ಹಿರಿಯ ಪತ್ರಕರ್ತ ಮತ್ತು ಕನ್ನಡ ಹೋರಾಟಗಾರರ ವಿರುದ್ಧದ ಎಫ್‌ಐಆರ್‌ ರದ್ದತಿಗೆ ಒತ್ತಾಯ

Date:

ಸುಳ್ಳುಸುದ್ದಿ ಹರಿಬಿಟ್ಟಿದ್ದಾರೆಂದು ಆರೋಪಿಸಿ ಹಿರಿಯ ಪತ್ರಕರ್ತ ದಿನೇಶ್‌ ಅಮೀನ್‌ ಮಟ್ಟು, ಕನ್ನಡ ಪರ ಹೋರಾಟಗಾರ ಬಿ. ಹರೀಶ್‌ಕುಮಾರ್‌ ಭೈರಪ್ಪ, ಹೇಮಂತ್‌ಕುಮಾರ್‌, ಬಿಂದುಗೌಡ, ದಿಲೀಪ್‌ಗೌಡ ಅವರ ವಿರುದ್ಧ ದುರುದ್ದೇಶದಿಂದ ಎಫ್‌ಐಆರ್‌ ದಾಖಲಿಸಲಾಗಿದೆ. ಕೂಡಲೇ ಎಫ್‌ಐಆರ್‌ ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಸಮಾನ ಮನಸ್ಕರ ಒಕ್ಕೂಟ – ಕರ್ನಟಕ ಒತ್ತಾಯಿಸಿದೆ.

- Advertisement -

ಬೆಂಗಳೂರಿನಲ್ಲಿ ಪೊಲೀಸ್‌ ಮಹಾನಿರೀಕ್ಷಕರಿಗೆ ಹಕ್ಕೊತ್ತಾಯ ಸಲ್ಲಿಸಿರುವ ಒಕ್ಕೂದ ಸದದ್ಯರು, “ದಿನೇಶ್‌ ಮತ್ತಿತರರು ತಮ್ಮ ಫೇಸ್‌ಬುಕ್‌ನಲ್ಲಿ ‘ಬಿ.ಎಲ್‌. ಸಂತೋಷ್‌ ಮಾತನಾಡಿದ್ದಾರೆ ಎಂದು ಹೇಳಲಾಗುವ’ ವರದಿಯನ್ನು ಪೋಸ್ಟ್‌ ಮಾಡಿ ‘ಇದು ನಿಜವೇ, ಅಲ್ಲವೇ ಎಂದು ಸಂತೋಷ್‌ ಅವರು ಸ್ಪಷ್ಟೀಕರಣ ಕೊಡಲಿ’ ಎಂದಿದ್ದಾರೆ. ಅವರು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸಿಕೊಂಡು ಪ್ರಶ್ನೆ ಮಾಡಿದ್ದಾರೆ. ಎಲ್ಲಿಯೂ ಆ ವರದಿಯನ್ನು ಸಮರ್ಥನೆ ಮಾಡಿಲ್ಲ ಮತ್ತು ನಿಜವೆಂದು ಪ್ರಚಾರ ಮಾಡಿಲ್ಲ” ಎಂದು ವಿವರಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಲಬುರಗಿ | ಹನಿ ನೀರಿಗೂ ಪರದಾಡುತ್ತಿರುವ ದಣ್ಣೂರು...

ಎರಡು ನಳಗಳ ಮುಂದೆ ಖಾಲಿ ಕೊಡ ಹಿಡಿದು ಗಂಟೆಗಟ್ಟಲೆ ಕಾಯುವ ಮಹಿಳೆಯರು; ಬೆಳೆ ನಷ್ಟ, ಜಾನುವಾರು ಮಾರಾಟ, ಉದ್ಯೋಗದ ಕೊರತೆಯಿಂದ ಗ್ರಾಮ ತೊರೆಯುತ್ತಿರುವ ಕುಟುಂಬಗಳು ಒಂದು ಕೊಡ ನೀರಿಗಾಗಿ ಮನೆಮನೆಯ ಮುಂದೆ ಕಾಯಬೇಕು....

‘ನನ್ನೊಳಗೆ ನೀವೊ ನಿಮ್ಮೊಳಗೆ ನಾನೊ’

ಲೇಹ್ ಲಡಾಕಿನ ಪರ್ವತ ಶ್ರೇಣಿಗಳ ನಡುವೆ ನಮ್ಮ ಕಾರು ನಿಧಾನವಾಗಿ ಸಾಗುತ್ತಿತ್ತು. ಬೇರೆ ಬೇರೆ ಬಣ್ಣಗಳ ಪರ್ವತ ಶಿಖರಗಳು, ಕೆಳಗಡೆ ಕಿಲೋಮಿಟರ್ ಉದ್ದದ ಕಿರಿದಾದ ರಸ್ತೆ, ಪಕ್ಕದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಕಾಣುವ...

