ದಾವಣಗೆರೆ | ಕುಟುಂಬ ರಾಜಕಾರಣದ ವಿರುದ್ಧ ನನ್ನ ಹೋರಾಟ: ವಿನಯ್ ಕುಮಾರ್

Date:

ಪಾಳೇಗಾರಿಕೆ, ಕುಟುಂಬ ರಾಜಕಾರಣದ ವಿರುದ್ಧ ಹೋರಾಟ ನನ್ನದು. ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರೇ ಹೇಳಿರುವಂತೆ ಒಲ್ಲದ ಮನಸ್ಸಿನ ಟಿಕೆಟ್ ಸಿಕ್ಕಿದೆ. ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿ ಚುನಾವಣೆ ಎದುರಿಸುತ್ತೇವೆ ಎಂದಿರುವ ಸಚಿವರು ನನಗೆ ಟಿಕೆಟ್ ಕೊಡಿಸಲಿ ಎಂದು ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ ಔಟ್ ರೀಚ್ ವಿಭಾಗದ ರಾಜ್ಯ ಉಪಾಧ್ಯಕ್ಷ ಜಿ ಬಿ ವಿನಯ್ ಕುಮಾರ್ ಹೇಳಿದರು.

ದಾವಣಗೆರೆಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, “ಈಗಲೂ ಕಾಲ ಮಿಂಚಿಲ್ಲ. ಕಾಂಗ್ರೆಸ್ ಟಿಕೆಟ್ ನೀಡಿದರೆ ನಾನು ಒಂದೂವರೆಯಿಂದ ಎರಡು ಲಕ್ಷಗಳ ಮತಗಳ ಅಂತರದಲ್ಲಿ ಗೆದ್ದು ಬರುತ್ತೇನೆ. ಹಿಂದುಳಿದ ನಾಯಕನನ್ನು ಬೆಳೆಸಿದ ಕೀರ್ತಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರಿಗೆ ಸಲ್ಲುತ್ತದೆ” ಎಂದರು.

