ಯಾಕೂಬ್ ಖಾದರ್ ಗುಲ್ವಾಡಿ ನಿರ್ದೇಶನದ “ಇದ್ದತ್” ಚಿತ್ರಕ್ಕೆ ಕೋಲ್ಕತ್ತಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅಧಿಕೃತ ಆಯ್ಕೆ

Date:

ನಿರ್ದೇಶಕ ಯಾಕೂಬ್ ಖಾದರ್ ಗುಲ್ವಾಡಿ ಅವರ ಕಥೆ, ನಿರ್ದೇಶನದ ಬ್ಯಾರಿ ಭಾಷೆಯ ಕಲಾತ್ಮಕ ಚಿತ್ರ “ಇದ್ದತ್”_ ಪ್ರತಿಷ್ಠಿತ 32ನೇ ಕೋಲ್ಕತ್ತಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವ (KIFF) 2026_ ಕ್ಕೆ ಅಧಿಕೃತವಾಗಿ ಆಯ್ಕೆಯಾಗಿದೆ.

- Advertisement -

ಡಿಸೆಂಬರ್ 16 ರಿಂದ 23 ರವರೆಗೆ ಕೋಲ್ಕತ್ತಾದಲ್ಲಿ ನಡೆಯಲಿರುವ ಈ ಪ್ರತಿಷ್ಠಿತ ಚಲನಚಿತ್ರೋತ್ಸವದಲ್ಲಿ Indian Unheard Languag ಅನ್ ಸಂಗ್ ಇನ್ ಕ್ರೆಡಿಬಲ್ ಇಂಡಿಯಾ – ಭಾರತದ ಸ್ವಲ್ಪ ತಿಳಿದಿರುವ ಭಾಷೆಗಳ (ಬ್ಯಾರಿ ಭಾಷೆ) ವಿಭಾಗದಲ್ಲಿ ಈ ಚಿತ್ರ ವಿಷೇಷ ಪ್ರದರ್ಶನಗೊಳ್ಳಲಿದೆ. ಈ ಬಗ್ಗೆ ಉತ್ಸವದ ನಿರ್ದೇಶಕಿ ಶರ್ಮಿಷ್ಠಾ ಬ್ಯಾನರ್ಜಿ ಅವರು ಅಧಿಕೃತ ಪತ್ರದ ಮೂಲಕ ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಧಿಕೃತ ಕೆಲಸಕ್ಕೆ WHATSAPP ವೆಬ್ ಅಪಾಯಕಾರಿ ಏಕೆ? ಗೃಹ...

ಕಚೇರಿ, ಸಾರ್ವಜನಿಕ ಅಥವಾ ಹಲವರು ಹಂಚಿಕೊಂಡು ಬಳಸುವ ಕಂಪ್ಯೂಟರ್‌ಗಳಲ್ಲಿ WHATSAPP ವೆಬ್ ಬಳಸುವವರಿಗೆ ಕೇಂದ್ರ ಗೃಹ ಸಚಿವಾಲಯ ಮಹತ್ವದ ಭದ್ರತಾ ಎಚ್ಚರಿಕೆ ನೀಡಿದೆ. ಸಚಿವಾಲಯದ ಅಧೀನದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ...

ಆನೆ ಓಡಿಸಲು ಜೇನುನೊಣ ಸಾಕು! ಏನಿದು ತಂತ್ರ?

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೃಷಿಕರು ಆನೆ ಹಾವಳಿ ತಡೆಗೆ ಸರಳ ಮತ್ತು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. ಆನೆ ಬರುವ ದಾರಿಯಲ್ಲಿ ಜೇನು ಪೆಟ್ಟಿಗೆಗಳನ್ನಿಟ್ಟು ಗಜಪಡೆಯನ್ನು ಹಿಮ್ಮೆಟ್ಟಿಸುವ ಮಾರ್ಗವಿದು. ಆನೆಗಳ ಸೊಂಡಿಲಿನ ಒಳಭಾಗ...

ವೈದ್ಯರಿಲ್ಲ, ಔಷಧವೂ ಇಲ್ಲ! ದಶಕ ಕಳೆದರೂ ಚೇತರಿಸದ ಗಜೇಂದ್ರಗಡ...

ಗಜೇಂದ್ರಗಡ ತಾಲೂಕು ಘೋಷಣೆಯಾಗಿ ದಶಕ ಕಳೆದರೂ ಇಂದಿಗೂ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿಲ್ಲ. ವೈದ್ಯರ ಕೊರತೆ, ಅಗತ್ಯ ಔಷಧಿಗಳ ಕೊರತೆ, ಸಿಬ್ಬಂದಿಗಳ ಕೊರತೆ ಇರುವುದರಿಂದ, ಇಲ್ಲಿಗೆ ಬರುವ ರೋಗಿಗಳಿಗೆ ಸರಿಯಾದ ಚಿಕತ್ಸೆ,...

1995 ರಲ್ಲಿ ಆರಂಭವಾದ ಕೋಲ್ಕತ್ತಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವವು ಭಾರತದ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಒಂದಾಗಿದೆ. ಪಶ್ಚಿಮ ಬಂಗಾಳ ಸರ್ಕಾರದ ವಾರ್ತಾ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಇಲಾಖೆಯಡಿಯಲ್ಲಿ, ಪಶ್ಚಿಮ ಬಂಗಾಳ ಚಲನಚಿತ್ರ ಕೇಂದ್ರ – ನಂದನ್ ಆಯೋಜಿಸುವ ಈ ಉತ್ಸವವು ಸತ್ಯಜಿತ್ ರೇ, ಋತ್ವಿಕ್ ಘಟಕ್, ಮೃಣಾಲ್ ಸೇನ್ ಅವರಂತಹ ದಿಗ್ಗಜರ ಚಲನಚಿತ್ರ ಪರಂಪರೆಯಿಂದ ಪ್ರೇರಣೆ ಪಡೆದಿದೆ.

ಅಂತರಾಷ್ಟ್ರೀಯ ಚಲನಚಿತ್ರ ನಿರ್ಮಾಪಕರ ಒಕ್ಕೂಟ (FIAPF – ಪ್ಯಾರಿಸ್) ದಿಂದ ಮಾನ್ಯತೆ ಪಡೆದಿರುವ ಈ ಉತ್ಸವವು ವಿಶ್ವ ಸಿನಿಮಾದ ಶ್ರೇಷ್ಠ ಕೃತಿಗಳನ್ನು ಪ್ರದರ್ಶಿಸುವ ವೇದಿಕೆಯಾಗಿದೆ. ಪ್ರತಿ ವರ್ಷ ಪ್ರಪಂಚದ ಹಲವು ದೇಶಗಳ ಚಲನ ಚಿತ್ರಗಳು, ಖ್ಯಾತ ನಿರ್ದೇಶಕರು, ನಟರು, ವಿಮರ್ಶಕರು ಈ ಉತ್ಸವದಲ್ಲಿ ಭಾಗವಹಿಸುತ್ತಾರೆ. ಕೋಲ್ಕತ್ತಾ ನಗರವನ್ನೇ ಸಿನಿಮಾ ಹಬ್ಬವನ್ನಾಗಿ ಮಾಡುವ ಈ ಉತ್ಸವದಲ್ಲಿ ಆಯ್ಕೆಯಾಗುವುದೇ ಒಂದು ದೊಡ್ಡ ಗೌರವವೆಂದು ಪರಿಗಣಿಸಲಾಗುತ್ತದೆ.

ಇದ್ದತ್ ಕಥೆ ಏನು ?

