ಬೆಳಗಾವಿ | ಮಾಹಿತಿ ಆಯೋಗದ ಪೀಠಕ್ಕೆ ಆಯುಕ್ತರ ನೇಮಕಕ್ಕೆ ಒತ್ತಾಯ

Date:

ರಾಜ್ಯದ ಬೆಳಗಾವಿ ಮಾಹಿತಿ ಆಯೋಗದ ಪೀಠಕ್ಕೆ ಆಯುಕ್ತರನ್ನು ತಕ್ಷಣ ನೇಮಕ ಮಾಡಿ ಎಂದು ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳಿಗೆ ನೈಜ ಹೋರಾಟಗಾರರ ವೇದಿಕೆ ಮನವಿ ಪತ್ರ ಸಲ್ಲಿಸಿದೆ.

ಕಳೆದ ವರ್ಷ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭಕ್ಕೂ ಮುನ್ನ ಬೆಳಗಾವಿ ಮಾಹಿತಿ ಆಯೋಗದ ಪೀಠಕ್ಕೆ ಚಾಲನೆ ನೀಡಬೇಕೆಂದು ಸಾಮಾಜಿಕ ಹೋರಾಟಗಾರ ಶ್ರೀನಿವಾಸ್ ಗೌಡ ಪಾಟೀಲ್ ಮನವಿ ಪತ್ರ ಬರೆದಿದ್ದರು. ಆದರೆ, ಇದೂವರೆಗೆ ಪೀಠಕ್ಕೆ ಆಯುಕ್ತರನ್ನು ನೇಮಕ ಮಾಡಲಾಗಿಲ್ಲ ಎಂದು ವೇದಿಕೆ ಅಸಮಾಧಾನ ವ್ಯಕ್ತಪಡಿಸಿದೆ.

ಇದೀಗ ಮತ್ತೊಮ್ಮೆ ಮನವಿ ಸಲ್ಲಿಸಿದ್ದು, ಮನವಿ ಪತ್ರದಲ್ಲಿ, “ಕರ್ನಾಟಕ ರಾಜ್ಯ ಸರ್ಕಾರವು ಉತ್ತಮ, ಜನಪರ, ಸ್ವಚ್ಛ, ಪ್ರಾಮಾಣಿಕ ಮತ್ತು ಭ್ರಷ್ಟಾಚಾರ ರಹಿತ  ಪಾರದರ್ಶಕ ಆಡಳಿತ ನೀಡಲು ನಿರಂತರವಾಗಿ ಶ್ರಮಿಸುತ್ತಿದೆ ಎಂದು ನಾವು ಭಾವಿಸಿದ್ದೇವೆ. ಬಹಳ ಮುಖ್ಯವಾಗಿ 2005ರಲ್ಲಿ ಯುಪಿಎ ಸರ್ಕಾರವು ದೇಶದಲ್ಲಿ ಪಾರದರ್ಶಕ ಆಡಳಿತ ನಡೆಸಲು ಬದ್ಧರಾಗಿ ‘ಮಾಹಿತಿ ಹಕ್ಕು ಅಧಿನಿಯಮ-2005’ ಜಾರಿಗೊಳಿಸಿದೆ. ಈ ನಿಟ್ಟಿನಲ್ಲಿ, ಕರ್ನಾಟಕ ರಾಜ್ಯ ಸರ್ಕಾರವು ಮುಂಬೈ ಕರ್ನಾಟಕ ವ್ಯಾಪ್ತಿಯಲ್ಲಿರುವ ಏಳು ಜಿಲ್ಲೆಗಳ ನಾಗರಿಕರಿಗೆ ಸುಲಭವಾಗಿ ಮಾಹಿತಿ ದೊರಕುವಂತೆ ಮಾಡಲು ಬೆಳಗಾವಿಯಲ್ಲಿ ಮಾಹಿತಿ ಆಯೋಗದ ಪೀಠವನ್ನು ರಚನೆ ಮಾಡಿ ಆಯುಕ್ತರನ್ನು ನೇಮಕ ಮಾಡಿತ್ತು” ಎಂದು ವಿವರಿಸಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಆದರೆ, ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಾಹಿತಿ ಆಯುಕ್ತರು ರಾಜೀನಾಮೆ ನೀಡಿದ ಕಾರಣ ಹುದ್ದೆಯು ಸುಮಾರು ಎರಡು-ಮೂರು ವರ್ಷಗಳಿಂದ ಖಾಲಿ ಉಳಿದಿದೆ. ಹೊಸ ಆಯುಕ್ತರನ್ನು ನೇಮಿಸದೆ ಸರ್ಕಾರವು ತನ್ನ ಜವಾಬ್ದಾರಿಯಿಂದ ಹಿಂದೆ ಸರಿದಿರುವುದು ದುರಾದೃಷ್ಟಕರ ಸಂಗತಿ. ಬೆಳಗಾವಿ ಜಿಲ್ಲೆ ಸೇರಿದಂತೆ ಸುಮಾರು ಏಳು ಜಿಲ್ಲೆಗಳ ನಾಗರಿಕರು ಸಲ್ಲಿಸಿದ್ದ ಸುಮಾರು 15 ಸಾವಿರ ಮೇಲ್ಮನವಿಗಳು ಇತ್ಯರ್ಥವಾಗದೇ ಉಳಿದಿವೆ” ಎಂದು ಅಸಮಾಧಾನ ವ್ಯಕ್ತಪಡಿಸಿದೆ.

“ಮಾಹಿತಿ ಆಯೋಗದ ಬೆಳಗಾವಿ ಪೀಠಕ್ಕೆ ತಕ್ಷಣ ಆಯುಕ್ತರನ್ನು ನೇಮಿಸಿ ಮಾಹಿತಿ ಆಯೋಗದ ಪೀಠವನ್ನು ಪುನರಾರಂಭಗೊಳಿಸಬೇಕು. ಇತ್ಯರ್ಥವಾಗದೇ ಉಳಿದಿರುವ 15 ಸಾವಿರಕ್ಕೂ ಹೆಚ್ಚು ಮೇಲ್ಮನವಿಗಳ ಇತ್ಯರ್ಥಕ್ಕೆ ಸರ್ಕಾರವು ಮುಂದಾಗಬೇಕು. ಸೂಕ್ತ ಕಾನೂನು ಕ್ರಮಗಳ ಪ್ರಕ್ರಿಯೆಗೆ ಚಾಲನೆ ನೀಡಿ, ನೆನೆಗುದಿಗೆ ಬಿದ್ದಿರುವ  ಬೆಳಗಾವಿ ಮಾಹಿತಿ ಆಯೋಗದ ಪೀಠಕ್ಕೆ ಆಯುಕ್ತರನ್ನು ನೇಮಿಸಿ ಚಾಲನೆ ನೀಡಬೇಕು: ಎಂದು ನೈಜ ಹೋರಾಟಗಾರರ ವೇದಿಕೆ ಆಗ್ರಹಿಸಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಸ ಸುರಿಯುವ ಜಾಗವಾಗಿ ಮಾರ್ಪಟ್ಟ ಬೆಂಗಳೂರಿನ ಮೇಲ್ಸೇತುವೆಗಳು!

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ವಾಹನ ಸವಾರರಿಗೆ ಸಂಚಾರ ದಟ್ಟಣೆ ತಲೆನೋವಾಗಿ ಪರಿಣಮಿಸಿದೆ....

ರಾಯಚೂರು | ಅಬಕಾರಿ ಇಲಾಖೆ ದಾಳಿ; ₹500 ಮುಖಬೆಲೆಯ ನೋಟಿನ 62 ಬಂಡಲ್ ಪತ್ತೆ

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗೌಳಿಗಲ್ಲಿಯ ಗೌಳಿಯೊಬ್ಬರ ಮನೆಯಲ್ಲಿ ಗೋಣಿ ಚೀಲದ...

ಬೆಂಗಳೂರು | ಆ್ಯಂಬುಲೆನ್ಸ್ ಚಾಲಕನ ಅಚಾತುರ್ಯ: ಸರಣಿ ಅಪಘಾತ

ಆ್ಯಂಬುಲೆನ್ಸ್ ಚಾಲಕನ ಅಚಾತುರ್ಯದಿಂದ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಗುಡ್ಡದಹಳ್ಳಿ...

ಕೋಲಾರ | ಇವಿಎಂ ಮೆಷಿನ್ ಸಾಗಿಸುತ್ತಿದ್ದ ವಾಹನದ ಟೈರ್ ಬ್ಲಾಸ್ಟ್: ಪೊಲೀಸ್ ಬಂದೋಬಸ್ತ್

ಮುಳಬಾಗಿಲಿನಿಂದ ಕೋಲಾರದ ಸ್ಟ್ರಾಂಗ್‌ ರೂಮ್‌ಗೆ ಇವಿಎಂ ಮೆಷಿನ್‌ಗಳನ್ನು ಸಾಗಾಟ ಮಾಡುತ್ತಿದ್ದ ಕ್ಯಾಂಟರ್...