ಬೆಂಗಳೂರಿನ ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್, ಪ್ರಾಚೀನ, ಕಲಾತ್ಮಕ ಆಭರಣ ಸಂಪ್ರದಾಯವನ್ನು ಆಧುನಿಕತೆಯೊಂದಿಗೆ ಬೆಸೆಯುವ, ಐದು ದಿನಗಳ ವಿಶೇಷ ಆಭರಣಗಳ ಪ್ರದರ್ಶನವನ್ನು ದಾವಣಗೆರೆ ನಗರದ ಸದರನ್ ಸ್ಟಾರ್ ನ ಪಾರ್ವತಿ ಪರ್ಲ್ ಹಾಲ್ನಲ್ಲಿ ಏ.16ರಿಂದ ಏ.20ರವರೆಗೆ ಆಯೋಜಿಸಿದ್ದು, ಪ್ರದರ್ಶನವನ್ನು ಉದ್ಯಮಿಗಳಾದ ಶಾಮನೂರು ಎಸ್. ಗಣೇಶ್ ಹಾಗೂ ರೇಖಾ ಗಣೇಶ್ ಗುರುವಾರ ಚಾಲನೆ ನೀಡಿದರು.

ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಎಸ್.ಎಸ್. ಗಣೇಶ್, “ಪ್ರಾಚೀನ ಶ್ರೀಮಂತ ಇತಿಹಾಸ ಹೊಂದಿರುವ ಸಿ ಕೃಷ್ಣಯ್ಯ ಚೆಟ್ಟಿ (CKC) ಬ್ರಾಂಡ್ ದಾವಣಗೆರೆಗೆ ತನ್ನ ಕಲಾತ್ಮಕ ಆಭರಣ ಪರಿಚಯಿಸುವುದೇ ಖುಷಿಯ ವಿಷಯ. ಇವು ಕೇವಲ ಸುಂದರವಾದ ಆಭರಣಗಳಷ್ಟೇ ಅಲ್ಲ, ನಮ್ಮ ನಾಡಿನ ಕಲೆ, ಸಂಪ್ರದಾಯ ಮತ್ತು ಭಾವನೆಗಳಿಗೆ ಜೀವ ತುಂಬಿವೆ. ಪ್ರತಿಯೊಂದು ವಿನ್ಯಾಸದಲ್ಲಿ ಬಳಸಲಾದ ಕರಕುಶಲತೆ ಮತ್ತು ಕಾಳಜಿಯನ್ನು ದಾವಣಗೆರೆಯ ಆಭರಣ ಪ್ರಿಯರು ಇಷ್ಟಪಡುತ್ತಾರೆ ಎಂಬ ವಿಶ್ವಾಸವಿದೆ” ಎಂದು ಹರ್ಷ ವ್ಯಕ್ತಪಡಿಸಿದರು.

ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ನ ಮಳಿಗೆ ಮುಖ್ಯಸ್ಥ ಶ್ರೀಹರಿ ಮಾತನಾಡಿ, “ಪ್ರತಿ ಬಾರಿ ದಾವಣಗೆರೆಯಲ್ಲಿ ಪ್ರದರ್ಶನಕ್ಕೆ ಆಭರಣಗಳ ಕಲಾತ್ಮಕತೆ, ಪರಂಪರೆ ಮತ್ತು ನಾವೀನ್ಯತೆಯನ್ನು ಒಂದೇ ಸೂರಿನಡಿ ಒದಗಿಸುತ್ತಿದ್ದೇವೆ. ಸಿಕೆಸಿ ಗ್ರೂಪ್ ನ 157 ವರ್ಷಗಳ ಅತ್ಯುತ್ತಮ ಕಲಾತ್ಮಕತೆ, ರಾಜಿಯಿಲ್ಲದ ಆಭರಣಗಳ ಗುಣಮಟ್ಟ, ಆಭರಣ ಪ್ರಿಯರು ಮತ್ತು ಅಭಿಮಾನಿಗಳಿಗೆ ನೆಚ್ಚಿನ ಆಭರಣ ವಿನ್ಯಾಸ ಒದಗಿಸುತ್ತಿದೆ. ದಾವಣಗೆರೆ ಜನತೆಗೆ ಪ್ರದರ್ಶನದಲ್ಲಿ ಉತ್ತಮ ರಿಯಾಯಿತಿ ನೀಡುತ್ತಿದ್ದೇವೆ” ಎಂದರು.

ಸಿ ಕೃಷ್ಣಯ್ಯ ಚೆಟ್ಟಿ ಗ್ರೂಪ್ ನ ಆಭರಣ ಪ್ರದರ್ಶನವು ಶುದ್ಧ ಚಿನ್ನ, ಅಪರೂಪದ ರತ್ನದ ಹರಳು ಮತ್ತು ನವೀನ ವಿನ್ಯಾಸ ಒಳಗೊಂಡಿದೆ. ಮುತ್ತುಗಳು. ಅಮೆಥಿಸ್ಟ್, ರಾಜಮನೆತನದ ಪಚ್ಚೆ ಮತ್ತು ಮಾಣಿಕ್ಯ, ವೈಡೂರ್ಯ, ಸಿಟಿನ್ ಮತ್ತು ವಜ್ರದ ಆಭರಣಗಳು ಪ್ರದರ್ಶನ ಹಾಗೂ ಮಾರಾಟಕ್ಕಿವೆ” ಎಂದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ನೋಯ್ಡಾ ಕಾರ್ಮಿಕರ ಮೇಲೆ ದೌರ್ಜನ್ಯ, ಅಕ್ರಮ ಬಂಧನ: ಎಐಯುಟಿಯುಸಿ ಪ್ರತಿಭಟನೆ
ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ನ ಪಿಆರ್ ಮುಖ್ಯಸ್ಥ ತೇಜಸ್ ಕಲ್ರಾ ಮಾತನಾಡಿ, “ಸಿಕೆಸಿ ಗ್ರೂಪ್ ನ ಆಭರಣ ಪ್ರದರ್ಶನದಲ್ಲಿ ದಾವಣಗೆರೆ ಜನತೆ ಹಾಗೂ ಆಭರಣ ಪ್ರಿಯರಿಗೆ ಬೆಳ್ಳಿ ಆಭರಣಗಳ ಮೇಲೆ 2% ರಿಯಾಯಿತಿ, ಚಿನ್ನದ ಆಭರಣಗಳ ಮೇಲೆ 4% ರಿಯಾಯಿತಿ, ವಜ್ರದ ಆಭರಣಗಳ ಮೇಲೆ 6% ರಿಯಾಯಿತಿ ಇದೆ. ಹೆಚ್ಚಿನ ಮಾಹಿತಿಗೆ ಮಳಿಗೆ ಮುಖ್ಯಸ್ಥ ಶ್ರೀಹರಿ ಅವರನ್ನು ಮೊ: 99809 50819 ಸಂಪರ್ಕಿಸಿ” ಎಂದು ಮಾಹಿತಿ ನೀಡಿದರು.





