ಇಡಿ ‘ಸೂಪರ್ ಕಾಪ್’ ಅಲ್ಲ, ಸ್ವತಂತ್ರವಾಗಿ ತನಿಖೆ ನಡೆಸಲು ಅಧಿಕಾರವಿಲ್ಲ: ಕರ್ನಾಟಕ ಹೈಕೋರ್ಟ್

Date:

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಜಾರಿ ನಿರ್ದೇಶನಾಲಯಕ್ಕೆ (ಇಡಿ) ಸೀಮಿತ ಅಧಿಕಾರಗಳಿದ್ದು, ತನಗೆ ತಿಳಿದ ಪ್ರತಿಯೊಂದು ಪ್ರಕರಣವನ್ನೂ ತನಿಖೆ ಮಾಡಲು ಅದು ‘ಸೂಪರ್ ಕಾಪ್’ (Super Cop) ಅಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.

- Advertisement -

ಕಾಂಗ್ರೆಸ್ ಶಾಸಕ ಕೆ. ವೈ. ನಂಜೇಗೌಡ ಮತ್ತು ಇತರರ ವಿರುದ್ಧ ಇಡಿ ಆರಂಭಿಸಿದ್ದ ಇಸಿಐಆರ್ ಹಾಗೂ ಅದಕ್ಕೆ ಸಂಬಂಧಿಸಿದ ಎಲ್ಲಾ ವಿಚಾರಣೆಗಳನ್ನು ರದ್ದುಗೊಳಿಸಿ ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಏಕಸದಸ್ಯ ಪೀಠ ಈ ಮಹತ್ವದ ಆದೇಶ ನೀಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನುಡಿ ನಮನ | ಪಿರಿಯಾಪಟ್ಟಣದ ಮಣ್ಣಿನಿಂದ ಕನ್ನಡ ಜ್ಞಾನಲೋಕದ...

ಕೆಲವರು ಹುಟ್ಟಿದ ಊರಿನ ಹೆಸರನ್ನು ತಮ್ಮೊಂದಿಗೆ ಹೊತ್ತುಕೊಂಡು ಬದುಕುತ್ತಾರೆ. ಇನ್ನು ಕೆಲವರು ತಾವು ಹುಟ್ಟಿದ ನೆಲದ ಹೆಸರನ್ನೇ ತಮ್ಮ ಸಾಧನೆಯ ಮೂಲಕ ನಾಡಿನಾದ್ಯಂತ ಪರಿಚಯಿಸುತ್ತಾರೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಕಂಪಲಾಪುರದಲ್ಲಿ ಹುಟ್ಟಿ,...

ಹಂತಕ ಗೋಡ್ಸೆಯ ಹೇಳಿಕೆಯೇ ಇತಿಹಾಸವಲ್ಲ; ಸ್ವಾತಂತ್ರ್ಯ ಹೋರಾಟಗಾರರ ಚಾರಿತ್ರ್ಯಹರಣಕ್ಕೆ...

ಅಡ್ಡಂಡ ಕಾರ್ಯಪ್ಪನವರ ‘ಗಾಂಧಿ ಹತ್ಯೆಯ ಸತ್ಯ’ ಪುಸ್ತಕ ಮತ್ತು ನಾಟಕವನ್ನು ನಿಷೇಧಿಸಬೇಕೆಂಬ ಆಗ್ರಹಕ್ಕೆ ಬಲವಾದ ಐತಿಹಾಸಿಕ ಕಾರಣಗಳಿವೆ. ಮನಶಾಸ್ತ್ರದ ದೃಷ್ಟಿಯಿಂದಲೂ ಹಂತಕನ ಸಮರ್ಥನೆಗೆ ಎಚ್ಚರಿಕೆ ಅಗತ್ಯ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹತ್ಯೆಗೆ ಸಂಬಂಧಿಸಿದಂತೆ ಅಡ್ಡಂಡ...

ಕಲ್ಯಾಣ ಯೋಜನೆಗಳಿಗೆ ‘ಆಧಾರ್’ ಬದಲು ‘ಎಪಿಕ್’: ಬಡಜನರ ಹೊಟ್ಟೆಯ...

ರಾಜಕೀಯ ಮತ್ತು ಸಾಮಾಜಿಕ ವಿಶ್ಲೇಷಕರು ಎಚ್ಚರಿಸುವಂತೆ, ಕಳೆದ ಒಂದು ದಶಕದ ಡಿಜಿಟಲ್ ಪರಿಶೀಲನಾ ವ್ಯವಸ್ಥೆಯ ಇತಿಹಾಸವನ್ನು ನೋಡಿದರೆ, ಹೊಸ ತಂತ್ರಜ್ಞಾನಗಳು ಬಂದಾಗಲೆಲ್ಲ ಅತ್ಯಂತ ದುರ್ಬಲ ವರ್ಗದವರನ್ನು ವ್ಯವಸ್ಥೆಯಿಂದ ಹೊರಗಿಡುತ್ತಲೇ ಬರಲಾಗಿದೆ. ಆಧಾರ್ ಜೋಡಣೆ...

ಇದನ್ನೂ ಓದಿ: ಹೈಕೋರ್ಟ್‌ನಲ್ಲಿ ಹಿನ್ನಡೆ: ಜೂನ್ 16 ರಿಂದ ಕರ್ನಾಟಕದಲ್ಲಿ ಬೈಕ್‌ ಟ್ಯಾಕ್ಸಿ ಸಂಪೂರ್ಣ ನಿಷೇಧ

Advertisements

ಇಡಿ ಅಧಿಕಾರವು ‘ಪಡೆದುಕೊಂಡ ಅಧಿಕಾರ’ (Derivative Power) ಹೊರತು ಸ್ವತಂತ್ರ ಮೂಲ ಅಧಿಕಾರವಲ್ಲ. ಮೂಲ ಅಪರಾಧ ಅಥವಾ ಎಫ್‌ಐಆರ್ ದಾಖಲಾಗದೇ ಅಥವಾ ಆ ಪ್ರಕರಣ ರದ್ದಾಗಿದ್ದರೆ, ಇಡಿ ಪ್ರತ್ಯೇಕವಾಗಿ ಹಣ ಅಕ್ರಮ ವರ್ಗಾವಣೆ ತನಿಖೆ ನಡೆಸಲು ಬರುವುದಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.

ಇಡಿಗೆ ಯಾವುದೇ ಅಪರಾಧದ ಮಾಹಿತಿ ದೊರೆತರೆ PMLA ಕಾಯ್ದೆಯ ಸೆಕ್ಷನ್ 66(2) ರ ಪ್ರಕಾರ ಸಂಬಂಧಪಟ್ಟ ತನಿಖಾ ಸಂಸ್ಥೆಗೆ (ಪೊಲೀಸ್ ಅಥವಾ ಲೋಕಾಯುಕ್ತ) ಆ ಮಾಹಿತಿಯನ್ನು ಹಸ್ತಾಂತರಿಸಬೇಕೇ ಹೊರತು, ತಾನೇ ಖಾಸಗಿ ದೂರು ದಾಖಲಿಸಿ ಅದರ ಆಧಾರದಲ್ಲಿ ವಿಚಾರಣೆ ಕೈಗೆತ್ತಿಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಹೈಕೋರ್ಟ್ ಹೇಳಿದೆ.

ಕಾನೂನು ಸಂಸ್ಥೆಗಳ ನಡುವೆ ಅಧಿಕಾರಗಳ ಸಮತೋಲನ ಮತ್ತು ನಿಯಂತ್ರಣ ಇರಬೇಕು. ಶಾಸನಬದ್ಧ ಸಂಸ್ಥೆಗಳು ತಮಗೆ ಕಾನೂನಿನಲ್ಲಿ ನೀಡಲಾದ ವ್ಯಾಪ್ತಿಯಲ್ಲೇ ಕೆಲಸ ಮಾಡಬೇಕೇ ಹೊರತು ಸುಪ್ರೀಂ ಸಂಸ್ಥೆಯಂತೆ ವರ್ತಿಸುವಂತಿಲ್ಲ ಎಂದು ಪೀಠ ವ್ಯಾಖ್ಯಾನಿಸಿದೆ.

ಕೋಲಾರ-ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಒಕ್ಕೂಟದಲ್ಲಿ (ಕೋಮುಲ್) ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ ಈಡಿ ಖಾಸಗಿ ದೂರು ಸಲ್ಲಿಸಿ ತನಿಖೆ ನಡೆಸಿತ್ತು. ಈ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಈಡಿಯ ಈ ಕ್ರಮ ಶಾಸನಬದ್ಧ ನಿಯಮಗಳಿಗೆ ವಿರುದ್ಧವಾಗಿದೆ ಎಂದು ತೀರ್ಪು ನೀಡಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2ನೇ ಏಕದಿನ: ಡಿಎಲ್ಎಸ್ ನಿಯಮದಡಿ ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 4 ರನ್‌ಗಳ ಜಯ

ಮಳೆಯಿಂದಾಗಿ ಅಡಚಣೆ ಎದುರಾದ ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ...

ಕಲ್ಯಾಣ ಯೋಜನೆಗಳಿಗೆ ‘ಆಧಾರ್’ ಬದಲು ‘ಎಪಿಕ್’: ಬಡಜನರ ಹೊಟ್ಟೆಯ ಮೇಲೆ ಮತ್ತೆ ಮೋದಿ ಹೊಡೆತ?

ರಾಜಕೀಯ ಮತ್ತು ಸಾಮಾಜಿಕ ವಿಶ್ಲೇಷಕರು ಎಚ್ಚರಿಸುವಂತೆ, ಕಳೆದ ಒಂದು ದಶಕದ ಡಿಜಿಟಲ್...

ಬಾಗಲಕೋಟೆ | ಆತ್ಮರಕ್ಷಣೆಗೆ ವುಶು, ಕರಾಟೆ ಕ್ರೀಡೆಗಳ ಅಗತ್ಯವಿದೆ: ಡಾ. ವೀರಣ್ಣ ಚರಂತಿಮಠ

ದೈಹಿಕ ಹಾಗೂ ಮಾನಸಿಕ ಸದೃಢತೆ ಕಾಪಾಡಿಕೊಳ್ಳಲು ಕ್ರೀಡೆಗಳು ಅತ್ಯವಶ್ಯವಾಗಿದ್ದು, ವುಶು ಮತ್ತು...

ರಾಜ್ಯದ 13 ಜಿಲ್ಲೆಗಳಲ್ಲಿ ಮುಂದಿನ 3 ದಿನ ಭಾರೀ ಮಳೆ: ಹವಾಮಾನ ಇಲಾಖೆ

ರಾಜ್ಯದಲ್ಲಿ ಕಳೆದೊಂದು ವಾರದಿಂದ ಮಳೆ ಅಬ್ಬರಿಸುತ್ತಿದೆ. ನಾನಾ ಭಾಗಗಳಲ್ಲಿ ಧಾರಾಕಾರ ಮಳೆ...