ಕರಾವಳಿಯ ಗ್ರಾಮೀಣ ಹಿನ್ನೆಲೆಯಲ್ಲಿ ಸಾಗುವ ಈ ಕಥೆಯು ಧಾರ್ಮಿಕ ಚೌಕಟ್ಟು ಹಾಗೂ ಮಾನವೀಯತೆಯ ನಡುವಿನ ಭಾವನಾತ್ಮಕ ಬೆಸುಗೆಯಾಗಿದೆ.
ಪತಿಯ ಅಗಲಿಕೆಯ ನಂತರ ‘ಇದ್ದತ್’ ಅವಧಿಯಲ್ಲಿರುವ ಮಹಿಳೆಯೊಬ್ಬಳು, ಮೌನ ಹಾಗೂ ಒಂಟಿತನದ ನಡುವೆಯೇ ತನ್ನ ಆಂತರಿಕ ಶಕ್ತಿಯನ್ನು ಕಂಡುಕೊಳ್ಳುತ್ತಾಳೆ. ಇದು ಕೇವಲ ಧಾರ್ಮಿಕ ನಿಯಮವಲ್ಲ, ಬದಲಿಗೆ ಆಕೆಯ ಆತ್ಮಶೋಧನೆಯ ಪವಿತ್ರ ಪಯಣವಾಗಿ ತೆರೆದುಕೊಳ್ಳುತ್ತದೆ.

ಇನ್ನೊಂದೆಡೆ, ಸುಲೈಮಾನ್ ತನ್ನ ತಾಯಿಯನ್ನು ಅಜ್ಮೀರ್ ದರ್ಗಾಕ್ಕೆ ಕಳುಹಿಸಲು ಕಷ್ಟಪಟ್ಟು ಹಣ ಕೂಡಿಡುತ್ತಿದ್ದಾನೆ. ಆದರೆ ಮಾರಿಯಪ್ಪನ ಕುಟುಂಬದ ಕಷ್ಟಕ್ಕೆ ಮಿಡಿಯುವ ಆತ, ಮಸೀದಿಯ ಹರಾಜಿನಲ್ಲಿ ತನ್ನ ತಾಯಿಯ ಕನಸಿನ ಹಣವನ್ನೇ ಪಣಕ್ಕಿಟ್ಟು ಮೊಟ್ಟೆಗಳನ್ನು ಖರೀದಿಸುತ್ತಾನೆ. ಧರ್ಮದ ಗಡಿ ದಾಟಿ ಜೀವವೊಂದನ್ನು ಉಳಿಸುವ ಆತನ ಈ ತ್ಯಾಗದಲ್ಲಿ ತಾಯಿಯೂ ದೈವತ್ವವನ್ನು ಕಾಣುತ್ತಾಳೆ.

ಕರಾವಳಿಯ ನೈಜ ಸೊಗಡಿನಲ್ಲಿ ಮೂಡಿ ಬಂದಿರುವ ಈ ಚಿತ್ರವು, ಇದ್ದತ್‌ನ ಪವಿತ್ರ ಮೌನ, ಸುಲೈಮಾನ್‌ ಮತ್ತು ಅವನ ಗೆಳೆಯ ಮಾರಿಯಪ್ಪನ ಮಾನವೀಯತೆಯ ಮೂಲಕ ತ್ಯಾಗ ಹಾಗೂ ಕೋಮು ಸೌಹಾರ್ದತೆಯ ಸುಂದರ ಸಂದೇಶವನ್ನು ಸಾರುತ್ತದೆ.

ಮೌನವೇ ಪ್ರಾರ್ಥನೆ, ತ್ಯಾಗವೇ ಮಾನವೀಯತೆ ಎಂಬುದು ಈ ಚಿತ್ರದ ಆಶಯ.

ಈ ಚಿತ್ರವನ್ನು ಬೆಂಗಳೂರಿನ ಮಹರ್ಷಿ ಪ್ರೊಡಕ್ಷನ್ಸ್_ ಅಡಿಯಲ್ಲಿ ಹೆಚ್.ಎಂ. ನರೇಂದ್ರ ಬಾಬು ನಿರ್ಮಿಸಿದ್ದಾರೆ. ಹಲವು ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಚಲನಚಿತ್ರಗಳಿಗೆ ಕೆಲಸ ಮಾಡಿರುವ
ವೆಂಕಟರಮಣ ಸ್ವಾಮಿ ಈ ಸಿನಿಮಾಗೆ ಛಾಯಾಗ್ರಹಣ ಮಾಡಿದ್ದಾರೆ , ಚಿತ್ರಕಥೆ ಯಾಕೂಬ್ ಖಾದರ್ ಗುಲ್ವಾಡಿ – ರಮೇಶ್ ಗುಲ್ವಾಡಿ, ಸಂಭಾಷಣೆ ಆಯಿಷಾ ಫರ್ಝಾನಾ, ಸಂಕಲನ ಮುತ್ತುರಾಜ್. ಟಿ, ಸಂಗೀತ ನಚಿಕೇತ್ ಶರ್ಮಾ ಅವರದ್ದು. ಈ ವರ್ಷದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟಿ ರೂಪಾ ವರ್ಕಾಡಿ, ರಾಜ್ಯ ಪ್ರಶಸ್ತಿ ವಿಜೇತ ನಟ ಎಂ.ಕೆ. ಮಠ ಉಪ್ಪಿನಂಗಡಿ, ಸ್ಥಳೀಯ ನೀನಾಸಂ ಕಲಾವಿದರಾದ ವಾಸುದೇವ ಗಂಗೇರ, ಚಿನ್ನ ವಿ. ಗಂಗೇರ, ಹಲವು ಕಲಾತ್ಮಕ ಸಿನಿಮಾಗಳಲ್ಲಿ ನಟಿಸಿರುವ ಗುಲ್ವಾಡಿಯ ಅಮೀರ್ ಹಂಝ, ಜಮಾಲ್ ಕುದ್ರಿಮಕ್ಕಿ, ಫಹದ್ ಯಾಕೂಬ್, ರವಿಕಿರಣ್ ಮುರ್ಡೇಶ್ವರ್, ಆಶಾ ಸುಳ್ಯ, ಫಹಿಮತುಲ್ ಯುಶ್ರ ಸೇರಿದಂತೆ ಅನೇಕ ಸ್ಥಳೀಯ ಕಲಾವಿದರು ಅಭಿನಯಿಸಿದ್ದಾರೆ.

ಯಾಕೂಬ್ ಖಾದರ್ ಗುಲ್ವಾಡಿ ಯಾರು ?

ಪ್ರಸ್ತುತ ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ, ರಾಷ್ಟ್ರ, ಅಂತರಾಷ್ಟ್ರೀಯ ಮತ್ತು ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿರುವ ಯಾಕೂಬ್ ಖಾದರ್ ಗುಲ್ವಾಡಿ ಅವರು 2006 ರಲ್ಲಿ ಡಾ. ಗಿರೀಶ್ ಕಾಸರವಳ್ಳಿಯವರ ‘ಗುಲಾಬಿ ಟಾಕೀಸ್’ ಚಿತ್ರಕ್ಕೆ ಕನ್ನಡದ ಹಿರಿಯ ನಟಿ ಉಮಾಶ್ರೀ ಅವರಿಗೆ ವಸ್ತ್ರವಿನ್ಯಾಸಕರಾಗಿ ಚಿತ್ರರಂಗ ಪ್ರವೇಶಿಸಿದರು.

ನಂತರ ಹಲವು ಪ್ರಶಸ್ತಿ ಪುರಸ್ಕೃತ ಚಲನಚಿತ್ರಗಳಿಗೆ ಕೆಲಸ ಮಾಡಿದ ಅವರು, 2016 ರಲ್ಲಿ ತಮ್ಮ ‘ಗುಲ್ವಾಡಿ ಟಾಕೀಸ್’ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ ಮೊದಲ ಕನ್ನಡ ಸಿನಿಮಾ ‘ರಿಸರ್ವೇಶನ್’ ಗೆ ರಾಷ್ಟ್ರ ಪ್ರಶಸ್ತಿ (ರಜತ ಕಮಲ) ಹಾಗೂ 2018 ರಲ್ಲಿ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿ ಲಭಿಸಿತು. ತಮ್ಮ ಮೊದಲ ನಿರ್ದೇಶನದ ಬ್ಯಾರಿ ಭಾಷೆಯ ‘ಟ್ರಿಪಲ್ ತಲಾಖ್’ ಚಿತ್ರಕ್ಕೆ 2019 ರಲ್ಲಿ ಅತ್ಯುತ್ತಮ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಲಭಿಸಿದೆ. ಕರ್ನಾಟಕ ವಾರ್ತಾ ಇಲಾಖೆ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಸಿನಿಮಾ ಮಾತ್ರವಲ್ಲದೆ ಸಮಾಜ ಸೇವೆ ಮತ್ತು ಸಾಹಿತ್ಯ ಲೋಕದಲ್ಲೂ ಕೊಡುಗೆ ನೀಡಿರುವ ಇವರಿಗೆ ಅಂಡಮಾನ್‌ನಲ್ಲಿ ನಡೆದ ಸುನಾಮಿ ಸಂತ್ರಸ್ತರ ಪರಿಹಾರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಕ್ಕೆ ಕೇಂದ್ರ ಸರ್ಕಾರದ ಗೌರವ, ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಗೌರವ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಡಾ. ವಹಾಬ್ ದೊಡ್ಡಮನೆ ಸ್ಮಾರಕ ಗೌರವ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ, ಅಮೇರಿಕಾದ ಅಕ್ಕ ಸಂಸ್ಥೆ, ದುಬೈ ಕರ್ನಾಟಕ ಸಂಘ, ಸೌದಿ ಅರೇಬಿಯ ಕನ್ನಡ ಸಂಘದ ಗೌರವ ಸೇರಿದಂತೆ ದೇಶ-ವಿದೇಶಗಳ ಅನೇಕ ಸಂಘ-ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ. ಇವರ ಪ್ರವಾಸದ ಅನಿಸಿಕೆಗಳನ್ನು ‘ಶ್ರೀಲಂಕಾ ಒಂದು ಸುಂದರ ದ್ವೀಪ ರಾಷ್ಟ್ರ’, ‘ಅಂಡಮಾನ್ ಮತ್ತು ಸುನಾಮಿ’ ಹಾಗೂ ‘ನನ್ನ ಫಾರೀನ್ ಟೂರಿಂಗ್ ಟಾಕೀಸ್’ ಎಂಬ ಮೂರು ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುಧೋಳ ಸಬ್ ರಿಜಿಸ್ಟ್ರಾರ್ ಕಚೇರಿ ಮೇಲೆ ಲೋಕಾಯುಕ್ತ ಭೇಟಿ; ದಾಖಲೆಗಳ ಪರಿಶೀಲನೆ

​ಸಾರ್ವಜನಿಕರಿಂದ ಕೇಳಿಬಂದ ದೂರುಗಳ ಹಿನ್ನೆಲೆಯಲ್ಲಿ, ಧಾರವಾಡದ ಲೋಕಾಯುಕ್ತ ಇನ್ಸ್‌ಪೆಕ್ಟರ್ ಹಿರೇಮಠ್ ನೇತೃತ್ವದ...

ಚಿಕ್ಕಮಗಳೂರು | ಮಕ್ಕಳಿಗೆ ಶಾಲಾ ಪರಿಕರ ವಿತರಣೆ

ನಗರದ ಪಂಚಶಾಸ್ತ ಎಜುಕೇಶನ್ ಅಂಡ್ ಕಲ್ಚರಲ್ ಟ್ರಸ್ಟ್ ಹಾಗೂ ನಿರ್ವಿಘ್ನ ಸೇವಾ...

ಮಂಗಳೂರು | ವಾಣಿಜ್ಯ ಮಳಿಗೆಗಳಿಗೆ ರಾತ್ರಿ 11.45ರಿಂದ ಬೆಳಗ್ಗೆ 5.30ರವರೆಗೆ ನಿರ್ಬಂಧ!

ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ತಡರಾತ್ರಿ ನಡೆಯುವ ಅಹಿತಕರ ಘಟನೆಗಳನ್ನು...