“ಯಾರನ್ನೂ ಸೋಲಿಸುವ ಸಲುವಾಗಿ ಪಕ್ಷೇತರನಾಗಿ ಕಣಕ್ಕಿಳಿಯುವುದಿಲ್ಲ. ನಾನು ಗೆಲ್ಲಬೇಕೆಂದು ಸ್ಪರ್ಧೆ ಮಾಡುತ್ತೇನೆ. ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲ ಕ್ಷೇತ್ರಗಳಲ್ಲಿಯೂ ಸರ್ವೆ ನಡೆಸುತ್ತಿದ್ದೇನೆ. ಪಾದಯಾತ್ರೆಯ ವೇಳೆ 620ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪಾದಯಾತ್ರೆ ಮಾಡಿದ್ದೇನೆ. ಟಿಕೆಟ್ ಕೈ ತಪ್ಪಿದ ಬಳಿಕ ಮತ್ತೆ ಗ್ರಾಮಗಳಿಗೆ ಹೋಗುತ್ತಿದ್ದೇನೆ. ಜನರು ಪ್ರೀತಿ, ವಿಶ್ವಾಸ ತೋರುತ್ತಿದ್ದಾರೆ. 60ರಿಂದ 65 ಹಳ್ಳಿಗಳಿಗೆ ಹೋಗಿದ್ದೇನೆ. ಎಲ್ಲರೂ ನಿಮಗೆ ಅನ್ಯಾಯವಾಗಿದೆ ಎಂದೇ ಹೇಳುತ್ತಿದ್ದಾರೆ. ಶೇ.90ರಷ್ಟು ಮಂದಿ ಪಕ್ಷೇತರರಾಗಿ ಕಣಕ್ಕಿಳಿಯುವಂತೆ ಒತ್ತಾಯ ಮಾಡುತ್ತಿದ್ದಾರೆ. ಎಲ್ಲ ವಿಚಾರಗಳನ್ನು ಚರ್ಚಿಸಿದ ಬಳಿಕ ಅಂತಿಮವಾಗಿ ಗೆದ್ದೇ ಗೆಲ್ಲುವೆ ಎಂಬ ಸರ್ವೆ ಬಂದರೆ ಸ್ಪರ್ಧೆ ಮಾಡುತ್ತೇನೆ” ಎಂದು ತಿಳಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಸಚಿವ ಮಲ್ಲಿಕಾರ್ಜುನ್ ಅವರೇ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಹೇಳಿರುವಂತೆ ವಿನಯ್ ಕುಮಾರ್ ದಾವಣಗೆರೆಯವರಲ್ಲ. ಟಿಕೆಟ್ ಬೇಡವೆಂದು ವರಿಷ್ಠರಿಗೆ ಹೇಳಿದ್ದೇನೆ. ನಾವು ಟಿಕೆಟ್ ಕೇಳಿರಲಿಲ್ಲ. ಆದರೂ ಹೈಕಮಾಂಡ್ ಸರ್ವೆ ಆಧರಿಸಿ ನೀಡಿದೆ. ನೀವು ಸ್ಪರ್ಧೆ ಮಾಡಬೇಕೆಂದು ಹೇಳಿದ ಕಾರಣಕ್ಕೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಕಣಕ್ಕಿಳಿಸಲಾಗಿದೆ ಎಂದಿದ್ದಾರೆ. ಆದರೆ, ಸಿಇಸಿ ಸಭೆಯ ಪ್ಯಾನಲ್‌ವರೆಗೂ ನನ್ನ ಹೆಸರು ಹೋಗಿದೆ. ಅಲ್ಲಿಯೂ ಚರ್ಚೆಯಾಗಿದೆ. ಶಾಮನೂರು ಶಿವಶಂಕರಪ್ಪರ ಕುಟುಂಬಕ್ಕೆ ಟಿಕೆಟ್ ಬೇಡವೆಂದರೆ ನಿನಗೆ ಟಿಕೆಟ್ ಎಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಅವರೇ ನನಗೆ ಹೇಳಿದ್ದರು. ಮಲ್ಲಿಕಾರ್ಜುನ್ ಅವರು ಹೇಳಿದಂತೆ ಟಿಕೆಟ್ ಬೇಡ ಎಂದಿದ್ದರೆ ಹಿಂದುಳಿದ ವರ್ಗದ ಯುವ ನಾಯಕನಾದ ನನಗೆ ಕೊಡಿಸಬಹುದಿತ್ತು” ಎಂದು ಹೇಳಿದರು.

“ಕೇವಲ ಒಂದು ವರ್ಷದಲ್ಲಿ ಕಾಂಗ್ರೆಸ್ ಹಾಗೂ ಜಿಲ್ಲೆಯ ಜನರ ಮನೆಗಳಲ್ಲಿ ವಿನಯ್ ಕುಮಾರ್ ಯಾರೆಂದು ಮನೆ ಮಾತಾಗುವಂತ ಕೆಲಸ ಮಾಡಿದ್ದೇನೆ. ರಾಜಕಾರಣದಲ್ಲಿ ವಿನಯ್ ಕುಮಾರ್ ಹೆಸರು ಚಿರಪರಿಚಿತವಾಗಿದೆ. ನಾನು ಹುಟ್ಟಿದ್ದು, ಬೆಳೆದಿದ್ದು ದಾವಣಗೆರೆ ತಾಲೂಕಿನ ಕಕ್ಕರಗೊಳ್ಳದಲ್ಲಿ. ಬಾಪೂಜಿ ಆಸ್ಪತ್ರೆಯಲ್ಲಿಯೇ ಜನಿಸಿದ್ದು. ಸಾವಿರಾರು ಜನರು ರಕ್ತ ಸಂಬಂಧಿಗಳೂ ಇದ್ದಾರೆ. ತಂದೆ ತಾಯಿ ಹಾಗೂ ಸಂಬಂಧಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಶಾರದಾ ವಿದ್ಯಾಪೀಠದಲ್ಲಿ ಒಂದರಿಂದ ನಾಲ್ಕನೇ ತರಗತಿಯವರೆಗೆ ಅಭ್ಯಾಸ ಮಾಡಿದ್ದೇನೆ. ನಿಂಗಪ್ಪ ಮೇಸ್ಟ್ರು ಇದ್ದರು. ಸೆೇಟ್ ಫಾಲ್ಸ್ ಸ್ಕೂಲ್‌ನಲ್ಲಿ ನವೋದಯ ಪರೀಕ್ಷೆ ಬರೆದು ಪಾಸ್ ಆಗಿದ್ದೇನೆ. ಉನ್ನತ ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಹೋಗಿ ಬಿಎಸ್‌ಸಿ ಸೇರಿಕೊಂಡೆ” ಎಂದು ವಿವರಿಸಿದರು.

