ದೆಹಲಿ ರಸ್ತೆಗಳಲ್ಲಿ ಕೇವಲ BS-VI ವಾಹನಗಳಷ್ಟೇ ಓಡಾಡಲಿ: ವಾಯುಮಾಲಿನ್ಯ ತಡೆಗೆ ಸುಪ್ರೀಂ ಮಹತ್ವದ ಇಂಗಿತ!

Date:

ರಾಷ್ಟ್ರ ರಾಜಧಾನಿ ದೆಹಲಿಯ ವಾಯುಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಇಡೀ ರಾಜಧಾನಿ ಪ್ರದೇಶದಲ್ಲಿ (NCR) ತಕ್ಷಣಕ್ಕೆ ಜಾರಿಗೊಳಿಸಲು ಸಾಧ್ಯವಾಗದಿದ್ದರೂ, ಕನಿಷ್ಠ ದೆಹಲಿ ನಗರದ ರಸ್ತೆಗಳಲ್ಲಾದರೂ ಕೇವಲ ಬಿಎಸ್-6 (BS-VI) ಮಾಲಿನ್ಯ ನಿಯಂತ್ರಣ ಮಾನದಂಡ ಹೊಂದಿರುವ ವಾಹನಗಳಷ್ಟೇ ಸಂಚರಿಸುವಂತಾಗಬೇಕು ಎಂದು ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ನೇತೃತ್ವದ ಪೀಠವು ಒಲವು ತೋರಿದೆ.

- Advertisement -

ದೆಹಲಿ-ಎನ್‌ಸಿಆರ್ ವಾಯುಮಾಲಿನ್ಯ ತಡೆಗಟ್ಟುವ ಕುರಿತ ವಿಚಾರಣೆಯ ಸಂದರ್ಭದಲ್ಲಿ ವಕೀಲ ರಾಕೇಶ್ ಖನ್ನಾ ಅವರು, ತಮ್ಮ ಕಕ್ಷಿದಾರರ ವೋಲ್ವೋ ಕಾರು 15 ವರ್ಷಕ್ಕಿಂತ ಹಳೆಯದಾಗಿದೆ ಎಂಬ ಕಾರಣಕ್ಕೆ ಇಂಧನ ನಿರಾಕರಿಸಲಾಗುತ್ತಿದೆ ಎಂದು ಪೀಠದ ಗಮನಕ್ಕೆ ತಂದರು. ಈ ಹಿಂದೆ ಬಿಎಸ್-4 ಮತ್ತು ಅದಕ್ಕಿಂತ ಹೊಸ ಮಾದರಿಯ ವಾಹನಗಳ ವಯಸ್ಸಿನ ಆಧಾರದ ಮೇಲೆ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಸುಪ್ರೀಂ ಕೋರ್ಟ್ ರಕ್ಷಣೆ ನೀಡಿತ್ತು ಎಂದು ಅವರು ವಾದಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಾಕ್ಸ್ ಆಫೀಸ್‌ನಲ್ಲಿ ರಾವಣನೇ ವಿಜೃಂಭಿಸಿರುವ ‘ರಾಮಾಯಣ’ದ ಅಬ್ಬರ: ₹1,600...

ರಾವಣನೇ ವಿಜೃಂಭಿಸಿರುವ ಬಾಲಿವುಡ್‌ ಸಿನಿಮಾ 'ರಾಮಾಯಣ: ಭಾಗ-1' ಬಿಡುಗಡೆಯಾದ ಕೇವಲ 17 ದಿನಗಳಲ್ಲಿ ಜಾಗತಿಕವಾಗಿ ₹1,600 ಕೋಟಿಗೂ ಅಧಿಕ ಕಮಾಯಿ ಮಾಡಿ ದಾಖಲೆ ಬರೆದಿದೆ. ಈ ಮೂಲಕ 'ದಂಗಲ್', 'ಧುರಂಧರ್-2', 'ಬಾಹುಬಲಿ-2' ಹಾಗೂ...

ರಾಯಚೂರು | ಉದ್ಘಾಟನೆಗಾಗಿ ಕಾಯುತ್ತಿರುವ ಶಾಲೆ; ವರಾಂಡದಲ್ಲೇ ಮಕ್ಕಳಿಗೆ...

ರಾಯಚೂರು ಜಿಲ್ಲೆ, ಜಾಲಹಳ್ಳಿಯ ಬೊಮ್ಮನಹಳ್ಳಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ, ಶುದ್ಧ ಕುಡಿಯುವ ನೀರಿನ ಅಭಾವ, ಕಾಂಪೌಂಡ್ ಇಲ್ಲದಿರುವುದು ಹಾಗೂ ಶಾಲಾ ಜಾಗದ ವಿವಾದ ಸೇರಿದಂತೆ ಹಲವು ಸಮಸ್ಯೆಗಳು ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗಿವೆ....

‘ಹುಟ್ಟಿಗೂ, ಸಾವಿಗೂ ನಾವೇ ಬೇಕು… ನಮ್ಮ ಜೊತೆ ನಿಲ್ಲೋಕೆ...

ಪೆಂಡಾಲಿನ ಒಂದು ಮೂಲೆಯಿಂದ ಆಶಾ ಕಾಯಕರ್ತೆಯರು " ರೂಪ ರೂಪಗಳನು ದಾಟಿ, ನಾಮ ಕೋಟಿಗಳನು ಮೀಟಿ, ಎದೆಯ ಬಿರಿಯೆ ಭಾವದೀಟಿ, ಓ ನನ್ನ ಚೇತನ... ಆಗು ಅನಿಕೇತನ" ಕವಿತೆಯ ಸಾಲುಗಳನ್ನು ಎದೆತುಂಬಿ ಹಾಡುತ್ತಿದ್ದರು....

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ, “ನಮಗೆ ಅದೇ ಬೇಕಾಗಿದೆ… ಎನ್‌ಸಿಆರ್‌ನಲ್ಲಿ ಸಾಧ್ಯವಾಗದಿದ್ದರೂ, ಕನಿಷ್ಠ ದೆಹಲಿಯಲ್ಲಾದರೂ ಕೇವಲ ಬಿಎಸ್-6 ವಾಹನಗಳು ಮಾತ್ರ ಇರಬೇಕು ಎಂಬುದು ನಮ್ಮ ಆಶಯ” ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಸಿಜೆಐ ಸೂರ್ಯಕಾಂತ್ ಅವರು, “ಮಾಲಿನ್ಯ ಉಂಟುಮಾಡುವ ವಾಣಿಜ್ಯ ವಾಹನಗಳು ದೆಹಲಿಯನ್ನು ಪ್ರವೇಶಿಸದಂತೆ ತಡೆಯಲು ನಾವು ಯಾವುದಾದರೂ ಮಾರ್ಗವನ್ನು ಕಂಡುಕೊಳ್ಳಬೇಕು” ಎಂದು ಹೇಳಿದರು. ಆದರೆ, ಇದು ವಿಚಾರಣೆ ವೇಳೆ ನ್ಯಾಯಪೀಠ ವ್ಯಕ್ತಪಡಿಸಿದ ಮೌಖಿಕ ಅಭಿಪ್ರಾಯವಾಗಿದ್ದು, ಬಿಎಸ್-6 ಕ್ಕಿಂತ ವಾಹನಗಳನ್ನು ನಿಷೇಧಿಸಿ ಹೊರಡಿಸಿದ ಹೊಸ ಆದೇಶವಲ್ಲ ಎಂಬುದು ಗಮನಾರ್ಹ.

ವಾಯುಮಾಲಿನ್ಯ ನಿಯಂತ್ರಣದಲ್ಲಿ ನೆರೆಯ ರಾಜ್ಯಗಳು ಸಕ್ರಿಯವಾಗಿ ಪಾಲ್ಗೊಳ್ಳದಿರುವುದಕ್ಕೆ ಸಿಜೆಐ ಸೂರ್ಯಕಾಂತ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ನೆರೆಯ ರಾಜ್ಯಗಳು ಮಾಲಿನ್ಯ ತಡೆ ಪ್ರಯತ್ನಗಳಲ್ಲಿ ಸಕ್ರಿಯವಾಗಿ ಭಾಗವಹಿಸದೆ, ಕೇವಲ ನಿಷ್ಕ್ರಿಯವಾಗಿರುವುದು ನಮಗೆ ಆಶ್ಚರ್ಯ ತಂದಿದೆ” ಎಂದ ನ್ಯಾಯಪೀಠ, ಮುಂದಿನ ವಿಚಾರಣೆಯ ದಿನದಂದು ಎಲ್ಲಾ ನೆರೆ ರಾಜ್ಯಗಳ ಅಡ್ವೊಕೇಟ್ ಜನರಲ್‌ಗಳು ಖುದ್ದು ಹಾಜರಾಗಿ, ಮಾಲಿನ್ಯ ತಡೆಗೆ ಕೈಗೊಂಡ ಕ್ರಮಗಳ ಕುರಿತು ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ನಿರ್ದೇಶಿಸಿತು. ಅಲ್ಲದೆ, “ಈ ಚಳಿಗಾಲದಲ್ಲಿ ನಾವು ಅದೃಷ್ಟವಂತರು… ಸದ್ಯಕ್ಕೆ ಜನರ ಶ್ವಾಸಕೋಶಗಳು ಸುರಕ್ಷಿತವಾಗಿವೆ” ಎಂದು ನ್ಯಾಯಮೂರ್ತಿ ಬಾಗ್ಚಿ ಮಾರ್ಮಿಕವಾಗಿ ನುಡಿದರು.

2025ರ ಡಿಸೆಂಬರ್ 17ರಂದು ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವು ಹಳೆಯ ವಾಹನ ಮಾಲೀಕರಿಗೆ ನೀಡಲಾಗಿದ್ದ ರಕ್ಷಣೆಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿತ್ತು. ಅದರಂತೆ, 

ಡೀಸೆಲ್ ವಾಹನಗಳಿಗೆ 10 ವರ್ಷ ಮತ್ತು ಪೆಟ್ರೋಲ್ ವಾಹನಗಳಿಗೆ 15 ವರ್ಷಗಳ ವಯೋಮಿತಿ ಮೀರಿದ್ದರೂ, ಅವು ಬಿಎಸ್-4 (BS-IV) ಅಥವಾ ಅದಕ್ಕಿಂತ ಹೊಸ ಮಾನದಂಡಗಳನ್ನು ಹೊಂದಿದ್ದರೆ ಅವುಗಳ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ. ಆದರೆ, ಬಿಎಸ್-4 ಕ್ಕಿಂತ ಹಳೆಯ ಮಾನದಂಡದ ವಾಹನಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಅವಕಾಶವಿದೆ.

ಕೃಷಿ ತ್ಯಾಜ್ಯ ಸುಡುವ ಪ್ರಕರಣಗಳು ಕಡಿಮೆಯಾಗಿದ್ದರೂ, ವಾಹನಗಳ ಹೊಗೆಯಿಂದ ಉಂಟಾಗುವ ಮಾಲಿನ್ಯ ತೀವ್ರವಾಗಿ ಹೆಚ್ಚಾಗಿರುವುದನ್ನು ಸುಪ್ರೀಂ ಕೋರ್ಟ್ ನವೆಂಬರ್ 6ರ ಆದೇಶದಲ್ಲಿ ಉಲ್ಲೇಖಿಸಿತ್ತು. ಈ ಹಿನ್ನೆಲೆಯಲ್ಲಿ ದೆಹಲಿ, ಉತ್ತರ ಪ್ರದೇಶ, ಹರಿಯಾಣ ಮತ್ತು ರಾಜಸ್ಥಾನ ಸರ್ಕಾರಗಳು ಸೇರಿದಂತೆ ದೆಹಲಿ ಪೊಲೀಸ್ ಮತ್ತು ಮಹಾನಗರ ಪಾಲಿಕೆಗೆ (MCD) ವಾಹನಗಳ ಮಾಲಿನ್ಯ ತಪಾಸಣೆ (PUC) ಮತ್ತು ಸಂಚಾರ ನಿಯಂತ್ರಣದ ಕುರಿತು ವಿವರವಾದ ವರದಿ ಸಲ್ಲಿಸಲು ಸೂಚಿಸಲಾಗಿತ್ತು.

ಸದ್ಯದ ಬೆಳವಣಿಗೆಗಳನ್ನು ಗಮನಿಸಿದರೆ, ಮುಂದಿನ ದಿನಗಳಲ್ಲಿ ದೆಹಲಿಯ ವಾಯುಗುಣಮಟ್ಟ ಸುಧಾರಿಸಲು ಕಠಿಣ ವಾಹನ ಮಾಲಿನ್ಯ ಮಾನದಂಡಗಳು ಜಾರಿಯಾಗುವ ಸಾಧ್ಯತೆ ದಟ್ಟವಾಗಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಉದ್ಘಾಟನೆಗಾಗಿ ಕಾಯುತ್ತಿರುವ ಶಾಲೆ; ವರಾಂಡದಲ್ಲೇ ಮಕ್ಕಳಿಗೆ ಪಾಠ!

ರಾಯಚೂರು ಜಿಲ್ಲೆ, ಜಾಲಹಳ್ಳಿಯ ಬೊಮ್ಮನಹಳ್ಳಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ, ಶುದ್ಧ...

ಗೋಧ್ರಾ ರೈಲು ದಹನ ಪ್ರಕರಣ: ಅಪರಾಧಿಗೆ ಸುಪ್ರೀಂ ಕೋರ್ಟ್‌ನಿಂದ ಮಧ್ಯಂತರ ಜಾಮೀನು!

2002ರ ಗೋಧ್ರಾ ರೈಲು ದಹನ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿ...

ಭಾಲ್ಕಿ | ಕನ್ನಡ ಭಾಷೆ ನಮ್ಮೆಲ್ಲರ ಅಸ್ಮಿತೆ

ಕನ್ನಡ ಭಾಷೆ ಕೇವಲ ಸಂವಹನದ ಮಾಧ್ಯಮವಲ್ಲ. ಅದು ಕನ್ನಡಿಗರ ಇತಿಹಾಸ, ಸಂಸ್ಕೃತಿ,...

ರಾಜ್ಯದಲ್ಲಿ 1,350 ಕೆಪಿಎಸ್ ಶಾಲೆಗಳ ನಿರ್ಮಾಣ: ಸಚಿವ ಮಧು ಬಂಗಾರಪ್ಪ

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ಮತ್ತು ಅವರ ಭವಿಷ್ಯವನ್ನು ಉಜ್ವಲಗೊಳಿಸುವ ಉದ್ದೇಶದಿಂದ...