ಕಟ್ಟಕಡೆಯ ಸಮುದಾಯಗಳ ಪ್ರಗತಿಗೆ ಜಾಗೃತಿಯೊಂದೇ ಮೊದಲ ಅಸ್ತ್ರವೆಂದು ಘೋಷಿಸಿದ್ದ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ದಲಿತ ಸಮುದಾಯಗಳ ಜಾಗೃತಿಗೆ ಶಾಶ್ವತ ರೂಪಕವಾಗಿದ್ದಾರೆ ಎಂದು ಕವಿ ರವಿ ಕೋಟಾರಗಸ್ತಿ ಹೇಳಿದರು.
ನಗರದ ಮಾನವ ಬಂಧುತ್ವ ವೇದಿಕೆಯ ಕೇಂದ್ರ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಬಂಡಾಯ ಸಾಹಿತ್ಯ ಸಂಘಟನೆ ವತಿಯಿಂದ ಅಂಬೇಡ್ಕರ್ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ “ಅಂಬೇಡ್ಕರ್ ಕುರಿತ ಕವಿತೆಗಳ ವಾಚನ” ಗೋಷ್ಠಿಯಲ್ಲಿ ಆಶಯ ನುಡಿಗಳನ್ನಾಡಿ ಅವರು ಮಾತನಾಡಿದರು.
“ಮದ್ರಾಸಿನ ‘ಜೈಭೀಮ್’ ಪತ್ರಿಕೆಯ ಸಂಪಾದಕರು ತಮ್ಮ 50ನೇ ಜನ್ಮದಿನದ ಸಂದೇಶಕ್ಕಾಗಿ ಅಂಬೇಡ್ಕರ್ ಅವರನ್ನು ಕೇಳಿದಾಗ ‘ಜಾಗೃತರಾಗಿ, ಹೋರಾಡಿ, ಸಂಘಟಿತರಾಗಿ’ ಎಂಬ ಸಂದೇಶ ನೀಡಿದ್ದಾರೆ. ಇದು ಇಂದಿಗೂ ಸಮಕಾಲೀನವಾಗಿದೆ” ಎಂದು ಹೇಳಿದರು.
ಗೋಷ್ಠಿಯಲ್ಲಿ ಅಡಿವೆಪ್ಪ ಇಟಗಿ, ಪಲ್ಲವಿ ಕಾಂಬಳೆ, ಅರ್ಜುನ್ ನಿಡಗುಂದೆ, ಶಶಿಕಾಂತ ಕಂಬನ್ನವರ, ಜೊಶ್ನಾ ಪಾರಸೇಕರ, ಶಿವರಾಜ ಅರಳಿ, ರಾಜು ಗಸ್ತಿ, ಅಂಬಿಕಾ ಕಾಂಬಳೆ, ಅಮೀರ ಬಾಗವಾನ, ವಿನಾಯಕ ನಂದಿ, ಚೈತ್ರಾ ಮೋರೆ, ಕೃಷ್ಣಾ ಕಂಬನ್ನವರ ಸೇರಿದಂತೆ ಹಲವರು ಅಂಬೇಡ್ಕರ್ ಕುರಿತ ಕವಿತೆಗಳ ವಾಚನ ಮಾಡಿದರು.
ಡಾ. ಸುಬ್ಬರಾವ್ ಎಂಟೆತ್ತಿನವರ ಅಧ್ಯಕ್ಷತೆ ವಹಿಸಿದ್ದರು. ಯಲ್ಲಪ್ಪ ಹಿಮ್ಮಡಿ, ಡಿ.ಎಸ್. ಚೌಗಲೆ, ಅಶೋಕ ಚಂದರಗಿ, ಸುನೀಲ್ ಮೂಗಿ, ಮಂದಾ ನೇವಗಿ, ನಿರ್ಮಲಾ ಬಟ್ಟಲ, ಇಂದಿರಾ ಹೋಲ್ಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಅಂಬಿಕಾ ಕಾಂಬಳೆ, ರೋಹಿಣಿ ಚುಂಚನೂರ, ರಾಜಶ್ರೀ ಕಾಂಬಳೆ, ರಾಜು ಗಸ್ತಿ ಹಾಗೂ ಆಕಾಶ ಪಾಟೀಲ ಅಂಬೇಡ್ಕರ್ ಗೀತೆಗಳನ್ನು ಹಾಡಿದರು. ಜಿಲ್ಲಾ ಸಂಚಾಲಕ ನದೀಮ್ ಸನದಿ ಸ್ವಾಗತಿಸಿದರು. ದೇಮಣ್ಣ ಸೊಗಲದ ವಂದಿಸಿದರು. ಐಶ್ವರ್ಯಾ ಕಾಂಬಳೆ ಕಾರ್ಯಕ್ರಮವನ್ನು ನಿರೂಪಿಸಿದರು.