“ಸಚಿವ ಮಲ್ಲಿಕಾರ್ಜುನ್ ಅವರು ಟಿಕೆಟ್ ನೀಡಿಕೆ ವಿಚಾರದಲ್ಲಿ ನಾನು ದಾವಣಗೆರೆಯವನಲ್ಲವೆಂದು ಯಾಕೆ ಹಾಗೆ ಹೇಳಿದರೆಂದು ಗೊತ್ತಿಲ್ಲ. ಕೆಲವು ದಿನಗಳ ಹಿಂದೆ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಗೆ ನನಗೆ ಆಹ್ವಾನ ಇರಲಿಲ್ಲ. ಯಾರೂ ಫೋನ್ ಮಾಡಿಲ್ಲ, ಕರೆದಿಲ್ಲ. ಹಾಗಾಗಿ ಹೋಗಲಿಲ್ಲ. ಬೆಳವಣಿಗೆ ತೋರಿಸಿದಾಗ ದೂರ ಇಡಲು ನಮ್ಮವರಲ್ಲವೆಂದು ಸೃಷ್ಟಿ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ದಾವಣಗೆರೆಯವರಲ್ಲ ಎಂದಾಗ ಜಾತಿ ಎತ್ತಿ ಮಾತನಾಡಲು ಆಗಲ್ಲ‌. ನನಗಷ್ಟೇ ಅಲ್ಲ, ಸಮಾಜಕ್ಕೆ ಆದ ಅವಮಾನ. ಇದು ತುಂಬಾ ಬೇಸರ ತಂದಿದೆ” ಎಂದು ವಿನಯ್ ಕುಮಾರ್ ಹೇಳಿದರು.

“ಸಿಎಂ ಸಿದ್ದರಾಮಯ್ಯ ಅವರಿಗೆ ಧನ್ಯವಾದ ಹೇಳುತ್ತೇನೆ. ಸಂಬಂಧಿಕರು, ಹಿತೈಷಿಗಳು ಸಿದ್ದರಾಮಯ್ಯ ಅವರ ಬಳಿ ಕಳೆದ ಏಳೆಂಟು ತಿಂಗಳ ಹಿಂದೆ ಕೇಳಿಕೊಂಡಿದ್ದರು. ಸಿದ್ದರಾಮಯ್ಯ ಸೂಚನೆ ಕೊಟ್ಟ ಬಳಿಕ ಅವರು ಬಂದು ನನಗೆ ಹೇಳಿದರು. ಆ ನಂತರವೇ ನಾನು ಹೆಚ್ಚಾಗಿ ರಾಜಕಾರಣದಲ್ಲಿ ತೊಡಗಿಸಿಕೊಂಡೆ. ಸಿದ್ದರಾಮಯ್ಯ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನನ್ನ ಶಕ್ತಿ‌‌‌. ನನ್ನ ಪರವಾಗಿ ಹೇಳಿದ್ದಾರೆ, ಮಾತನಾಡಿದ್ದಾರೆ. ಸಿಎಂಗೂ ಇಂಟಲಿಜೆನ್ಸಿ ಮಾಹಿತಿ ಇರುತ್ತದೆ. ದೆಹಲಿಯಲ್ಲಿಯೂ ನನ್ನ ಹೆಸರು ಹೇಳಿದ್ದಾರೆ. ಸಿದ್ದರಾಮಯ್ಯರ ಆಶೀರ್ವಾದ ಇಲ್ಲದಿದ್ದರೆ ರಾಜಕಾರಣದಲ್ಲಿ ಇಷ್ಟು ಹೆಸರು ಮಾಡಲು ಸಾಧ್ಯವಾಗುತ್ತಿರಲಿಲ್ಲ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ವಿಜಯಪುರ | ಬಿಜೆಪಿ ಭಯದ ವಾತಾವರಣ ಸೃಷ್ಟಿ ಮಾಡುತ್ತಿದೆ: ಸಚಿವ ಶಿವಾನಂದ ಪಾಟೀಲ್‌

