ದ್ವೀಪದಂತಿದ್ದ ಬದುಕುಗಳಿಗೆ ಬೆಸುಗೆಯಾದ ಸೇತುವೆ: ನನಸಾದ ನರಸಿಂಹರಾಜಪುರ ಜನರ ದಶಕಗಳ ಕನಸು

Date:

ನರಸಿಂಹರಾಜಪುರ ಮುಳುಗಡೆಯಾದ ದಿನಗಳಿಂದಲೂ ಅಭಿವೃದ್ಧಿಯ ಕುರುಹಗಿಳಿಲ್ಲದೆ ಹಿಂದುಳಿದಿದ್ದ ತಾಲೂಕು. ಭದ್ರಾ ಹಿನ್ನೀರಿನಿಂದ ದ್ವೀಪದಂತಾಗಿದ್ದ ಸುಮಾರು 30ಕ್ಕೂ ಅಧಿಕ ಹಳ್ಳಿಗಳ ಜನಜೀವನಕ್ಕೆ ʼಸಿದ್ದರಾಮಯ್ಯ ಸೇತುವೆʼ ಹೊಸ ಚೈತನ್ಯ ನೀಡಿದೆ. ದಶಕಗಳ ಕಾಲ ಅನುಭವಿಸಿದ ಸಂಕಷ್ಟಕ್ಕೆ ಈಗ ಶಾಶ್ವತ ಮುಕ್ತಿ ಸಿಕ್ಕಂತಾಗಿದ್ದು, ನರಸಿಂಹರಾಜಪುರ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಇದು ನಾಂದಿ ಹಾಡಲಿದೆ.

ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರದಲ್ಲಿ ಉದ್ಘಾಟನೆಗೊಂಡ ʼಸಿದ್ದರಾಮಯ್ಯ ಸೇತುವೆʼ ಇಲ್ಲಿಯ ಜನತೆಯ ದಶಕಗಳ ಕನಸು. ಹೊನ್ನೆಕೊಡಿಗೆಯಿಂದ ತಾಲೂಕು ಕೇಂದ್ರಕ್ಕೆ 20 ಕಿಮೀ ಪ್ರಯಾಣಿಸಬೇಕಿದ್ದ ಸುಮಾರು ಇಪ್ಪತ್ತು ಹಳ್ಳಿಯ ಜನರು ಈಗ 5 ನಿಮಿಷದಲ್ಲಿ ಪಟ್ಟಣ ತಲುಪಬಹುದು.

- Advertisement -

ಪಟ್ಟಣದಿಂದ ನಾಲ್ಕರಿಂದ ಐದು ಕಿಲೊಮೀಟರ್ ದೂರವಿರುವ ಹೊನ್ನೆಕುಡಿಗೆ, ಸಾಲೂರು, ಹಂದೂರು, ಕರ್ಕೂಟ, ಸಾರ್ಯ, ಕೂಸ್ಗಲ್ ಗ್ರಾಮಗಳ ಜನರು ಹಿನ್ನೀರಿನ ಪರಿಣಾಮದಿಂದ ಇಪ್ಪತ್ತು ಕಿಲೋಮೀಟರ್ ಸುತ್ತಿಕೊಂಡು ಪಟ್ಟಣಕ್ಕೆ ಬರಬೇಕಿತ್ತು. ಸದ್ಯ ಈ ಸಮಸ್ಯೆಗೆ ಮುಕ್ತಿ ದೊರತಿದ್ದು, ಇದೀಗ 36 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಸೇತುವೆಯಿಂದ ಮುಳುಗಡೆಯಾದ ಬದುಕುಗಳ ಅರ್ಧ ಶತಮಾನದ ಕನಸು ನನಸಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ನಟರಾಜ್ ಹುಳಿಯಾರ್ ಅವರ ‘ಡಾಕ್ಟರ್...

