ಬೀದರ್ | ದಾಸ ಸಾಹಿತ್ಯ ಸಂಶೋಧನೆಗೆ ‘ಪ್ರೊ. ವಸಂತ ಕುಷ್ಟಗಿ’ ಕೊಡುಗೆ ಅನನ್ಯ

Date:

ಭಕ್ತಿ ಸಾಹಿತ್ಯವು ಬದುಕಿನ ವಿಕಾಸಕ್ಕೆ ನೇರ ಸಂಸ್ಕಾರ ನೀಡಿ, ಶಾರೀರಿಕ ಮತ್ತು ಸಾಮಾಜಿಕ ಸ್ವಾಸ್ಥ್ಯಗಳನ್ನು ಸಂರಕ್ಷಿಸುವ ಸಾಧನಾ ಮಾರ್ಗವಾಗಿದೆ ಎಂದು ಔರಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇತಿಹಾಸ ವಿಭಾಗ ಮುಖ್ಯಸ್ಥ ಡಾ. ಸಂಜೀವಕುಮಾರ ತಾಂದಳೆ ನುಡಿದರು.

ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತು ಬೀದರ ವತಿಯಿಂದ ನಗರದ ಸಪ್ತಗಿರಿ ಪದವಿ ಪೂರ್ವ ಕಾಲೇಜಿನಲ್ಲಿ ದಾಸ ಸಾಹಿತ್ಯ ಸಂಶೋಧಕರು ‘ಪ್ರೊ. ವಸಂತ ಕುಷ್ಟಗಿ ಅವರ ಬದುಕು ಮತ್ತು ಬರಹ’ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದಾಸರು ಜ್ಞಾನ ಸುಧೆಯನ್ನು ಹರಿಸಿ ವಿಶ್ವವನ್ನು ನೆಮ್ಮದಿಯಾಗಿರಿಸಲು ಸತ್ವದ ಸಾರವನ್ನು ಸುಲಭವಾಗಿ ಕನ್ನಡದಲ್ಲಿ ನೀಡಿದ್ದಾರೆ ಎಂದರು.

ಸಪ್ತಗಿರಿ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕ ಅನೀಲಕುಮಾರ ಜಾಧವ, ಪ್ರೊ. ವಸಂತ ಕುಷ್ಟಗಿ ಅವರ ಬದುಕು ಮತ್ತು ಬರಹ ಕುರಿತು ಉಪನ್ಯಾಸ ನೀಡಿ, ಪ್ರೊ. ಕುಷ್ಟಗಿ ತಮ್ಮ ಇಡೀ ಜೀವನನ್ನು ಸಾಹಿತ್ಯ ಸೇವೆ ವಿಶೇಷವಾಗಿ ದಾಸ ಸಾಹಿತ್ಯ ಸಂಶೋಧನೆ ಮತ್ತು ಸಂರಕ್ಷಣೆಗಾಗಿ ಮುಡಿಪಾಗಿದ್ದರು. ಅವರ ಕನ್ನಡ ಸಾಹಿತ್ಯದ ಸಂಶೋಧನಾ ಮತ್ತು ಸಂಪಾದಿತ ಕೃತಿಗಳು ಅತ್ಯಮೂಲ್ಯಗಳಾಗಿವೆ ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕಾಲೇಜಿನ ಕಾರ್ಯದರ್ಶಿ ಗೋವಿಂದರಾವ ತಾಂದಳೆ ಮಾತನಾಡಿ, ಜೀವನಕ್ಕೆ ಸಂಸ್ಕಾರ ನೀಡುವ ಸಾಹಿತ್ಯ ಪ್ರಚಾರ ನಿರಂತರವಾಗಿ ಜರುಗಲಿ ಎಂದು ಆಶಿಸಿದರು.

ಈ ಸುದ್ದಿ ಓದಿದ್ದೀರಾ? ವಿಜಯಪುರ | ವಿದ್ಯುತ್‌ ದರ ಏರಿಕೆ ವಿರೋಧಿಸಿ ಕೈಗಳಿಗೆ ಬೇಡಿ ಹಾಕಿಕೊಂಡು ಪ್ರತಿಭಟನೆ

ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತು, ರಾಷ್ಟ್ರೀಯ ಅಧ್ಯಕ್ಷ ಡಾ. ರವೀಂದ್ರ ಲಂಜವಾಡಕರ ಮಾತನಾಡಿ, ಕರ್ನಾಟಕ ಭಕ್ತಿ ಪಂಥದ ಸಾಹಿತ್ಯವು ಬದುಕಿಗೆ ಇಂಬನ್ನು ನೀಡುತ್ತದೆ. ಇಂತಹ ವಿಶ್ವಮಾನ್ಯ ಸಾಹಿತ್ಯವ್ನು ನಿರಂತರ ಪ್ರಚಾರ ಮಾಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಮಹೇಶ ಮೈಲೂರಕರ್, ಭಾಗ್ಯಶ್ರೀ ಝಡ್, ಇವಾಂಗಲಿ, ಸೌಮ್ಯ ಕೆ, ಜೆಸ್ಸಿಕಾ ರಾಣಿ , ಸಾಕ್ಷಿ ವಿ, ಕೀರ್ತನೆಗಳು ಮತ್ತು ಕುಷ್ಟಗಿ ರಸಿಸಿರುವ ಕವಿತೆ ಹಾಡಿದರು. ಮಹೇಬೂಬ್ ಉಸ್ತಾದ್ ನಿರೂಪಿಸಿದರು, ಕಾವೇರಿ ಸ್ವಾಗತಿಸಿದರು, ದುರ್ಗಾಂಜಲಿ ವಂದಿಸಿದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲೋಕಸಭಾ ಚುನಾವಣೆ | ಮತ ಎಣಿಕೆ; ಜೂ. 4ರಂದು ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ

ಲೋಕಸಭಾ ಚುನಾವಣೆಯ ಮತ ಎಣಿಕೆ ಹಿನ್ನೆಲೆ, ಜೂನ್ 4ರಂದು ಬೆಂಗಳೂರು ಪೊಲೀಸ್...

ಜೂನ್‌ನಲ್ಲಿ ದೇಶಾದ್ಯಂತ ಬ್ಯಾಂಕುಗಳಿಗೆ ಒಟ್ಟು 13 ದಿನ ರಜೆ

ಈ ವರ್ಷದ ಆರಂಭದಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಬ್ಯಾಂಕ್ ರಜಾದಿನಗಳ...

ಬೆಂಗಳೂರು | ಗಗನಕ್ಕೇರಿದ ತರಕಾರಿ ಬೆಲೆ; ಬೀನ್ಸ್‌ ಕೆಜಿಗೆ ₹220

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ತರಕಾರಿ ಬೆಲೆ ಏರಿಕೆಯಾಗುತ್ತಿದ್ದು, ಜನರು...

ಬೇಸಿಗೆ ವಿಶೇಷ | ಬೆಂಗಳೂರು-ಕಲಬುರಗಿ ಎಕ್ಸ್ ಪ್ರೆಸ್ ರೈಲು ರದ್ದು

ಮಧ್ಯ ರೈಲ್ವೆ ವ್ಯಾಪ್ತಿಯಲ್ಲಿನ ಕಾರ್ಯಾಚರಣೆ ನಿರ್ಬಂಧಗಳ ಕಾರಣದಿಂದಾಗಿ ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ...