ಪಕ್ಷದ ತಾಲ್ಲೂಕು ಕಾರ್ಯದರ್ಶಿ ಎಂ.ಎನ್.ರಘುರಾಮ ರೆಡ್ಡಿ ಮಾತನಾಡಿ ‘ಕರ್ನಾಟಕ ರಾಜ್ಯೋತ್ಸವ ಮತ್ತು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಾರ್ವಜನಿಕರಿಗೆ ಬೆಲೆ ಏರಿಕೆಯ ಕೊಡುಗೆ ನೀಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಂದೇ ನಾಣ್ಯದ ಎರಡು ಮುಖಗಳಾಗಿದ್ದು ಅಗತ್ಯ ವಸ್ತುಗಳ ಬೆಲೆ ಏರಿಕೆಯ ಮೂಲಕ ಬಡವರ ರಕ್ತ ಹೀರುತ್ತಿದೆ’ ಎಂದು ಕಿಡಿಕಾರಿದರು.
ಹಾಲು,ಮಸೂರ, ತುಪ್ಪ, ಅಕ್ಕಿ, ಬೆಳೆ, ಅಡುಗೆ ಅನಿಲ, ಇಂಧನ, ಔಷಧಿ ಸೇರಿದಂತೆ ಬಸ್ ಪ್ರಯಾಣ ಧರ ಹಾಗೂ ಅಗತ್ಯ ವಸ್ತುಗಳ ಬೆಲೆಯನ್ನು ಏಕಾಏಕಿಯಾಗಿ ಏರಿಕೆ ಮಾಡಿದ್ದಾರೆ. ಕಾರ್ಪೋರೇಟ್ ಬಂಡವಾಳಗಾರರಿಗೆ ಪ್ರೋತ್ಸಾಹ ಧನ ಮತ್ತು ರಿಯಾಯಿತಿ ಘೋಷಣೆ ಮಾಡಲು ಬಡವರ ಮೇಲೆ ಹೊರೆ ಹೊರಿಸುತ್ತಿದ್ದಾರೆ. ‘ಹಾಲಿನ ಬೆಲೆ ಏರಿಕೆ ಮಾಡಿ ರೈತರಿಗೆ ಅನುಕೂಲ ಮಾಡುತ್ತೇವೆ’ ಎಂದು ಹೇಳಿ ಸರ್ಕಾರ ಲಾಭ ಮಾಡಿಕೊಳ್ಳಲು ಹೊಂಚು ಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಪಿಐಎಂ ಪಕ್ಷದ ಮುಖಂಡ ಚನ್ನರಾಯಪ್ಪ ಮಾತನಾಡಿ, ‘ರಾಜ್ಯ ಸರ್ಕಾರ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣದರವನ್ನು ಏರಿಕೆ ಮಾಡಿದೆ. ಪಾಸ್ ದರ ಏರಿಕೆ ಮಾಡಿದೆ. ಇದರಿಂದ ಬಡವರು ಮತ್ತು ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಬೆಲೆ ಏರಿಕೆಗೆ ಅನುಗುಣವಾಗಿ ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳ ಮಾಡಬೇಕು’ ಎಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ..?ಕೋಲಾರ | ಕಾಂಗ್ರೆಸ್ಸಿಗರನ್ನು ತುಂಡು ಮಾಡಿ ಅರಬ್ಬಿ ಸಮುದ್ರಕ್ಕೆ ಎಸೆಯುವ ಹೇಳಿಕೆ: ನಗರ ಪೊಲೀಸ್ ಠಾಣೆಯಲ್ಲಿ 3 ದೂರು ಸಲ್ಲಿಕೆ
ಈ ಸಂದರ್ಭದಲ್ಲಿ ಸಿಪಿಐಎಂ ಪಕ್ಷದ ಮುಖಂಡರಾದ ಡಿ.ಟಿ.ಮುನಿ ಸ್ವಾಮಿ, ಮುಸ್ತಫಾ, ಮುನಿಯಪ್ಪ,ವಾಲ್ಮೀಕಿ ಅಶ್ವಥಪ್ಪ, ಜಿ.ಕೃಷ್ಣಪ್ಪ, ಇಮ್ರಾನ್, ರವಣಪ್ಪ ರಾಮಾಂಜಿ ಹಾಗೂ ಇತರರು ಹಾಜರಿದ್ದರು.