ಇತ್ತೀಚೆಗೆ ಲೋಕಾರ್ಪಣೆಗೊಂಡ ನಟರಾಜ್ ಹುಳಿಯಾರ್ ಅವರ 'ಡಾಕ್ಟರ್ ಸಾಹೇಬ್- ರಾಮಮನೋಹರ ಲೋಹಿಯಾ ಜೀವನಯಾನ' ಕೃತಿಯಿಂದ ಆಯ್ದ 'ಲೋಹಿಯಾ ಮತ್ತು ಕರ್ನಾಟಕ' ಅಧ್ಯಾಯ, ಭಾನುವಾರದ ವಿರಾಮದ ಓದಿಗಾಗಿ... 'ಮಾರ್ಕ್ಸ್, ಗಾಂಧಿ ಅಂಡ್ ಸೋಷಲಿಸಂ' ಪುಸ್ತಕಕ್ಕೆ ಮುನ್ನುಡಿ...

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

ನಾಗಲಪುರ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹರೀಶ್ ಶೆಟ್ಟಿ ಸಫಲವಾದ ಬಹುದಶಕಗಳ ಅಭೀಪ್ಸೆಯ ಕುರಿತು ಈ ದಿನ.ಕಾಮ್‌ ಜತೆಗೆ ಸಂತಸ ಹಂಚಿಕೊಂಡಿದ್ದು, “ಕ್ಷೇತ್ರದ ಜನ ಮೆಚ್ಚಿದ ನಾಯಕ, ನಮ್ಮೆಲ್ಲರ ಹೆಮ್ಮೆಯ ಶಾಸಕ ರಾಜೇಗೌಡ ಹಾಗೂ ಕೆಎಸ್‌ಟಿಡಿಸಿ ಅಧ್ಯಕ್ಷ ಶ್ರೀನಿವಾಸ್ ಇವರಿಬ್ಬರ ಪರಿಶ್ರಮದಿಂದ ನಮ್ಮೂರಿನ ಹಿನ್ನೀರು ಪ್ರದೇಶದಲ್ಲಿ ಅದ್ಭುತವಾದ ಸೇತುವೆ ನಿರ್ಮಾಣವಾಗಿದೆ” ಎಂದು ಹೇಳಿದರು.

“ನರಸಿಂಹರಾಜಪುರದ ಜನರು ಆಸ್ಪತ್ರೆ, ಪೇಟೆಗೆ ಹೋಗಲು, ಕೃಷಿ ಚಟುವಟಿಕೆಗಳಲ್ಲಿ ತೊಡಗಲು ಬಹಳ ಅನುಕೂಲವಾಗಿದೆ. ಈ ಸುಸಜ್ಜಿತ ಸೇತುವೆಯನ್ನು ನಮ್ಮೆಲ್ಲರ ಹೆಮ್ಮೆಯ ಭಾಗ್ಯಗಳ ಸರದಾರ, ಹೆಮ್ಮೆಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಲೋಕಾರ್ಪಣೆ ಮಾಡಿರುವುದು ಸುತ್ತಮುತ್ತಲಿನ ಗ್ರಾಮಸ್ಥರಿಗೆ ಸಂತಸ ತಂದಿದೆ. ಮುಳುಗಡೆಯ ನಡುವಿನ ದ್ವೀಪದಂತಿದ್ದ  ನರಸಿಂಹರಾಜಪುರ ಅಭಿವೃದ್ಧಿಯತ್ತ ಸಾಗುತ್ತಿದೆ. ಇದಕ್ಕೆಲ್ಲ ಕಾರಣಕರ್ತರಾದಂತಹ ನುಡಿದಂತೆ ನಡೆಯುವ ಕಾಂಗ್ರೆಸ್ ಸರ್ಕಾರಕ್ಕೆ ವಂದನೆಗಳು” ಎಂದರು.

HFx5hTeagAAGDGQ 2

ಇದನ್ನೂ ಓದಿ ಕುದುರೆಮುಖ ಕಾಡ್ಗಿಚ್ಚು: ಬೆಂಕಿ ಹಚ್ಚುವುದರಿಂದ ಲಾಭ ಯಾರಿಗೆ?

“ಬಯಲು ಸೀಮೆಯ ಬೇಗೆ ಪರಿಹರಿಸಲು 1957ರಲ್ಲಿ ನಿರ್ಮಾಣವಾದ ಭದ್ರಾ ಅಣೆಕಟ್ಟು ಬಯಲು ಸೀಮೆಗೆ ವರವಾದರೆ, ಮಲೆನಾಡಿನ ಮೂಲ ನಿವಾಸಿಗಳಿಗೆ ಶಾಪವಾಗಿ ಪರಿಣಮಿಸಿ. ಶ್ರೀಮಂತ ಸಂಸ್ಕೃತಿಯೊಂದು ನಶಿಸಿ ಹೋಗುವುದರ ಜತೆಗೆ ಅಪಾರ ಪ್ರಮಾಣದ ಆಸ್ತಿ, ಕೃಷಿ ಭೂಮಿ, ಅರಣ್ಯ ಮುಳುಗಡೆಯ ಪಾಲಾಯಿತು. ದಶಕಗಳ ಹಿಂದೆ ಇದ್ದ ಸುಸ್ಥಿತ ಸಾರಿಗೆ ಸಂಪರ್ಕ ಇಂದು ಅಧಃಪತನಗೊಂಡಿದೆ. ಕಳೆದ ರೈಲು ಮಾರ್ಗಕ್ಕೆ ಪರ್ಯಾಯವಾಗಿ ಬೇರೆ ರೈಲು ಮಾರ್ಗ ಮಾಡುವ ಆಶ್ವಾಸನೆಯನ್ನು ಪ್ರತಿ ಸರ್ಕಾರವೂ ನೀಡುತ್ತ ಬಂದಿದ್ದರೂ ಯೋಜನೆ ತಹಬದಿಗೆ ಬಾರದಿರುವುದು ನಿರಾಶಾದಾಯಕ ಸಂಗತಿ. ಮುಳುಗಡೆಯಾಗುವ ಮುನ್ನ ಶಿವಮೊಗ್ಗಕ್ಕೆ ಅರ್ಧ ಗಂಟೆಯಲ್ಲಿ ಕ್ರಮಿಸಬಹುದಾಗಿತ್ತು, ಈಗ ಒಂದೂವರೆ ತಾಸಿನ ಹಾದಿಯಾಗಿದೆ” ಎಂಬುದು ಇಲ್ಲಿನ ಸ್ಥಳೀಯರ ನಿತ್ಯ ಅಳಲು.

ಅಂದು ಲಕ್ಕವಳ್ಳಿಯಲ್ಲಿ ನಿರ್ಮಿಸಲಾದ ಭದ್ರಾ ಅಣೆಕಟ್ಟಿನಿಂದ ಅಂದಾಜು ನಲವತ್ತು ಹಳ್ಳಿಗಳು ಜಲಾವೃತವಾದವು. 27,801.5 ಎಕರೆಯಷ್ಟು ಪ್ರದೇಶ ನೀರಿನಲ್ಲಿ ಮುಳುಗಡೆಯಾಯಿತು. ಇದರಿಂದಾಗಿ ನೂರಾರು ಕುಟುಂಬಗಳು ಸೂರು ಕಳೆದುಕೊಂಡವು, ಕೃಷಿಯನ್ನೇ ನಂಬಿ ಬದುಕುತ್ತಿದ್ದ ರೈತಾಪಿ ವರ್ಗದ ಜನರು ತಮ್ಮ ಕೃಷಿಭೂಮಿ ಕಳೆದುಕೊಂಡು ಸರ್ಕಾರದಿಂದ ಪರಿಹಾರವೆಂದು ದೊರೆತ ತುಂಡು ಜಾಗಗಳಿಗೆ ಬಕ ಪಕ್ಷಿಗಳಂತೆ ಕಾದು ಕುಳಿತರು. ಹಲವರು ಇಂದಿಗೂ ಕಳೆದ ಸವಲತ್ತಿನ ಬದುಕು ಹಾಗೂ ಈ ಊರಿನ ಗತವೈಭವವನ್ನೂ ನೆನೆದು ಕಣ್ತುಂಬಿಕೊಳ್ಳುತ್ತಾರೆ.

images 16 2

ಯಡೇಹಳ್ಳಿ ಎಂಬ ಹೆಸರಿನಿಂದ ಕರೆಸಿಕೊಳ್ಳುತ್ತಿದ್ದ ಲಕ್ಕವಳ್ಳಿ ತಾಲೂಕಿನ ಉಪ ತಾಲೂಕಾಗಿದ್ದಈ ಊರಿಗೆ 1915ರಲ್ಲಿ ನರಸಿಂಹರಾಜ ಒಡೆಯರ್ ಭೇಟಿ ನೀಡಿದ ಸ್ಮರಣಾರ್ಥವಾಗಿ ನರಸಿಂಹರಾಜಪುರ ಎಂಬ ಹೆಸರು ಬಂತು. 1897ರವರೆಗೆ ಇದು ಲಕ್ಕವಳ್ಳಿ ತಾಲೂಕಿನ  ಉಪ ತಾಲೂಕಾಗಿತ್ತು.

