಾಖೆಯ ಪಶುವೈದ್ಯರು ಸತತ ಪ್ರಯತ್ನ ನಡೆಸಿದ್ದರೂ ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಬೆಳಗ್ಗೆ ಕುಸಿದು ಬಿದ್ದಿತ್ತು. ಸಂಜೆ ವೇಳೆ ಉಸಿರು ನಿಲ್ಲಿಸಿದ ಬಲರಾಮ ಬಾರದಲೋಕಕ್ಕೆ ಪ್ರಯಾಣ ಬೆಳೆಸಿದ್ದ. ಬಲರಾಮನ ಸಾವಿನ ಸುದ್ದಿ ಅಪಾರ ಸಂಖ್ಯೆ ಪ್ರಾಣಿಪ್ರಿಯರಿಗೆ ಅತೀವ ದುಃಖವನ್ನುಂಟು ಮಾಡಿದೆ.

ಅತ್ಯಂತ ಸೌಮ್ಯ ಸ್ವಭಾವಿಯಾಗಿದ್ದ ಬಲರಾಮ ಅರಣ್ಯ ಇಲಾಖೆಯ ಅಧಿಕಾರಿಗಳು ಮಾತ್ರವಲ್ಲದೆ, ಸಾರ್ವಜನಿಕರ ಗಮನವನ್ನು ಸೆಳೆದಿತ್ತು. 1999ರಿಂದ 2011ರವರೆಗೆ ಸತತ 13 ಬಾರಿ ಚಿನ್ನದ ಅಂಬಾರಿಯನ್ನು ನಿರಾಯಾಸವಾಗಿ ಅರಮನೆ ಆವರಣದಿಂದ ಬನ್ನಿಮಂಟಪದವರೆಗೂ ಹೊತ್ತು, ಪ್ರೀತಿಗೆ ಪಾತ್ರವಾಗಿತ್ತು. 60 ವರ್ಷ ದಾಟಿದ ಹಿನ್ನೆಲೆ 2012ರಿಂದ ಅಂಬಾರಿ ಹೊರುವ ಜವಾಬ್ದಾರಿಯಿಂದ ನಿವೃತ್ತಿಯಾಗಿ ಐದಾರು ವರ್ಷ ಸಾಲಾನೆಯಾಗಿ ದಸರಾ ಮೆರವಣಿಗೆಯಲ್ಲಿ ಸಾಗಿತ್ತು. ವಯೋ ಸಹಜ ಸಮಸ್ಯೆಯಿಂದಾಗಿ 2020ರಿಂದ ಬಲರಾಮ ಆನೆಯನ್ನು ದಸರಾ ಮಹೋತ್ಸವದ ದೂರ ಇಡಲಾಗಿತ್ತು. ಆದರೆ, ಇದೀಗ ಆನೆ ಕ್ಯಾಂಪ್‍ ನಲ್ಲಿ ಇಹಲೋಕ ತ್ಯಜಿಸಿ ದಸರಾ ಆನೆ ಪಯಣವನ್ನು ಮುಗಿಸಿದೆ.

ಬಲರಾಮ 01

ಬಲರಾಮ ನಡೆದು ಬಂದು ಹೆಜ್ಜೆ ಗುರುತು

ದಸರಾ ಆನೆಗಳಲ್ಲಿಯೇ ಸೌಮ್ಯ ಸ್ವಭಾವವುಳ್ಳವನಾಗಿರುವ ಬಲರಾಮ ಕಳೆದ 25 ವರ್ಷಗಳಿಗೂ ಮಿಗಿಲಾಗಿ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿರುವ ದಾಖಲೆ ಹೊಂದಿದೆ. ದ್ರೋಣ ಆನೆಯ ಅಕಾಲಿಕ ಸಾವಿನ ಬಳಿಕ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ ವಹಿಸಿಕೊಂಡಿತ್ತು. 13 ಬಾರಿ ಯಶಸ್ವಿಯಾಗಿ ತನಗೆ ನೀಡಿದ್ದ ಜವಾಬ್ದಾರಿ ನಿಭಾಯಿಸಿತ್ತು.

ಕೊಡಗು ಜಿಲ್ಲೆ ಕಟ್ಟೇಪುರ ಅರಣ್ಯ ಪ್ರದೇಶದಲ್ಲಿ 1978ರಲ್ಲಿ ಸೆರೆ ಹಿಡಿಯಲಾದ ಬಲರಾಮನನ್ನು ಮತ್ತಿಗೋಡು ಆನೆ ಶಿಬಿರದಲ್ಲಿ ಪೋಷಿಸಲಾಗುತಿತ್ತು. ಕಳೆದ ಐದಾರು ವರ್ಷದಿಂದ ಮತ್ತಿಗೂಡು ಆನೆ ಕ್ಯಾಂಪ್ ಸಮೀಪವಿರುವ ಹುಣಸೂರು ತಾಲೂಕಿಗೆ ಒಳಪಡುವ ಭೀಮನಕಟ್ಟೆ ಆನೆ ಕ್ಯಾಂಪ್‍ನಲ್ಲಿ ಪಾಲನೆ ಮಾಡಲಾಗುತ್ತಿತ್ತು.

ಈ ಸುದ್ದಿ ಓದಿದ್ದೀರಾ? ಹಿರಿಯ ಪತ್ರಕರ್ತ ಮತ್ತು ಕನ್ನಡ ಹೋರಾಟಗಾರರ ವಿರುದ್ಧದ ಎಫ್‌ಐಆರ್‌ ರದ್ದತಿಗೆ ಒತ್ತಾಯ

ಎಡಗಣ್ಣು ಕಳೆದುಕೊಂಡಿದ್ದ ಬಲರಾಮ

ಬಲರಾಮ ಆನೆಯನ್ನು ಸೆರೆ ಹಿಡಿಯುವ ಮುನ್ನವೇ ಕಾಡಾನೆಯೊಂದಿಗೆ ಕಾಳಗಕ್ಕಿಳಿದು  ಎಡಭಾಗದ ಕಣ್ಣನ್ನು ಕಳೆದುಕೊಂಡಿತ್ತು. ಬಲಭಾಗ ಒಂದೇ ಕಣ್ಣಿನಲ್ಲೇ 13 ಬಾರಿ ಚಿನ್ನದ ಅಂಬಾರಿ ಹೊತ್ತು ಲಕ್ಷಾಂತರ ಜನರ ಹರ್ಷೋದ್ಗಾರದ ನಡುವೆ ಯಶಸ್ವಿಯಾಗಿ ಸಾಗಿತ್ತು. ಕಳೆದ ಐದಾರು ವರ್ಷದಿಂದ ಬಲಗಣ್ಣು ಮಂಜಾಗಿತ್ತು. ಆದರೂ ಕ್ಯಾಂಪ್‍ನಿಂದ ಕಾಡಿಗೆ ಹೋಗಿ ಮತ್ತೆ ಕ್ಯಾಂಪ್‍ ಗೆ ಮರಳುತ್ತಿತ್ತು.

ಬಲರಾಮ ತನ್ನ ಕ್ಯಾಂಪ್‍ ನಲ್ಲಿದ್ದ ಚಿಕ್ಕ ಆನೆಗಳಿಗೂ ತರಬೇತಿದಾರನಾಗಿದ್ದ. ಅದರಲ್ಲೂ ಭೀಮ ಆನೆ ಸೇರಿದಂತೆ ಕೆಲ ಜ್ಯೂನಿಯರ್ ಆನೆಗಳಿಗೂ ಕೆಲವು ವಿಷಯಗಳ ಬಗ್ಗೆ ಹೇಳಿಕೊಡುವುದರಲ್ಲಿ ನಿಸ್ಸೀಮನಾಗಿದ್ದ. ಚಿಕ್ಕ ಆನೆಗಳನ್ನು ಪ್ರೀತಿಯಿಂದ ಕಾಣುತ್ತಿದ್ದ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಡ್ಯ | ‘ಸೊಳ್ಳೆ ಉತ್ಪಾದನಾ ಕೇಂದ್ರ’ವಾದ ವೈದ್ಯಕೀಯ ಕಾಲೇಜು; ಕಣ್ಮುಚ್ಚಿ ಕುಳಿತ ಅಧಿಕಾರಿಗಳು!

ಇಡೀ ರಾಜ್ಯದಲ್ಲಿ ಡೆಂಘೀ ಜ್ವರ ಹರಡುತ್ತಾ ಇರುವಾಗ ನೈರ್ಮಲ್ಯ ಕಾಪಾಡಿ, ನೀರು...

ವಿಜಯಪುರ | ಎನ್‌ಎಸ್‌ಎಸ್ ಸ್ವಯಂ ಸೇವಕರಲ್ಲಿ ತಾಳ್ಮೆ, ಶಿಸ್ತಿನ ಜೊತೆಗೆ ಧೈರ್ಯ ತುಂಬುತ್ತದೆ: ಡಾ.ಪ್ರತಾಪ್ ಲಿಂಗಯ್ಯ

"ಎನ್‌ಎಸ್‌ಎಸ್ ಎಂಬುದು ಮನುಷ್ಯನಲ್ಲಿ ಸಹನೆ, ತಾಳ್ಮೆ ಹಾಗೂ ಶಿಸ್ತಿನ ಜೊತೆಗೆ ಧೈರ್ಯವನ್ನು...

ವಿಜಯಪುರ | ನೂತನ ವಸತಿ ನಿಲಯ ಮಂಜೂರು ಮಾಡುವಂತೆ ದಲಿತ ವಿದ್ಯಾರ್ಥಿ ಪರಿಷತ್ ಆಗ್ರಹ

ವಿಜಯಪುರ ನಗರದಲ್ಲಿರುವ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದಲ್ಲಿ ಹಿಂದುಳಿದ ವರ್ಗಗಳ ಮತ್ತು...

ಚಿಕ್ಕಬಳ್ಳಾಪುರ | ಶಾಶ್ವತ ನೀರಾವರಿ ಯೋಜನೆಗಾಗಿ ಪ್ರಧಾನಿ ಭೇಟಿ : ಶಾಸಕ ಸಮೃದ್ಧಿ ಮಂಜುನಾಥ್‌ ವಾಗ್ದಾನ

"ಬರಪೀಡಿತ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ತರುವ ಕುರಿತು ಪ್ರಧಾನಿ ಮೋದಿ ಭೇಟಿಗೆ...