ಕಾರ್ಪೊರೇಟ್‌ ಕಾಳಗ | ಮಸ್ಕ್‌ನ ಸ್ಟಾರ್‌ಲಿಂಕ್ ಮಣಿಸಿ ಅಂಬಾನಿಯ...

ಎಲಾನ್ ಮಸ್ಕ್ ಒಡೆತನದ ‘ಸ್ಟಾರ್‌ಲಿಂಕ್’ ಉಪಗ್ರಹ ಇಂಟರ್ನೆಟ್ ಭಾರತಕ್ಕೆ ಕಾಲಿಡುತ್ತಿದ್ದಂತೆ ರಿಲಯನ್ಸ್ ಜಿಯೋದ ಮಾರುಕಟ್ಟೆ ಏಕಸ್ವಾಮ್ಯಕ್ಕೆ ಭಾರಿ ಪೈಪೋಟಿ ಎದುರಾಗುವಂತೆ ಕಾಣುತ್ತಿದೆ. ಈ ಬೆನ್ನಲ್ಲೇ, ರಾಷ್ಟ್ರೀಯ ಭದ್ರತೆ ಮತ್ತು ದತ್ತಾಂಶ ಸುರಕ್ಷತೆಯ ನೆಪವೊಡ್ಡಿ...

“ಯಾವುದೇ ಆಯಾಮದಿಂದ ನೋಡಿದರೂ ದಿನೇಶ್‌ ಮತ್ತಿತರರ ಮೇಲೆ ಮಾಡಲಾದ ಆರೋಪ ಸುಳ್ಳಾಗಿದೆ. ಸತ್ಯಕ್ಕೆ ದೂರವಾಗಿದೆ ಎಂಬುದು ಅವರ ಪೋಸ್ಟ್‌ಗಳನ್ನು ನೋಡಿದರೆ ಸ್ಪಷ್ಟವಾಗತ್ತದೆ. ಹೀಗಾಗಿ, ಅವರೆಲ್ಲರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಅನ್ನು ಹಿಂಪಡೆಯಬೇಕು” ಎಂದು ಒಕ್ಕೂಟ ಮನವಿ ಮಾಡಿದೆ.

“ಚಿತ್ತಾಪುರ ಕ್ಷೇತ್ರದ ಬಜೆಪಿ ಅಭ್ಯರ್ಥಿ ಮಣಿಕಂಠ ಅವರು ‘ಖರ್ಗೆ ಕುಟುಂಬವನ್ನು ಸಾಫ್‌ ಮಾಡುತ್ತೇನೆ’ ಎಂದು
ಹೇಳುವ ಆಡಿಯೋ ಹರಿದಾಡುತ್ತಿದೆ ಮತ್ತು ಆ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿದೆ. ಕೊಲೆ ಮಾಡುತ್ತೇನೆಂದು ಬೆದರಿಕೆ ಹಾಕಿರುವ ಮಣಿಕಂಠ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಿ, ಅವರನ್ನು ಬಂಧಿಸಬೇಕಾಗಿತ್ತು. ಆದರೆ ಸಂಬಂಧಪಟ್ಟವರು ಈ ಕುರಿತು ಮೌನವಾಗಿರುವುದು ನಮಗೆ ಆತಂಕ ಮೂಡಿಸಿದೆ” ಎಂದು ಒಕ್ಕೂಟದ ಮುಖಂಡರು ಹೇಳಿದ್ದಾರೆ.

ಈ ವರದಿ ಓದಿದ್ದೀರಾ?: ಈದಿನ.ಕಾಮ್‌ ಸಮೀಕ್ಷೆ-8: ಕಾಂಗ್ರೆಸ್‌ಗೆ ಸಿಗಲಿದೆ ಸ್ಪಷ್ಟ ಬಹುಮತ; 132-140 ಸೀಟುಗಳ ನಿರೀಕ್ಷೆ

