ಚಿಕ್ಕಮಗಳೂರು | ವೈಯಕ್ತಿಕ ದ್ವೇಷಕ್ಕೆ ಕಾಫಿತೋಟ ನಾಶ ಮಾಡಿದ ಕಿಡಿಗೇಡಿಗಳು

Date:

ವೈಯಕ್ತಿಕ ದ್ವೇಷ ಹಾಗೂ ಜಮೀನು ವ್ಯಾಜ್ಯದ ಕಾರಣದಿಂದ ಕಿಡಿಗೇಡಿಗಳು ಕಾಫಿ ತೋಟವನ್ನು ನಾಶ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್‌.ಆರ್‌ ಪುರದಲ್ಲಿ ನಡೆದಿದೆ.

ಎನ್‌ ಆರ್‌ ಪುರದ ನೇಮನಹಳ್ಳಿ ಗ್ರಾಮದಲ್ಲಿ ರಮೇಶ್ ಗೌಡ ಎಂಬವರಿಗೆ ಸೇರಿದ ಕಾಫಿ ತೋಟವನ್ನು ಕತ್ತರಿಸಿ ನಾಶ ಮಾಡಲಾಗಿದೆ. ಜಮೀನು ವಿಚಾರವಾಗಿ ವೈಯುಕ್ತಿಕ ದ್ವೇಷಕ್ಕೆ ಈ ದುಷ್ಕೃತ್ಯ ನಡೆಸಲಾಗಿದೆ ಎಂದು ರಮೇಶ್‌ ಗೌಡ ಆರೋಪಿಸಿದ್ದಾರೆ.

“ಕಿಡಿಗೇಡಿಗಳು ಮಧ್ಯರಾತ್ರಿ ಜೀಪಿನ ಮೂಲಕ ತೋಟದ ಬೇಲಿ ಮುರಿದು ಒಳನುಗ್ಗಿದ್ದಾರೆ. ಲಾಂಗು, ಮಚ್ಚುಗಳನ್ನು ಬೀಸಿ ಬಾಳೆ ಹಾಗೂ ಕಾಫಿ ಗಿಡಗಳನ್ನು ಕೊಚ್ಚಿ ನಾಶ ಮಾಡಿದ್ದಾರೆ. ತೋಟದ ಪಕ್ಕದಲ್ಲಿದ್ದ ಮನೆಯ ಮೇಲೆ ಕಲ್ಲು ತೂರಾಟ ಮಾಡಿ, ಹಾನಿ ಎಸಗಿದ್ದಾರೆ” ಎಂದು ತೋಟದ ಮಾಲೀಕರು ಬಾಳೆಹೊನ್ನೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ಸಂಭ್ರಮದ ರಂಜಾನ್‌ ಆಚರಣೆ; ಸಹೋದರಂತೆ ಬದುಕಲು ಕರೆ

ತೋಟದ ಮಾಲೀಕರು ಬೆಳೆ ನಾಶದ ವಿಡಿಯೋ ಮಾಡಿಕೊಂಡಿದ್ದು, ಸಂದರ್ಶ ಕಾರಗದ್ದೆ, ಮನೋರಂಜನ್, ಸತ್ಯನಾರಾಯಣ ಸೇರಿದಂತೆ ಹಲವರ ವಿರುದ್ಧ ದೂರು ನೀಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸನ ಪೆನ್‌ಡ್ರೈವ್ ಪ್ರಕರಣ | ಸಂಬಂಧಪಟ್ಟವರ ಬಂಧನಕ್ಕೆ ಆಗ್ರಹಿಸಿ ಏ.29ರಂದು ಪ್ರತಿಭಟನೆ

ನೂರಾರು ಅಶ್ಲೀಲ ವಿಡಿಯೋಗಳು, ಚಿತ್ರಗಳು ಇರುವ ಹಾಸನದ ಪೆನ್ ಡ್ರೈವ್ ಲೈಂಗಿಕ...