ಬ್ರಿಟಿಷರು ಲಕ್ಕವಳ್ಳಿ, ತರೀಕೆರೆ ನರಸಿಂಹರಾಜಪುರದ ಸುತ್ತಮುತ್ತಲ ಊರುಗಳನ್ನು ತಮ್ಮ ನೈಸರ್ಗಿಕ ಸಂಪನ್ಮೂಲದ ಕಣಜಗಳನ್ನಾಗಿಸಿಕೊಂಡಿದ್ದರು. ಇಲ್ಲಿಯ ದಟ್ಟ ಕಾಡುಗಳಲ್ಲಿ ಸಾಗುವಾನಿ, ಬೀಟೆ, ಗಂಧದ ಮರಗಳು ಯತೇಚ್ಛವಾಗಿ ದೊರೆಯುತ್ತಿದ್ದವು. ಬ್ರಿಟಿಷರು ಸಾಗುವಾನಿ ಮರಗಳನ್ನು ತಮ್ಮ ಹಡಗುಗಳಿಗೆ ಹಾಸು ಹಲಗೆಗಳಾಗಿ ಬಳಸುತ್ತಿದ್ದರಂತೆ.

ರಫ್ತು ಆಮದುಗಳ ಸಲುವಾಗಿ ಸಾರಿಗೆ ಸಂಪರ್ಕ ವ್ಯವಸ್ಥೆಯನ್ನು ಸರಾಗವಾಗಿಸುತ್ತ ಆಸಕ್ತಿ ಹೊಂದಿದ್ದ ಇವರು, 1901ರಲ್ಲಿ ನರಸಿಂಹರಾಜಪುರದ ತಡಸಾ ಎಂಬ ಗ್ರಾಮದಲ್ಲಿ ಹರಿಯುವ ಬಕ್ರಿ ಹಳ್ಳಕ್ಕೆ ಒಂಬತ್ತು ಕಮಾನಿನ ಸೇತುವೆ ನಿರ್ಮಿಸಿದ್ದರು. ಇಂಟರ್ ಕೀ ಸ್ಟೋನ್ ತಂತ್ರಜ್ಞಾನ ಬಳಸಿ ಕಲ್ಲುಗಳಿಂದ ಕಟ್ಟಿದ ಸೇತುವೆ ವಾಹನ ಹಾಗೂ ರೈಲು ಸಂಚಾರಕ್ಕೆ ಅನುವು ಮಾಡಿಕೊಡುತ್ತಿತ್ತು.

ಈ ಮಾರ್ಗದಿಂದ ಕೇವಲ 38 ಕಿಲೋ ಮೀಟರ್ ಪ್ರಯಾಣದಲ್ಲಿ ಶಿವಮೊಗ್ಗ ತಲುಪಬಹುದಿತ್ತು. ಪ್ರಸ್ತುತ 55 ಕಿಲೋ ಮೀಟರ್ ಸಂಚರಿಸಬೇಕಾಗಿದೆ. 1917 ಮೇ 13ರಂದು ಮೊದಲ ಬಾರಿಗೆ ಟ್ರಾಂಬೆ ರೈಲು ತರೀಕೆರೆಯಿಂದ ನರಸಿಂಹರಾಜಪುರಕ್ಕೆ ಬಂದಿತ್ತು. ತಡಸಾದಿಂದ ಹೆಬ್ಬೆಗೆ 1921ರಲ್ಲಿ ರೈಲು ಸಂಚರಿಸಿದ ದಾಖಲೆಗಳಿವೆ ಎನ್ನುತ್ತಾರೆ ಸ್ಥಳೀಯರು.

ಈಗ ತಡಸ ಸೇತುವೆ ಬಿರುಬೇಸಿಗೆಯಲ್ಲಿ ನೀರು ಬತ್ತಿದಾಗ ಮಾತ್ರ ವೀಕ್ಷಣೆಗೆ ಸಿಗುತ್ತದೆ. ಉಳಿದಂತೆ ನೀರಿನಲ್ಲಿ ಪೂರ್ತಿಯಾಗಿ ಮುಳುಗಿರುತ್ತದೆ. ಮುಳುಗಡೆಯಾದ ನಂತರ ಸಾರಿಗೆ ವ್ಯವಸ್ಥೆಯಿಲ್ಲದೆ ಪರದಾಡುತ್ತಿದ್ದ ಜನರಿಗೆ ʼಸಿದ್ದರಾಮಯ್ಯ ಸೇತುವೆʼಯಿಂದ ತಾಲೂಕಿನ ಅಭಿವೃದ್ಧಿಯ ಕುರಿತು ಹೊಸ ಭರವಸೆಗಳು ಮೂಡಿವೆ.

ಈ ಕುರಿತು ಈ ದಿನ.ಕಾಮ್‌ʼಗೆ ಪ್ರತಿಕ್ರಿಯಿಸಿದ ಸುಗ್ಗಪ್ಪನಮಠ ನಿವಾಸಿ ರಾಮು, “ನಮ್ಮೂರಿಗೆ ಸೇತುವೆಯಾದದ್ದು ರೈತರು, ನಿತ್ಯ ಪಟ್ಟಣಕ್ಕೆ ಸಂಚರಿಸುವ ಕಾರ್ಮಿಕರ ಸಮಯ ಹಾಗೂ ಇಂಧನದ ಉಳಿತಾಯಕ್ಕೆ ನಾಂದಿಯಾಗಿದೆ. ಸೇತುವೆ ನಿರ್ಮಾಣಕ್ಕೆ ಈ ಊರಿನ ಮಗನಾದ ಕೆಎಸ್‌ಟಿಡಿಸಿ ಅಧ್ಯಕ್ಷ ಶ್ರೀನಿವಾಸ್‌ ಸತತವಾಗಿ ಶ್ರಮಿಸಿದರು. ಅವರ ದಣಿವರಿಯದ ಶ್ರಮ ಹಾಗೂ ಹುಟ್ಟೂರಿನ ಜನರ ಮೇಲೆ ಅವರಿಗಿರುವ ಪ್ರೀತಿ, ಸಹಾನುಭೂತಿಯ ಸಂಕೇತವೇ ಈ ಸೇತುವೆ. ಶಾಸಕ ರಾಜೇಗೌಡರ ಸಹಕಾರದಿಂದ ಸೇತುವೆ ಪೂರ್ಣಗೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಲೋಕಾರ್ಪಣೆಯಾಗಿದೆ. ಇದರಿಂದ ನಮ್ಮೂರಿನ ಸುಮಾರು 20 ಹಳ್ಳಿಗಳಿಗೆ ಅನುಕೂಲವಾಗಿದೆ. ನಾವು ತೋಟಕ್ಕೆ ಹೋಗಲು 20 ಕಿಲೋಮೀಟರ್ ಸುತ್ತಿಬಳಸಿ ದಾರಿ ಕ್ರಮಿಸಬೇಕಿತ್ತು. ತೋಟಕ್ಕೆ ಹೋಗಿ ತಿರುಗಿ ಮನೆಗೆ ಬರಲು ಒಟ್ಟು 40 ಕಿಲೋಮೀಟರ್‌ ಸಂಚರಿಸುತ್ತಿದ್ದೆ. ಸದ್ಯ ಹೊಸ ಸೇತುವೆ ಈ ಪರದಾಟಕ್ಕೆ ಮುಕ್ತಿ ದೊರಕಿಸಿದೆ. 3 ಕಿಮೀ ಸಂಚರಿಸಿದರೆ ತೋಟವನ್ನು ತಲುಪಬಹುದು. ಇದರಿಂದ ಕೃಷಿ ಚಟುವಟಿಕೆಗೆ ಲಾಭವಾಗಿದೆ. ಮೊದಲೆಲ್ಲ ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ತಲುಪಲು ಕಷ್ಟವಾಗುತ್ತಿತ್ತು. ಈಗ ಪಟ್ಟಣ ಕೇಂದ್ರಕ್ಕೆ 10 ನಿಮಿಷದಲ್ಲಿ ತಲುಪಬಹುದು. ಸೇತುವೆಯಿಂದ ವರುಷಗಳ ಸಂಕಷ್ಟ ಪರಿಹಾರವಾಗಿದೆ. ನಮ್ಮೂರು ಪ್ರವಾಸಿ ತಾಣ ಆಗುವುದರಲ್ಲಿ ಅನುಮಾನವೇ ಇಲ್ಲ” ಎಂದು ಸಂತಸ ಹಂಚಿಕೊಂಡರು.

