ಔರಾದ್ ತಾಲ್ಲೂಕಿನ ರಕ್ಷಾಳ (ಬಿ) ಗ್ರಾಮದಲ್ಲಿ ಕನಕದಾಸರ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು.
ಗ್ರಾಮದ ಮುಖಂಡ ಶಾಮಣ್ಣ ಮೇತ್ರೆ ಮಾತನಾಡಿ, “15–16ನೇ ಶತಮಾನದ ಸಂತಕವಿ ಕನಕದಾಸರು ತಮ್ಮ ಕೀರ್ತನೆಗಳು ಹಾಗೂ ಕಾವ್ಯಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಕೆಳವರ್ಗದಲ್ಲಿ ಜನಿಸಿದರೂ ತಮ್ಮ ಭಕ್ತಿ, ಜ್ಞಾನ ಮತ್ತು ವಿಚಾರಧಾರೆಗಳ ಮೂಲಕ ಜಾತಿ ವ್ಯವಸ್ಥೆಯ ವಿರುದ್ಧ ಧ್ವನಿಯೆತ್ತಿ, ಸಮಾನತೆ ಹಾಗೂ ಸಾಮಾಜಿಕ ಮೌಲ್ಯಗಳನ್ನು ಸಾರಿದ ದಾಸಶ್ರೇಷ್ಠರಾಗಿದ್ದಾರೆ” ಎಂದು ಹೇಳಿದರು.
ನಮ್ಮ ಕರುನಾಡು ಪ್ರಾಚೀನ ಕಾಲದಿಂದಲೂ ಋಷಿ-ಮುನಿಗಳು, ಸಾಧು-ಸಂತರು ಹಾಗೂ ಮಹನೀಯರ ನೆಲೆವೀಡಾಗಿದೆ. ಬಸವಾದಿ ಶರಣರು, ಕನಕದಾಸರು, ಸಂತರು, ಹರಿದಾಸರು ಮತ್ತು ಕವಿಗಳು ಈ ನಾಡಿನ ಆಧ್ಯಾತ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಮೌಲ್ಯಗಳ ಉನ್ನತಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅಂತಹ ಮಹನೀಯರಲ್ಲಿ ಕನಕದಾಸರು ಪ್ರಮುಖರಾಗಿದ್ದಾರೆ. ಅವರ ಆದರ್ಶ, ತತ್ವ ಹಾಗೂ ಸಂದೇಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಜಯಂತಿ ಅಂಗವಾಗಿ ಭಜನಾ ಕಾರ್ಯಕ್ರಮ ನಡೆಸಲಾಯಿತು. ಮಕ್ಕಳು ಕೋಲಾಟ ಪ್ರದರ್ಶಿಸಿ ಗಮನ ಸೆಳೆದರು. ಗ್ರಾಮದ ವತಿಯಿಂದ ಸಾರ್ವಜನಿಕರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಇದನ್ನೂ ಓದಿ : ಔರಾದ್ | ಎಸ್‌ಡಿಎಂಸಿ ಅಧ್ಯಕ್ಷರಾಗಿ ಚನ್ನಬಸವ ಭೂರೆ ಅವಿರೋಧ ಆಯ್ಕೆ

ಕಾರ್ಯಕ್ರಮದಲ್ಲಿ ದತ್ತಾತ್ರಿ ಮೇತ್ರೆ, ಮಾಣಿಕ ಮೇತ್ರೆ, ಹಣಮಂತ ಮೇತ್ರೆ, ನಿರಂಜಿ ಮೇತ್ರೆ, ಮಹಾದೇವ ಮೇತ್ರೆ, ರಾಜಕುಮಾರ ರಕ್ಷಾಳ, ಮಲ್ಲಪ್ಪ ಮೇತ್ರೆ, ಸಂಗಮೇಶ ಮೇತ್ರೆ, ಹಾವಗೊಂಡ ಮೇತ್ರೆ, ನರಸಪ್ಪ ಮೇತ್ರೆ, ಕಾಶಿನಾಥ ಮೇತ್ರೆ, ವಿಠಲ ಮೇತ್ರೆ, ಮಾರುತಿ ವಾಸೂರೆ, ನಾಗೇಶ ಮೇತ್ರೆ, ಬಸವರಾಜ ಮೇತ್ರೆ, ಆಕಾಶ ಮೇತ್ರೆ, ಪ್ರಕಾಶ್ ಮೇತ್ರೆ ಹಾಗೂ ವಿಶ್ವನಾಥ ಮೇತ್ರೆ ಸೇರಿದಂತೆ ಗ್ರಾಮದ ಮುಖಂಡರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.




