ಬಳ್ಳಾರಿ ನಗರದಿಂದ ತಾಳೂರಿಗೆ ಮಾರ್ಗ ಕಲ್ಪಿಸುವ ರಸ್ತೆ ಹಾಗೂ ಗುಡಾರ ನಗರದಿಂದ ಶ್ರೀಧರಗಡ್ಡೆ ಗ್ರಾಮದವರೆಗೂ ತುಂಬಾ ಹದಗೆಟ್ಟಿರುವ ರಸ್ತೆಗಳನ್ನು ದುರಸ್ತಿ ಮಾಡುವಂತೆ ಆಗ್ರಹಿಸಿ ಎಸ್‌ಯುಸಿಐ(ಕಮ್ಯುನಿಸ್ಟ್) ಪಕ್ಷದ ಗ್ರಾಮೀಣ ಸ್ಥಳೀಯ ಸಮಿತಿಯಿಂದ ಪಿಡಬ್ಲ್ಯೂಡಿ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಸಲ್ಲಿಸಲಾಗಿದೆ.
ಎಸ್‌ಯುಸಿಐ ಸದಸ್ಯ ಜಗದೀಶ್ ನೇಮಕಲ್ ಮಾತನಾಡಿ, “ಜಿಲ್ಲೆಯಿಂದ ಗ್ರಾಮಗಳಿಗೆ ಸಂಪರ್ಕಿಸುವ ಬಹುತೇಕ ರಸ್ತೆಗಳಲ್ಲಿ ದೊಡ್ಡದೊಡ್ಡ ಗುಂಡಿಗಳು ಬಿದ್ದಿದ್ದು, ಪ್ರಯಾಣಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಗುಂಡಿಗಳನ್ನು ತಪ್ಪಿಸಲು ಹೋಗಿ ಹಲವಾರು ವಾಹನಗಳು ಅಪಘಾತಕ್ಕೊಳಗಾಗಿವೆ” ಎಂದು ಹೇಳಿದರು.
“ಬಳ್ಳಾರಿ ನಗರಕ್ಕೆ ಹೊಂದಿಕೊಂಡಿರುವ ತಾಳೂರು ರಸ್ತೆಯ ಗುಡಾರ ನಗರ, ಶ್ರೀಧರಗಡ್ಡೆ, ಕೊರ್ಲಗುಂದಿ, ಹಂದ್ಯಾಳು ಗ್ರಾಮದ ಮೂಲಕ ಹೋಗುವ ತಾಳೂರು ರಸ್ತೆಯು ಬಹಳಷ್ಟು ಅವ್ಯವಸ್ಥೆ ಇದ್ದು, ಈ ಕುರಿತು ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹಾಗಾಗಿ ಕೂಡಲೇ ರಸ್ತೆಯನ್ನು ದುರಸ್ತಿಗೊಳಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸರ್ವಜ್ಞನಗರ ವಿಭಾಗ ವ್ಯಾಪ್ತಿಯಲ್ಲಿ ಸಾಮೂಹಿಕ ಸ್ವಚ್ಛತಾ ಅಭಿಯಾನ: 10.5 ಟನ್ ತ್ಯಾಜ್ಯ ತೆರವು
This video cannot be played in your browser. Open the video directly
ಎಸ್‌ಯುಟಿಐ ಕಾರ್ಯದರ್ಶಿ ಎ ದೇವದಾಸ್, ಸದಸ್ಯರು ಸೋಮಶೇಖರ ಗೌಡ, ಹನುಮಂತಪ್ಪ, ನಿಂಗರಾಜ, ಟಿ ಪ್ರಮೋದ್ ಹಾಗೂ ಇತರರು ಇದ್ದರು.





