ಚಿಂತಾಮಣಿ |539ನೇ ಕನಕ ಜಯಂತಿಗೆ ಸಕಲ ಸಿದ್ಧತೆ: ಅದ್ದೂರಿ ಮೆರವಣಿಗೆ, ಪ್ರತಿಭಾ ಪುರಸ್ಕಾರಕ್ಕೆ ತೀರ್ಮಾನ

Date:

ತಾಲ್ಲೂಕಿನಲ್ಲಿ ಈ ಬಾರಿ 539ನೇ ಕನಕ ಜಯಂತಿಯನ್ನು ಅತ್ಯಂತ ಅದ್ದೂರಿಯಾಗಿ ಮತ್ತು ಯಶಸ್ವಿಯಾಗಿ ಆಚರಿಸಲು ಪ್ರದೇಶ ಕುರುಬರ ಸಂಘವು ಸಕಲ ಸಿದ್ಧತೆಗಳನ್ನು ನಡೆಸುತ್ತಿದೆ.ಈ ಸಂಬಂಧ ಚಿಂತಾಮಣಿ ತಾಲ್ಲೂಕು ಪ್ರದೇಶ ಕುರುಬರ ಸಂಘದ ವತಿಯಿಂದ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಯಿತು.

​ಸಭೆಯ ಕುರಿತು ಮಾತನಾಡಿದ ಪ್ರದೇಶ ಕುರುಬರ ಸಂಘದ ರಾಜ್ಯ ನಿರ್ದೇಶಕರಾದ ವೆಂಕಟರಮಣರವರು,ಮುಂಬರುವ ನವೆಂಬರ್ 27ರಂದು ಕನಕ ಜಯಂತಿ ಪ್ರಯುಕ್ತ ತಾಲ್ಲೂಕು ಮಟ್ಟದಲ್ಲಿ,ಹೋಬಳಿ ಹಾಗೂ ಸ್ಥಳೀಯ ಮಟ್ಟಗಳಲ್ಲಿ ಕುಲಬಾಂಧವರ ಸಭೆಗಳನ್ನು ನಡೆಸಿ ಸಮಾಲೋಚನೆ ನಡೆಸಲಾಗಿದೆ ಎಂದರು.

​
​ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ,ಊರಿನಾದ್ಯಂತ ಕಳಸ-ಸ್ಟಾಬಲ್‌ಗಳೊಂದಿಗೆ ವಿಜೃಂಭಣೆಯ ಮೆರವಣಿಗೆಯನ್ನು ನಡೆಸಲು ತೀರ್ಮಾನಿಸಲಾಗಿದೆ.

ಜಯಂತಿಯ ಕಾರ್ಯಕ್ರಮದಲ್ಲಿ ಸುಮಾರು 3,000ಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದ್ದು,ವಿವಿಧ ಹೋಬಳಿಗಳಿಂದ ಸುಮಾರು 20ಕ್ಕೂ ಹೆಚ್ಚು ಟ್ಯಾಬ್ಲೋಗಳನ್ನು ಪ್ರದರ್ಶಿಸಲು ಎಲ್ಲಾ ಹೋಬಳಿಯವರೂ ಒಮ್ಮತದಿಂದ ಒಪ್ಪಿಗೆ ಸೂಚಿಸಿದ್ದಾರೆ.

ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಶಾಲಾ-ಕಾಲೇಜುಗಳನ್ನು ಸಂಪರ್ಕಿಸಿ,ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರವನ್ನು ನೀಡಲು ತೀರ್ಮಾನಿಸಲಾಗಿದೆ.

​ತಾಲ್ಲೂಕಿನ ಪ್ರತಿಯೊಂದು ಗ್ರಾಮಕ್ಕೂ ಸಂದೇಶ ರವಾನಿಸಿ, ಎಲ್ಲರ ಸಹಕಾರದೊಂದಿಗೆ ಈ ಬಾರಿಯ ಕನಕ ಜಯಂತಿಯನ್ನು ಐತಿಹಾಸಿಕ ಹಾಗೂ ಯಶಸ್ವಿ ಕಾರ್ಯಕ್ರಮವನ್ನಾಗಿ ಮಾಡಲಾಗುವುದು ಎಂದು ಮುಖಂಡರು ತಿಳಿಸಿದ್ದಾರೆ.


ಇದನ್ನು ಓದಿದ್ದೀರಾ..?ಕೋಲಾರ | ಕಾಂಗ್ರೆಸ್ಸಿಗರನ್ನು ತುಂಡು ಮಾಡಿ ಅರಬ್ಬಿ ಸಮುದ್ರಕ್ಕೆ ಎಸೆಯುವ ಹೇಳಿಕೆ: ನಗರ ಪೊಲೀಸ್ ಠಾಣೆಯಲ್ಲಿ 3 ದೂರು ಸಲ್ಲಿಕೆ

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಮಂಜುನಾಥ್ ಕೆ, ಗೌರವಾಧ್ಯಕ್ಷರಾದ ಚಿನ್ನಸಂದ್ರ ಚಂದ್ರಶೇಖರ್ ಸಿ ಬಿ, ಉಪಾಧ್ಯಕ್ಷರಾದ ನಾರಾಯಣಸ್ವಾಮಿ,ರಮಾದೇವಿ ಮಂಜುನಾಥ್,ಖಜಾಂಚಿ ಗಂಗಿರೆಡ್ಡಿ,ಸದಸ್ಯರಾದ ತಿಪ್ಪಣ್ಣ, ಕನಪಲ್ಲಿ ಚಂದ್ರಪ್ಪ,ಜೆಸಿಬಿ ಶಿವು, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಹೆಬ್ರಿ ಮಂಜುನಾಥ್,ಎ ಎನ್ ಆರ್ ಲೋಕೇಶ್,ಜಿಲ್ಲಾ ನಿರ್ದೇಶಕರಾದ ಶಿವಣ್ಣ,ಮುನಿರೆಡ್ಡಿ, ಭಾಸ್ಕರ್,ಟೈಲರ್ ಶ್ರೀನಿವಾಸ್,ಲಕ್ಷ್ಮಿದೇವಮ್ಮ,ಸೇರಿದಂತೆ ಕುರುಬ ಸಮುದಾಯದ ಮುಖಂಡರುಗಳು ಭಾಗವಹಿಸಿದ್ದರು

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ನ.17, 18ರಂದು ಕಲಾ ಪ್ರತಿಭೋತ್ಸವ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಮಕ್ಕಳು ಮತ್ತು ಯುವಜನರಲ್ಲಿನ ಸುಪ್ತ ಕಲಾ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಉದ್ದೇಶದಿಂದ...

ಕೋಲಾರ | ಸರ್ಕಾರಿ ಶಾಲೆಗಳ ವಿಲೀನ ಕೈಬಿಡಿ, ಶಾಲೆ–ಅಂಗನವಾಡಿಗಳ ದುರಸ್ತಿಗೆ ಅನುದಾನ ಬಿಡುಗಡೆ ಮಾಡಿ: ರೈತ ಸಂಘ ಆಗ್ರಹ

ಖಾಸಗಿ ಶಾಲೆಗಳೊಂದಿಗೆ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಚಿಂತನೆ ಕೈಬಿಟ್ಟು, ಶಿಥಿಲಾವಸ್ಥೆಯಲ್ಲಿರುವ ಸರ್ಕಾರಿ...

ವಿಜಯಪುರ | ಮಾಹಿತಿ ಹಕ್ಕು ಕಾಯ್ದೆ ಉಲ್ಲಂಘನೆ; 186 ಅಧಿಕಾರಿಗಳಿಗೆ ದಂಡ!

ಮಾಹಿತಿ ಹಕ್ಕು ಕಾಯ್ದೆಯಡಿ ನಿಗದಿತ ಅವಧಿಯಲ್ಲಿ ಮಾಹಿತಿ ನೀಡದೆ ಕರ್ತವ್ಯ ಲೋಪ...

ಉಡುಪಿ | ನಾಡೋಜ ಡಾ. ಜಿ. ಶಂಕರ್ ಅವರಿಗೆ ಪಂಚವರ್ಣ ರಾಜ್ಯೋತ್ಸವ ಗೌರವ ಪ್ರದಾನ

ನಾಡೋಜ ಡಾ. ಜಿ. ಶಂಕರ್ ಅವರ ವ್ಯಕ್ತಿತ್ವ ವಿಭಿನ್ನವಾಗಿದ್ದು, ಸಮಾಜಕ್ಕಾಗಿ ತಮ್ಮ...