“ವಿಜಯಪುರದ ಬಿಜೆಪಿ ಅಭ್ಯರ್ಥಿ ಬಸವರಾಜ ಪಾಟೀಲ್‌ ಯತ್ನಾಳ್‌ ಅವರು ಜನರನ್ನು ಪ್ರಚೋದಿಸುವಂತಹ ಹೇಳಿಕೆ ಕೊಡುತ್ತಿದ್ದಾರೆ. ಆದರೆ, ಅವರ ವಿರುದ್ಧವೂ ಕ್ರಮ ತೆಗೆದುಕೊಂಡಿರುವುದಿಲ್ಲ. ಬಿಜೆಪಿ ಮುಖಂಡರು ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾಖಾನ್‌ ಎಂದು ಅವಹೇಳನ ಮಾಡುತ್ತಿದ್ದಾರೆ. ಅವರ ವಿರುದ್ಧವೂ ಕ್ರಮ ತೆಗೆದುಕೊಂಡಿಲ್ಲ. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಅವರು ‘ಬಿಜೆಪಿಗೆ ಮತ ಹಾಕದಿದ್ದರೆ ಕೇಂದ್ರದ ಎಲ್ಲ ಅನುದಾನಗಳನ್ನು ನಿಲ್ಲಿಸುತ್ತೇವೆ’ ಎಂದು ರಾಜ್ಯದ ಜನರನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಂಡಡಿಲ್ಲ. ಆದರೆ, ಸೇಡಿನ ರಾಜಕೀಯದ ಕಾರಣದಿಂದ ದಿನೇಶ್‌ ಮತ್ತು ಹರೀಶ್‌ ಇನ್ನಿತರರ ವಿರುದ್ಧ ಆಧಾರರಹಿತ ದೂರನ್ನು ಆಧರಿಸಿ ಮಿಂಚಿನ ವೇಗದಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ. ಈ ಎಫ್‌ಐಆರ್‌ಅನ್ನು ಹಿಂಪಡೆಯಬೇಕು” ಎಂದು ಒತ್ತಾಯಿಸಿದ್ದಾರೆ.

ಹಕ್ಕೊತ್ತಾಯ ಸಲ್ಲಿಸುವ ವೇಳೆ, ಒಕ್ಕೂಟದ ಮುಖಂಡರಾದ ಎಸ್‌.ಜಿ ಸಿದ್ದರಾಮಯ್ಯ, ಎನ್.ಎಲ್ ಮುಕುಂದರಾಜ್, ಜಾಣಗೆರೆ ವೆಂಕಟೇಶಯ್ಯ, ವಸುಂಧರಾ ಭೂಪತಿ ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶೃಂಗೇರಿ  | ಎಂದಿನಂತೆ ವಾರದ ಸಂತೆ ನಡೆಸಲಾಗುತ್ತದೆ 

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಶಾರದ ನಗರದಲ್ಲಿ ವಾರದ ಸಂತೆ ಮಾಡಲು...

ಸೌಹಾರ್ದತೆ, ಒಗ್ಗಟ್ಟು ಬೆಳೆಸುವಲ್ಲಿ ಸಮುದಾಯ ಭವನಗಳ ಪಾತ್ರ ಮಹತ್ವದ್ದು: ವಂ|ಸ್ಟೀಫನ್ ಡಿಸೋಜಾ

ಸಮುದಾಯ ಭವನಗಳು ಸಮಾಜದಲ್ಲಿ ಸೌಹಾರ್ದತೆ, ಒಗ್ಗಟ್ಟು ಮತ್ತು ಸಾಮರಸ್ಯವನ್ನು ಬೆಳೆಸುವಲ್ಲಿ ಪ್ರಮುಖ...

ಬಾಗೇಪಲ್ಲಿ | ಲಾರಿ ಹಿಂಬದಿ ಚಲಿಸಿ ಸ್ಥಳದಲ್ಲಿ ಇಬ್ಬರು ಬಾಲಕರು ಸಾವು

ತಾಲೂಕಿನ ಚನ್ನರಾಯಪಲ್ಲಿ ಗ್ರಾಮದಲ್ಲಿ ನಡೆದ ಭೀಕರ ರಸ್ತೆ ಅಪಘಾತವೊಂದರಲ್ಲಿ ಸ್ಕೂಟಿಯಲ್ಲಿ ತೆರಳುತ್ತಿದ್ದ...

ಬಾಗೇಪಲ್ಲಿ | ಆಟೊ ಚಾಲಕರಿಂದ ಸಂಚಾರ ನಿಯಮ ಉಲ್ಲಂಘನೆ ಆರೋಪ

ಡಿವಿಜಿ ಮುಖ್ಯರಸ್ತೆ, ಗೂಳೂರು, ನ್ಯಾಷನಲ್ ಕಾಲೇಜು, ಪ್ರವಾಸಿ ಮಂದಿರ ಪರಗೋಡು ರಸ್ತೆಗಳು...