ಅಹಿಂದ ಒಕ್ಕೂಟ ಅಧ್ಯಕ್ಷ ದಳವಾಯಿ ಹೇಮಂತ್, ಕಾಡುಗೊಲ್ಲ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಜಿ ರಂಗಸ್ವಾಮಿ, ಎಚ್ ಸಿ ಮಲ್ಲಪ್ಪ, ಪುರಂದರ ಲೋಕಿಕೆರೆ, ಕೆ ಎಚ್ ಮಂಜುನಾಥ, ಶರತ್ ಕುಮಾರ್, ರವಿಕುಮಾರ್ ಸೇರಿದಂತೆ ಇತರರು ಇದ್ದರು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಅರೆಬೆಂದ ಊಟ ಸೇವಿಸಿ ವಸತಿ ನಿಲಯದ ವಿದ್ಯಾರ್ಥಿನಿಯರು ಅಸ್ವಸ್ಥ

ಅಂಬೇಡ್ಕರ್ ವಸತಿ ನಿಲಯವೊಂದರಲ್ಲಿ ಅರೆಬೆಂದ ಊಟ ಸೇವಿಸಿ 24 ವಿದ್ಯಾರ್ಥಿನಿಯರು ಅಸ್ವಸ್ಥರಾಗಿರುವ...

ಲೋಕಸಭಾ ಚುನಾವಣೆ | ಮೊದಲ ಹಂತದ ಮತದಾನ ದಿನ 2,172 ಪ್ರಕರಣ ದಾಖಲು

ಲೋಕಸಭಾ ಚುನಾವಣೆ ಹಿನ್ನೆಲೆ, ಏ.26 ರಂದು ರಾಜ್ಯದ 14 ಕ್ಷೇತ್ರಗಳಲ್ಲಿ ಮೊದಲ...

ಚಿಕ್ಕಮಗಳೂರು | ಹಿಂದು ಕಾರ್ಯಕರ್ತನ ಮೇಲೆ ಬಿಜೆಪಿಗರ ಹಲ್ಲೆ

ಹಿಂದುತ್ವವಾದಿ ಕಾರ್ಯಕರ್ತನ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ಮಾಡಿ, ಥಳಿಸಿರುವ ಘಟನೆ...

ಮಂಡ್ಯ | 8,000 ಕಿ.ಮೀ ದೂರದಿಂದ ಬಂದು ಮತದಾನ ಮಾಡಿದ ಯುವತಿ!

ಯುವತಿಯೊಬ್ಬರು ಬರೋಬರಿ 8,000 ಕಿ.ಮೀ ದೂರದ ಲಂಡನ್‌ನಿಂದ ಮಂಡ್ಯಕ್ಕೆ ಬಂದು ಮತದಾನ...