ಚಿಕ್ಕಬಳ್ಳಾಪುರ | ಹಣಕ್ಕಾಗಿ ಬ್ಲಾಕ್‌ಮೇಲ್‌; ಯುವತಿಯ ತಿರುಚಿದ ಅಶ್ಲೀಲ ಫೋಟೊ ತಂದೆಗೆ ಕಳುಹಿಸಿದ ಕಿರಾತಕ

Date:

ವೃತ್ತಿಯಲ್ಲಿ ವೈದ್ಯೆಯಾಗಿರುವ ಯುವತಿಯೊಬ್ಬಳ ಫೋಟೊವನ್ನು ಅಶ್ಲೀಲವಾಗಿ ಎಡಿಟ್‌ ಮಾಡಿ ಅದನ್ನು ಆಕೆಯ ತಂದೆಗೆ ಕಳುಹಿಸಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡುತ್ತಿರುವ ಕಿರಾತಕನ ವಿರುದ್ಧ ಚಿಕ್ಕಬಳ್ಳಾಪುರ ಜಿಲ್ಲೆಯ ಸೈಬರ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -

ಯುವತಿಯ ಫೋಟೊವನ್ನು ಅಸಭ್ಯವಾಗಿ ಎಡಿಟ್‌ ಮಾಡಿ ಅದನ್ನು ಆಕೆಯ ತಂದೆಗೇ ವಾಟ್ಸಾಪ್‌ ಮಾಡಿರುವ ವಿಕೃತನೊಬ್ಬ, ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಯುವತಿಯ ತಂದೆ ಸೈಬರ್‌ ಪೊಲೀಸರಿಗೆ ದೂರು ನೀಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅನುದಾನ ಕೊರತೆ: ವಿದ್ಯಾರ್ಥಿಗಳಿಂದ ನಿರ್ವಹಣಾ ಶುಲ್ಕ ವಸೂಲಿ, ಶಿಕ್ಷಕರ...

ಹಾವೇರಿ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ನಿರ್ವಹಣಾ ವೆಚ್ಚದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಶಿಕ್ಷಕರು ನಿತ್ಯದ ಖರ್ಚು-ವೆಚ್ಚ ಸರಿದೂಗಿಸಲು ಪರದಾಡುವಂತಾಗಿದೆ. ಶಾಲೆ ನಡೆಸಲು ವಿದ್ಯಾರ್ಥಿಗಳಿಂದಲೇ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಪೋಷಕರಿಂದ ಮತ್ತು...

ಬೀಗರೂಟ ಬಂದ್ ಮಾಡಿ ಸುದ್ದಿಯಾದ ಹರಗಿ ಗ್ರಾಮದಲ್ಲಿ ಸಮಸ್ಯೆಗಳದ್ದೇ...

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಕಟ್ಟೆ ಕಡೆಯ ಕುಗ್ರಾಮ ಎಂದು ಹೇಳಬಹುದಾದ ಹರಗಿ ಗ್ರಾಮ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ ಬೀಗರೂಟ ಹಾಕಿಸಿದರೆ ದಂಡ ವಿಧಿಸುತ್ತೇವೆ ಎಂದು ಗ್ರಾಮಸ್ಥರು ನಿರ್ಧಾರಕ್ಕೆ ಬಂದು ಬಡ...

ಮೋದಿ ಪರವಿದ್ದ ಯುವಜನರು ತಿರುಗಿಬಿದ್ದಿದ್ದು ಹೇಗೆ?

ಚುನಾವಣಾ ಆಯೋಗದಲ್ಲಿ ಎಸ್‌ಐಆರ್‌ ಮತ್ತು ಚುನಾವಣಾ ಪ್ರಕ್ರಿಯೆಗಳ ಕುರಿತು ಮುಖ್ಯಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್‌ ಅವರು ಸರ್ವಾಧಿಕಾರಿಯಂತೆ, ಏಕಪಕ್ಷೀಯವಾಗಿ ನಿರ್ಧಾರಗಳ ತೆಗೆದುಕೊಂಡು, ಜಾರಿ ಮಾಡುತ್ತಿದ್ದಾರೆ ಎಂಬ ತನಿಖಾ ವರದಿ ದೇಶಾದ್ಯಂತ ಭಾರೀ ಚರ್ಚೆ...

ಇತ್ತೀಚೆಗಷ್ಟೇ ಎಂಬಿಬಿಎಸ್ ಮುಗಿಸಿ ಉದ್ಯೋಗ ಆರಂಭಿಸಿದ್ದ ಯುವತಿಗೆ ಅಪರಿಚಿತ ಕರೆಯೊಂದು ಬಂದಿದ್ದು, ನೀವು ಆನ್ಲೈನ್‌ನಲ್ಲಿ 5 ಸಾವಿರ ಸಾಲ ಪಡೆದಿದ್ದೀರಿ. ಅದನ್ನು ವಾಪಸ್‌ ಕಟ್ಟಬೇಕು ಎಂದು ಬೆದರಿಕೆ ಹಾಕಲಾಗಿದೆ. ಆದರೆ, ಯುವತಿ, ನಾನು ಯಾವುದೇ ಸಾಲ ಪಡೆದಿಲ್ಲ. ಹಾಗಾಗಿ ಯಾವುದೇ ಹಣ ಕಟ್ಟುವುದಿಲ್ಲ ಎಂದು ಹೇಳಿದ್ದರು.

ಚಿಂತಾಮಣಿ ನಗರದ ಕನಂಪಲ್ಲಿ ನಿವಾಸಿಯಾಗಿರುವ ಈ ಯುವ ವೈದ್ಯೆ ಹಲವು ದಿನಗಳ ಹಿಂದೆ ನಕಲಿ ಅಪ್ಲಿಕೇಶನ್‌ ಮೇಲೆ ಕ್ಲಿಕ್‌ ಮಾಡಿದ್ದು ನಿಜವಾದರೂ ಯಾವುದೇ ಹಣ ಪಡೆದಿರಲಿಲ್ಲ. ಆರಂಭದಲ್ಲಿ ಹಣ ಪಡೆಯುವಂತೆ ಒತ್ತಡ ಹೇರಿದ ಕಿರಾತಕರು ಬಳಿಕ, ಹಣ ಪಡೆದಿದ್ದೀರಿ ವಾಪಸ್‌ ಕೊಡಿ ಎಂದು ಒತ್ತಡ ಹೇರಲು ಆರಂಭಿಸಿದ್ದಾರೆ. ಆದರೆ, ಆಕೆ ಹಣ ಮರಳಿ ಪಾವತಿಸುವ ಪ್ರಮೇಯವೇ ಇಲ್ಲವೆಂದು ಸ್ಪಷ್ಟವಾಗಿ ಹೇಳಿದ್ದರು ಎನ್ನಲಾಗಿದೆ.

“ನಿಮ್ಮ ಅಶ್ಲೀಲ ಫೋಟೊ ನಮ್ಮ ಬಳಿ ಇದೆ. ಅದನ್ನು ನಿಮ್ಮ ಮನೆಯವರು, ಸ್ನೇಹಿತರಿಗೆಲ್ಲ ಕಳುಹಿಸುತ್ತೇನೆʼʼ ಎಂದು ಆಕೆಗೆ ತಿಳಿಸಿದ್ದಾರೆ. ಆದರೆ, ತಮ್ಮ ಫೋಟೊ ಅವರಿಗೆ ಹೇಗೆ ಸಿಗುತ್ತದೆ, ತಾನು ಆ ರೀತಿ ನಡೆದುಕೊಂಡಿದ್ದೇ ಇಲ್ಲ ಎಂದು ಯುವ ವೈದ್ಯೆ ಧೈರ್ಯವಾಗಿದ್ದರು.

ಕಿರಾತಕನೊಬ್ಬ ವೈದ್ಯೆಯ ಅಸಭ್ಯ ಫೋಟೊ ಒಂದನ್ನು ಯುವತಿಯ ತಂದೆಯ ವಾಟ್ಸಾಪ್‌ಗೆ ಶೇರ್‌ ಮಾಡಿದ್ದಾನೆ. ಇದು ಅಶ್ಲೀಲವಾಗಿ ಎಡಿಟ್‌ ಮಾಡಿರುವ ಫೋಟೊ ಆಗಿದ್ದು, ಗೊತ್ತೇ ಆಗದಂತೆ ಎಡಿಟ್‌ ಮಾಡಲಾಗಿದೆ ಎನ್ನಲಾಗಿದೆ. ಜತೆಗೆ ಮನೆಯವರು, ಸಂಬಂಧಿಕರಿಗೂ ಈ ಫೋಟೊಗಳನ್ನು ಸೈಬರ್‌ ಕಳ್ಳ ಕಳುಹಿಸಿದ್ದಾನೆ. ಇದೀಗ ಯುವತಿಯ ತಂದೆ ಚಿಕ್ಕಬಳ್ಳಾಪುರದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ.

ಈ ಸುದ್ದಿ ಓದಿದ್ದೀರಾ? ಧರ್ಮಸ್ಥಳ ಸೌಜನ್ಯ ಪ್ರಕರಣ : 11 ವರ್ಷಗಳ ಬಳಿಕ ಆರೋಪಿ ದೋಷಮುಕ್ತ

ವೈದ್ಯೆಯ ಅಶ್ಲೀಲ ಫೋಟೊ ಎಡಿಟ್‌ ಮಾಡಿ ಬ್ಲ್ಯಾಕ್‌ ಮೇಲ್‌ ಮಾಡುತ್ತಿರುವುದು ಸೈಬರ್‌ ಕಳ್ಳರ ಅಥವಾ ಬೇರೆ ಯಾರೋ ಪರಿಚಿತರು ಈ ಕೃತ್ಯ ನಡೆಸುತ್ತಿದ್ದಾರ ಎಂಬ ಬಗ್ಗೆಯೂ ಸಂಶಯವಿದೆ. ಈ ಕಿರಾತಕ ಕೇವಲ ಸೋಷಿಯಲ್‌ ಮೀಡಿಯಾದಲ್ಲಿ ಮಾತ್ರ ಯುವತಿಯ ಫೋಟೊ ಅಪ್‌ಲೋಡ್‌ ಮಾಡುತ್ತಿಲ್ಲ. ಬದಲಾಗಿ ಯುವತಿಯ ಸಂಬಂಧಿಕರಿಗೆಲ್ಲ ಫೋಟೊ ಕಳುಹಿಸುತ್ತಿರುವುದು ಬೆಳಕಿಗೆ ಬಂದಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೋವಿ ಸಮುದಾಯದ ಅರ್ಹರಿಗೆ ಜಾತಿ ಪ್ರಮಾಣ ಪತ್ರ ನೀಡಲು ಮುತುವರ್ಜಿ ವಹಿಸಿ : ರಾಮಪ್ಪ ಎಂ

ಭೋವಿ ಸಮುದಾಯದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಸರ್ಕಾರ ಜಾರಿಗೊಳಿಸಿರುವ...

ರಾಯಚೂರು | ಭೀಕರ ಬರ: ₹11 ಕೋಟಿ ಬಿಡುಗಡೆ: ಸಚಿವ ಅಜಯ್ ಸಿಂಗ್

ಜಿಲ್ಲೆಯಲ್ಲಿ ಭೀಕರ ಬರ ಪರಿಸ್ಥಿತಿ ಇದ್ದು, ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ...

ಉತ್ತರ ಕನ್ನಡ | ಪಶ್ಚಿಮ ಪದವೀಧರ ಕ್ಷೇತ್ರ: ನಾಮಪತ್ರ ಹಿಂಪಡೆಯಲು ಅಕ್ಟೋಬರ್ 9 ಕೊನೆಯ ದಿನ

ಉತ್ತರ ಕನ್ನಡ: ಕರ್ನಾಟಕ ಪಶ್ಚಿಮ ಪದವೀಧರ ಮತ ಕ್ಷೇತ್ರದ ವಿಧಾನ ಪರಿಷತ್...

ರಾಯಚೂರು | ಲಿಂಗಸುಗೂರು ಡಿವೈಎಸ್ಪಿಯಾಗಿ ಸುಲೇಮಾನ್ ತಹಶೀಲ್ದಾರ್ ವರ್ಗಾವಣೆ

ಲಿಂಗಸುಗೂರ ಪೊಲೀಸ್ ಉಪವಿಭಾಗಕ್ಕೆ ನೂತನ ಡಿವೈಎಸ್ಪಿಯಾಗಿ ಸುಲೇಮಾನ್ ತಹಶೀಲ್ದಾರ್ ಅವರನ್ನು ವರ್ಗಾವಣೆ...