ದಾವಣಗೆರೆ | ಅಸ್ಪೃಶ್ಯತಾ ನಿವಾರಣಾ ಜಾಗೃತಿ ಕಲಾ ಜಾಥಾ

Date:

ಎಲ್ಲ ಸಮುದಾಯಗಳ ಮಾನವರು ಒಂದೇ. ನಾವೆಲ್ಲ ಕೂಡಿ ಸಹೋದರತ್ವ ಭಾವನೆಯಿಂದ ಬದುಕಬೇಕೆಂಬ ಹಂಬಲ ಜಾಗೃತಿ ಮೂಡಿಸುವ ಸಮಸಮಾಜದ ಆಶಯಗಳನ್ನು ಎತ್ತಿ ಹಿಡಿಯುವ ಹಾದಿಯಲ್ಲಿ ದಾವಣಗೆರೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ರೂಪದರ್ಶಿ ಕಲಾ ತಂಡದ ಸಹಯೋಗದಲ್ಲಿ ಸಾಂಸ್ಕೃತಿಕ ಕಲಾ ಜಾಥಾ ಹಮ್ಮಿಕೊಂಡಿತ್ತು.

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಜನರಲ್ಲಿ ಸಮಸ್ಯೆಗಳ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂಬ ಧ್ಯೇಯೋದ್ದೇಶದಿಂದ ಅಸ್ಪೃಶ್ಯತಾ ನಿವಾರಣಾ ಜಾಗೃತಿ ಕಲಾ ಜಾಥಾದ ಮೂಲಕ ಜಿಲ್ಲೆಯ ಕೆಲವಾರು ಹಳ್ಳಿಗಳಲ್ಲಿ ಬೀದಿ ನಾಟಕ, ಹಾಡುಗಳ ಮುಖೇನ ಜಾಗೃತಿ ಮೂಡಿಸಲು ಪ್ರಯತ್ನ ಮಾಡಿದರು.

ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದರೂ ಇನ್ನೂ ದೇಶದಲ್ಲಿ ಜಾತಿ ತಾರತಮ್ಯ ನೀತಿ ಹೋಗಿಲ್ಲ, ಹಳ್ಳಿಗಳಲ್ಲಿ ಹೋಟೆಲ್‌ಗಳಲ್ಲಿ ತಿಂಡಿ, ಟೀ, ಕಾಫಿ ಕುಡಿಯಲು ಅವಕಾಶ ಸಿಕ್ಕಿಲ್ಲ. ಕ್ಷೌರ ಮಾಡೋಲ್ಲ, ದೇವರ ಗುಡಿಯಲ್ಲಿ ಪ್ರವೇಶ ಇಲ್ಲ, ಅಂಬೇಡ್ಕ‌ರ್ ಸಂವಿಧಾನ ಆಶಯಗಳು ಇನ್ನೂ ಈಡೇರಿಲ್ಲ. ಈ ಸಾಮಾಜಿಕ ಸಮಸ್ಯೆಗಳನ್ನೂ ಜನರ ನಡುವೆ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಅಸ್ಪೃಶ್ಯತಾ ನಿವಾರಣಾ ಜಾಗೃತಿ ಕಲಾ ಜಾಥಾ ತಂಡದ ಮುಖ್ಯಸ್ಥ ಮಲ್ಲಿಕಾರ್ಜುನ ಸ್ವಾಮಿ, ಮಾಧ್ಯಮ ರತ್ನ ಪ್ರಶಸ್ತಿ ಪುರಸ್ಕೃತ ಸಂಘಟಕ ಹೋರಾಟಗಾರ ಕಲಾವಿದ ಪುರಂದರ್ ಲೋಕಿಕೆರೆ, ಹಿರಿಯ ಕಲಾವಿದ ಗಂಟ್ಯಾಪುರ ನಾಗರಾಜ್ ನಾಯ್ಕ, ಜ್ಯೋತಿ ಜಿಗಳಿ, ರಂಗಣ್ಣ, ಪರಶುರಾಮ್ ಗುಮ್ಮನೂರು, ಬಸವರಾಜ್, ರವಿಕುಮಾರ್, ಮಾಧ್ಯಮ ರತ್ನ ಪ್ರಶಸ್ತಿ ಪುರಸ್ಕೃತ ಸಂಘಟಕ ಹೋರಾಟಗಾರ ಕಲಾವಿದ ಪುರಂದರ್ ಲೋಕಿಕೆರೆ ಸೇರಿದಂತೆ ಹಲವು ಕಲಾವಿದರು ಜಾಥಾದಲ್ಲಿ ಪಾಲ್ಗೊಂಡಿದ್ದರು.

ಈ ಸುದ್ದಿ ಓದಿದ್ದೀರಾ? ತುಮಕೂರು | ಕೆರೆ ಒತ್ತುವರಿ ತೆರವು ಮಾಡಿ ಕೆರೆಯಾಗಿಯೇ ಉಳಿಸಿ: ಬೈಚೇನಹಳ್ಳಿ ಗ್ರಾಮಸ್ಥರ ಮನವಿ

ಹಳ್ಳಿಗಳಲ್ಲಿಯ ದಲಿತ ಹಿಂದುಳಿದ ವರ್ಗಗಳ ಕೇರಿಗಳಲ್ಲಿ ಬಸ್ ನಿಲ್ದಾಣ ಆವರಣಗಳಲ್ಲಿ
“ಮೈಲಿಗೆ” ಬೀದಿ ನಾಟಕ, ನೆರೆದಿದ್ದ ಸಾವಿರಾರು ಮಂದಿ ಪ್ರೇಕ್ಷಕರ ಮನ ಸೆಳೆಯುವ ಮೂಲಕ ಅಸ್ಪೃಶ್ಯತೆಯ ಅರಿವು ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಅಬ್ಬರದ ಜನಜಾಗೃತಿ ನಡುವೆಯೂ ಕರ್ತವ್ಯ ಮರೆತ ನಗರದ ಮಂದಿ: ಅದೇ ಹಳೆ ಕಥೆ

ಕರ್ನಾಟಕದ 14 ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಮೊದಲ ಹಂತದ ಮತದಾನ ನಡೆದಿದೆ....

ತುಮಕೂರು | ಕೇಂದ್ರದಲ್ಲಿ ಇಂಡಿಯಾ ಒಕ್ಕೂಟಕ್ಕೆ ಅಧಿಕಾರ: ಗೃಹ ಸಚಿವ ಪರಮೇಶ್ವರ್

ದೇಶದ ಭವಿಷ್ಯವನ್ನು ನಿರ್ಧರಿಸುವ ಚುನಾವಣೆ ಇದಾಗಿದ್ದು, ರಾಜ್ಯದಲ್ಲಿ ಅತಿ ಹೆಚ್ಚು ಲೋಕಸಭಾ...

ಚೊಂಬು, ಗ್ಯಾಸ್ ಹೊರತುಪಡಿಸಿ ಶಾಂತಿಯುತ ಮತದಾನಕ್ಕೆ ಸಾಕ್ಷಿಯಾದ ಬೆಂಗಳೂರು

ಲೋಕಸಭಾ ಚುನಾವಣೆ ಹಿನ್ನೆಲೆ, ರಾಜ್ಯದ 14 ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಮೊದಲ...