ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸಂಚಾರ ಮತ್ತಷ್ಟು ದುಬಾರಿ

Date:

  • ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಟೋಲ್ ದರ ಮತ್ತೆ ಏರಿಕೆ
  • ಬಿಡದಿ, ರಾಮನಗರ ಸವಾರರು ಸರ್ವಿಸ್ ರಸ್ತೆ ಬಳಸಿ ಎಂದ ಪ್ರಾಧಿಕಾರ

ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇ ಟೋಲ್ ಸಂಗ್ರಹ ಆರಂಭವಾಗಿ 17 ದಿನಗಳಷ್ಟೇ ಕಳಿದಿವೆ. ಇದೀಗ, ಮತ್ತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶೇ.22ರಷ್ಟು ಟೋಲ್ ದರ ಹೆಚ್ಚಳ ಮಾಡಿದೆ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಕಳೆದ ಒಂದು ತಿಂಗಳಿನಿಂದ ಸದಾ ಸುದ್ದಿಯಲ್ಲಿದೆ. ಈ ಹಿಂದೆ, ಈ ಮಾರ್ಗದಲ್ಲಿ ಸರ್ವಿಸ್ ರಸ್ತೆಗಳ ಸೌಲಭ್ಯ ನೀಡದೆ ದುಬಾರಿ ಟೋಲ್ ದರ ಸಂಗ್ರಹಿಸುತ್ತಿದ್ದ ಕಾರಣಕ್ಕೆ ಜನರು ಪ್ರತಿಭಟಿಸಿದ್ದರು. ಈಗ ಮತ್ತೆ ದರ ಹೆಚ್ಚಳ ಮಾಡಿರುವುದು ವಾಹನ ಸವಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಎಕ್ಸ್‌ಪ್ರೆಸ್‌ವೇ ಉದ್ಘಾಟನೆಯಾದ ಬಳಿಕ, ಮಾ.14ರಿಂದ ಟೋಲ್ ಸಂಗ್ರಹ ಪ್ರಾರಂಭಿಸಲಾಗಿತ್ತು. ಇದೀಗ, ಕೇವಲ 17 ದಿನಕ್ಕೆ ಮತ್ತೆ ಟೋಲ್ ದರ ಏರಿಕೆ ಮಾಡಲಾಗಿದೆ. ಏ.1ರಿಂದ ಪರಿಷ್ಕ್ರತ ದರ ಜಾರಿಯಾಗಲಿದ್ದು, ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮ 2008ರ ಪ್ರಕಾರ ಶೇ.22ರಷ್ಟು ಟೋಲ್ ದರ ಹೆಚ್ಚಳ ಮಾಡಲಾಗಿದೆ.

ಈ ಸುದ್ದಿ ಓದಿದ್ದೀರಾ? ಚಲಿಸುತ್ತಿದ್ದ ಕಾರಿನಲ್ಲಿ ಯುವತಿ ಮೇಲೆ ನಾಲ್ವರು ದುಷ್ಕರ್ಮಿಗಳಿಂದ ಅತ್ಯಾಚಾರ; ಬಂಧನ

ಬಿಡದಿ, ರಾಮನಗರ ವಾಹನ ಸವಾರರು ಎಕ್ಸ್‌ಪ್ರೆಸ್‌ವೇ ಬಳಸಬಾರದು. ಸರ್ವಿಸ್ ರಸ್ತೆಯನ್ನು ಮಾತ್ರವೇ ಬಳಸಬೇಕು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ರಸ್ತೆ ಪ್ರಾಧಿಕಾರ ಮನವಿ ಮಾಡಿದೆ. ಟೋಲ್‌ ದರ ಏರಿಸಿ, ಸರ್ವೀಸ್‌ ರಸ್ತೆ ಬಳಸಿ ಎನ್ನುತ್ತಿರುವ ಪ್ರಾಧಿಕಾರದ ನಿರ್ಧಾರದ ವಿರುದ್ಧ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪರಿಷ್ಕೃತ ದರ

  • ಕಾರು/ವ್ಯಾನ್/ಜೀಪ್: ಏಕಮುಖ ಸಂಚಾರ ₹165 (30ರೂ ಹೆಚ್ಚಳ). ದ್ವಿಮುಖ ಸಂಚಾರ–₹250 (₹45 ಹೆಚ್ಚಳ).
  • ಲಘು ವಾಹನಗಳು/ಮಿನಿಬಸ್: ₹270 (₹50 ಹೆಚ್ಚಳ) ದ್ವಿಮುಖ ಸಂಚಾರ-₹405 (₹75 ಹೆಚ್ಚಳ)
  • ಟ್ರಕ್/ ಬಸ್/ಎರಡು ಆಕ್ಸೆಲ್ ವಾಹನ – ₹565 (₹165 ಹೆಚ್ಚಳ), ದ್ವಿಮುಖ ಸಂಚಾರ–₹850 (₹160 ಹೆಚ್ಚಳ)
  • ತ್ರಿ ಆಕ್ಸೆಲ್ ವಾಣಿಜ್ಯ ವಾಹನಗಳು: ಏಕ‌ಮುಖ ಸಂಚಾರ ₹615 (₹115 ಹೆಚ್ಚಳ), ದ್ವಿ ಮುಖಸಂಚಾರ–₹925 (₹225 ಹೆಚ್ಚಳ)
  • ಭಾರೀ ಕಟ್ಟಡ ನಿರ್ಮಾಣ ವಾಹಗನಳು/ಅರ್ಥ್ ಮೂವರ್ಸ್‌/4-6 ಆಕ್ಸೆಲ್ ವಾಹನಗಳು: ₹885 (₹165 ಹೆಚ್ಚಳ) ದ್ವಿಮುಖ ಸಂಚಾರ–₹1,330 ಹೆಚ್ಚಳ (₹250 ಹೆಚ್ಚಳ)
  • 7 ಅಥವಾ ಅದಕ್ಕಿಂತ ಎಕ್ಸೆಲ್ ವಾಹನಗಳು: ₹1,080 (₹200 ಹೆಚ್ಚಳ) ದ್ವಿಮುಖ ಸಂಚಾರ–₹1,620 (₹305 ಹೆಚ್ಚಳ)

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಾಲಾ ವಿದ್ಯಾರ್ಥಿನಿಯರ ಸಮವಸ್ತ್ರ: ಸ್ಕರ್ಟ್‌ ಬದಲಿಗೆ ಚೂಡಿದಾರ ಕಡ್ಡಾಯಕ್ಕೆ ಕೆಎಸ್​​ಸಿಪಿಸಿಆರ್ ಪ್ರಸ್ತಾವನೆ

ಭದ್ರತೆ ಮತ್ತು ಹಿತದೃಷ್ಟಿಯಿಂದ​ 1ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿನಿಯರಿಗೆ ಸ್ಕರ್ಟ್​​​ ಬದಲು...

ಬೆಳ್ಳಂದೂರು ಕೆರೆಯ ನೊರೆಗೆ ಕಾರಣ ಕಂಡುಹಿಡಿದ ಐಐಎಸ್‌ಸಿಯ ಸಂಶೋಧಕರು

ಕಳೆದ ನಾಲ್ಕು ವರ್ಷಗಳಿಂದ ಪ್ರತಿ ತಿಂಗಳು ಕೆರೆಯ ನೀರಿನ ಮಾದರಿ ಸಂಗ್ರಹಿಸಿ...

ಹಾವೇರಿ | ಟ್ರ್ಯಾಕ್ಟರ್‌ ಪಲ್ಟಿ; ಚಾಲಕ ಸಾವು

ಟ್ರ್ಯಾಕ್ಟರ್ ಪಲ್ಟಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹಾವೇರಿ...

ಕೋಲಾರ | ಶಿಕ್ಷಕಿ ವರ್ಗಾವಣೆ: ಶಾಲೆಗೆ ಬೀಗ ಜಡಿದು ಗ್ರಾಮಸ್ಥರ ಪ್ರತಿಭಟನೆ

ಶಾಲೆಯ ಶಿಕ್ಷಕಿಯನ್ನು ಬೇರೊಂದು ಶಾಲೆಗೆ ನಿಯೋಜನೆ ಮಾಡಿದ್ದನ್ನು ವಿರೋಧಿಸಿ ಗ್ರಾಮಸ್ಥರು ಸರ್ಕಾರಿ...