Untitled design 2026 04 10T211500.389

“ಈ ಸೇತುವೆ ನನ್ನ ಜೀವಮಾನದ ಸಾಧನೆ ಇದ್ದಂತೆ. ಇಲ್ಲಿನ ಕೆಲವು ಊರುಗಳು ಮುಳುಗಡೆ ಆದ ಬಳಿಕ ಹೊನ್ನೆಕೊಡಿಗೆಯವರು ಮಾತ್ರ ಇಲ್ಲಿದ್ದರು. ಅವರಿಗೆ ಪೇಟೆಗೆ ಬರುವ ದಾರಿ ಸುಲಭದ್ದಾಗಿರಲಿಲ್ಲ. ಈ ಸೇತುವೆಯಿಂದ ಅವರು ಸಲೀಸಾಗಿ ಓಡಾಡುವ ಹಾಗಾಗಿದೆ. ಇದರ ಎಲ್ಲ ಕ್ರೆಡಿಟ್ ಸಿದ್ದರಾಮಯ್ಯನವರಿಗೆ ಸಲ್ಲಬೇಕು. ನಮ್ಮ ನರಸಿಂಹರಾಜಪುರಕ್ಕೆ ಸಿದ್ದರಾಮಯ್ಯ ಬಿಟ್ಟು ಈವರೆಗೆ ಬೇರೆ ಯಾವುದೇ ಮುಖ್ಯಮಂತ್ರಿ ಬಂದೇ ಇಲ್ಲ” ಎಂದು ಕೆಎಸ್‌ಟಿಡಿಸಿ ಅಧ್ಯಕ್ಷ ಶ್ರೀನಿವಾಸ್‌ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ನರಸಿಂಹರಾಜಪುರದಲ್ಲಿ ಹಲವು ಕಾಮಗಾರಿಗಳನ್ನು ಉದ್ಘಾಟಿಸಿದರು. ಕೆಲ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿದರು. ಉದ್ಘಾಟಿಸಿದ ಕಾಮಗಾರಿಗಳ ಒಟ್ಟು ಮೊತ್ತ 47.82 ಕೋಟಿ ರೂಪಾಯಿ. ಇದರಲ್ಲಿ ತಾಲೂಕು ಕೇಂದ್ರದಿಂದ ಹಂದೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ನೂತನ ಸೇತುವೆ ಲೋಕಾರ್ಪಣೆ, ಹೆಬ್ಬೆ ರಸ್ತೆಯಿಂದ ಹೊನ್ನೆಕೂಡಿಗೆ ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಪ್ರಮುಖವಾದದ್ದು.

ಇದೇ ವೇಳೆ ಹಲವು ಯೋಜನೆಗಳ ಶಂಕುಸ್ಥಾಪನೆ ಕಾಮಗಾರಿಯು ನಡೆದಿದ್ದು, 221.68 ಕೋಟಿ ಮೊತ್ತದ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಾಗಿದೆ. ನರಸಿಂಹರಾಜಪುರ ಪ್ರವಾಸಿ ಮಂದಿರ ವೃತ್ತದಿಂದ ಬಸ್‌ ನಿಲ್ದಾಣದವರೆಗೆ ಮತ್ತು ಪಟ್ಟಣ ಪಂಚಾಯಿತಿಯಿಂದ ಸುಂಕದಕಟ್ಟೆ ತನಕ ರಾಜ್ಯ ಹೆದ್ದಾರಿ ವಿಸ್ತರಣೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಜೊತೆಗೆ ಅಮೃತ್ 2.0 ಯೋಜನೆಯಡಿ ನರಸಿಂಹರಾಜಪುರ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ಶಾಲೆ ಹಾಗೂ ರಂಗಮಂದಿರ ನಿರ್ಮಾಣ.

ಚೆಕ್ ಡ್ಯಾಂ ಮತ್ತು ಪ್ರವಾಸೋದ್ಯಮ ಹಂದೂರು ಸೇತುವೆ ಬಳಿ ಕೃಷಿ ನೀರಾವರಿಗಾಗಿ ಚೆಕ್ ಡ್ಯಾಂ ನಿರ್ಮಾಣ ಮತ್ತು 3 ಎಕರೆ ಪ್ರದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುದಾನದ ಘೋಷಣೆ ಮಾಡಲಾಗಿದೆ. ನರಸಿಂಹರಾಜಪುರದಿಂದ ಹೆಬ್ಬೆ ಮೂಲಕ ಚಿಕ್ಕಮಗಳೂರು ಸಂಪರ್ಕಿಸುವ ರಸ್ತೆಯಲ್ಲಿ ಸೇತುವೆ ನಿರ್ಮಾಣಕ್ಕಾಗಿ ₹50 ಕೋಟಿ ನೀಡುವ ಭರವಸೆ ಭರವಸೆ ನೀಡಲಾಗಿದೆ.

ನರಸಿಂಹರಾಜಪುರ ಮುಳುಗಡೆಯಾದ ದಿನಗಳಿಂದಲೂ ಅಭಿವೃದ್ಧಿಯ ಕುರುಹಗಿಳಿಲ್ಲದೆ ಹಿಂದುಳಿದಿದ್ದ ತಾಲೂಕು. ಭದ್ರಾ ಹಿನ್ನೀರಿನಿಂದ ದ್ವೀಪದಂತಾಗಿದ್ದ ಸುಮಾರು 30ಕ್ಕೂ ಹೆಚ್ಚು ಹಳ್ಳಿಗಳ ಜನಜೀವನಕ್ಕೆ ʼಸಿದ್ದರಾಮಯ್ಯ ಸೇತುವೆʼ ಹೊಸ ಚೈತನ್ಯ ನೀಡಿದೆ. ದಶಕಗಳ ಕಾಲ ಅನುಭವಿಸಿದ ಸಂಕಷ್ಟಕ್ಕೆ ಈಗ ಶಾಶ್ವತ ಮುಕ್ತಿ ಸಿಕ್ಕಂತಾಗಿದ್ದು, ನರಸಿಂಹರಾಜಪುರ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಇದು ನಾಂದಿ ಹಾಡಲಿದೆ.

WhatsApp Image 2026 03 09 at 18.17.26
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | ವೃಕ್ಷಥಾನ್ ಹೆರಿಟೇಜ್ ರನ್ 2026: ತೆರೆಮರೆಯ ಸಾಧಕರಿಗೆ ಗೌರವ

ಕ್ರೀಡೆ, ಪಾರಂಪರಿಕ ಕ್ಷೇತ್ರ, ಸ್ವಚ್ಛತೆ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಗಮನಾರ್ಹ ಸೇವೆ...

SIR | ಸ್ವಾತಂತ್ರ್ಯ ಹೋರಾಟ ಹಿನ್ನೆಲೆಯುಳ್ಳ BSP ನಾಯಕ ಸುಧೀಂದ್ರ ಭದೋರಿಯಾ ಕುಟುಂಬದ ಹೆಸರುಗಳು ಡಿಲೀಟ್‌

ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ SIR ಪ್ರಕ್ರಿಯೆಯಲ್ಲಿ ಬಿಎಸ್‌ಪಿ ಹಿರಿಯ ನಾಯಕ, ಮಾಜಿ...

ಹೊಸ ಓದು | ನಟರಾಜ್ ಹುಳಿಯಾರ್ ಅವರ ‘ಡಾಕ್ಟರ್ ಸಾಹೇಬ್’

ಇತ್ತೀಚೆಗೆ ಲೋಕಾರ್ಪಣೆಗೊಂಡ ನಟರಾಜ್ ಹುಳಿಯಾರ್ ಅವರ 'ಡಾಕ್ಟರ್ ಸಾಹೇಬ್- ರಾಮಮನೋಹರ ಲೋಹಿಯಾ...

ಕಲಬುರಗಿ ಜಿಲ್ಲೆಗೆ 6 ಟಿಎಂಸಿ ನೀರು ಕಾಯ್ದಿರಿಸಲು ಪ್ರಸ್ತಾವನೆ : ಡಿಸಿ ಇಕ್ರಮ್ ಶರೀಫ್

ಮುಂಬರುವ ಬೇಸಿಗೆ ಅವಧಿಯಲ್ಲಿ ಕಲಬುರಗಿ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳ...